• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಬೆಳಗಾವಿ ಉಪಚುನಾವಣೆ ಮಹಾಭಾರತದಂತೆ; ದ್ರೋಣಾಚಾರ್ಯ ಹಾಗೂ ಅರ್ಜುನನ ಮಧ್ಯೆ ಯುದ್ದ: ಬಾಲಚಂದ್ರ ಜಾರಕಿಹೊಳಿ

ಬೆಳಗಾವಿ ಉಪಚುನಾವಣೆ ಮಹಾಭಾರತದಂತೆ; ದ್ರೋಣಾಚಾರ್ಯ ಹಾಗೂ ಅರ್ಜುನನ ಮಧ್ಯೆ ಯುದ್ದ: ಬಾಲಚಂದ್ರ ಜಾರಕಿಹೊಳಿ

ಬಾಲಚಂದ್ರ ಜಾರಕಿಹೊಳಿ

ಬಾಲಚಂದ್ರ ಜಾರಕಿಹೊಳಿ

ನಾವು ವ್ಯಕ್ತಿ ವಿರೋಧ ಮಾಡುತ್ತಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ವಿರೋಧ ಮಾಡ್ತಿದ್ದೇವೆ. ರಾಜಕಾರಣ ಬೇರೆ, ನಮ್ಮ ಕುಟುಂಬ ಬೇರೆ . ಕಾಂಗ್ರೆಸ್ ಪಕ್ಷದಿಂದ ಗೆದ್ದರೆ ಏನು ಅಭಿವೃದ್ಧಿ ಕೆಲಸ ಮಾಡಲು ಆಗಲ್ಲ. ಹಾಗಾಗಿ ಬಿಜೆಪಿ ಗೆಲ್ಲಿಸಿ

  • Share this:

ಬೆಳಗಾವಿ (ಏ. 12): ಲೋಕಸಭಾ ಉಪ ಸಮರದಿಂದ ದೂರ ಉಳಿದಿದ್ದ  ಜಾರಕಿಹೊಳಿ ಸಹೋದರ  ಕೊನೆಯ ಹಂತ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣದಿಂದಾಗಿ ಬೆಂಗಳೂರಿನಲ್ಲಿ ಅಣ್ಣನಿಗೆ ಬೆಂಬಲವಾಗಿ ನಿಂತಿದ್ದ ಬಾಲಚಂದ್ರ ಜಾರಕಿಹೊಳಿ ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದರು. ಈಗ ಬಿಜೆಪಿ ನಾಯಕರ ಒತ್ತಡಕ್ಕೆ ಮಣಿದು, ಅಭ್ಯರ್ಥಿ ಪರ ಮತಯಾಚನೆಗೆ ಮುಂದಾಗಿದ್ದಾರೆ.  ಇಂದು ಬೆಂಗಳೂರಿನಿಂದ ನೇರವಾಗಿ ಮನೆಗೂ ತೆರಳದೆ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಕಾರ್ಯಕರ್ತರನ್ನ ಭೇಟಿ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ಈ ಚುನಾವಣೆ ಮಹಾಭಾರತ ಯುದ್ಧದ ರೀತಿ ಇದೆ. ದ್ರೋಣಾಚಾರ್ಯ ಹಾಗೂ ಅರ್ಜುನನ ಮಧ್ಯೆ ಯುದ್ಧ ನಡೆಯುತ್ತಿದೆ ಎನ್ನುವ ಮೂಲಕ ಮೊದಲ ದಿನವೇ ಪರೋಕ್ಷವಾಗಿ ಸಹೋದರ ಸತೀಶ್ ರನ್ನು  ಕುಟುಕಿದರು. 


ಗೋಕಾಕ್ ತಾಲೂಕಿನ ಅರಭಾವಿಯ ಬಸವೇಶ್ವರ ಸಭಾ ಭವನದಲ್ಲಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರನ್ನ ಕರೆಸಿ ಸಭೆ ನಡೆಸಿದರು.  ಇಷ್ಟು ದಿನ ಬೆಂಗಳೂರಿನಲ್ಲಿದ್ದೆ, ಅಲ್ಲಿನ ಕೆಲಸದ ಒತ್ತಡ ಎಷ್ಟಿತ್ತು ಎಂಬುದು ನಿಮಗೆ ಎಲ್ಲಾ ಗೊತ್ತಿದೆ. ಆ ಕಾರಣಕ್ಕೆ ನಾನು ಪ್ರಚಾರಕ್ಕೆ ಬರಲು ಆಗಿರಲಿಲ್ಲ. ನಾನು ಬರದಿದ್ದರೆ ತಾಲೂಕಿನಲ್ಲಿ ಗೊಂದಲ ನಿರ್ಮಾಣ ಆಗುತ್ತದೆ ಎಂದು ಪ್ರಹ್ಲಾದ್ ಜೋಶಿ ಅವರು ಹೇಳಿದರು‌.  ಬರುವುದಿಲ್ವಾ ಎಂದು ಜಗದೀಶ್ ಶೆಟ್ಟರ್ ಕರೆ ಮಾಡಿ ಕೇಳಿದರು. ನೀವು ಗಾಬರಿಯಾಗಬೇಡಿ ನಮ್ಮ ಕ್ಷೇತ್ರದ ಜನ ಪ್ರಚಾರ ಮಾಡುತ್ತಾರೆ ಎಂದು ಹೇಳಿದ್ದೆ. ಅರಭಾವಿ ಕ್ಷೇತ್ರದ ಜನರನ್ನ ಪಡೆಯಲು ನಾನು ಪುಣ್ಯ ಮಾಡಿದ್ದೇನೆ. ಪಕ್ಷಕ್ಕೆ ಕೆಲಸ ಮಾಡುವುದು ನನ್ನ ಕರ್ತವ್ಯ ಎಂದರು.


ನೀವು ನಮ್ಮನ್ನ ಆಯ್ಕೆ ಮಾಡಿ ಕಳುಹಿಸಿದ್ದೀರಿ. ಆಯ್ಕೆಯಾಗಿ ಬಂದ ಮೇಲೆ ನಿಮ್ಮ ಕೆಲಸ ನಾನು ಮಾಡಿ ಕೊಟ್ಟಿದ್ದೇನೆ. ಇನ್ನು ಕಳೆದ ಬಾರಿ ಅರಭಾವಿ ಕ್ಷೇತ್ರದಿಂದ ದಿವಂಗತ ಸುರೇಶ್ ಅಂಗಡಿ ಅವರಿಗರ 55 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಿದ್ದೇವೆ. ಈ ಬಾರಿಯು 55 ಸಾವಿರ ಮತಗಳ ಲೀಡ್ ನಲ್ಲಿ ಮಂಗಳಾ ಅಂಗಡಿಯವರಿಗೆ ನೀಡಿ ಗೆಲ್ಲಿಸುವ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಭರವಸೆ ನೀಡಿದರು.


ಮಹಾಭಾರತದ ಯುದ್ದ:


ಇನ್ನು ಬೆಳಗಾವಿ ಲೋಕಸಭಾ ಉಪ ಚುನಾವಣೆ  ಈ ಚುನಾವಣೆ ಮಹಾಭಾರತ ರೀತಿಯಾಗಿ ಆಗಿದೆ. . ದ್ರೋಣಾಚಾರ್ಯ ಹಾಗೂ ಅರ್ಜುನನ ಮಧ್ಯೆ ಯುದ್ಧ ನಡೀತಿದೆ . ನಾವು ವ್ಯಕ್ತಿ ವಿರೋಧ ಮಾಡುತ್ತಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ವಿರೋಧ ಮಾಡ್ತಿದ್ದೇವೆ. ರಾಜಕಾರಣ ಬೇರೆ, ನಮ್ಮ ಕುಟುಂಬ ಬೇರೆ . ಕಾಂಗ್ರೆಸ್ ಪಕ್ಷದಿಂದ ಗೆದ್ದರೆ ಏನು ಅಭಿವೃದ್ಧಿ ಕೆಲಸ ಮಾಡಲು ಆಗಲ್ಲ. ಹಾಗಾಗಿ ಬಿಜೆಪಿ ಗೆಲ್ಲಿಸಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.‘


ನಾಳೆಯಿಂದ ಪ್ರತಿ ಹಳ್ಳಿಯಲ್ಲೂ ಪ್ರಚಾರಕ್ಕೆ ಬರುತ್ತೇನೆ. ನಾಡಿದ್ದು ನಮ್ಮ ಕ್ಷೇತ್ರಕ್ಕೆ ಯಡಿಯೂರಪ್ಪ ಕೂಡ ಪ್ರಚಾರಕ್ಕೆ ಬರುತ್ತಾರೆ. 2004 ರಿಂದ ಬೆಳಗಾವಿ ಲೋಕಸಭಾ ಬಿಜೆಪಿ ಭದ್ರಕೋಟೆಯಾಗಿದೆ. ಮುಂದೆಯೂ ಇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ನಲ್ಲಿ ಚುನಾವಣಾ ಪ್ರಚಾರ ದಿಂದ ದೂರ ಉಳಿದು ಹಲವು ಗೊಂದಲಗಳಿಗೆ ದಾರಿ ಮಾಡಿ ಕೊಟ್ಟಿದ್ದ ಸಹೋದರ ಇಂದು ಪ್ರಚಾರ ಕಣಕ್ಕೆ ಇಳಿಯುವ ಮೂಲಕ ಗೋಕಾಕ್ ತಾಲೂಕಿನ ಅಬ್ಬರದ ಪ್ರಚಾರಕ್ಕೆ ಮುಂದಾಗಿದ್ದಾರೆ. ನಾಳೆ ರಮೇಶ್ ಜಾರಕಿಹೊಳಿ ಕೋವಿಡ್ ಪರೀಕ್ಷೆ ನಡೆಯಲಿದ್ದು, ವರದಿ ನೆಗೆಟಿವ್ ಬಂದರೆ ಮುಖ್ಯಮಂತ್ರಿ ಆಗಮಿಸುವ ದಿನವೇ ರಮೇಶ್ ಕೂಡ ಚುನಾವಣಾ ಪ್ರಚಾರದ ಅಖಾಡಕ್ಕೆ ಇಳಿಯಲಿದ್ದಾರೆ.

Published by:Seema R
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು