ಸಿದ್ದರಾಮಯ್ಯನವರಿಗೆ ನನ್ನ ಮೇಲೆ ಪ್ರೀತಿ ಜಾಸ್ತಿ; ಸಚಿವ ಶ್ರೀರಾಮುಲು

ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಹದಿನೈದು ಕ್ಷೇತ್ರ ಗೆಲ್ಲುತ್ತೇವೆ. ಗುಪ್ತಚರ ಇಲಾಖೆಯ ಪ್ರಕಾರ, ಮಾಹಿತಿ ಪ್ರಕಾರ ಎಲ್ಲಾ ಸ್ಥಾನಗಳಲ್ಲೂ ಬಿಜೆಪಿ ಗೆಲ್ಲಲಿದೆ. ಪಕ್ಷದ ಎಲ್ಲಾ ನಾಯಕರು ಜವಾಬ್ದಾರಿ ವಹಿಸಿದ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ

Latha CG | news18-kannada
Updated:November 21, 2019, 9:21 PM IST
ಸಿದ್ದರಾಮಯ್ಯನವರಿಗೆ ನನ್ನ ಮೇಲೆ ಪ್ರೀತಿ ಜಾಸ್ತಿ; ಸಚಿವ ಶ್ರೀರಾಮುಲು
ಶ್ರೀರಾಮುಲು
  • Share this:
ಬಳ್ಳಾರಿ(21): ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ನನ್ನ ಮೇಲೆ ಪ್ರೀತಿ ಜಾಸ್ತಿ. ಆ ಕಾರಣಕ್ಕೆ ನಾನು ಡಿಸಿಎಂ ಆಗಬೇಕೆಂದು ಬಯಸಿದ್ದಾರೆ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ. 

ಬಳ್ಳಾರಿಯಲ್ಲಿ ಮಾತನಾಡಿದ ಅವರು, "ಜನರು ಕೂಡ ನಾನು ಡಿಸಿಎಂ ಆಗಬೇಕೆಂದು ಬಿಂಬಿಸಿದ್ದರು. ಇಂದು ಅದೇ ಮಾತನ್ನು ಸಿದ್ದರಾಮಯ್ಯ ಹೇಳಿದ್ದಾರೆ. ನಾನು ಮತ್ತು ಸಿದ್ದರಾಮಯ್ಯ ಒಳ್ಳೆಯ ಸ್ನೇಹಿತರು. ನಾವಿಬ್ಬರೂ ತಳ ಸಮುದಾಯದಿಂದ ಬಂದವರು," ಎಂದರು.

ಮುಂದುವರೆದ ಅವರು, "ಶ್ರೀರಾಮುಲು ಮೇಲೆ ಮಾಜಿ ಸಿಎಂ ಸಿದ್ದರಾಮಯ್ಯಗೆ ವಿಶೇಷ ಪ್ರೀತಿ ಬಂದಿದೆ. ಒಂದು ಕಡೆ ರಾಮುಲು ಡಿಸಿಎಂ ಆಗಬೇಕು ಅಂತಾರೆ. ಮತ್ತೊಂದೆಡೆ ರಾಮುಲು ರಾಜೀನಾಮೆ ಕೊಡಬೇಕಿತ್ತು ಅಂತಿದ್ದಾರೆ. ಅವರ ಹೇಳಿಕೆಯಲ್ಲಿಯೇ ಪ್ರಶ್ನೆ ಇದೆ, ಉತ್ತರವೂ ಇದೆ ಎಂದು," ಹೇಳಿದರು.

ಬಿಜೆಪಿಗೆ ಬರಲ್ಲ ಅಂದಮೇಲೆ ಎಂಟಿಬಿ ಸಾಲ ವಾಪಸ್​ ಕೇಳ್ತಿದ್ದಾರೆ; ಕೆ.ವೈ.ನಂಜೇಗೌಡ ವಾಗ್ದಾಳಿ

ಶ್ರೀರಾಮುಲುಗೆ ಕನ್ನಡ ಬರಲ್ಲ ಎನ್ನುವ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ, "ಪ್ರತಿ ಹತ್ತು ಕಿ.ಮೀ. ಗೆ ಭಾಷೆಯಲ್ಲಿ ಸ್ವಲ್ಪ ಬದಲಾವಣೆ ಆಗುತ್ತದೆ. ಬಳ್ಳಾರಿ ಭಾಷೆ ಮೈಸೂರಿನಲ್ಲಿ ಬದಲಾವಣೆ ಆಗುತ್ತದೆ. ಮೈಸೂರು ಭಾಷೆ ಬಳ್ಳಾರಿಯಲ್ಲಿ ಬದಲಾವಣೆ ಆಗುತ್ತದೆ. ಈ ಬಗ್ಗೆ ಹೆಚ್ಚು ಮಾತನಾಡಲ್ಲ", ಎಂದರು.

ಸಚಿವ ಮಾಧುಸ್ವಾಮಿ ವಿವಾದಾತ್ಮಕ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಶ್ರೀರಾಮುಲು, "ಈಗಾಗಲೇ ಮಧುಸ್ವಾಮಿಯವರು ಶ್ರೀಗಳ ಆರ್ಶಿವಾದ ಪಡೆದಿದ್ದಾರೆ. ಈ  ಪ್ರಕರಣ ಮುಕ್ತಾಯಗೊಂಡಿದೆ. ಈ ವಿಚಾರ ರಾಜಕೀಯ ಬಣ್ಣ ಪಡೆದುಕೊಳ್ಳುತ್ತಿಲ್ಲ," ಎಂದು ಹೇಳಿದರು.

"ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಹದಿನೈದು ಕ್ಷೇತ್ರ ಗೆಲ್ಲುತ್ತೇವೆ. ಗುಪ್ತಚರ ಇಲಾಖೆಯ ಪ್ರಕಾರ, ಮಾಹಿತಿ ಪ್ರಕಾರ ಎಲ್ಲಾ ಸ್ಥಾನಗಳಲ್ಲೂ ಬಿಜೆಪಿ ಗೆಲ್ಲಲಿದೆ. ಪಕ್ಷದ ಎಲ್ಲಾ ನಾಯಕರು ಜವಾಬ್ದಾರಿ ವಹಿಸಿದ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ಪಕ್ಷದಿಂದ ಈಗಾಗಲೇ ಶರತ್ ಬಚ್ಚೇಗೌಡ, ಕವಿರಾಜ್ ಅರಸರನ್ನು ಉಚ್ಚಾಟನೆ ಮಾಡಲಾಗಿದೆ," ಎಂದು ತಿಳಿಸಿದರು.ಬಾಲಕಿಗೆ ಹಾವು ಕಚ್ಚಿದ್ದರೂ ತರಗತಿ ಮುಂದುವರೆಸಿದ ನಿರ್ದಯಿ ಶಿಕ್ಷಕ

First published:November 21, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading