'ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡಿದವರಿಗೆ ಗುಂಡಿಕ್ಕಿ'; ಹೇಳಿಕೆ ಸಮರ್ಥಿಸಿಕೊಂಡ ಸಚಿವ ಸುರೇಶ್​ ಅಂಗಡಿ

ದೇಶವನ್ನು ಹಿಂದೂ ರಾಷ್ಟ್ರ ಮಾಡಲು ಹೊರಟಿದ್ದಾರಾ? ಎಂಬ ಮಾಜಿ ಸಿಎಂ ಎಚ್.ಡಿ.ಕುಮಾಸ್ವಾಮಿ ಹೇಳಿಕೆಗೆ ಕೇಂದ್ರ ಸಚಿವ ಸುರೇಶ್​ ಅಂಗಡಿ ತಿರುಗೇಟು ನೀಡಿದ್ದಾರೆ. ಬೇರೆಯವರಿಗೂ ಒಂದೊಂದು ರಾಷ್ಟ್ರ ಇದಾವಲ್ಲ. ನಾವು ಏಕೆ ಹಿಂದೂ ರಾಷ್ಟ್ರ ಮಾಡಬಾರದು? ನಮಗೂ ಒಂದು ರಾಷ್ಟ್ರ ಬೇಕೋ ಬೇಡವೋ? ಎಂದು ಪ್ರಶ್ನಿಸಿದರು.

ಕೇಂದ್ರ ಸಚಿವ ಸುರೇಶ್ ಅಂಗಡಿ

ಕೇಂದ್ರ ಸಚಿವ ಸುರೇಶ್ ಅಂಗಡಿ

  • Share this:
ಬೆಳಗಾವಿ(ಡಿ.22): ‘ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡಿದವರಿಗೆ ಗುಂಡಿಕ್ಕಿ’ ಎಂಬ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಸುರೇಶ್​ ಅಂಗಡಿ ತಮ್ಮ ಮಾತನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಸಮಾಜದ ಆಸ್ತಿ-ಪಾಸ್ತಿ ಹಾನಿ ಮಾಡುವವರ ಬಗ್ಗೆ ಹೇಳಿದ್ದೇನೆ. ನಾನು ಯಾರನ್ನೂ ಉತ್ತೇಜಿಸಿಲ್ಲ. ಉತ್ತೇಜನ ಮಾಡಿದ್ದರೆ ಹೇಳಲಿ. ನಾವು ಯಾರ ಪೌರತ್ವವನ್ನು ಕಿತ್ತುಕೊಳ್ಳುತ್ತಿದ್ದೇವೆ? ಎಂದು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಕಾಂಗ್ರೆಸ್​ನವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ದೇಶದ 130 ಕೋಟಿ ಜನರು ಸುರಕ್ಷಿತವಾಗಿದ್ದಾರೆ. ಆಫ್ಘಾನಿಸ್ತಾನ, ಬಾಂಗ್ಲಾದೇಶ, ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತ ಸಿಖ್, ಹಿಂದೂ, ಪಾರ್ಸಿ, ಜೈನರ ಸಲುವಾಗಿ ಕಾನೂನು ಮಾಡಿದ್ದೇವೆ.  ಅವರು ಗೌರವದಿಂದ ಇರಬೇಕೋ? ಬೇಡವೋ? ಆ 3 ದೇಶಗಳು ಇಸ್ಲಾಂ ರಾಷ್ಟ್ರಗಳು ಎಂದು ಘೋಷಿಸಿಕೊಂಡಿದ್ದಾರೆ. ಅಲ್ಲಿರುವವರ ಮೇಲೆ ನಿರಂತರ ಅತ್ಯಾಚಾರ ‌‌ನಡೆಯುತ್ತಿದೆ ಎಂದರು.

‘ಸಿಎಎ’ ಜಾರಿಗೆ ಬಂದದ್ದು ತಪ್ಪು ಎಂಬ ಜನರನ್ನು ದೂರವಿಡಿ; ಪ್ರಧಾನಿ ನರೇಂದ್ರ ಮೋದಿ ಕರೆ

ದೇಶವನ್ನು ಹಿಂದೂ ರಾಷ್ಟ್ರ ಮಾಡಲು ಹೊರಟಿದ್ದಾರಾ? ಎಂಬ ಮಾಜಿ ಸಿಎಂ ಎಚ್.ಡಿ.ಕುಮಾಸ್ವಾಮಿ ಹೇಳಿಕೆಗೆ ಕೇಂದ್ರ ಸಚಿವ ಸುರೇಶ್​ ಅಂಗಡಿ ತಿರುಗೇಟು ನೀಡಿದ್ದಾರೆ. ಬೇರೆಯವರಿಗೂ ಒಂದೊಂದು ರಾಷ್ಟ್ರ ಇದಾವಲ್ಲ. ನಾವು ಏಕೆ ಹಿಂದೂ ರಾಷ್ಟ್ರ ಮಾಡಬಾರದು? ನಮಗೂ ಒಂದು ರಾಷ್ಟ್ರ ಬೇಕೋ ಬೇಡವೋ? ಎಂದು ಪ್ರಶ್ನಿಸಿದರು.

ನಾವು ಹಿಂದೂ ರಾಷ್ಟ್ರ ಮಾಡುತ್ತಿಲ್ಲ. ಇಲ್ಲಿ ಎಲ್ಲರೂ ಬದುಕಬೇಕು. ಹಿಂದೂ ಎಂಬುವುದು ಯಾವ ಜಾತಿಗೂ ಸೀಮಿತ ಆಗಿಲ್ಲ. ಹಳೇ ಸರ್ಟಿಫಿಕೇಟ್ ತೆಗೆದು ನೋಡಿ ಹಿಂದೂ-ಮುಸ್ಲಿಂ, ಹಿಂದೂ-ಕ್ರಿಶ್ಚಿಯನ್ ಅಂತಾ ಇದೆ ಎಂದರು.

ಮುಂದುವರೆದ ಅವರು, ಪೌರತ್ವ ಕಾಯ್ದೆ ತಿದ್ದುಪಡಿ ವಿಚಾರದಲ್ಲಿ ಸಿ.ಎಂ.ಇಬ್ರಾಹಿಂ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಮಹದಾಯಿ ವಿಚಾರವಾಗಿ ಇಷ್ಟರಲ್ಲೇ ಸಿಹಿ ಸುದ್ದಿ ಕೊಡುತ್ತೇವೆ ಎಂದು ಹೇಳಿದರು.

18 ವರ್ಷಗಳ ಹಿಂದೆ ಹುಬ್ಬಳ್ಳಿ ಗಲಭೆಯಲ್ಲಿ ಪೊಲೀಸರ ಲಾಠಿಚಾರ್ಜ್​ಗೆ ಗಂಡನನ್ನು ಕಳೆದುಕೊಂಡವಳ ಕಣ್ಣೀರ ಕಥೆ!
Published by:Latha CG
First published: