ಯಾವ ಪುರುಷಾರ್ಥಕ್ಕಾಗಿ ಕೃತಜ್ಞತಾ ಸಮಾವೇಶ? ಬರಗಾಲ ಸಂದರ್ಭದಲ್ಲಿ ದೋಸ್ತಿ ದುಂದುವೆಚ್ಚ ಬೇಕಾ? - ಶ್ರೀರಾಮುಲು ಟೀಕೆ

ಬಳ್ಳಾರಿಗೆ ಇವರೆಲ್ಲ ಯಾವ ಪುರುಷಾರ್ಥಕ್ಕೆ ಬರ್ತಿದ್ದಾರೆ? ಜಿಲ್ಲೆಯಲ್ಲಿ ಬರಗಾಲ ತಾಂಡವಾಡುತ್ತಿದೆ. ಇಂತಹ‌ ಸಮಯದಲ್ಲಿ ಈ ಕಾರ್ಯಕ್ರಮ ಬೇಕಿತ್ತಾ? ಲಕ್ಷಾಂತರ ಹಣ ಖರ್ಚು ಮಾಡಿ ಸಮಾವೇಶ ಮಾಡ್ತಾ ಇದ್ದೀರಿ. ಮೋಜು ಮಸ್ತಿ ಮಾಡುತ್ತಿರಿ. ಇಂತಹ ಮೋಜು ಮಸ್ತಿ ಬಹಳ ದಿನ ನಡೆಯೋಲ್ಲ

G Hareeshkumar | news18
Updated:November 22, 2018, 3:12 PM IST
ಯಾವ ಪುರುಷಾರ್ಥಕ್ಕಾಗಿ ಕೃತಜ್ಞತಾ ಸಮಾವೇಶ? ಬರಗಾಲ ಸಂದರ್ಭದಲ್ಲಿ ದೋಸ್ತಿ ದುಂದುವೆಚ್ಚ ಬೇಕಾ? - ಶ್ರೀರಾಮುಲು ಟೀಕೆ
ಶಾಸಕ ಬಿ ಶ್ರೀರಾಮುಲು
  • News18
  • Last Updated: November 22, 2018, 3:12 PM IST
  • Share this:
- ಶರಣು ಹಂಪಿ

ಬಳ್ಳಾರಿ (ನ.22) :  ಬಳ್ಳಾರಿ ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಹಿನ್ನೆಲೆ ಇಂದು ಜರುಗುತ್ತಿರುವ ಕೃತಜ್ಞತಾ ಸಮಾವೇಶವನ್ನು ಬಿಜೆಪಿ ಶಾಸಕ ಶ್ರೀರಾಮುಲು ಟೀಕಿಸಿದ್ದಾರೆ.

ಇದನ್ನು ಓದಿ :  ಯಡಿಯೂರಪ್ಪ - ರೆಡ್ಡಿ ಭೇಟಿ, ಜೈಲಿಗೆ ಹೋದಾಗ ಕೈ ಬಿಟ್ಟಿದ್ದಕ್ಕೆ ಕೋಪತಾಪ

ಕಾಂಗ್ರೆಸ್ ಪಕ್ಷದ ನಾಯಕರು, ಸಂಸದ ಉಗ್ರಪ್ಪ, ಮಾಜಿ ಪಿಎಂ ದೇವೇಗೌಡ, ಸಿಎಂ ಎಚ್ಡಿಕೆ, ಮಾಜಿ ಸಿಎಂ ಸಿದ್ದರಾಮಯ್ಯ ಕೃತಜ್ಞತಾ ಸಮಾವೇಶಕ್ಕೆ ಬರುತ್ತಿದ್ದಾರೆ. ಬಳ್ಳಾರಿಗೆ ಇವರೆಲ್ಲ ಯಾವ ಪುರುಷಾರ್ಥಕ್ಕೆ ಬರ್ತಿದಿರಾ? ಜಿಲ್ಲೆಯಲ್ಲಿ ಬರಗಾಲ ತಾಂಡವಾಡುತ್ತಿದೆ. ಇಂತಹ‌ ಸಮಯದಲ್ಲಿ ಈ ಕಾರ್ಯಕ್ರಮ ಬೇಕಿತ್ತಾ? ಲಕ್ಷಾಂತರ ಹಣ ಖರ್ಚು ಮಾಡಿ ಸಮಾವೇಶ ಮಾಡ್ತಾ ಇದ್ದೀರಿ. ಮೋಜು ಮಸ್ತಿ ಮಾಡುತ್ತಿರಿ. ಇಂತಹ ಮೋಜು ಮಸ್ತಿ ಬಹಳ ದಿನ ನಡೆಯೋಲ್ಲ ಎಂದರು

ಉಗ್ರಪ್ಪ ಕೇವಲ ಆರು ತಿಂಗಳ ಅವಧಿಯಲ್ಲಿ ಮೋಜು ಮಸ್ತಿ ಮಾಡೋದು ಸರಿಯಲ್ಲ. ರಾಜ್ಯದಲ್ಲಿನ ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರ ಮಾಡಲಾಗುತ್ತಿಲ್ಲ. ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಐಎಸ್ಆರ್ ಸಕ್ಕರೆ ಕಾರ್ಖಾನೆ, ಸಿರುಗುಪ್ಪ ಸಕ್ಕರೆ ಕಾರ್ಖಾನೆ ಬಾಕಿ ಉಳಿಸಿಕೊಂಡಿದೆ. ಹೋರಾಟ ಕೂಡ ನಡೆದಿದೆ ಇಂಥ ಸಂದರ್ಭದಲ್ಲಿ ಈ ಅದ್ಧೂರಿ ಕಾರ್ಯಕ್ರಮ ಬೇಕಾಗಿತ್ತಾ? ಎಂದು ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ರೈತ ಮಹಿಳೆ ಜಯಶ್ರೀ ಗೆ ಪದ ಬಳಕೆ ಸರಿಯಲ್ಲ. ಎಲ್ಲಿ ಮಲಗಿದ್ದೆ ಅಂತೀರಾ? ಈ ಹಿಂದೆ ಅದೇ ಮಹಿಳೆಯನ್ನು ಹೊಗಳಿದ್ದಿರಿ, ಆ ಮಹಿಳೆಗೆ ನಿಮ್ಮ ಪಕ್ಷದವರ ಮೂಲಕ ಡೀಲ್ ರಾಣಿ ಅಂತೀರಾ? ಇವತ್ತು ಬರಗಾಲವಿದೆ, ಬರಗಾಲ ಪರಿಹಾರ, ಕಬ್ಬು ಬಾಕಿ ಕೊಡಿಸಿ, ರೈತ ಮಹಿಳೆಗೆ ಸಿಎಂ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.

ನನಗೆ ಪಕ್ಷವು ಕೊಪ್ಪಳ ಉಸ್ತುವಾರಿ ನೀಡಲಾಗಿದೆ. ಹಾಗಂತ ನಾನು ಬಳ್ಳಾರಿ ನೋಡಿಕೊಳ್ಳುವುದಿಲ್ಲ ಎಂದಲ್ಲ. ಬಳ್ಳಾರಿ, ರಾಯಚೂರು ಎಲ್ಲವನ್ನು ನಾನು ಮಾನಿಟರ್ ಮಾಡುವೆ. ಸಿದ್ದರಾಮಯ್ಯ ಕೊಪ್ಪಳ ಸ್ಪರ್ಧೆ ಮಾಡುತ್ತಾರೆ ಎನ್ನುವ ಕಾರಣಕ್ಕೆ ನನಗೆ ಕೊಪ್ಪಳ ಉಸ್ತುವಾರಿ ಕೊಟ್ಟಿಲ್ಲ ಎಂದರು.ಪಕ್ಷದ ಹೈಕಮಾಂಡ್ ತಿರ್ಮಾನದಂತೆ ನಾನು ಕೆಲಸ ಮಾಡುವೆ. ಬರುವ ಚುನಾವಣೆಯಲ್ಲಿ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂದು ತಿಳಿಸಿದರು.

ಇದನ್ನು ಓದಿ :  ನ.26, 27 ರಂದು ಮಾಜಿ ಸಿಎಂ ಸಿದ್ದರಾಮಯ್ಯ ಬದಾಮಿ ಪ್ರವಾಸ 
First published: November 22, 2018, 2:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading