Aravind Limbavali: ಏ ಸುಮ್ನೆ ಇರು, ಬೇರೆ ಭಾಷೆ ಬರುತ್ತೆ, ನಾಚಿಕೆ ಆಗಲ್ವಾ ನಿಂಗೆ, ಒದ್ದು ಒಳಗೆ ಹಾಕಿ: ಮನವಿ ನೀಡಲು ಬಂದ ಮಹಿಳೆ ಮೇಲೆ ಲಿಂಬಾವಳಿ ದರ್ಪ

ಮನವಿ ಸ್ವೀಕರಿಸಿ ಏನು ಸಮಸ್ಯೆ ಎಂಬುದನ್ನು ತಿಳಿದುಕೊಂಡು ಮಾತನಾಡಬೇಕಿತ್ತು. ಮಹಿಳೆಯ ಜೊತೆ ಈ ರೀತಿಯ ವರ್ತನೆ ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

ಮಹಿಳೆ ಮೇಲೆ ಲಿಂಬಾವಳಿ ದರ್ಪ

ಮಹಿಳೆ ಮೇಲೆ ಲಿಂಬಾವಳಿ ದರ್ಪ

 • Share this:
  ಜನಪ್ರತಿನಿಧಿಗಳು ತಮ್ಮ ಕ್ಷೇತ್ರಕ್ಕೆ ಅಥವಾ ಊರಿಗೆ ಬಂದರೆ ಸ್ಥಳೀಯರು (People) ತಮ್ಮ ಸಮಸ್ಯೆ ಹೇಳಿಕೊಳ್ಳಲು ಬರೋದು ಸಾಮಾನ್ಯ. ಜನಪ್ರತಿನಿಧಿಗಳು ಸಹ ಮನವಿ ಸ್ವೀಕರಿಸಿ, ಸಮಸ್ಯೆ ಬಗೆಹರಿಸುವ ಭರವಸೆ ನೀಡಿ ತೆರಳುತ್ತಾರೆ. ಸಮಸ್ಯೆ ಬಗ್ಗೆ ಸ್ಪಂದಸುವಂತೆ ತಮ್ಮ ಅಧಿಕಾರಿಗಳಿಗೆ (Officers) ಸೂಚನೆ ನೀಡುತ್ತಾರೆ. ಅದೇ ರೀತಿ ಶಾಸಕ ಅರವಿಂದ್ ಲಿಂಬಾವಳಿ (MLA Aravind Limbavali) ಬಳಿ ಮಹಿಳೆಯೊಬ್ಬರು ಮನವಿ ಸಲ್ಲಿಸಲು ಬಂದಿದ್ದರು. ಆದ್ರೆ  ಶಾಸಕರು (MLA) ಮಾತ್ರ ಮಹಿಳೆಗೆ ಗದರಿ, ಪೊಲೀಸ್ ಠಾಣೆಯಲ್ಲಿ ಕೂರಿಸಿ ಎಂದು ಅವಾಜ್ ಹಾಕಿ ಬೆದರಿಸಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋ (Aravind Limbavali Video) ನೋಡಿದ ನೆಟ್ಟಿಗರು ಇವರೇನಾ ನಮ್ಮ ಜನಪ್ರತಿನಿಧಿಗಳು ಎಂದು ಪ್ರಶ್ನೆ ಮಾಡುತ್ತಿದ್ದಾರೆ.

  ಕಳೆದ ಕೆಲವು ದಿನಗಳಿಂದ ರಾಜಧಾನಿ ಬೆಂಗಳೂರಿನಲ್ಲಿ (Bengaluru Rains) ಮಳೆಯಾಗುತ್ತಿದೆ. ಮಳೆಯ ಹಿನ್ನೆಲೆ ವರ್ತೂರು ಕೆರೆಯ (Varturu Lake) ಕೋಡಿ ಬಿದ್ದು ಅವಾಂತರ ಸೃಷ್ಟಿಯಾಗಿತ್ತು. ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಶಾಸಕ ಅರವಿಂದ್ ಲಿಂಬಾವಳಿ ಭೇಟಿ ನೀಡಿದ್ದರು. ಈ ವೇಳೆ ಮಹಿಳೆಯೊಬ್ಬರು (Woman) ಪತ್ರ ಹಿಡಿದು ಮನವಿ ಸಲ್ಲಿಸಲು ಬಂದಿದ್ದರು.

  ವೈರಲ್ ವಿಡಿಯೋದಲ್ಲಿ ಏನಿದೆ?

  ಅರವಿಂದ್ ಲಿಂಬಾವಳಿ ಮುಂದೆ ಬರುವ ಮಹಿಳೆ, ಸರ್ ಇಲ್ಲಿ ಕೇಳಿ ಎಂದು ಹೇಳುತ್ತಾರೆ. ಈ ವೇಳೆ ಶಾಸಕರು ಮಹಿಳೆಯ ಕೈಯಲ್ಲಿದ್ದ ಪತ್ರ ಪಡೆಯಲು ಮುಂದಾಗ್ತಾರೆ. ಆದ್ರೆ ಮಹಿಳೆ ಪತ್ರ ನೀಡದೇ ತಮ್ಮ ಮಾತು ಕೇಳಿ ಎಂದು ಒತ್ತಾಯಿಸುತ್ತಾರೆ. ಇದರಿಂದ ಕೋಪಗೊಂಡ ಮಾನ್ಯ ಶಾಸಕರು, ಏ ಇವರನ್ನು ಕರ್ಕೊಂಡು ಹೋಗಿ ಪೊಲೀಸ್ ಠಾಣೆಯಲ್ಲಿ ಕೂರಿಸಿ ಎಂದು ಅಲ್ಲಿದ್ದ ಸಿಬ್ಬಂದಿಗೆ ಸೂಚಿಸುತ್ತಾರೆ.

  ಮಹಿಳೆ ಮೇಲೆ ಲಿಂಬಾವಳಿ ದರ್ಪ


  ಸ್ವಲ್ಪ ಮುಂದೆ ಹೋಗಿ ಹಿಂದೆ ಬರುವ ಮಾನ್ಯ ಶಾಸಕರು, ಮಹಿಳೆಯ ಕೈಯಲ್ಲಿದ್ದ ಪತ್ರವನ್ನು ಬಲವಂತವಾಗಿ ಕಸಿದುಕೊಳ್ಳುತ್ತಾರೆ. ಈ ವೇಳೆ ಅದು ಸರ್ಕಾರಿ ಜಮೀನು ಅಲ್ಲ ಎಂದು ಹೇಳುತ್ತಾರೆ. ಮಹಿಳೆ ಮಾತುಗಳಿಂದ ಮತ್ತಷ್ಟು ಕೋಪಗೊಂಡ ಮಾನ್ಯ ಶಾಸಕರು, ಒತ್ತುವರಿ ಮಾಡ್ಕೊಂಡು ಬರ್ತಿರಾ ಎಂದು ಪ್ರಶ್ನೆ ಮಾಡುತ್ತಾರೆ.

  ಇದನ್ನೂ ಓದಿ:  PM Modi In Mangaluru: ಯಡಿಯೂರಪ್ಪರನ್ನು ಬಳಿ ಕರೆದು ಕೂರಿಸಿಕೊಂಡ ಮೋದಿ! ಎಲೆಕ್ಷನ್ ಹೊತ್ತಿಗೆ ಬಿಎಸ್​​ವೈ ಅನಿವಾರ್ಯವಾದ್ರಾ?

  ಒದ್ದು ಒಳಗೆ ಹಾಕಿ

  ಏಯ್ ಸುಮ್ನೆ ಇರು, ಇಲ್ಲಾ ಅಂದ್ರೆ ನೋಡಿ ಬೇರೆ ಭಾಷೆ ಬರುತ್ತೆ  ನೋಡು. ಏನ್ ಮಾತನಾಡಬೇಕು, ಸುಮ್ನೆ ಬಿಡಲ್ಲ ನಿನ್ನ. ನ್ಯಾಯ ಕೇಳಲು ಬಂದಿದ್ದೀನಿ ಅಂತ ಹೇಳಲು ನಾಚಿಕೆ ಆಗಲ್ವಾ ನಿನಗೆ? ಒದ್ದ ಒಳಗೆ ಹಾಕಿ ಎಂದು ಸ್ಥಳದಲ್ಲಿದ್ದ ಪೊಲೀಸರಿಗೆ ಸೂಚಿಸಿದರು.

  ಶಾಸಕರ ವಿರುದ್ಧ ಅಸಮಾಧಾನ ಹಾಕಿದ ಮಹಿಳೆ, ಹೇಗೆ ಮಾತನಾಡುತ್ತಾರೆ ನೋಡಿ. ಮಾನ ಮರ್ಯಾದೆ ಇಲ್ಲವಾ ನಮಗೆ. ನಾನು ನ್ಯಾಯ ಕೇಳಲು ಬಂದಿದ್ದೇನೆ. ಒಬ್ಬ ಮಹಿಳೆ ಅನ್ನೋದನ್ನು ಸಹ ಗಮನಿಸದೇ  ಈ ರೀತಿ ಮಾತನಾಡಿದ್ರೆ ಹೇಗೆ ಎಂದು ಮಹಿಳೆ ತಮ್ಮ ಬೇಸರ ಹೊರ ಹಾಕಿದರು.  ಶಾಸಕರಿಗೆ ಸಾರ್ವಜನಿಕರ ಪ್ರಶ್ನೆ

  ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ತಪ್ಪು ಯಾರದ್ದೇ ಇರಲಿ, ಶಾಸಕರು ಸೌಜನ್ಯವಾಗಿ ಮಾತನಾಡೋದನ್ನು ಕಲಿಯಬೇಕು. ಮನವಿ ಸ್ವೀಕರಿಸಿ ಏನು ಸಮಸ್ಯೆ ಎಂಬುದನ್ನು ತಿಳಿದುಕೊಂಡು ಮಾತನಾಡಬೇಕಿತ್ತು. ಮಹಿಳೆಯ ಜೊತೆ ಈ ರೀತಿಯ ವರ್ತನೆ ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.  ಇದನ್ನೂ ಓದಿ:  BJP MLA Daughter: BMWನಲ್ಲಿ ಸಿಗ್ನಲ್ ಜಂಪ್ ಮಾಡಿದ ಲಿಂಬಾವಳಿ ಪುತ್ರಿ! ಪತ್ರಕರ್ತನಿಗೆ ಹಲ್ಲೆ

  ಬೆಂಗಳೂರಿನಲ್ಲಿ ಕುಡುಕನ ಕಿರಿಕಿರಿ

  ಬೆಂಗಳೂರಿನಲ್ಲಿ ಡ್ರಂಕ್ ಆ್ಯಂಡ್ ಡ್ರೈವ್ ಪರಿಶೀಲನೆ ವೇಳೆ ಕುಡುಕನೋರ್ವ ಪೊಲೀಸರಿಗೆ ಅವಾಜ್ ಹಾಕಿದ್ದಾನೆ. ಹಲಸೂರ್ ಗೇಟ್ ಪೊಲೀಸ್ ಠಾಣೆ ಮುಂಭಾಗದಲ್ಲಿ ರಾತ್ರಿ ಸುಮಾರು 12 ಗಂಟೆಗೆ ಈ ಘಟನೆ ನಡೆದಿದೆ. ಪರಿಶೀಲನೆಗೆ ಗಾಡಿ ಸೈಡ್ ಹಾಕು ಅಂತ ಹೇಳಿದ್ದಕ್ಕೆ ದಾರಿಯಲ್ಲಿರುವ ನಾಯಿ ನೀವು ಎಂದು  ಪೊಲೀಸರನ್ನು ನಿಂದಿಸಿದ್ದಾನೆ.  ಸದ್ಯ ಪೊಲೀಸರು ದಂಡ ಹಾಕಿ ವಾಹನವನ್ನು ವಶಕ್ಕೆ ಪಡೆದು ಸವಾರನನ್ನು ಕಳುಹಿಸಿದ್ದಾರೆ.
  Published by:Mahmadrafik K
  First published: