ಸಿದ್ದರಾಮಯ್ಯ ಮತ್ತೆ ಪಟ್ಟ ಕಟ್ಟಿ ಮೋಸ ಮಾಡಲು ಹೊರಟಿದ್ದಾರೆ; ಶ್ರೀರಾಮುಲು ವಾಗ್ದಾಳಿ

ಆಗಿನ ಸಮಯದಲ್ಲಿ ಕಾಂಗ್ರೆಸ್​ ಪಕ್ಷ ಜನರಿಗೆ ಆಶ್ವಾಸನೆಗಳನ್ನು ಕೊಟ್ಟು ಈಡೇರಿಸದೆ ಕೈ ಕೊಟ್ಟಿದೆ. ದೇಶದಲ್ಲಿ ಕಾಂಗ್ರೆಸ್​ ಪಕ್ಷ ಅಸ್ತಿತ್ವ ಕಳೆದುಕೊಳ್ಳುವ ಈಗ ಸಂದರ್ಭ ಬಂದಿದೆ. ಮತ್ತೆ ಸಿದ್ದರಾಮಯ್ಯ ಪಟ್ಟ ಕಟ್ಟಿ ಮೋಸ ಮಾಡಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Latha CG | news18
Updated:February 5, 2019, 2:13 PM IST
ಸಿದ್ದರಾಮಯ್ಯ ಮತ್ತೆ ಪಟ್ಟ ಕಟ್ಟಿ ಮೋಸ ಮಾಡಲು ಹೊರಟಿದ್ದಾರೆ; ಶ್ರೀರಾಮುಲು ವಾಗ್ದಾಳಿ
ಶಾಸಕ ಬಿ ಶ್ರೀರಾಮುಲು
  • News18
  • Last Updated: February 5, 2019, 2:13 PM IST
  • Share this:
ಚಿತ್ರದುರ್ಗ,(ಫೆ.05): ಬಿಜೆಪಿಯ ತಂತ್ರಕ್ಕೆ ಪ್ರತಿತಂತ್ರ ರೂಪಿಸಲು ಮುಂದಾಗಿರುವ ಮೈತ್ರಿ ನಾಯಕರಿಗೆ ಬಿಜೆಪಿ ಶಾಸಕ ಬಿ. ಶ್ರೀರಾಮುಲು ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಕಳೆದ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದಾರೆ. ಈ ಬಾರಿ ಲೋಕಸಭೆಗೆ ನಿಲ್ಲುವ ಪ್ರಯತ್ನ ಮಾಡುತ್ತಿದ್ದಾರಂತೆ ಎಂದು ವ್ಯಂಗ್ಯ ಮಾಡಿದ್ದಾರೆ.

ಚಿತ್ರದುರ್ಗದ ನಾಯಕನಹಟ್ಟಿಯಲ್ಲಿ ಮಾತನಾಡಿದ ಅವರು, ಆಗಿನ ಸಮಯದಲ್ಲಿ ಕಾಂಗ್ರೆಸ್​ ಪಕ್ಷ ಜನರಿಗೆ ಆಶ್ವಾಸನೆಗಳನ್ನು ಕೊಟ್ಟು ಈಡೇರಿಸದೆ ಕೈ ಕೊಟ್ಟಿದೆ. ದೇಶದಲ್ಲಿ ಕಾಂಗ್ರೆಸ್​ ಪಕ್ಷ ಅಸ್ತಿತ್ವ ಕಳೆದುಕೊಳ್ಳುವ ಈಗ ಸಂದರ್ಭ ಬಂದಿದೆ. ಮತ್ತೆ ಸಿದ್ದರಾಮಯ್ಯ ಪಟ್ಟ ಕಟ್ಟಿ ಮೋಸ ಮಾಡಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ದಿನೇಶ್ ಗುಂಡೂರಾವ್​ಗೆ ತಿರುಗೇಟು:

ಯುಪಿಎ ಸರ್ಕಾರದಲ್ಲಿ ಸಿಬಿಐ, ಇಡಿಯನ್ನು ಮೋದಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ದಿನೇಶ್​ ಗುಂಡೂರಾವ್​ ಅವರ ಆರೋಪಕ್ಕೆ ಶ್ರೀರಾಮುಲು ತಿರುಗೇಟು ನೀಡಿದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ಸಹ ಅವತ್ತಿನ ಸಂದರ್ಭಲ್ಲಿ ಇದ್ದರು. ದುರ್ಬಳಕೆ ಮಾಡಿಕೊಳ್ಳುವ ಸಂಸ್ಕಾರ ಮತ್ತು ಸಂಸ್ಕೃತಿ ಹೇಳಿಕೊಟ್ಟವರು ಕಾಂಗ್ರೆಸ್​ನವರು. ನಮ್ಮ ಪಕ್ಷದಲ್ಲಿ ಆ ರೀತಿಯ ಕೆಟ್ಟ ಅಭ್ಯಾಸ ಮಾಡಿಕೊಂಡಿಲ್ಲ. ಡಿಕೆ ಶಿವಕುಮಾರ್ ಮನೆಯಲ್ಲಿ ದಾಖಲಾತಿ, ಹಣ ಸಿಕ್ಕಾಗ, ಸಿಬಿಐ ಮತ್ತು ಇಡಿ ಭಾಗಿಯಾಗಿದೆ.ಅವರಿಗೆ ಕಷ್ಟ ಬಂದಾಗ, ಅವರು ಮಾಡಿದ ತಪ್ಪು ಗೊತ್ತಾಗಿದೆ. ಹೀಗಾಗಿ ಜನರ ದಿಕ್ಕು ತಪ್ಪಿಸಲು ಮುಂದಾಗುತ್ತಿದ್ದಾರೆ ಎಂದು ಆರೋಪಿಸಿದರು.

ಅವಿಶ್ವಾಸ ನಿರ್ಣಯ ಇಲ್ಲ? ಸೋಲಿನ ಭೀತಿಯಲ್ಲಿ ಮಾರ್ಗ ಬದಲಿಸಿತಾ ಬಿಜೆಪಿ? ಬಿಎಸ್​ವೈಯಿಂದ ಪ್ಲಾನ್-ಬಿ

ಆಪರೇಷನ್ ಕಮಲಕ್ಕೆ ಬಿಜೆಪಿ 300 ಕೋಟಿ ಮೀಸಲಿಟ್ಟಿದೆ ಎಂದು ದಿನೇಶ್​ ಗುಂಡೂರಾವ್​ ಹೇಳುತ್ತಾರೆ. ಅದು ಅವರ ಕಲ್ಪಿತ,ಅವರ ಸೃಷ್ಟಿಯಷ್ಠೆ. ಜನರು ಬರಗಾಲದಲ್ಲಿ ಇದ್ದರೂ, ಸರ್ಕಾರ ಕೈ ಕಟ್ಟಿ ಕುಳಿತಿದೆ. ದನ ಕರುವಿಗೆ ಮೇವಿಲ್ಲ ನೀರಿಲ್ಲ. ಜನರು ಗುಳೇ ಹೋಗುವ ಪರಿಸ್ಥಿತಿಯಲ್ಲಿದ್ದಾರೆ. ಜನರ ಸಮಸ್ಯೆಗೆ ಸ್ಪಂದಿಸುವ ಜ್ಞಾನವೇ ಇಲ್ಲದ ಸರ್ಕಾರ. ಬೆಂಗಳೂರಿನಲ್ಲಿ ಕೂತು ಮೋಜು ಮಸ್ತಿ ಮಾಡುತ್ತಿದ್ದಾರೆ. ಹಳ್ಳಿಗಳಿಗೆ ಬಂದು ಜನರ ಪರಿಸ್ಥಿತಿ ನೋಡಲಿ ಎಂದು ತೀವ್ರ ವಾಗ್ದಾಳಿ ನಡೆಸಿದರು.

ನಾವು ಯಾವ ಶಾಸಕರನ್ನು ಸಂಪರ್ಕಿಸಿಲ್ಲ:30, 40, 50 ಕೋಟಿ ಅಂತಾ ಏನು ಮಾತನಾಡುತ್ತಿದ್ದಾರೋ ಅದರಿಂದ ಕೆಲಸ ಆಗಲ್ಲ. ಜನರ ಆಶೀರ್ವಾದಿಂದ 104 ಸ್ಥಾನ ಗೆದ್ದಿದ್ದೇವೆ. ಜೆಡಿಎಸ್​ ಮತ್ತು ಕಾಂಗ್ರೆಸ್ ಪಕ್ಷದ ನಾಯಕರಲ್ಲಿ ಅಸಮಾಧಾನವಿದೆ. ಕೆಲಸ ಆಗುತ್ತಿಲ್ಲ, ಸಿಎಂ ಸ್ಪಂದಿಸುತ್ತಿಲ್ಲ ಎಂದು ಶಾಸಕರು ಮತ್ತು ಸಚಿವರಲ್ಲಿ ಅಸಮಾಧಾನ ಮನೆ ಮಾಡಿದೆ. ಅವರಲ್ಲೇ 3-4 ಗುಂಪುಗಳಾಗಿ ಬೇರೆ ಕಡೆ ಹೋಗಿದ್ದಾರೆ. ನಾವು ಯಾವುದೇ ಶಾಸಕರ ಖರೀದಿಗೆ ಮುಂದಾಗಿಲ್ಲ. ಅವರ ತಪ್ಪು ಮುಚ್ಚಿಕೊಳ್ಳಲು, ಬಿಜೆಪಿ ವಿರುದ್ಧ ತಪ್ಪು ಮಾಹಿತಿ ಹೇಳುತ್ತಿದ್ದಾರೆ. ನಾವು ಯಾರನ್ನೂ ಸಂಪರ್ಕ ಮಾಡಿಲ್ಲ. ಯಾರನ್ನೂ ಪಕ್ಷಕ್ಕೆ ಕರೆದುಕೊಳ್ಳುವುದಿಲ್ಲ ಎಂದರು.

VIDEO: ಸುಮಲತಾ ಮಂಡ್ಯದ ಗೌಡ್ತಿ ಅಲ್ಲ: ಹಾಗಿದ್ರೆ ಸಿಎಂ ಕುಮಾರಸ್ವಾಮಿ ಅವರ ಪತ್ನಿ? ಅಂಬಿ ಅಭಿಮಾನಿಗಳ ಪಶ್ನೆ

ಜೆಡಿಎಸ್​ ನವರು ಬಿಜೆಪಿ ಶಾಸಕರನ್ನು ಸೆಳೆಯುತ್ತಿದ್ದಾರೆ. ಮುಂಚೆಯಿಂದಲೂ ಕುಮಾರಸ್ವಾಮಿ ಈ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ನಾವಂತೂ ಯಾವ ಕಾಂಗ್ರೆಸ್ ಶಾಸಕನನ್ನು ಮುಟ್ಟಿಲ್ಲ, ಮಾತನಾಡಿಸಿಯೂ ಇಲ್ಲ. ನಾವೇನಿದ್ದರೂ ವಿರೋಧ ಪಕ್ಷದಲ್ಲಿದ್ದೇವೆ ಎಂದು ಹೇಳಿದರು.

First published:February 5, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ