ಸುಮಲತಾ ಜೊತೆ ಮೋದಿ, ಅಮಿತ್​ ಶಾ ಚರ್ಚಿಸಿದ್ದಾರೆ; ಯಾರಿಗೆ ಬೆಂಬಲ ಕೊಡಬೇಕೆಂದು ಸಂಸದೆಗೆ ಗೊತ್ತಿದೆ; ಶ್ರೀರಾಮುಲು

ಅನರ್ಹರನ್ನ ಸೋಲಿಸುವುದೇ ನಮ್ಮ ಗುರಿ ಎಂದಿದ್ದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಗೆ ಶ್ರೀರಾಮುಲು ತಿರುಗೇಟು ನೀಡಿದರು.  ಗೆಲ್ಲಿಸುವುದೇ ನಮ್ಮ ಗುರಿ.  ನಮ್ಮ ಸರ್ಕಾರ ಸುಭದ್ರವಾಗಿದೆ.  ಉಳಿದ 3 ವರ್ಷ ನಮ್ಮದೇ ಸರ್ಕಾರ ಇರುತ್ತೆ.  ಯಾವ ಗುಪ್ತಚರ ಇಲಾಖೆ ಏನೇ ವರದಿ ಕೊಡಲಿ,  ಸರ್ಕಾರಕ್ಕೆ ಯಾವ ತೊಂದರೆಯೂ ಇಲ್ಲ ಎಂದರು.

Latha CG | news18-kannada
Updated:November 19, 2019, 6:04 PM IST
ಸುಮಲತಾ ಜೊತೆ ಮೋದಿ, ಅಮಿತ್​ ಶಾ ಚರ್ಚಿಸಿದ್ದಾರೆ; ಯಾರಿಗೆ ಬೆಂಬಲ ಕೊಡಬೇಕೆಂದು ಸಂಸದೆಗೆ ಗೊತ್ತಿದೆ; ಶ್ರೀರಾಮುಲು
ಶ್ರೀರಾಮುಲು
  • Share this:
ಮಂಡ್ಯ(ನ.19): ಕೆ.ಆರ್​.ಪೇಟೆ ಉಪಚುನಾವಣೆಯಲ್ಲಿ ಸಂಸದೆ ಸುಮಲತಾ ಅಂಬರೀಶ್​ ಯಾರಿಗೆ ಬೆಂಬಲ ನೀಡುತ್ತಾರೆ ಎಂಬ ಅನುಮಾನ ಇದೆ. ಆದರೆ ಸಂಸದೆ ಮಾತ್ರ ಈ ಬಗ್ಗೆ ಯಾವ ಪ್ರತಿಕ್ರಿಯೆಯನ್ನೂ ನೀಡದೆ ತಟಸ್ಥ ನಿಲುವು ತಾಳಿದ್ದಾರೆ. ಆದರೆ ಬಿಜೆಪಿ ಮತ್ತು ಕಾಂಗ್ರೆಸ್​ ನಾಯಕರು ಸುಮಲತಾ ಅವರು ತಮಗೆ ಬೆಂಬಲ ನೀಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ.  ಸುಮಲತಾ ಬಿಜೆಪಿ ಅಭ್ಯರ್ಥಿ ನಾರಾಯಣಗೌಡರಿಗೆ ಬೆಂಬಲ ನೀಡಲಿದ್ದಾರಾ ಎಂಬ ಪ್ರಶ್ನೆಗೆ ಇಂದು ಶ್ರೀರಾಮುಲು ಉತ್ತರಿಸಿದ್ದಾರೆ.

ಸಂಸದೆ  ಸುಮಲತಾ ಜೊತೆ ಬಿಜೆಪಿ ಚರ್ಚಿಸಿದೆ. ಮೋದಿ, ಅಮಿತ್ ಶಾ ಕೂಡ ಅವರ ಚರ್ಚಿಸಿದ್ದಾರೆ. ಅವರಿಗೆ ಗೊತ್ತು ಯಾರಿಗೆ ಸಹಕಾರ ಕೊಡಬೇಕು. ಯಾರಿಗೆ ಸಹಕಾರ ಕೊಡಬಾರದೆಂದು ಎಂಬುದಾಗಿ ಹೇಳಿದರು. ಆ ಮೂಲಕ ಪರೋಕ್ಷವಾಗಿ ಸುಮಲತಾ ಬಿಜೆಪಿಗೆ ಬೆಂಬಲ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಬರಿಮಲೆ ದೇಗುಲಕ್ಕೆ ತೆರಳುತ್ತಿದ್ದ 12 ವರ್ಷದ ಬಾಲಕಿಯನ್ನು ತಡೆದ ಪೊಲೀಸರು

ಇನ್ನು, " ಉಪಚುನಾವಣೆಯಲ್ಲಿ 15 ಕ್ಷೇತ್ರಗಳನ್ನೂ ಗೆಲ್ಲುತ್ತೇವೆ. ಹುಣಸೂರು, ವಿಜಯನಗರ ಕ್ಷೇತ್ರ ನನ್ನ ಉಸ್ತುವಾರಿ.  ಕೆ.ಆರ್.ಪೇಟೆಯಲ್ಲೂ ನಾನು 2 ದಿನ ಪ್ರಚಾರ ಮಾಡುತ್ತೇನೆ. ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಗೆಲ್ಲುವ ವಿಶ್ವಾಸವಿದೆ.  ಮುಂಚಿನಿಂದಲೂ ಮಂಡ್ಯದಲ್ಲಿ ಪಕ್ಷ ಸಂಘಟನೆ ಮಾಡಲಾಗುತ್ತಿದೆ. ನಾರಾಯಣಗೌಡರು ಜನಪ್ರಿಯತೆ ಗಳಿಸಿದ್ದಾರೆ.‌ ಹೀಗಾಗಿ ಈ ಬಾರಿ ಮಂಡ್ಯದಲ್ಲಿ ಕಮಲ ಅರಳುತ್ತೆ," ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಚಿವ ಮಾಧುಸ್ವಾಮಿ ಮೇಲೆ ಹಲ್ಲೆ ಯತ್ನ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿದ ಶ್ರೀರಾಮುಲು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಘಟನೆ ಆಗಬಾರದು.  ಮತಯಾಚನೆ, ಪ್ರಚಾರಕ್ಕೆ ಎಲ್ಲರಿಗೂ ಹಕ್ಕಿದೆ. ಈ ರೀತಿ ದೌರ್ಜನ್ಯ ಯಾರಿಗೂ ಶೋಭೆ ತರಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಉಪಸಮರದಲ್ಲಿ ಜೆಡಿಎಸ್ ಟಾರ್ಗೆಟ್-10; ಬಿಜೆಪಿ ಸೋಲಿಗೆ ಹೆಚ್​ಡಿಕೆ ಚಾಣಕ್ಯ ತಂತ್ರ

ಅನರ್ಹರನ್ನ ಸೋಲಿಸುವುದೇ ನಮ್ಮ ಗುರಿ ಎಂದಿದ್ದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಗೆ ಶ್ರೀರಾಮುಲು ತಿರುಗೇಟು ನೀಡಿದರು.  ಗೆಲ್ಲಿಸುವುದೇ ನಮ್ಮ ಗುರಿ.  ನಮ್ಮ ಸರ್ಕಾರ ಸುಭದ್ರವಾಗಿದೆ.  ಉಳಿದ 3 ವರ್ಷ ನಮ್ಮದೇ ಸರ್ಕಾರ ಇರುತ್ತೆ.  ಯಾವ ಗುಪ್ತಚರ ಇಲಾಖೆ ಏನೇ ವರದಿ ಕೊಡಲಿ,  ಸರ್ಕಾರಕ್ಕೆ ಯಾವ ತೊಂದರೆಯೂ ಇಲ್ಲ ಎಂದರು.
First published: November 19, 2019, 6:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading