ಸಂಪುಟ ಸಭೆಯಲ್ಲಿಯೂ ಕೇಳಿಬಂದ ನೆರೆ ಪರಿಹಾರ ವಿಳಂಬ ವಿಚಾರ; ಕೇಂದ್ರದ ನಡೆಗೆ ಬಿಜೆಪಿ ಸಚಿವರ ಅಸಮಾಧಾನ

ಕೇಂದ್ರದ ನಡೆಗೆ ಅಸಮಾಧಾನ ವ್ಯಕ್ತಪಡಿಸಿದರು ರಾಜ್ಯ ನೆರೆಗೆ ತುತ್ತಾಗಿ ಎರಡು ತಿಂಗಳು ಕಳೆದಿದ್ದು, ಪರಿಹಾರ ಮಾತ್ರ ಇನ್ನು ದೊರಕಿಲ್ಲ. ಈಗಾಗಲೇ ಈ ಬಗ್ಗೆ ಮನವಿ ಸಲ್ಲಿಸಲಾಗಿದೆ. ರಾಜ್ಯದ ನೆರೆ ಪರಿಹಾರ ವಿಚಾರದಲ್ಲಿ ಇಷ್ಟು ವಿಳಂಬ ಮಾಡುವುದು ಸರಿಯಲ್ಲ ಎಂದು ಬಿಜೆಪಿ ನಾಯಕರು ಸಿಎಂಗೆ ತಿಳಿಸಿದರು.

Seema.R | news18-kannada
Updated:October 3, 2019, 3:15 PM IST
ಸಂಪುಟ ಸಭೆಯಲ್ಲಿಯೂ ಕೇಳಿಬಂದ ನೆರೆ ಪರಿಹಾರ ವಿಳಂಬ ವಿಚಾರ; ಕೇಂದ್ರದ ನಡೆಗೆ ಬಿಜೆಪಿ ಸಚಿವರ ಅಸಮಾಧಾನ
ಸಂಪುಟದ ಸಚಿವರು
 • Share this:
ಬೆಂಗಳೂರು (ಅ.03): ರಾಜ್ಯದಲ್ಲಿನ ನೆರೆ ಪರಿಹಾರದ ಕುರಿತು ಕೇಂದ್ರ ಸರ್ಕಾರ ತೋರುತ್ತಿರುವ ವಿಳಂಬ ಧೋರಣೆಗೆ ಬಿಜೆಪಿ ಸಚಿವರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂದು ನಡೆದ ಸಚಿವ ಸಂಪುಟದಲ್ಲಿ ಕೇಂದ್ರದ ನಡೆ ಕುರಿತು ಹಲವು ನಾಯಕರು ಧ್ವನಿ ಎತ್ತಿದ್ದಾರೆ. 

ಸಂಪುಟ ಸಭೆಯಲ್ಲಿ ಚರ್ಚೆಯಾದ ರಾಜ್ಯ ಪ್ರವಾಹ ವಿಚಾರ ಕುರಿತು ಮಾತನಾಡಿದ ಸಚಿವರು, ಕೇಂದ್ರದ ನಡೆಗೆ ಅಸಮಾಧಾನ ವ್ಯಕ್ತಪಡಿಸಿದರು ರಾಜ್ಯ ನೆರೆಗೆ ತುತ್ತಾಗಿ ಎರಡು ತಿಂಗಳು ಕಳೆದಿದ್ದು, ಪರಿಹಾರ ಮಾತ್ರ ಇನ್ನು ದೊರಕಿಲ್ಲ. ಈಗಾಗಲೇ ಈ ಬಗ್ಗೆ ಮನವಿ ಸಲ್ಲಿಸಲಾಗಿದೆ. ರಾಜ್ಯದ ನೆರೆ ಪರಿಹಾರ ವಿಚಾರದಲ್ಲಿ ಇಷ್ಟು ವಿಳಂಬ ಮಾಡುವುದು ಸರಿಯಲ್ಲ ಎಂದು ಬಿಜೆಪಿ ನಾಯಕರು ಸಿಎಂಗೆ ತಿಳಿಸಿದ್ದಾರೆ.

ಪ್ರವಾಹ ಪರಿಹಾರದ ಕುರಿತು ರಾಜ್ಯದ ಜನರಿಗೆ, ಮಾಧ್ಯಮಗಳಿಗೆ ಉತ್ತರಿಸಲು ಆಗುತ್ತಿಲ್ಲ. ನಮ್ಮ ಸರ್ಕಾರವೇ ಕೇಂದ್ರದಲ್ಲಿದ್ದರೂ ಈ ರೀತಿ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದರು.

ಸಚಿವರ ಟೀಕೆಗಳಿಗೆ ಅಸಮಾಧಾನಗೊಂಡ ಸಿಎಂ ಯಡಿಯೂರಪ್ಪ, ಏನ್ ಮಾಡೋದು ಹೇಳಿ, ನಮ್ಮದೇ ಸರ್ಕಾರ ಕೇಂದ್ರದಲ್ಲಿ ಇದೆ. ಮಾತಾಡುವಂಗಿಲ್ಲ, ಬಿಡುವಂತಿಲ್ಲ ಎನ್ನುವ ಪರಿಸ್ಥಿತಿ ನಮ್ಮದು. ಮೂರ್ನಾಲ್ಕು ದಿನದೊಳಗೆ ಬಿಡುಗಡೆ ಮಾಡುವುದಾಗಿ  ಕೇಂದ್ರ ಸರ್ಕಾರ ತಿಳಿಸಿದೆ. ಈ ಮಧ್ಯೆ ಯಾರು ಕೂಡ ಬಹಿರಂಗವಾಗಿ ಅಸಮಾಧಾನ ಹೊರಹಾಕಬೇಡಿ. ಇದರಿಂದ ಸರ್ಕಾರಕ್ಕೆ ಸಮಸ್ಯೆಯಾಗಲಿದೆ. ಇನ್ನು ಮೂರು ದಿನ ನಾನು ನೆರೆ ಪೀಡಿತ ಪ್ರದೇಶದಲ್ಲಿ ಇರುತ್ತೇನೆ. ನೋಡೋಣ ಕೇಂದ್ರ ಸರ್ಕಾದ ಬಗ್ಗೆ ಭರವಸೆ ಇದೆ ಎಂದರು.

ಇದೇ ವೇಳೆ  ಸಚಿವ ಸಂಪುಟ ಸಭೆಯಲ್ಲಿ ವಿವಿಧ ಯೋಜನೆಗಳಿಗೆ ರಾಜ್ಯ ಸರ್ಕಾರ ಅನುಮೋದನೆಯೂ ನೀಡಿತು. ಅವುಗಳು ಇಂತಿವೆ.

 • ಕೈಗಾರಿಕಾ ನೀತಿ, ಜವಳಿ ನೀತಿ,   ವಿಶೇಷ ಯೋಜನೆಯಡಿ ರಿಯಾಯ್ತಿ ನೀಡಲು ಉಪಸಮಿತಿ ರಚನೆ
 • ಕೆಎಸ್ ಆರ್ ಪಿ ಫೈರಿಂಗ್ ತರಬೇತಿ ವೇಳೆ  ಮೃತಪಟ್ಟ ಹೊಸಕೋಟೆ ಜಡಿಗೆ ಹಳ್ಳಿಯ ರೈತ ಸುಬ್ಬಣ್ಣ ಗೆ 10 ಲಕ್ಷ ರೂ.ಪರಿಹಾರ ನೀಡಲು ತೀರ್ಮಾನ.

 • ರಕ್ತನಿಧಿ ಮತ್ತು ರಕ್ತ ಶೇಖರಣಾ ಘಟಕಗಳಿಗೆ ಯಂತ್ರೋಪಕರಣ ಖರೀದಿಗೆ 12 ಕೋಟಿ ರೂ.ಬಿಡುಗಡೆ

 • ಮಕ್ಕಳ ಆರೋಗ್ಯ ಕಾರ್ಯಕ್ರಮಕ್ಕೆ32 ಘಟಕಗಳಿಗೆ  ಔಷಧ ಮತ್ತು ಸಲಕರಣೆಗಳ ಖರೀದಿಗೆ 16.95 ಕೋಟಿ ಬಿಡುಗಡೆ

 • ಬಾಗಲಕೋಟೆ ಜಮಖಂಡಿಯಲ್ಲಿ 100 ಹಾಸಿಗೆ ಸಾಮರ್ಥ್ಯದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣ

 • ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ರಟ್ಟಿ ಹಳ್ಳಿ,ತೋಟಗಂಡಿ ಮತ್ತು ಕವಳಿಕುಪ್ಪಿ ಗ್ರಾಮಪಂಚಾಯ್ತಿಗಳನ್ನು ಒಟ್ಟುಗೂಡಿಸಿ ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರಿಕೆ.

 • ಅರಣ್ಯ ಇಲಾಖೆ ಆನೆಗಳ ಹಾವಳಿ ಕಡಿಮೆ ಮಾಡಿ ಅರಣ್ಯದಂಚಿನಲ್ಲಿ  118ಕಿ.ಮೀ ರೈಲ್ವೆ ಹಳಿ ಬ್ಯಾರಿಕೇಡ್ ನಿರ್ಮಾಣ ಮಾಡಲು 100 ಕೋಟಿ ರೂ.ಅನುದಾನದಲ್ಲಿ ಕಾರ್ಯಕ್ರಮ ಕೈಗೆತ್ತಿಕೊಳ್ಳಲು ಒಪ್ಪಿಗೆ

 • ಯಾದಗಿರಿ‌ ಜಿಲ್ಲೆ ಸುರಪುರ ತಾಲೂಕಿನ ಹುಣಸಗಿ ಗ್ರಾಮವನ್ನು ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರಿಕೆ

 • ಹಾವೇರಿ ಜಿಲ್ಲೆ ಬ್ಯಾಡಗಿ ಪುರಸಭೆಗೆ ಅಗಸನಹಳ್ಳಿ ಮತ್ತು ಬ್ಯಾಡಗಿ ಗ್ರಾಮಗಳ ಸೇರ್ಪಡೆ.

 • ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನಲ್ಲಿ ನೀರಾವರಿ ಕಲ್ಪಿಸಲು ಎಣ್ಣೆಹೊಳೆ ಏತ ನೀರಾವರಿ ಯೋಜನೆ ಕೈಗೊಳ್ಳಲು 108 ಕೋಟಿ ರೂ.ಅಂದಾಜು ವೆಚ್ಚದ  ಯೋಜನೆಗೆ ಅನುಮತಿ.

 • ಚಿಕ್ಕೋಡಿ ತಾಲೂಕಿನಲ್ಲಿ ಇಂಗಳಿ ಗ್ರಾಮದ ಬಳಿ ಕೃಷ್ಣಾ ನದಿಗೆ  ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ 27.92 ಕೋಟಿ ಅಂದಾಜು ವೆಚ್ಚದ ಪ್ರಸ್ತಾವನೆಗೆ ಅನುಮೋದನೆ.

 • ತುಮಕೂರು ಜಿಲ್ಕೆ ಚಿಕ್ಕನಾಯಕನಹಳ್ಳಿ ಪಟ್ಟಣಕ್ಕೆ ಒಳಚರಂಡಿ ಸಂಪರ್ಕ ಕಲ್ಪಿಸಲು 55 ಕೋಟಿ ರೂ.ಅಂದಾಜು ವೆಚ್ಚದ ಯೋಜನೆಗೆ ಸಮ್ಮತಿ.

 • ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕೆರೆಗಳಿಗೆ ವರದಾ ನದಿಯಿಂದ ನೀರು ತುಂಬಿಸುವ 386 ಕೋಟಿ ರೂ.ಅಂದಾಜು ವೆಚ್ಚದ ಯೋಜನೆಗೆ ಸಮ್ಮತಿ.


First published:October 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading