ಬೆಂಗಳೂರು(ಜೂ.10): ಶಾಸಕ ಅರವಿಂದ ಲಿಂಬಾವಳಿ (Arvind Limbavali) ಪುತ್ರಿ ಕಿರಿಕ್ ಮಾಡಿದ್ದು ಪೋಲಿಸ್ (Police) ಕಾರು ತಡೆದ ಹಿನ್ನೆಲೆ ಹೈಡ್ರಾಮಾ ಕ್ರಿಯೇಟ್ ಆಗಿದೆ. ಅರವಿಂದ ಲಿಂಬಾವಳಿ ಪುತ್ರಿ ಕಿರಿಕ್ ಮಾಡಿದ್ದು ಇದೀಗ ಬಿಜೆಪಿ ಶಾಸಕರ (BJP MLA) ಉದ್ಧಟತನ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ. ನಾನು ಶಾಸಕ ಅರವಿಂದ ಲಿಂಬಾವಳಿ ಪುತ್ರಿ ಗೊತ್ತಾ ಎಂದು ಪ್ರಶ್ನಿಸಿರೋ ಲಿಂಬಾವಳಿ ಮಗಳು ಪೊಲೀಸರ ಜೊತೆಗೆ ವಾಗ್ವಾದ ನಡೆಸಿ ಗಲಾಟೆ ಮಾಡಿದ್ದಾಳೆ. ಬೆಂಗಳೂರಿನ ಕ್ಯಾಪಿಟಲ್ ಹೋಟೆಲ್ ಬಳಿ ಗಲಾಟೆ ನಡೆದಿದ್ದು ಅಲ್ಲಿದ್ದ ವರದಿಗಾರ (Reporter) ಮೇಲೆಯೂ ಲಿಂಬಾವಳಿ ಪುತ್ರಿ ರೇಗಾಡಿದ್ದಾರೆ.
ಇದು ಎಂಎಲ್ ಎ ಗಾಡಿ ಗೊತ್ತಾ ಎಂದ ಯುವತಿ ಪೊಲೀಸರು ಹಾಗೂ ಮಾಧ್ಯಮಗಳ ಮೇಲೆ ವಾಗ್ವಾದ ನಡೆಸಿದ್ದಾರೆ. ಶಾಸಕರ ಪುತ್ರಿಯ ರಂಪಾಟ ಪ್ರಕರಣ ಶಾಸಕ ಅರವಿಂದ ಲಿಂಬಾವಳಿ ಕ್ಷಮೆ ಕೇಳಿದ್ದಾರೆ.
ಕ್ಷಮೆ ಕೇಳಿದ ಲಿಂಬಾವಳಿ
ನನ್ನ ಮಗಳು ತನ್ನ ಸ್ನೇಹಿತನ ಜೊತೆ ಹೋಗ್ತಿದ್ದಾಗ ಕ್ಯಾಪಿಟಲ್ ಹೋಟೆಲ್ ಬಳಿ ಪೋಲಿಸರು ತಡೆದಿದ್ದಾರೆ. ಸಭೆ ವಿಚಾರ ಪೋಲಿಸರ ಬಂದೋಬಸ್ತ್ ಇತ್ತು. ಮಾಧ್ಯಮಗಳಿಗೆ ಅವಮಾನ ಮಾಡಿದ್ದಾರೆ ಅಂತ ಆರೋಪ ಮಾಡಿದ್ದಾರೆ. ನನ್ನ ಮಗಳು ಸರ್ ಸರ್ ಅಂತ ಮಾತನಾಡಿದ್ದಾರೆ. ಮಾಧ್ಯಮಗಳಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ನಮ್ಮ ಮನೆತನದ ಇತಿಹಾಸ ಹಾಗೇನು ಇಲ್ಲ ಎಂದಿದ್ದಾರೆ.
ಓವರ್ಸ್ಪೀಡ್ನಲ್ಲಿ ಬಂದ ಬಿಎಂಡಬ್ಲ್ಯೂ
ಡ್ರೈವ್ ಮಾಡಬೇಕಾದ್ರೆ ಓವರ್ ಸ್ಪೀಡ್ ಮಾಡಿದ್ದಾರೆ ಅಂತ ಹೇಳಿದ್ದಾರೆ. ಅದಕ್ಕೆ ದಂಡ ಕೂಡ ಕಟ್ಟಲಾಗಿದೆ. ನನ್ನ ಮಗಳ ವರ್ತನೆಯಿಂದ ಮಾಧ್ಯಮದ ಸ್ನೇಹಿತರಿಗೆ ನೋವಾಗಿದ್ರೆ ಕ್ಷಮೆ ಕೇಳುತ್ತೇನೆ. ಮಗಳ ಫ್ರೆಂಡ್ ತರುಣ್ ಓವರ್ ಸ್ಪೀಡ್ ಬಂದ ಎಂದು ಈಗಾಗಲೇ ಫೈನ್ ಹಾಕಿದ್ದಾರೆ. ತಪ್ಪಾಗಿದ್ರೆ ಯಾರಿಗೆ ಆದ್ರೂ ಶಿಕ್ಷೆ ಆಗಬೇಕು ಎಂದಿದ್ದಾರೆ.
(K03-NH0909) M/s RD ಬಿಲ್ಡ್ ಟೆಕ್ ಡೆವಲಪರ್
2020 ಮಾದರಿಯ ಕಾರು (K03-NH0909) M/s RD ಬಿಲ್ಡ್ ಟೆಕ್ ಡೆವಲಪರ್‌ಗಳ ಹೆಸರಿನಲ್ಲಿ ನೋಂದಾಯಿಸಲಾಗಿದೆ. ಸಂಜೆ 5.15 ರ ಸುಮಾರಿಗೆ ಟ್ರಾಫಿಕ್ ಪೊಲೀಸರು BMW ಅನ್ನು ಫ್ಲ್ಯಾಗ್ ಮಾಡಿ, KSCA ಕ್ರೀಡಾಂಗಣದ ಪಕ್ಕದಲ್ಲಿರುವ ಕ್ವೀನ್ಸ್ ರಸ್ತೆಯಿಂದ ಬಂದು ಮಿನ್ಸ್ಕ್ ಸ್ಕ್ವೇರ್‌ನಲ್ಲಿ ರಾಜಭವನ ರಸ್ತೆಯನ್ನು ಪ್ರವೇಶಿಸಿದಾಗ ಕಿರಿಕ್ ಪ್ರಾರಂಭವಾಯಿತು.
ಇದನ್ನೂ ಓದಿ: Dirty Toilet: ಸ್ವಚ್ಛವಾಗಿರಬೇಕಿದ್ದ ಶೌಚಾಲಯದಲ್ಲೇ ಕೊಳಕು; ಇದು Toilet ಏಕ್ ಡರ್ಟಿ ಕಥಾ!
ಅಷ್ಟರೊಳಗೆ ವಾಹನವು ಅನಿಲ್ ಕುಂಬ್ಳೆ ವೃತ್ತದ ಬಳಿ ಪೊಲೀಸ್ ಅಧಿಕಾರಿಯ ವಾಹನವನ್ನು ಹಿಂದಿಕ್ಕಿದ್ದು, ಇತರ ವಾಹನ ಸವಾರರು ಮಾರ್ಗಮಧ್ಯೆ ಪೊಲೀಸರಿಗೆ ದೂರು ನೀಡಿದ್ದಾರೆ. ಕಾರಿನಲ್ಲಿ 20 ವರ್ಷದ ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರು ಇದ್ದರು.
ಇದು ಎಂಎಲ್ ಎ ಕಾರು ಎಂದು ಕೂಗಾಡಿದ ರೇಣುಕಾ
ಪೊಲೀಸ್ ಜೀಪನ್ನು ಓವರ್ ಟೇಕ್ ಮಾಡುವ ಬಗ್ಗೆ ಕೇಳಿದರೆ ಎಸಿಪಿಯ ಕಾರನ್ನು ಓವರ್ ಟೇಕ್ ಮಾಡಿದ್ದಕ್ಕೆ ಕೇಸ್ ಬುಕ್ ಮಾಡ್ತೀರಾ, ಇದು ಎಂಎಲ್ ಎ ಕಾರು ಎಂದು ಕೂಗಾಡಿದ್ದಾರೆ. ಕಾರು ಎಡಭಾಗದಿಂದ ಜೀಪನ್ನು ಅತಿವೇಗದಿಂದ ಹಿಂದಿಕ್ಕಿತು ಎಂದು ಒಬ್ಬ ಪೋಲೀಸ್ ಹೇಳಿದಾಗ, ಪ್ರತಿಕ್ರಿಯಿಸಿದ ರೇಣುಕಾ ಅವರು "ನಾವು ದುಡುಕಿನ ಚಾಲನೆ ಮಾಡಿಲ್ಲ, ನೀವು ಪೊಲೀಸ್ ವಾಹನವನ್ನು ಓವರ್‌ಟೇಕ್ ಮಾಡಿದ್ದಕ್ಕಾಗಿ ಕೇಸ್ ಕುತ್ತೀರಾ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: Byramangala Lake: ಬಿಡದಿಯ ಭೈರಮಂಗಲ ಕೆರೆಯೇ ಇಲ್ಲಿಗೆ ವರ, ಶಾಪ; ಜನರಲ್ಲಿ ಆತಂಕ
ಎಂಎಲ್ಎ ಯಾರು ಎಂದು ಕೇಳಿದರೆ, "ಅರವಿಂದ ಲಿಂಬಾವಳಿ ಶಾಸಕರು, ಅವರು ನನ್ನ ತಂದೆ, ಮನೆಗೆ ಹೋಗಲು ಅವಕಾಶ ಮಾಡಿಕೊಡಿ, ನೀವು ಓವರ್‌ಟೇಕ್ ಮಾಡಿದ್ದಕ್ಕಾಗಿ ಕೇಸ್ ಬುಕ್ ಮಾಡಲಾಗುವುದಿಲ್ಲ ಎಂದಿದ್ದಾರೆ. ಇದಕ್ಕೆ ಉತ್ತರಿಸಿದ ಪೊಲೀಸರು ಮೂರಕ್ಕಿಂತ ಹೆಚ್ಚು ಪ್ರಕರಣಗಳು ಬಾಕಿ ಉಳಿದಿರುವ ಯಾವುದೇ ವಾಹನವನ್ನು ವಶಪಡಿಸಿಕೊಳ್ಳಲು ತಾವು ಕರ್ತವ್ಯ ಬದ್ಧರಾಗಿದ್ದೇವೆ ಮತ್ತು ದಂಡವನ್ನು ಪಾವತಿಸಿದ ನಂತರವೇ ಮಾಲೀಕರು ಅದನ್ನು ತೆಗೆದುಕೊಳ್ಳಬಹುದು ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ