• Home
 • »
 • News
 • »
 • state
 • »
 • ರಮೇಶ್​ ಕುಮಾರ್ ಸತ್ಯಹರಿಶ್ಚಂದ್ರನ ಸಂತತಿಯಾ? ದೇವೇಗೌಡರು ಸ್ವಾತಂತ್ರ್ಯ ಹೋರಾಟಗಾರರಾ?; ಯತ್ನಾಳ್​ ಲೇವಡಿ

ರಮೇಶ್​ ಕುಮಾರ್ ಸತ್ಯಹರಿಶ್ಚಂದ್ರನ ಸಂತತಿಯಾ? ದೇವೇಗೌಡರು ಸ್ವಾತಂತ್ರ್ಯ ಹೋರಾಟಗಾರರಾ?; ಯತ್ನಾಳ್​ ಲೇವಡಿ

ಶಾಸಕ ಬಸನಗೌಡ ಪಾಟೀಲ್ ಯತ್ನಾಳ

ಶಾಸಕ ಬಸನಗೌಡ ಪಾಟೀಲ್ ಯತ್ನಾಳ

ರಾತ್ರಿ ಒಂದು ಬೆಳಗ್ಗೆ ಒಂದು ಮಾತನಾಡೋ ಚಟ ಇರುವ ರಾಜಕಾರಣಿ ನಾನಲ್ಲ. ಕುಮಾರಸ್ವಾಮಿ ಅವರು ದೊರೆಸ್ವಾಮಿ ಹೋರಾಟ ಮಾಡುವಾಗ ಹುಟ್ಟಿದ್ದರಾ? ವರ್ಕ್ ಇನ್​ಸ್ಪೆಕ್ಟರ್​ ಆಗಿದ್ದ ದೇವೇಗೌಡರ ಮಗನಾಗಿ ಇವರಿಗೆ ಸಾವಿರಾರು ಕೋಟಿ ರೂ. ಎಲ್ಲಿಂದ ಬಂತು? ಎಂದು ಯತ್ನಾಳ್ ಪ್ರಶ್ನಿಸಿದ್ದಾರೆ.

 • Share this:

  ಚಿತ್ರದುರ್ಗ (ಫೆ. 28): 'ನಾಥೂರಾಮ್​ ಗೋಡ್ಸೆ ಸಂತತಿಯ ಯತ್ನಾಳ್​ ಸದನದಲ್ಲಿರಲು ನಾಲಾಯಕ್' ಎಂದು ಟೀಕಿಸಿದ್ದ ಮಾಜಿ ಸ್ಪೀಕರ್ ರಮೇಶ್​ ಕುಮಾರ್ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ವಾಗ್ದಾಳಿ ನಡೆಸಿದ್ದಾರೆ. ರಮೇಶ್​ ಕುಮಾರ್ ಸತ್ಯಹರಿಶ್ಚಂದ್ರನ 19ನೇ ಸಂತತಿ. ಅವರ ಇತಿಹಾಸ, ಹಗರಣ ನಮಗೂ ಗೊತ್ತಿದೆ ಎಂದು ಯತ್ನಾಳ್​ ವಾಗ್ದಾಳಿ ನಡೆಸಿದ್ದಾರೆ.

  ರಮೇಶ್ ಕುಮಾರ್ ಅವರ ಇತಿಹಾಸವೇನು? ಅವರು ಎಷ್ಟು ಭೂ ಕಬಳಿಕೆ ಮಾಡಿದ್ದಾರೆ? ಎಂಬುದೆಲ್ಲ ಎಲ್ಲರಿಗೂ ಗೊತ್ತಿದೆ. ಅವರು ಬಹಳ ಸಾಚಾ ಎಂಬಂತೆ ಮಾತನಾಡುತ್ತಾರೆ. ನನ್ನ ಬಗ್ಗೆ ಮಾತಾಡುವ ನೈತಿಕತೆ ಅವರಿಗಿಲ್ಲ. ನನ್ನ ಮೇಲೆ ನೀರಾವರಿ ಹೋರಾಟದ 23 ಕೇಸ್​ಗಳಿವೆ. ಆದರೆ, ನನ್ನ ಮೇಲೆ ಯಾವ ಭೂ ಕಬಳಿಕೆ, ಅತ್ಯಾಚಾರ, ನಕಲಿ ನೋಟ್ ಪ್ರಕರಣಗಳಿಲ್ಲ. ಅವರಿಂದ ತತ್ವ- ಆದರ್ಶಗಳನ್ನು ಕಲಿಯುವ ಅವಶ್ಯಕತೆ ನನಗಿಲ್ಲ ಎಂದು ಮಾಜಿ ಸ್ಪೀಕರ್ ವಿರುದ್ಧ ಚಿತ್ರದುರ್ಗದಲ್ಲಿ ಯತ್ನಾಳ್ ಆಕ್ರೋಶ ಹೊರಹಾಕಿದ್ದಾರೆ.

  ಇದನ್ನೂ ಓದಿ: ದೆಹಲಿ ಘರ್ಷಣೆಗೆ ಬಿಜೆಪಿಯೇ ಕಾರಣ; ಕೂಡಲೇ ಅಮಿತ್​ ಶಾರನ್ನು ವಜಾಗೊಳಿಸಬೇಕು: ಈಶ್ವರ್ ಖಂಡ್ರೆ

  ನಾನು ಆರ್​ಎಸ್​ಎಸ್​ನವನೇ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ನಾನೇನು ದೇಶ ವಿರೋಧಿ, ಪಾಕಿಸ್ತಾನದ ಏಜೆಂಟ್ ಅಲ್ಲ. ನನಗೆ ದೇಶದ ಪರ ಮಾತನಾಡುತ್ತೇನೆ. ನನಗೆ ಯಾರ ಭಯವೂ ಇಲ್ಲ. ಮಂಗಳೂರು ಪೊಲೀಸರು ಗಟ್ಟಿ ನಿರ್ಧಾರ ತೆಗೆದುಕೊಂಡರು. ಇಲ್ಲದಿದ್ದರೆ ಮಂಗಳೂರು ಎರಡನೇ ದೆಹಲಿ ಆಗುತ್ತಿತ್ತು. ದೆಹಲಿ ಪೊಲೀಸರಿಗೆ ಪ್ರತಿಭಟನಾಕಾರರು ಬಂದೂಕು ತೋರಿಸುತ್ತಿದ್ದಾರೆ. ಅದನ್ನು ವಿರೋಧಿಸುವುದನ್ನು ಬಿಟ್ಟು ಪ್ರತಿಭಟನೆ ಮಾಡುತ್ತಿರುವ ಕಾಂಗ್ರೆಸ್​ನವರಿಗೆ ನಾಚಿಕೆ ಆಗಬೇಕು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಟೀಕಿಸಿದ್ದಾರೆ.

  ಎಚ್​.ಎಸ್. ದೊರೆಸ್ವಾಮಿ ಯಾವ ವಯಸ್ಸಿನಲ್ಲಿ ಹೋರಾಟ ಮಾಡಿದ್ದರು? ಸಾವರ್ಕರ್ ಅಷ್ಟು ದೊರೆಸ್ವಾಮಿ ಲಾಠಿ ಏಟು ತಿಂದಿದ್ದಾರಾ? ಎಂದು ಮತ್ತೆ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ವಿರುದ್ಧ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ. ಎಚ್​.ಎಸ್. ದೊರೆಸ್ವಾಮಿ ಆನೆ ಇದ್ದಹಾಗೆ ಎಂಬ ಸಾಣೆಹಳ್ಳಿ ಶ್ರೀಗಳ ಹೇಳಿಕೆಗೆ ಪ್ರತಿಕ್ರಿಯಿಸಿರುವ ಯತ್ನಾಳ್, 'ಅವರು ಆನೆಯೋ, ಹಂದಿನೋ ಯಾರಿಗೆ ಗೊತ್ತು?' ಎಂದು ವ್ಯಂಗ್ಯವಾಡಿದ್ದಾರೆ. ಪ್ರಧಾನಿ ಮೋದಿ, ವೀರ ಸಾವರ್ಕರ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಕಾಂಗ್ರೆಸ್ ಮೊದಲು ಕ್ಷಮೆ ಕೇಳಲಿ. ರಾತ್ರಿ ಒಂದು ಬೆಳಗ್ಗೆ ಒಂದು ಮಾತನಾಡೋ ಚಟ ಇರುವ ರಾಜಕಾರಣಿ ನಾನಲ್ಲ ಎಂದು ಕಾಂಗ್ರೆಸ್ ಆರೋಪಕ್ಕೆ ಯತ್ಬಾಳ್ ಖಡಕ್ ಆಗಿ ಉತ್ತರಿಸಿದ್ದಾರೆ.

  ಇದನ್ನೂ ಓದಿ: ದೆಹಲಿ, ಮಂಗಳೂರು ಗಲಭೆ ಹಿಂದೆ ಕಾಂಗ್ರೆಸ್ ಕೈವಾಡ; ನಳಿನ್ ಕುಮಾರ್ ಕಟೀಲ್ ಗಂಭೀರ ಆರೋಪ

  ದೇವೇಗೌಡರ ವಿರುದ್ಧ ವಾಗ್ದಾಳಿ:

  ಕುಮಾರಸ್ವಾಮಿ ಅವರು ದೊರೆಸ್ವಾಮಿ ಹೋರಾಟ ಮಾಡುವಾಗ ಹುಟ್ಟಿದ್ದರಾ? ವರ್ಕ್ ಇನ್​ಸ್ಪೆಕ್ಟರ್​ ಆಗಿದ್ದ ದೇವೇಗೌಡರ ಮಗನಾಗಿ ಇವರಿಗೆ ಸಾವಿರಾರು ಕೋಟಿ ರೂ. ಎಲ್ಲಿಂದ ಬಂತು? ಸೈನ್ಯಕ್ಕೆ ಸೇರುವವರು ಕೂಳಿಗಾಗಿ ಸೈನ್ಯಕ್ಕೆ ಸೇರುತ್ತಾರೆ ಎನ್ನುವ ಅವರು ರಾಜಕೀಯಕ್ಕೆ ಯಾಕೆ ಬಂದರು? ಎಂಬುದಕ್ಕೆ ಉತ್ತರ ನೀಡಲಿ. ಕುಮಾರಸ್ವಾಮಿ ನನ್ನ ಹುಟ್ಟಿನ ಬಗ್ಗೆ ಮಾತನಾಡುತ್ತಾರೆ. ಹಾಗಾದರೆ, ಅವರ ಅಪ್ಪ ದೇವೇಗೌಡರು ಸ್ವಾತಂತ್ರ್ಯ ಹೋರಾಟಗಾರರಾ? ರೈತರು ನನ್ನ ಬಗ್ಗೆ ಹೋರಾಟ ಮಾಡುವುದನ್ನು ಬಿಟ್ಟು ನೀರಾವರಿ ಬಗ್ಗೆ ಹೋರಾಟ ಮಾಡಲಿ ಎಂದು ಯತ್ನಾಳ್ ಸವಾಲು ಹಾಕಿದ್ದಾರೆ.

  ಇದನ್ನೂ ಓದಿ: ಕನ್ನಡಾಭಿಮಾನದ ಬಗ್ಗೆ ಮಾತನಾಡಿದ್ದು ಬಿಟ್ಟು, ಮಹಾರಾಷ್ಟ್ರ ಕುರಿತದ್ದನ್ನು ಮಾತ್ರ ವೈರಲ್​ ಮಾಡಿದ್ದಾರೆ; ನಾರಾಯಣ ಗೌಡ

  ನಾರಾಯಣ ಗೌಡರ ಪರ ಬ್ಯಾಟಿಂಗ್:

  ಸಚಿವ ನಾರಾಯಣ ಗೌಡ ಮಹಾರಾಷ್ಟ್ರಕ್ಕೆ ಜೈಕಾರ ಹಾಕಿದ್ದರಲ್ಲಿ ತಪ್ಪೇನಿದೆ? ಅವರು ದೇಶದ ಒಂದು ಭಾಗಕ್ಕೆ ಜೈಕಾರ ಹಾಕಿದ್ದಾರೆಯೇ ಹೊರತು ಪಾಕಿಸ್ತಾನಕ್ಕೆ ಜೈ ಅಂದಿಲ್ಲ. ಪಾಕಿಸ್ತಾನಕ್ಕೆ ಜೈಕಾರ ಹಾಕಿದವರ ವಿರುದ್ದ ಕನ್ನಡಪರ ಹೋರಾಟಗಾರು ಯಾಕೆ ದನಿ ಎತ್ತಿಲ್ಲ? ಹುಬ್ಬಳ್ಳಿ, ಬೆಂಗಳೂರಿನಲ್ಲಿ ಪಾಕಿಸ್ತಾನಕ್ಕೆ ಜೈ ಎಂದಾಗ ಈ ಲ್ಯಾಂಡ್ ಮಾಫಿಯಾಗಳು ಎಲ್ಲಿ ಹೋಗಿದ್ದರು? ಎಂದು ಪ್ರಶ್ನಿಸಿರುವ ಬಸನಗೌಡ ಪಾಟೀಲ್ ಯತ್ನಾಳ್ ಕನ್ನಡ ಪರ ಹೋರಾಟಗಾರರನ್ನು ಬೆಂಗಳೂರಿನ ಲ್ಯಾಂಡ್ ಮಾಫಿಯಾಗಳಿಗೆ ಹೋಲಿಸಿದ್ದಾರೆ.

  (ವರದಿ: ವಿನಾಯಕ ತೊಡರನಾಳ್)

   

  First published: