ಭಯೋತ್ಪಾದಕರನ್ನು ಮಟ್ಟ ಹಾಕಲು ಒಂದಾಗೋಣ; ಸಿದ್ದರಾಮಯ್ಯ, ಕುಮಾರಸ್ವಾಮಿಗೆ ಈಶ್ವರಪ್ಪ ಮನವಿ

ಸಿದ್ದರಾಮಯ್ಯ ಮೊದಲು ಅವರು ಅವರ ಪಕ್ಷದ ಅಧ್ಯಕ್ಷರನ್ನು ನೇಮಿಸಿಕೊಳ್ಳಲಿ. ಅವರ ಪಕ್ಷಕ್ಕೆ ಅಧ್ಯಕ್ಷರನ್ನು ಹುಡುಕಿಕೊಳ್ಳಲಾಗದವರು ನಮ್ಮ ಪಕ್ಷದ ಬಗ್ಗೆ ಮಾತನಾಡುತ್ತಾರೆ.  ಎಲ್ಲಿದೆ ರಾಜ್ಯದಲ್ಲಿ ಕಾಂಗ್ರೆಸ್​? ರಾಜ್ಯದಲ್ಲಿ ಕಾಂಗ್ರೆಸ್​ ಛಿದ್ರ ಛಿದ್ರವಾಗಿದೆ. 

news18-kannada
Updated:January 22, 2020, 12:25 PM IST
ಭಯೋತ್ಪಾದಕರನ್ನು ಮಟ್ಟ ಹಾಕಲು ಒಂದಾಗೋಣ; ಸಿದ್ದರಾಮಯ್ಯ, ಕುಮಾರಸ್ವಾಮಿಗೆ ಈಶ್ವರಪ್ಪ ಮನವಿ
ಕೆ.ಎಸ್.ಈಶ್ವರಪ್ಪ-ಸಿದ್ದರಾಮಯ್ಯ-ಎಚ್​.ಡಿ.ಕುಮಾರಸ್ವಾಮಿ
  • Share this:
ಹಾಸನ(ಜ.22): ಮಂಗಳೂರು ಏರ್​ಪೋರ್ಟ್​​​ನಲ್ಲಿ ಬಾಂಬ್​ ಸಿಕ್ಕ ಪ್ರಕರಣ ಸಂಬಂಧ, ರಾಜ್ಯದಲ್ಲಿ ಭಯೋತ್ಪಾದಕರನ್ನು ಮಟ್ಟಹಾಕಲು ಕಾಂಗ್ರೆಸ್​​, ಜೆಡಿಎಸ್​ ಬಿಜೆಪಿ ಎನ್ನದೇ ಎಲ್ಲರೂ ಒಂದಾಗಬೇಕಿದೆ. ಇಡೀ ರಾಜ್ಯವೇ ಕೈಜೋಡಿಸಬೇಕಿದೆ ಎಂದು ಸಚಿವ ಕೆ.ಎಸ್​.ಈಶ್ವರಪ್ಪ ಕರೆ ನೀಡಿದ್ದಾರೆ.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಭಯೋತ್ಪಾದಕ ತಡೆಗೆ ಎಲ್ಲರೂ ಒಂದಾಗಬೇಕೆಂದು ಮನವಿ ಮಾಡಿದರು. "ರಾಜ್ಯದಲ್ಲಿ ದುಷ್ಟ ಶಕ್ತಿಗಳು ಪೌರತ್ವ ಕಾಯ್ದೆ ದುರುಪಯೋಗ ಮಾಡಿಕೊಂಡು ಗಲಭೆ ಮಾಡಲು ಯತ್ನಿಸುತ್ತಿವೆ. ಎಲ್ಲರೂ ಒಂದಾಗದಿದ್ದರೆ ದುಷ್ಟಶಕ್ತಿಗಳಿಗೆ ಬೆಂಬಲ ಸಿಕ್ಕಂತಾಗುತ್ತದೆ. ಪೊಲೀಸರು ತಮ್ಮ ಜೀವ ಒತ್ತೆಯಿಟ್ಟು ವ್ಯವಸ್ಥಿತವಾಗಿ ದುಷ್ಕೃತ್ಯ ಮಟ್ಟ ಹಾಕಲು ಮುಂದಾಗಿದ್ದಾರೆ. ಈ ವಿಷಯದಲ್ಲಿ  ಕುಮಾರಸ್ವಾಮಿ, ಸಿದ್ದರಾಮಯ್ಯರನ್ನು ಪ್ರಾರ್ಥನೆ ಮಾಡುತ್ತೇನೆ. ಎಲ್ಲರೂ ಒಂದಾಗಿ ದುಷ್ಟರನ್ನು ಮಟ್ಟ ಹಾಕಲು ಯತ್ನಿಸಬೇಕು. ಕಿಡಿಗೇಡಿಗಳಿಗೆ ಹಿಂದೂ ಮುಸ್ಲಿಂ ಹೆಸರಿನಲ್ಲಿ ಗಲಭೆ ಸೃಷ್ಟಿಸಲು ಅವಕಾಶ ನೀಡಬಾರದು ಎಂದರು.

ಮಂಗಳೂರು ಬಾಂಬ್​ ಪತ್ತೆ ಪ್ರಕರಣ; ಆರೋಪಿ ಆದಿತ್ಯ ರಾವ್​ ಪೊಲೀಸರಿಗೆ ಶರಣು

ಮತಕ್ಕಾಗಿ ಮಾಜಿ ಸಿಎಂ ಕುಮಾರಸ್ವಾಮಿ ದುಷ್ಕರ್ಮಿಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಈಶ್ವರಪ್ಪ ಆರೋಪಿಸಿದರು.

ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ

ಕೇಂದ್ರ ಗೃಹಸಚಿವ ಅಮಿತ್ ಶಾ ವಿರುದ್ದ ಸಿದ್ದರಾಮಯ್ಯ ಟೀಕೆ  ಮಾಡಿದ ವಿಚಾರವಾಗಿ, "ಸಿದ್ದರಾಮಯ್ಯ ಮೊದಲು ಅವರು ಅವರ ಪಕ್ಷದ ಅಧ್ಯಕ್ಷರನ್ನು ನೇಮಿಸಿಕೊಳ್ಳಲಿ. ಅವರ ಪಕ್ಷಕ್ಕೆ ಅಧ್ಯಕ್ಷರನ್ನು ಹುಡುಕಿಕೊಳ್ಳಲಾಗದವರು ನಮ್ಮ ಪಕ್ಷದ ಬಗ್ಗೆ ಮಾತನಾಡುತ್ತಾರೆ.  ಎಲ್ಲಿದೆ ರಾಜ್ಯದಲ್ಲಿ ಕಾಂಗ್ರೆಸ್​ ? ರಾಜ್ಯದಲ್ಲಿ ಕಾಂಗ್ರೆಸ್​ ಛಿದ್ರ ಛಿದ್ರವಾಗಿದೆ. ಕಾಂಗ್ರೆಸ್ ನಲ್ಲಿ ಮೂರು ಗುಂಪುಗಳಾಗಿವೆ. ಸಿದ್ದರಾಮಯ್ಯನಿಗೆ ಕೆಲಸ ಇಲ್ಲ ಈಗ ಅದಕ್ಕೆ ಹೀಗೆ ಮಾತನಾಡುತ್ತಿದ್ದಾರೆ. ಅವರಿಗೆ ಉದ್ಯೋಗ ಇಲ್ಲ. ಹಗಲುಗನಸು ಕಾಣುತ್ತಿದ್ದಾರೆ. ಸಿದ್ದರಾಮಯ್ಯ ನಾನು ಇದ್ದೀನಿ ಅಂತ ತೋರಿಸಿಕೊಳ್ಳಬೇಕಲ್ಲ ಅದಕ್ಕೆ ಹೀಗೆ ಮಾತನಾಡುತ್ತಾರೆ. ಸಿದ್ದರಾಮಯ್ಯ ಗುಂಪು, ಪರಮೇಶ್ವರ್ ಹೀಗೆ ಕಾಂಗ್ರೆಸ್ ಮೂರು ಗುಂಪಾಗಿದೆ. ಮೊದಲು ಅದನ್ನು ಸರಿ ಮಾಡಿಕೊಳ್ಳಲಿ. ಇವನ್ನೆಲ್ಲಾ ಸರಿ ಮಾಡಿದ ನಂತರ ಅಮಿತ್ ಶಾ ಬಗ್ಗೆ ಮಾತನಾಡಲಿ ಮಾನ್ಯ ಸಿದ್ದರಾಮಯ್ಯ," ಎಂದು ತಿರುಗೇಟು ನೀಡಿದರು.

ಸಿಎಎ ವಿಚಾರದಲ್ಲಿ ಮಧ್ಯಂತರ ಆದೇಶ ಹೊರಡಿಸಲು ಸುಪ್ರೀಂಕೋರ್ಟ್​ ನಿರಾಕರಣೆ; ಕೇಂದ್ರಕ್ಕೆ ನಾಲ್ಕು ವಾರ ಗಡುವು 
First published: January 22, 2020, 12:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading