HOME » NEWS » State » BJP MLA BASANAGOUDA PATIL YATNAL LASHES OUT AT KARNATAKA CM BS YEDIYURAPPA FAMILY POLITICS VTC SCT

ಯಡಿಯೂರಪ್ಪ ಬೇಗ ನಿವೃತ್ತಿ ಪಡೆದು, ಮೊಮ್ಮಕ್ಕಳನ್ನು ಆಡಿಸಲಿ; ಮತ್ತೆ ಬಸನಗೌಡ ಪಾಟೀಲ್ ಯತ್ನಾಳ್ ಲೇವಡಿ

ನಾನು ಯಡಿಯೂರಪ್ಪನವರ ಮನೆಗೆ ಹೋಗಿ ಮಂತ್ರಿ ಮಾಡಿ ಎಂದು ಕೈ ಕಾಲು ಹಿಡಿದಿಲ್ಲ. ನನಗೆ ತಾಕತ್ ಇದ್ದರೆ ಮುಂದೆ ಸಚಿವನಾಗುತ್ತೇನೆ. ಅವರ ಆರೋಗ್ಯ ಕ್ಷೀಣಿಸಿದೆ, ಸಿಎಂ ಬೆಳಿಗ್ಗೆ ಒಂದು ಸಂಜೆ ಒಂದು ಹೇಳುತ್ತಿದ್ದಾರೆ. ಅವರು ಇನ್ನು ವಿಶ್ರಾಂತಿ ಪಡೆಯುವುದು ಒಳ್ಳೆಯದು ಎಂದು ಸಿಎಂ ವಿರುದ್ದ ಬಸನಗೌಡ ಯತ್ನಾಳ್ ಕಿಡಿ ಕಾರಿದ್ದಾರೆ.

news18-kannada
Updated:February 6, 2021, 8:05 AM IST
ಯಡಿಯೂರಪ್ಪ ಬೇಗ ನಿವೃತ್ತಿ ಪಡೆದು, ಮೊಮ್ಮಕ್ಕಳನ್ನು ಆಡಿಸಲಿ; ಮತ್ತೆ ಬಸನಗೌಡ ಪಾಟೀಲ್ ಯತ್ನಾಳ್ ಲೇವಡಿ
ಬಸನಗೌಡ ಪಾಟೀಲ್ ಯತ್ನಾಳ್
  • Share this:
ಚಿತ್ರದುರ್ಗ (ಫೆ. 6): ಸಿಎಂ ಯಡಿಯೂರಪ್ಪ ಅವರಿಗೆ ದಣಿವಾಗಿದೆ. ಅವರ ಕುಟುಂಬವೇ ಸರ್ಕಾರವನ್ನು ನಡೆಸುತ್ತಿದೆ. ಅವರ ಮಗ ವಿಜಯೇಂದ್ರ, ಇಡೀ ಕುಟುಂಬ ಕಾವೇರಿ ನಿವಾಸದಲ್ಲಿ ನೇರವಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಇದನ್ನು ಹೈಕಮಾಂಡ್ ಗಮನಿಸುತ್ತಿದೆ. ತಮ್ಮ ಕುಟುಂಬವನ್ನು ಮತ್ತಷ್ಟು ಉದ್ಧಾರ ಮಾಡಲು ಯಡಿಯೂರಪ್ಪ ಸಿಎಂ ಆಗಿ  ಉಳಿದಿದ್ದಾರೆ. ಅವರು ಆದಷ್ಟು ಬೇಗ ರಾಜಕೀಯ ನಿವೃತ್ತಿ ಪಡೆದು ಮೊಮ್ಮಕ್ಕಳನ್ನು ಆಡಿಸಲಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಜವಗೊಂಡನಹಳ್ಳಿ ಗ್ರಾಮದಲ್ಲಿ ನಿನ್ನೆ ಮಾತನಾಡಿರುವ ಶಾಸಕ ಯತ್ನಾಳ್, ನಾನು ಯಡಿಯೂರಪ್ಪನವರ ಮನೆಗೆ ಹೋಗಿ ಮಂತ್ರಿ ಮಾಡಿ ಎಂದು ಕೈ ಕಾಲು ಹಿಡಿದಿಲ್ಲ. ನನಗೆ ತಾಕತ್ ಇದ್ದರೆ ಮುಂದೆ ಸಚಿವನಾಗುತ್ತೇನೆ. ಯಡಿಯೂರಪ್ಪ ತಮ್ಮ ಚೇಲಾಗಳ ಮೂಲಕ ವೈಯಕ್ತಿಕ ಹೇಳಿಕೆ ಎಂದಿದ್ದಾರೆ. ಕರ್ನಾಟಕದ ಸಿಎಂ ಆಗಿ ಅವರು ಮೀಸಲಾತಿ ಕುರಿತು ಜವಾಬ್ದಾರಿಯಿಂದ ಮಾತನಾಡಬೇಕು. ಅವರ ಆರೋಗ್ಯ ಕ್ಷೀಣಿಸಿದೆ, ಸಿಎಂ ಬೆಳಿಗ್ಗೆ ಒಂದು ಸಂಜೆ ಒಂದು ಹೇಳುತ್ತಿದ್ದಾರೆ. ಅವರು ಇನ್ನು ವಿಶ್ರಾಂತಿ ಪಡೆಯುವುದು ಒಳ್ಳೆಯದು. ಅವರ ಹೇಳಿಕೆಯಿಂದ ಎಲ್ಲಾ ಸಮುದಾಯದಲ್ಲಿ ಆಕ್ರೋಶ ಉಂಟಾಗುತ್ತಿದೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪನವರ ವಿರುದ್ದ ಕಿಡಿ ಕಾರಿದ್ದಾರೆ.

ಬೆಂಗಳೂರಿನಲ್ಲಿ ಸಭೆ ದಿನಾಂಕ ನಿಗದಿಯಾಗಿಲ್ಲ. ನಮ್ಮ ಸಮುದಾಯದ ಶಕ್ತಿ ಪ್ರದರ್ಶನ ಮಾಡಲು ಸಭೆಯಲ್ಲಿ ತೀರ್ಮಾನ ಮಾಡಿದ್ದೇವೆ. ಯಡಿಯೂರಪ್ಪ ಅವರಿಗೆ ದಣಿವಾಗಿದೆ. ಅವರ ಕುಟುಂಬವೇ ಸರ್ಕಾರ ನಡೆಸುತ್ತಿದೆ. ಅವರ ವರ್ತನೆಯನ್ನಹೈಕಮಾಂಡ್ ಗಮನಿಸುತ್ತಿದ್ದು, ಯಡಿಯೂರಪ್ಪನವರಿಗೆ ಗೌರವಯುತ ಬೀಳ್ಕೊಡುಗೆ ನೀಡುತ್ತದೆ. ಅವರ ಕುಟುಂಬವನ್ನು ಮತ್ತಷ್ಟು ಉದ್ದಾರ ಮಾಡಲು ಸಿಎಂ ಆಗಿ ಉಳಿದಿದ್ದಾರೆ. ದಯವಿಟ್ಟು ಆದಷ್ಟು ಬೇಗ ರಾಜಕೀಯ ನಿವೃತ್ತಿ ಪಡೆದು ಮೊಮ್ಮಕ್ಕಳನ್ನ ಆಡಿಸಲಿ ಎಂದು ಯತ್ನಾಳ್  ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ಕರಾವಳಿಯಲ್ಲಿ ತಾಂಟ್ರೆ ಬಾ ತಾಂಟ್ ವಿವಾದ; ಆ ಡೈಲಾಗ್ ಹೊಡೆದಾಟಕ್ಕೆ ಕಾರಣವಾಗಿದ್ದೇಕೆ?

ಪಂಚಮಸಾಲಿ ಮೀಸಲಾತಿ ಪಾದಯಾತ್ರೆ ಬೆಂಗಳೂರು ಸೇರಿ ಸಮಾವೇಶ ಮಾಡುವುದರ ಒಳಗೆ ಅಂತಿಮ ನಿರ್ಣಯ ಮಾಡಿ ಗೆಜೆಟ್ ನೋಟಿಫಿಕೇಷನ್ ಮಾಡಬೇಕು.ಇಲ್ಲವಾದರೆ ಇದರ ಪರಿಣಾಮ ಮತ್ತಷ್ಟು ಗಂಭೀರವಾಗುತ್ತದೆ. ಈ ಬಗ್ಗೆ ಇಡೀ ಪಕ್ಷ ನಿರ್ಣಯ ಮಾಡುತ್ತದೆ. ಹೈಕಮಾಂಡ್ ಗೆ ಯಡಿಯೂರಪ್ಪ ಆಡಳಿತದ ಬಗ್ಗೆ ಬಹಳ ಗಮನಕ್ಕೆ ಬಂದಿದೆ ಎಚ್ಚರಿಕೆ ನೀಡಿದರು. ಯಡಿಯೂರಪ್ಪ ವಿರೋಧ ಪಕ್ಷಗಳನ್ನ ಅಡ್ಜೆಸ್ಟ್ ಮಾಡಿಕೊಂಡಿದ್ದಾರೆ. ಆದ್ದರಿಂದ ವಿರೋಧ ಪಕ್ಷಗಳು ಸಂಪೂರ್ಣ ವಿಫಲವಾಗಿವೆ. ಬಿಜೆಪಿ ಶಾಸಕರಿಗೆ ಅನುಕೂಲವಾಗಿಲ್ಲ. ಡಿಕೆ ಶಿವಕುಮಾರ್, ಕೆ.ಜೆ. ಜಾರ್ಜ್, ಜಮೀರ್ ಅಹಮದ್ ಖಾನ್, ಸಿದ್ದರಾಮಯ್ಯನವರ ಜೊತೆ ಹೊಂದಾಣಿಕೆ ಇದೆ. ಅದರಿಂದಲೇ ಬಿಜೆಪಿ ಶಾಸಕರಿಗೆ ಅನುದಾನ ಸಿಗುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.

ನಿರಾಣಿ ಹೇಳಿಕೆಗೆ ಯತ್ನಾಳ್ ತಿರುಗೇಟು ನೀಡಿರುವ ಯತ್ನಾಳ್, ಯಡಿಯೂರಪ್ಪ ಸಿಎಂ ಆಗಿ ಮುಂದುವರೆಯಲು ಯಾರು ಗ್ರೀನ್ ಸಿಗ್ನಲ್‌ ಕೊಟ್ಟಿದ್ದಾರೆ? ನಿರಾಣಿಗೆ ಮಂತ್ರಿ ಮಾಡಿದ್ದಕ್ಕೆ ಅವಧಿ ಪೂರ್ಣ ಯಡಿಯೂರಪ್ಪ ಸಿಎಂ ಅನ್ನುತ್ತಾರೆ. ಆದರೆ ಇವರೇ ಕರೆದು 6 ತಿಂಗಳ ಹಿಂದೆ ಯಡಿಯೂರಪ್ಪ ಅವರನ್ನು ಇಳಿಸುವ ಷಡ್ಯಂತ್ರ ಮಾಡಿದ್ದರು. ಮುರುಗೇಶ್ ನಿರಾಣಿ ವಿರುದ್ಧ ಯತ್ನಾಳ್ ಆರೋಪ ಮಾಡಿದ್ದು, ಯುಗಾದಿಗೂ ಮೊದಲೇ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಲಿದೆ  ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.(ವರದಿ: ವಿನಾಯಕ ತೊಡರನಾಳ್)
Published by: Sushma Chakre
First published: February 6, 2021, 8:05 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories