ಶ್ರೀರಾಮುಲು ಯಡವಟ್ಟು; ಸುಪ್ರೀಂಕೋರ್ಟ್ 17 ಶಾಸಕರನ್ನು ಅನರ್ಹರೆಂದು ಹೇಳೇ ಇಲ್ಲ ಎಂದ ಸಚಿವ

 ಶ್ರೀರಾಮುಲು ದೊಡ್ಡ ಲೀಡರ್ ಎಂಬ ಸಿದ್ದರಾಮಯ್ಯ ಹೇಳಿಕೆಗೆ, ಈ ಬಗ್ಗೆ ನಾನೇನು ಮಾತನಾಡಲ್ಲ. ದೇವರು ಅವರಿಗೆ ಒಳ್ಳೆದು ಮಾಡಲಿ ಎಂದು ಸಿದ್ದರಾಮಯ್ಯ ವಿಚಾರದಲ್ಲಿ ಸಾಫ್ಟ್ ಆದರು.

Latha CG | news18-kannada
Updated:November 24, 2019, 1:13 PM IST
ಶ್ರೀರಾಮುಲು ಯಡವಟ್ಟು; ಸುಪ್ರೀಂಕೋರ್ಟ್ 17 ಶಾಸಕರನ್ನು ಅನರ್ಹರೆಂದು ಹೇಳೇ ಇಲ್ಲ ಎಂದ ಸಚಿವ
ಬಿ. ಶ್ರೀರಾಮುಲು
  • Share this:
ಮೈಸೂರು(ನ.24): ಹೈ ವೋಲ್ಟೇಜ್​ ಕ್ಷೇತ್ರವಾಗಿರುವ ಹುಣಸೂರಿನಲ್ಲಿ ಬಿಜೆಪಿ ಮತಬೇಟೆಯಾಡುತ್ತಿದೆ. ಅಬ್ಬರದ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ನಾಯಕರು ತೊಡಗಿದ್ದಾರೆ. ಇಂದು ಬಿಜೆಪಿ ಸಚಿವ ಶ್ರೀರಾಮುಲು ಹುಣಸೂರು ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದು, ತಮ್ಮ ಅಭ್ಯರ್ಥಿ ಹೆಚ್.ವಿಶ್ವನಾಥ್​ ಪರ ಮತಯಾಚನೆ ಮಾಡುತ್ತಿದ್ದಾರೆ. 

ಬನ್ನಿಕುಪ್ಪೆಯಲ್ಲಿ ಪ್ರಚಾರ ಭಾಷಣದ ವೇಳೆ ಮಾತನಾಡಿದ ಶ್ರೀರಾಮುಲು, ಈ ಉಪಚುನಾವಣೆಯಲ್ಲಿ ಹೆಚ್​.ವಿಶ್ವನಾಥ್​ ಅಭ್ಯರ್ಥಿ ಅಲ್ಲ. ನಾನೇ ಅಭ್ಯರ್ಥಿ, ನನಗೆ ಮತಹಾಕಿ ಗೆಲ್ಲಿಸಿ ಎಂದು ಮನವಿ ಮಾಡಿದರು. ವಿಶ್ವನಾಥ್ ಗೆದ್ದ 24 ಗಂಟೆಯಲ್ಲೆ ಮಂತ್ರಿಯಾಗುತ್ತಾರೆ. ನಿಮಗೆ ಶಾಸಕ ಬೇಕೋ, ಮಂತ್ರಿ ಬೇಕೋ ನೀವೇ ತೀರ್ಮಾನ ಮಾಡಿ ಎಂದು ಶ್ರೀರಾಮುಲು ಮತ್ತೆ ಮಂತ್ರಿ ಕಾರ್ಡ್ ಪ್ಲೇ ಮಾಡಿದರು.

ಮಹಾರಾಷ್ಟ್ರ ಅಂತಿಮ ತೀರ್ಪು ನಾಳೆಗೆ ಮುಂದೂಡಿದ ಸುಪ್ರೀಂ: ರಾಷ್ಟ್ರಪತಿ ಆದೇಶ ಹಿಂಪಡೆದ ಪ್ರತಿ ಸಲ್ಲಿಸುವಂತೆ ಸೂಚನೆ

ಮಾತಿನ ಮಧ್ಯೆ ಶ್ರೀರಾಮುಲು ಯಡವಟ್ಟು ಮಾಡಿದರು. ಸುಪ್ರೀಂಕೋರ್ಟ್ 17 ಶಾಸಕರನ್ನು ಅನರ್ಹರು ಎಂದು ಹೇಳೇ ಇಲ್ಲ ಎಂದು ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನೇ ತಪ್ಪಾಗಿ ವ್ಯಾಖ್ಯಾನಿಸಿದರು. 17ಜನ ಶಾಸಕರು ಸ್ಥಿರ ಸರ್ಕಾರಕ್ಕಾಗಿ ರಾಜೀನಾಮೆ‌ ಕೊಟ್ಟಿದ್ದಾರೆ. ಕೋರ್ಟ್ ಅವರನ್ನು ಅನರ್ಹರು ಅಂತ ಹೇಳಿಲ್ಲ. ಈ ಚುನಾವಣೆಯಲ್ಲಿ ಯಾರು ಅರ್ಹರು ಯಾರು, ಅನರ್ಹರು ಎಂಬುದನ್ನು ಜನ ತೀರ್ಮಾನ ಮಾಡುತ್ತಾರೆ ಎಂದರು.

ಹುಣಸೂರು ಹೊಸ ಜಿಲ್ಲೆ ವಿಚಾರವಾಗಿ, ಈ ಬಗ್ಗೆ ವಿಶ್ವನಾಥ್ ನಿರ್ಧಾರ ಮಾಡುತ್ತಾರೆ ಎಂದು ಶ್ರೀರಾಮುಲು ಹೇಳಿದರು. ವಿಶ್ವನಾಥ್​​ ಗೆದ್ದು  ಮಂತ್ರಿಯಾಗ್ತಾರೆ. ಆಗ ಅವರ ಕೈಯಲ್ಲಿ ಅಧಿಕಾರ ಇರುತ್ತದೆ. ಜಿಲ್ಲೆ ಮಾಡಬೇಕೋ ಬೇಡವೋ ಅನ್ನೋ ಬಗ್ಗೆ ಅವರೇ ತೀರ್ಮಾನ ತಗೆದುಕೊಳ್ಳುತ್ತಾರೆ. ರಾಜ್ಯದ ಹಲವು ಭಾಗದಲ್ಲಿ ಈ ರೀತಿಯ ಬೇಡಿಕೆ‌ ಇದೆ‌. ಬೆಳಗಾವಿ, ಬಳ್ಳಾರಿ ಸೇರಿದಂತೆ ಮೈಸೂರಿನಲ್ಲೂ ಬೇಡಿಕೆ ಇದೆ. ಈ ಬಗ್ಗೆ ಅಭಿವೃದ್ಧಿಗೆ ಪೂರಕವಾಗಿ ಸಿಎಂ ನಿರ್ಧಾರ ಕೈಗೊಳ್ಳುತ್ತಾರೆ. ನೀತಿ ಸಂಹಿತೆ ಇದೆ ನಾನೇನು ಭರವಸೆ ಕೊಡಲ್ಲ. ನನ್ನ ವೈಯುಕ್ತಿಕ ಅಭಿಪ್ರಾಯ ಮುಖ್ಯವಲ್ಲ ಎಂದರು.

ಅನರ್ಹರಿಗಾಗಿ ಪ್ರಾಣ ಕೊಡಲು ಮುಂದಾಗಿರುವ ಸಿಎಂ ನಿಮಗೆ ಬೇಕಾ?; ಜನರಿಗೆ ಕುಮಾರಸ್ವಾಮಿ ಪ್ರಶ್ನೆ

ಶ್ರೀರಾಮುಲು ದೊಡ್ಡ ಲೀಡರ್ ಎಂಬ ಸಿದ್ದರಾಮಯ್ಯ ಹೇಳಿಕೆಗೆ, ಈ ಬಗ್ಗೆ ನಾನೇನು ಮಾತನಾಡಲ್ಲ. ದೇವರು ಅವರಿಗೆ ಒಳ್ಳೆದು ಮಾಡಲಿ ಎಂದು ಸಿದ್ದರಾಮಯ್ಯ ವಿಚಾರದಲ್ಲಿ ಸಾಫ್ಟ್ ಆದರು.ನಾಳೆ ಜಿಟಿಡಿಗೆ 70ನೇ ಹುಟ್ಟುಹಬ್ಬದ ಸಂಭ್ರಮ. ಹುಟ್ಟುಹಬ್ಬದ ನೆಪದಲ್ಲಿ ಸಚಿವ ಶ್ರೀರಾಮುಲು ಜಿಟಿಡಿ ಭೇಟಿಯಾಗಲಿದ್ದಾರೆ. "ನಾಳೆ ನಾನು‌ ಜಿ.ಟಿ.ದೇವೇಗೌಡರನ್ನು ಭೇಟಿ ಮಾಡುತ್ತೇನೆ. ಅವರ ಹುಟ್ಟುಹಬ್ಬಕ್ಕೆ ಶುಭಕೋರಲು ಹೋಗುತ್ತೇನೆ. ರಾಜಕೀಯ ಹೊರತುಪಡಿಸಿ ಅವರು ನನ್ನ ಗೆಳೆಯರು. ಭೇಟಿ ವೇಳೆ ಬಿಜೆಪಿ ಪರ ಬೆಂಬಲ ಕೇಳುವ ವಿಚಾರವಾಗಿ, ನಾನು ಈಗಲೇ ಕಮಿಟ್ ಆಗಲ್ಲ. ನಾಳೆ ಅವರ ಜೊತೆ ಮಾತನಾಡಿದ ನಂತರ ನಿಮಗೆ ಮಾಹಿತಿ ನೀಡುತ್ತೇನೆ. ನಾನು ಅವರನ್ನ ಭೇಟಿ ಮಾಡೋದು ಕೇವಲ ಹುಟ್ಟುಹಬ್ಬದ ಶುಭಾಶಯ ಕೋರಲು ಅಷ್ಟೇ ಎಂದರು.
First published: November 24, 2019, 1:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading