ಪಾದಯಾತ್ರೆ ವೇಳೆ ಡಿಕೆಶಿ ಅಷ್ಟೊಂದು ತೂರಾಡಿದ್ದು ಯಾಕೆ ಅಂತ ಯಾರದ್ರೂ ಹೇಳ್ರಪ್ಪ : Yatnal ವ್ಯಂಗ್ಯ

ನನ್ನಷ್ಟು ಯೋಗ್ಯತೆ, ಅರ್ಹತೆ ಬಿಜೆಪಿಯಲ್ಲಿ ಯಾರಿಗಿದೆ. ವಾಜಪೇಯಿ ಆಡಳಿತದಲ್ಲಿ ಮಂತ್ರಿ ಆಗಿದ್ದೆ. ಸಚಿವ ಸಂಪುಟದಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡಿದ್ದಾಗಿ ವಾಜಪೇಯಿ ಅವರು ನನಗೆ ಪತ್ರ ಕೊಟ್ಟಿದ್ದರು.

ಡಿಕೆಶಿ ಪಾದಯಾತ್ರೆ, ಯತ್ನಾಳ್​​

ಡಿಕೆಶಿ ಪಾದಯಾತ್ರೆ, ಯತ್ನಾಳ್​​

  • Share this:
ಧಾರವಾಡ : ಮೇಕೆದಾಟು ಪಾದಯಾತ್ರೆ (Mekedatu Padayathra) ವೇಳೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ (DK Shivakumar) ಸುಸ್ತಾಗಿ ತೂರಾಡಿದ ಬಗ್ಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (BJP MLA Basanagouda Patil Yatnal ) ವ್ಯಂಗ್ಯವಾಡಿದರು. ಆ ರಸ್ತೆಯಿಂದ ಈ ರಸ್ತೆ ದಂಡೆಗೆ  ಓಲಾಡುತ್ತ ಹೊರಟಿದ್ದರು. ಯಾಕೆ ತೂರಾಡಿದರು ಅಂತಾ ಯಾರೂ ಸುದ್ದಿ ಮಾಡಲಿಲ್ಲ. ಯತ್ನಾಳನೇ ಕುಡಿದು ಮತ್ತಿನಲ್ಲಿ ಓಲಾಡಿದ ಅಂತಾ ಮಾಡ್ತಿರೀ. ಆದರೆ ನಾವು ಏನೂ ಮಾಡೋರೆ ಅಲ್ಲ ಎಂದರು​  . ಧಾರವಾಡದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಡಿಕೆಶಿ ಪೂಜೆ ಮಾಡಲು ಹೋಗಿ  ಬಿದ್ದಿದ್ದರು. ಅವರೆಲ್ಲ ಶ್ರೀಮಂತರು, ದೊಡ್ಡ ರಾಜಕಾರಣಿಗಳು. ಐವತ್ತು ವರ್ಷದಿಂದ ಲೂಟಿ ಮಾಡಿದಂತವರು ಎಂದು ಡಿಕೆಶಿ ವಿರುದ್ಧ ಆರೋಪ ಮಾಡಿದರು. 

ನಾನೇನೂ ರಾಜಕೀಯ ಜ್ಯೋತಿಷಿ ಅಲ್ಲ

2023 ಕ್ಕೆ ಹೊಸ ಶಕ್ತಿಯೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಭವಿಷ್ಯ ನುಡಿದರು.‌ ಸದ್ಯ ಪಂಚರಾಜ್ಯ ಚುನಾವಣೆ ನಡೆದಿದೆ. ಇದರಲಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆಗಲಿದೆ ಎಂದ ಅವರು ಒಟ್ಟಾರೆ ಒಳ್ಳೆ ದಿನಗಳು ಬರಲಿವೆ ಎಂದರು. ಇದೇ ಸಂದರ್ಭದಲ್ಲಿ ಸಂಕ್ರಮಣ ಬಳಿಕ ರಾಜಕೀಯ ಬದಲಾವಣೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಕಾಕತಾಳೀಯ ಎಂಬಂತೆ ನಾನು ಹೇಳಿದ್ದು ನಿಜವಾಗುತ್ತಿದೆ. ನಾನೇನೂ ರಾಜಕೀಯ ಜ್ಯೋತಿಷಿ ಅಲ್ಲ. ಒಮ್ಮೊಮ್ಮೆ ಏನು ಅನಿಸುತ್ತದೆ ಅದನ್ನು ವ್ಯಾಖ್ಯಾನ ಮಾಡಿತ್ತೇನಷ್ಟೇ ಎಂದರು.

ಇದನ್ನೂ ಓದಿ: ಬೇಕಂತಲೇ ಸೋಂಕಿತನನ್ನು ನನ್ನ ಬಳಿ ಕಳುಹಿಸಿದ್ದಾರೆ, ನನ್ನನ್ನು ಪಾಸಿಟಿವ್ ಮಾಡಲು ಸಂಚು: DK Shivakumar

ನನ್ನಷ್ಟು ಯೋಗ್ಯತೆ, ಅರ್ಹತೆ ಬಿಜೆಪಿಯಲ್ಲಿ ಯಾರಿಗಿದೆ? 

ಇನ್ನು ಯತ್ನಾಳರಿಗೆ ಸಿಎಂ ಹಾಗೂ ಸಚಿವ ಸ್ಥಾನದ ಬಗ್ಗೆ ಸ್ವಾಮೀಜಿಗಳ ಹೇಳಿಕೆ ವಿಚಾರವಾಗಿ ಮಾತನಾಡಿ, ನನ್ನಷ್ಟು ಯೋಗ್ಯತೆ, ಅರ್ಹತೆ ಬಿಜೆಪಿಯಲ್ಲಿ ಯಾರಿಗಿದೆ. ವಾಜಪೇಯಿ ಆಡಳಿತದಲ್ಲಿ ಮಂತ್ರಿ ಆಗಿದ್ದೆ. ಸಚಿವ ಸಂಪುಟದಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡಿದ್ದಾಗಿ  ವಾಜಪೇಯಿ ಅವರು ನನಗೆ ಪತ್ರ ಕೊಟ್ಟಿದ್ದರು. ಅಟಲ್‌ಜೀ ಹಸ್ತಾಂಕ್ಷರದಿಂದ ಪತ್ರ ಪಡೆದ ವ್ಯಕ್ತಿ ನಾನು, ಆದರೆ ದುರ್ದೈವ ಅಂದ್ರೆ ರಾಜಕಾರಣದಲ್ಲಿ ನೇರ ಮಾತನಾಡಬಾರದು, ಚಮಚಾಗಿರಿ ಮಾಡಬೇಕು, ಅದನ್ನು ನಾನು ಮಾಡೋದಿಲ್ಲ, ಒಂದು ಕಾಲು ಹಿಡಿಯೋದಿಲ್ಲ, ಭೋಗದ ವಸ್ತು ಕೊಡುವವನಲ್ಲ. ಅದಕ್ಕೆ ಹಿಂದೆ ಉಳಿದಿದ್ದೇನೆ. ನಾನು ಓರ್ವ ಸಾಮಾನ್ಯ ಕಾರ್ಯಕರ್ತರ, ಅತೀವೃಷ್ಠಿ ಸಂಬಂಧ, ಸಾಮಾಜಿಕ ನ್ಯಾಯಕ್ಕಾಗಿ ಗುಡುಗಿದ್ದೇನೆ, ಮಂತ್ರಿ, ಸಿಎಂ ಮಾಡಿ ಅಂತಾ ನಾನು ಗುಡುಗಿಲ್ಲ ಎಂದರು.

ಕಾಂಗ್ರೆಸ್ ಸದನದ ಸಮಯ ಹಾಳು ಮಾಡಿತು 

ಬೆಳಗಾವಿ ಅಧಿವೇಶದಲ್ಲಿ ಉತ್ತರ ಕರ್ನಾಟಕ ನಿರ್ಲಕ್ಷ್ಯ ವಿಚಾರವಾಗಿ ಮಾತನಾಡಿ, ಬೆಳಗಾವಿ ಅಧಿವೇಶನದಲ್ಲಿ ಕೊನೆಗೆ ಎರಡೇ ದಿನ ಕೊಟ್ಟರು. ಮುಂದಿನ ಅಧಿವೇಶನದಲ್ಲಿ ಮೊದಲೇ ನಾಲ್ಕು ದಿನ ಕೊಡಬೇಕು ಎಂದರು. ಉತ್ತರ ಕರ್ನಾಟಕಕ್ಕೆ ಮೊದಲೇ ಸಮಯ ಕೊಡುವಂತೆ ಸಭಾಪತಿ ಕೇಳಿದ್ದೇ, ಉದ್ದೇಶಪೂರ್ವಕವಾಗಿ ಕಾಂಗ್ರೆಸ್ ಸದನದ ಸಮಯ ಹಾಳು ಮಾಡಿದೆ. ಉತ್ತರ ಕರ್ನಾಟಕದ ಚರ್ಚೆಯಾಗದಂತೆ ಕಾಂಗ್ರೆಸ್ ಮಾಡಿದೆ. ಸಿದ್ದರಾಮಯ್ಯ ಎಂಟೆಂಟು ತಾಸು ಮಾತನಾಡುತ್ತಾರೆ. ಅವರ ಶಾಸಕರಿಗೂ ಅವಕಾಶ ಕೊಡೊದಿಲ್ಲ. ಇದು ದುರಂತ. ಹಾಡಿದ್ದು ಹಾಡೋ ಕಿಸಬಾಯಿದಾಸ ಅಂತಾರಲ್ಲ, ಹಾಗೇ ಸಿದ್ದರಾಮಯ್ಯ ಹೇಳಿದ್ದೇ ಹೇಳುತ್ತಾರೆ

ಇದನ್ನೂ ಓದಿ: ಪಾದಯಾತ್ರೆಗೆ ಬಂದವರಿಗೆ Congress 300 ರೂ. ಪೆಟ್ರೋಲ್ ಟೋಕನ್ ಕೊಡ್ತಿರೋದು ಏಕೆ: HD Revanna ಪ್ರಶ್ನೆ

ಪಂಚಮಸಾಲಿ ಹೋರಾಟ ವಿಚಾರವಾಗಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ,‌ಬೊಮ್ಮಾಯಿಯವರು ಸ್ಪಷ್ಟ ಭರವಸೆ ಕೊಟ್ಟಿದ್ದಾರೆ. ನಾವು ಎಲ್ಲ ಸಮುದಾಯಗಳಿಗಾಗಿ ಹೋರಾಟ ಮಾಡುತ್ತಿದ್ದೇವೆ.‌ ನಮ್ಮ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಕೊಡಿ ಅಂತಾ ಕೇಳಿದ್ದೇವೆ. ಯಾರಿಗೂ ಬೆದರಿಕೆ, ಅಂಜಿಕೆ ಹಾಕಿಲ್ಲ. ನಮಗೆ ಬೊಮ್ಮಾಯಿಯವರ ಮೇಲೆ ವಿಶ್ವಾಸ ಇದೆ.‌ಮೀಸಲಾತಿ ಕೊಡಬೇಕೆಂಬ ಭಾವನೆ ಅವರ ಮನಸ್ಸಿನಲ್ಲಿದೆ. ಆ ದಿಕ್ಕಿನಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ನಾವು ಈಗ ಸಾಫ್ಟ್ ಆಗಿದ್ದೇವೆ. ಯಡಿಯೂರಪ್ಪ‌ ಮನಸ್ಸಿನಲ್ಲಿ ಏನಿತ್ತೊ ಗೊತ್ತಿಲ್ಲ.‌ಅದಕ್ಕೆ ಆಗ ಬಹಳ ಹಾರ್ಡ್ ಆಗಿದ್ವಿ, ಬೊಮ್ಮಾಯಿ ನಿರ್ಣಯ ಕಾಯ್ದು ನೋಡುತ್ತಿದ್ದೇವೆ. ಬಜೆಟ್ ಪೂರ್ವದಲ್ಲಿ ಅವರು ಈಡೇರಿಸುವ ವಿಶ್ವಾಸ ಇದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
Published by:Kavya V
First published: