• Home
  • »
  • News
  • »
  • state
  • »
  • CM Post: ಸಿಎಂ ಆಗಲು ಬಾವಿ ಮುಚ್ಚಿದ್ರಾ? ಶಾಸಕರ ವಿರುದ್ಧ ದೂರು ಸಲ್ಲಿಸಿದ ಕಾಂಗ್ರೆಸ್

CM Post: ಸಿಎಂ ಆಗಲು ಬಾವಿ ಮುಚ್ಚಿದ್ರಾ? ಶಾಸಕರ ವಿರುದ್ಧ ದೂರು ಸಲ್ಲಿಸಿದ ಕಾಂಗ್ರೆಸ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ಸಂಬಂಧ ಪ್ರತಿಕ್ರಿಯೆ ನೀಡಲು ಶಾಸಕರು ಹಿಂದೇಟು ಹಾಕಿದ್ದಾರೆ. ಈಗ ಬಾವಿ ಹುಡುಕಿಕೊಡಿ ಎಂದು ಕಾಂಗ್ರೆಸ್ (Congress) ದೂರು  ಸಲ್ಲಿಸಿದೆ.

  • Share this:

ಧಾರವಾಡ (Dharwad) ನಗರದಲ್ಲಿಯ ಸಾರ್ವಜನಿಕ ಬಾವಿ (Public Well) ಕಾಣೆಯಾಗಿದ್ದು, ಹುಡುಕಿಕೊಡಿ ಎಂದು ಕಾಂಗ್ರೆಸ್ ನಾಯಕ ನಾಗರಾಜ ಗೌರಿ (Congress Leader Nagaraj Gouri) ದೂರು ಸಲ್ಲಿಸಿದ್ದಾರೆ. ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಕೆ ಮಾಡಲಾಗಿದೆ. ಒಂದು ವೇಳೆ ಈ ಸಂಬಂಧ ದೂರು ಸ್ವೀಕರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ (Investigation) ನಡೆಸದೇ ಇದ್ರೆ ಲೋಕಾಯುಕ್ತಕ್ಕೆ ಕಂಪ್ಲೇಂಟ್ ಕೊಡಲಾಗವುದು ನಾಗರಾಜ ಗೌರಿ ಹೇಳಿದ್ದಾರೆ. ಬಿಜೆಪಿ ಶಾಸಕರು (BJP MLA) ಜ್ಯೋತಿಷ್ಯಿಯೊಬ್ಬರ (Astrologer) ಸಲಹೆ ಮೇರೆಗೆ ತಮ್ಮ ನಿವಾಸದ ಸಮೀಪದಲ್ಲಿದ್ದ ಬಾವಿಯನ್ನು ಮುಚ್ಚಿದ್ದಾರೆ. ಈಗ ಆ ಸ್ಥಳವನ್ನು  ಫೇವರ್ಸ್ ಮಾಡಿಕೊಂಡಿದ್ದಾರೆ. ಶಾಸಕರ ಬಾವಿ ಮುಚ್ಚಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಸಹ ಆರೋಪಿಸಿದ್ದಾರೆ. ಇನ್ನು ಈ ಸಂಬಂಧ ಪ್ರತಿಕ್ರಿಯೆ ನೀಡಲು ಶಾಸಕರು ಹಿಂದೇಟು ಹಾಕಿದ್ದಾರೆ. ಈಗ ಬಾವಿ ಹುಡುಕಿಕೊಡಿ ಎಂದು ಕಾಂಗ್ರೆಸ್ (Congress) ದೂರು  ಸಲ್ಲಿಸಿದೆ.


ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕರಾಗಿರುವ ಅರವಿಂದ್ ಬೆಲ್ಲದ್ ವಿರುದ್ಧ ಈ ಆರೋಪ ಕೇಳಿ ಬಂದಿದೆ. ಈ ಬಾವಿಯನ್ನು ಮುಚ್ಚಿದ್ರೆ ನೀವು ಮುಖ್ಯಮಂತ್ರಿ ಆಗ್ತಿರಿ ಎಂದು ಜ್ಯೋತಿಷಿಯೊಬ್ಬರು ಹೇಳಿದ್ದರಂತೆ. ಜ್ಯೋತಿಷಿ ಸಲಹೆಯಂತೆ ಕೆಲವು ವರ್ಷಗಳ ಹಿಂದೆ ಬಾವಿ ಮುಚ್ಚಿಸಿದ್ದಾರಂತೆ.


ನೋ ಕಮೆಂಟ್ಸ್ ಎಂದ ಅರವಿಂದ್ ಬೆಲ್ಲದ್


ಧಾರವಾಡದ ಸರ್ವೆ ನಂಬರ್ 31/1ರಲ್ಲಿ ಸಾರ್ವಜನಿಕ ಬಾವಿ ಇತ್ತು. ಈಗ ಈ ಸ್ಥಳದಲ್ಲಿ ಬಾವಿ ಇಲ್ಲ. ಈ ಸಂಬಂಧ ಪ್ರತಿಕ್ರಿಯೆ ಪಡೆಯಲು ಪತ್ರಿಕೆ ಸಿಬ್ಬಂದಿ ಶಾಸಕರನ್ನು ಸಂಪರ್ಕಿಸಿದಾಗ, ಯಾರೋ ಏನೋ ಹೇಳ್ತಾರು ಅಂತ ಎಲ್ಲದಕ್ಕೂ ಪ್ರತಿಕ್ರಿಯೆ ನೀಡಲು ಆಗಲ್ಲ.  ನೋ ಕಮೆಂಟ್ಸ್​ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.


BJP MLA Aravind bellad closed well on astrologer suggestion mrq
ಅರವಿಂದ್ ಬೆಲ್ಲದ್


ಸಿಎಂ ಸ್ಥಾನದ ರೇಸ್​ನಲ್ಲಿದ್ದ ಬೆಲ್ಲದ್!


ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಗ ಅರವಿಂದ್ ಬೆಲ್ಲದ್ ಹೆಸರು ಕೇಳಿ ಬಂದಿತ್ತು. ಕೊನೆ ಕ್ಷಣದವರೆಗೂ ಬೆಲ್ಲದ್ ಅವರ ಹೆಸರಿತ್ತು. ಸಿಎಂ ಸ್ಥಾನ ಪಡೆಯಲು ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿ ಸಹ ಆಗಿದ್ದರು. ಕೊನೆ ಕ್ಷಣದಲ್ಲಿ ಸಿಎಂ ಸ್ಥಾನ ಬಸವರಾಜ್ ಬೊಮ್ಮಾಯಿ ಅವರ ಪಾಲಾಗಿತ್ತು.


ಇದನ್ನೂ ಓದಿ:  Rahul Gandhi: ಗಾಯಗೊಂಡ ಆನೆ ಕಂಡು ಮರುಗಿತು ರಾಹುಲ್ ಗಾಂಧಿ ಹೃದಯ; ಸಿಎಂ ಬೊಮ್ಮಾಯಿಗೆ 'ರಾಗಾ' ಪತ್ರ


ಈ ಹಿಂದೆಯೂ ಬೆಲ್ಲದ್ ವಿರುದ್ಧ ಆರೋಪ


ಇತ್ತೀಚೆಗೆ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವೀರ ಸಾವರ್ಕರ್ ಫೋಟೋಗೆ ಬೆಂಕಿ ಹಾಕಿದ್ದರು. ಈ ಸಂಬಂಧ ಶಾಸಕ ಅರವಿಂದ್ ಬೆಲ್ಲದ್ ಕಾರ್ಯಕರ್ತರ ಮನೆಗೆ ಪೊಲೀಸರನ್ನು ಕಳುಹಿಸಿ ಬೆದರಿಕೆ ಹಾಕುವ ಕೆಲಸ ಮಾಡಿದ್ದಾರೆ ಎಂದು ನಾಗರಾಜ ಗೌರಿ ಆರೋಪಿಸಿದ್ದರು.


ಚುನಾವಣೆಯಲ್ಲಿ ಬೆಲ್ಲದ್ ಸೋಲ್ತಾರೆ


ಬೆಲ್ಲದ್ ಅವರು ವಿನಾಕಾರಣ ಕಾಂಗ್ರೆಸ್ ಕಾರ್ಯಕರ್ತರನ್ನು ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ಇನ್ನು ಎಂಟು ತಿಂಗಳ ನಂತರ ನಿಮ್ಮ ಶಾಸಕ ಸ್ಥಾನ ಇರಲಿದೆ. ಚುನಾವಣೆ ಬಳಿಕ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದು ನಾಗರಾಜ ಗೌರಿ ಭವಿಷ್ಯ ನುಡಿದಿದ್ದಾರೆ.


ಇದನ್ನೂ ಓದಿ:  Communal Clash: ರಾಮನಗರ, ಕೋಲಾರದಲ್ಲಿ ದಲಿತರು, ಸವರ್ಣಿಯರ ನಡುವೆ ಗಲಾಟೆ; ಪ್ರಕರಣ ದಾಖಲು


ಸಿಎಂಗೆ ರಾಹುಲ್ ಗಾಂಧಿ ಪತ್ರ


ರಾಹುಲ್ ಗಾಂಧಿ, ಸೋನಿಯಾ ಗಾಂಧಿ ನಾಗರಹೊಳೆ ಅಭಯಾರಣ್ಯದಲ್ಲಿ ಸಫಾರಿಗೆ ಹೋಗಿದ್ರು. ಆ ವೇಳೆ, ಗಾಯಗೊಂಡಿದ್ದ ಮರಿಯಾನೆಯೊಂದು ಅಮ್ಮನ ಆಸರೆಯಲ್ಲಿ ನರಳಾಡುತ್ತಿದ್ದ ದೃಶ್ಯ ಕಂಡು ಬಂತು. ಕೂಡಲೇ ಫೋಟೋ ಕ್ಲಿಕ್ಕಿಸಿದ ರಾಹುಲ್​, ಟ್ವೀಟ್ ಮಾಡಿದ್ದು, ಇದಕ್ಕೆ ಟ್ರೀಟ್​ಮೆಂಟ್ ಕೊಡಿಸಿ ಮರಿಯಾನೆ ಉಳಿಸಿ ಎಂದು ಆಗ್ರಹಿಸಿದ್ದಾರೆ. ಜೊತೆಗೆ ಪತ್ರವೊಂದನ್ನೂ ಬರೆದಿದ್ದರು.


BJP MLA Aravind bellad closed well on astrologer suggestion mrq
ಅರವಿಂದ್ ಬೆಲ್ಲದ್


ಇದೀಗ ರಾಹುಲ್ ಬರೆದಿರುವ ಪತ್ರವನ್ನು ರಿ ಟ್ವಿಟ್ ಮಾಡಿರೋ ನಟಿ ರಮ್ಯಾ, ಪ್ರಾಣಿಪ್ರಿಯ ಸಿಎಂ ಬಸವರಾಜ ಬೊಮ್ಮಾಯಿ, ತಮ್ಮ ಪ್ರಾಣಿಪ್ರೇಮವನ್ನು ಈಗ ತೋರಿಸಲಿ ಎಂದು ಆಗ್ರಹಿಸಿದ್ದಾರೆ.

Published by:Mahmadrafik K
First published: