ನಮ್ಮ ಬಾಂಬೆ ಟೀಂನಲ್ಲಿ ರೋಷನ್ ಬೇಗ್ ಇರಲಿಲ್ಲ; ಬಿಜೆಪಿಯನ್ನು ನಂಬಿ ಅವರು ಕಾಂಗ್ರೆಸ್ ಬಿಟ್ಟಿಲ್ಲ; ಎಸ್.ಟಿ.ಸೋಮಶೇಖರ್
ಬಿಜೆಪಿಯಲ್ಲಿ ನಾವೆಲ್ಲರೂ ಒಟ್ಟಾಗಿಯೇ ಇದ್ದೇವೆ, ಇಲ್ಲಿ ಮೂಲ ಮತ್ತು ವಲಸಿಗ ಎಂಬ ಯಾವ ಪ್ರಶ್ನೆಯೂ ಇಲ್ಲ. ಯಾರೋ ಒಂದಿಬ್ಬರು ನಾವೇ ಲೀಡರ್ಸ್ ಎಂದು ಶೋ ಕೊಟ್ಟುಕೊಂಡು ಓಡಾಡುತ್ತಿದ್ದಾರೆ. ಅದರಿಂದ ಯಾವ ಪ್ರಯೋಜನವೂ ಇಲ್ಲ ಎಂದು ಹೇಳಿದರು.
news18-kannada Updated:November 24, 2020, 3:43 PM IST

ಸಚಿವ ಎಸ್. ಟಿ. ಸೋಮಶೇಖರ್
- News18 Kannada
- Last Updated: November 24, 2020, 3:43 PM IST
ಮೈಸೂರು(ನ.24): ನಮ್ಮ ಬಾಂಬೆ ಟೀಂನಲ್ಲಿ ರೋಷನ್ ಬೇಗ್ ಇರಲಿಲ್ಲ, ಬಿಜೆಪಿಯನ್ನ ನಂಬಿ ರೋಷನ್ ಬೇಗ್ ರಾಜೀನಾಮೆ ಕೊಟ್ಟಿಲ್ಲ, ಹೀಗಂತ ಬಾಂಬೆ ಟೀಂ ಸದಸ್ಯರಲ್ಲೊಬ್ಬರಾದ ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ರೋಷನ್ ಬೇಗ್ ನಮ್ಮ ಬಾಂಬೆ ಟೀಂನಲ್ಲಿ ಇರಲಿಲ್ಲ. ಅವರೇನು ಬಿಜೆಪಿಯನ್ನ ನಂಬಿ ಕಾಂಗ್ರೆಸ್ ಪಕ್ಷ ಬಿಟ್ಟಿಲ್ಲ, ಅವರು ಕೇಳಿದ್ದರೆ ಅವರಿಗೆ ಶಿವಾಜಿನಗರದಿಂದ ಟಿಕೆಟ್ ಕೊಡುತ್ತಿದ್ದರು. ಅವರು ನಮ್ಮ ಟೀಂನೊಂದಿಗೆ ಕಾಂಗ್ರೆಸ್ನಿಂದ ಹೊರಬಂದಿಲ್ಲ ಬಂದಿಲ್ಲ, ಬದಲಿಗೆ ಕಾಂಗ್ರೆಸ್ ನಿಂದ ಬೇಸತ್ತು ಅವರು ಹೊರಗಡೆ ಬಂದಿದ್ದರು ಅನ್ನೋ ಮೂಲಕ ರೋಷನ್ ಬೇಗ್ ವಿಚಾರದಲ್ಲಿ ಅಂತರ ಕಾಯ್ದುಕೊಳ್ಳುವ ಪಯತ್ನ ಮಾಡಿದರು.
ಐಎಂಎ ಕೇಸ್ನಲ್ಲಿ ಸಿಬಿಐ ಅಧಿಕಾರಿಗಳು ವಿಚಾರಣೆಗೆ ಅವರನ್ನ ಕರೆದುಕೊಂಡು ಹೋಗಿದ್ದಾರೆ. ಈ ಮೊದಲಿನಿಂದಲೂ ಐಎಂಎ ಪ್ರಕರಣದಲ್ಲಿ ಅವರ ನನ್ನ ಪಾತ್ರ ಏನು ಇಲ್ಲ ಅಂತ ಹೇಳ್ತಿದ್ದಾರೆ. ಹಾಗೇನಾದರೂ ಅವರ ಪಾತ್ರ ಇಲ್ಲ ಅನ್ನೋದಾದರೆ ಅವರು ಕ್ಲಿನ್ ಚಿಟ್ ಆಗಿ ಹೊರಬರಲಿದ್ದಾರೆ ಅಂತ ರೋಷನ್ ಬೇಗ್ ಬಂಧನ ವಿಚಾರಕ್ಕೆ ಮಾರ್ಮಿಕವಾಗಿ ಹೇಳಿಕೆ ನೀಡಿದರು. Ambareesh Death Anniversary: ಅಂಬಿ ಇಲ್ಲದ ನೋವು ಹೊರಹಾಕಿದ ಸುಮಲತಾ: ಅಪ್ಪಾಜಿಯನ್ನು ಸ್ಮರಿಸಿದ ದರ್ಶನ್..!
ಇನ್ನು ಬಿಜೆಪಿಯಲ್ಲಿ ನಾವೆಲ್ಲರೂ ಒಟ್ಟಾಗಿಯೇ ಇದ್ದೇವೆ, ಇಲ್ಲಿ ಮೂಲ ಮತ್ತು ವಲಸಿಗ ಎಂಬ ಯಾವ ಪ್ರಶ್ನೆಯೂ ಇಲ್ಲ. ಯಾರೋ ಒಂದಿಬ್ಬರು ನಾವೇ ಲೀಡರ್ಸ್ ಎಂದು ಶೋ ಕೊಟ್ಟುಕೊಂಡು ಓಡಾಡುತ್ತಿದ್ದಾರೆ. ಅದರಿಂದ ಯಾವ ಪ್ರಯೋಜನವೂ ಇಲ್ಲ. ನಮಗೆ ಮಾತುಕೊಟ್ಟಂತೆ ಎಲ್ಲವೂ ನಡೆಯುತ್ತಿದೆ. ಗೆದ್ದವರಿಗೆ ಮಂತ್ರಿ ಮಾಡಿದ್ದಾರೆ, ಸೋತವರನ್ನ ಪರಿಷತ್ ಸದಸ್ಯರನ್ನಾಗಿ ಮಾಡಿದ್ದಾರೆ. ಮುಂದಿನದ್ದು ಸಹ ಮಾತಿನಂತೆ ನಡೆಯುತ್ತದೆ. ಮಂತ್ರಿ ಮಂಡಲ ವಿಸ್ತರಣೆ ವಿಚಾರದಲ್ಲಿ ಹೈಕಮಾಂಡ್ ಸ್ವಲ್ಪ ಬ್ಯುಸಿ ಇರಬಹುದು ಶೀಘ್ರದಲ್ಲೇ ಕೆಲವು ತೀರ್ಮಾನಗಳು ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಬಿ.ಎಲ್.ಸಂತೋಷ್ ಬಿಜೆಪಿ ಮುಖಂಡರ ಸಭೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಿ.ಎಲ್.ಸಂತೋಷ್ ಸಭೆ ಮಾಡುವುದು ತಪ್ಪಲ್ಲ. ಅವರು ನಮ್ಮ ಪಕ್ಷದ ರಾಷ್ಟ್ರೀಯ ಸಹಸಂಘಟನಾ ಕಾರ್ಯದರ್ಶಿಯಾಗಿದ್ದಾರೆ. ಅವರು ಸಭೆ ಮಾಡಿ ಎಲ್ಲರಿಂದ ಸಲಹೆ ಪಡೆದಿದ್ದಾರೆ. ಪಕ್ಷ ಸಂಘಟನೆ ಬಗ್ಗೆ ಮಾತನಾಡಲು ನಾನು ಸಮಯ ಕೊಡ್ತಿನಿ ಅನ್ನೋ ಭರವಸೆ ನೀಡಿದ್ದಾರೆ. ಅದರಲ್ಲಿ ನೋ ಪಾಲಿಟಿಕ್ಸ್ ಬಿ.ಎಲ್.ಸಂತೋಷ್ ಸಭೆ ಬಗ್ಗೆ ಚರ್ಚೆ ಮಾಡೋದು ಅಪ್ರಸ್ತುತ ಎಂದು ಹೇಳಿದರು.
ಈ ನಡುವೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟನೆ ನೀಡಿದ ಸಚಿವ ಎಸ್.ಟಿ.ಸೋಮಶೇಖರ್, ಯಡ್ಯೂರಪ್ಪ ಬಿಜೆಪಿಯ ಪ್ರಶ್ನಾತೀತ ನಾಯಕರಾಗಿದ್ದಾರೆ. ಅವರನ್ನ ಮುಖ್ಯಮಂತ್ರಿ ಸ್ಥಾನದಿಂದ ಬದಲಾವಣೆ ಮಾಡುವ ವಿಚಾರ ಕೇವಲ ಊಹಾಪೋಹವಾಗಿದೆ. ಬಿ. ಎಲ್. ಸಂತೋಷ್ ನೇತೃತ್ವದಲ್ಲಿ ನಡೆದಿರುವ ಸಭೆ ಪಕ್ಷದ ಸಂಘಟನೆಗೆ ಸಂಬಂಧಿಸಿದ್ದಾಗಿದ್ದು, ಅಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಆಗಿಲ್ಲ. ಬದಲಿಗೆ ಅವರ ಸಭೆಯಲ್ಲಿ ಮುಂಬರುವ ಗ್ರಾಮ ಪಂಚಾಯ್ತಿ ಚುನಾವಣೆಗೆ ಪಕ್ಷ ಹೆಚ್ಚಿನ ಒತ್ತು ನೀಡುತ್ತಿದೆ, ಈ ಸಂಬಂಧ ವಿಭಾಗೀಯವಾರು ಉಸ್ತುವಾರಿಗಳನ್ನು ನೇಮಿಸಲಾಗಿದೆ ಸದ್ಯದಲ್ಲೇ ವಿಭಾಗೀಯ ಉಸ್ತುವಾರಿಗಳು ಪ್ರವಾಸ ಕೈಗೊಳ್ಳಲಿದ್ದಾರೆ ಎಂಬುದವರ ಬಗ್ಗೆ ಮಾತ್ರ ಚರ್ಚೆ ಆಗಿದೆ ಎಂದು ತಿಳಿಸಿದರು.
ಐಎಂಎ ಕೇಸ್ನಲ್ಲಿ ಸಿಬಿಐ ಅಧಿಕಾರಿಗಳು ವಿಚಾರಣೆಗೆ ಅವರನ್ನ ಕರೆದುಕೊಂಡು ಹೋಗಿದ್ದಾರೆ. ಈ ಮೊದಲಿನಿಂದಲೂ ಐಎಂಎ ಪ್ರಕರಣದಲ್ಲಿ ಅವರ ನನ್ನ ಪಾತ್ರ ಏನು ಇಲ್ಲ ಅಂತ ಹೇಳ್ತಿದ್ದಾರೆ. ಹಾಗೇನಾದರೂ ಅವರ ಪಾತ್ರ ಇಲ್ಲ ಅನ್ನೋದಾದರೆ ಅವರು ಕ್ಲಿನ್ ಚಿಟ್ ಆಗಿ ಹೊರಬರಲಿದ್ದಾರೆ ಅಂತ ರೋಷನ್ ಬೇಗ್ ಬಂಧನ ವಿಚಾರಕ್ಕೆ ಮಾರ್ಮಿಕವಾಗಿ ಹೇಳಿಕೆ ನೀಡಿದರು.