ಈ ಉಪಚುನಾವಣೆಯಲ್ಲಿ ಕಾಂಗ್ರೆಸ್​​​ ಷಡ್ಯಂತ್ರ, ಕುತಂತ್ರ ಏನೂ ನಡೆಯಲ್ಲ; ಸಚಿವ ಶ್ರೀರಾಮುಲು

ಜನರು ಸುಳ್ಳು ಸುದ್ದಿ ನೋಡುವ ಪರಿಸ್ಥಿತಿಯಲ್ಲಿ ಇಲ್ಲ. ಕಾಂಗ್ರೆಸ್​​ಗೆ ಸೋಲಿನ ಭೀತಿ ಕಾಡುತ್ತಿದೆ. ಹೀಗಾಗಿ ಅಪಪ್ರಚಾರ ಮಾಡುತ್ತಿದೆ. ಕಾಂಗ್ರೆಸ್​ಗೆ ಮಾಡಲು ಬೇರೆ ಕೆಲಸ ಇಲ್ಲ. ಅದಕ್ಕೆ ಹೀಗೆಲ್ಲಾ ಮಾಡುತ್ತಿದೆ. ಶೇ.100ಕ್ಕೆ 100 ಸತ್ಯ, ಬಿಜೆಪಿ 15 ಸ್ಥಾನಗಳಲ್ಲಿ ಗೆಲ್ಲುತ್ತದೆ ಎಂದು ರಾಮುಲು ಹೇಳಿದರು.

ಶ್ರೀರಾಮುಲು

ಶ್ರೀರಾಮುಲು

  • Share this:
ಗದಗ(ಡಿ.04): ಈ ಉಪಚುನಾವಣೆಯಲ್ಲಿ ಕಾಂಗ್ರೆಸ್​ ಷಡ್ಯಂತ್ರ, ಕುತಂತ್ರ ಏನೂ ನಡೆಯಲ್ಲ. ಬಿಜೆಪಿ 15 ಸ್ಥಾನಗಳಲ್ಲಿ ಗೆಲ್ಲುವುದು ಖಚಿತ ಎಂದು ಆರೋಗ್ಯ ಸಚಿವ ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಗದಗದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸಾಮಾಜಿಕ ಜಾಲತಾಣಲಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಕಾಂಗ್ರೆಸ್​ ಸುಳ್ಳು ಸುದ್ದಿ ಹಬ್ಬಿಸುತ್ತಿದೆ. ಗ್ರಾಫಿಕ್ಸ್​ ಮಾಡಿ, ಸ್ಲೋಗನ್​ ಹಾಕಿ, ಮತ ಹಾಕಬೇಡಿ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಜನರು ಸುಳ್ಳು ಸುದ್ದಿ ನೋಡುವ ಪರಿಸ್ಥಿತಿಯಲ್ಲಿ ಇಲ್ಲ. ಕಾಂಗ್ರೆಸ್​​ಗೆ ಸೋಲಿನ ಭೀತಿ ಕಾಡುತ್ತಿದೆ. ಹೀಗಾಗಿ ಅಪಪ್ರಚಾರ ಮಾಡುತ್ತಿದೆ. ಕಾಂಗ್ರೆಸ್​ಗೆ ಮಾಡಲು ಬೇರೆ ಕೆಲಸ ಇಲ್ಲ. ಅದಕ್ಕೆ ಹೀಗೆಲ್ಲಾ ಮಾಡುತ್ತಿದೆ. ಶೇ.100ಕ್ಕೆ 100 ಸತ್ಯ, ಬಿಜೆಪಿ 15 ಸ್ಥಾನಗಳಲ್ಲಿ ಗೆಲ್ಲುತ್ತದೆ ಎಂದು ರಾಮುಲು ಹೇಳಿದರು.

ನನ್ನನ್ನು ದಲಿತ ಎಂಬ ಕಾರಣಕ್ಕೆ ಸಿಎಂ ಮಾಡುವುದಾದರೆ ಬೇಸರವಾಗುತ್ತದೆ; ಮಲ್ಲಿಕಾರ್ಜುನ್​​​​ ಖರ್ಗೆ

ಕಾಂಗ್ರೆಸ್-ಜೆಡಿಎಸ್ ಮತ್ತೆ ಮೈತ್ರಿಯಾಗುತ್ತದೆ, ಡಿ.9ಕ್ಕೆ ಸಿಹಿ ಸುದ್ದಿ ಇದೆ ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಶ್ರೀರಾಮುಲು ಲೇವಡಿ ಮಾಡಿದರು. ಡಿಸೆಂಬರ್ 9ಕ್ಕೆ ಗುಡ್ ನ್ಯೂಸ್ ಕೊಡುವಂತದ್ದು ಏನೂ ಇಲ್ಲ. ಅವರು ಸರ್ಕಾರ ರಚನೆ ಮಾಡಲು ಸಾಧ್ಯವೇ ಇಲ್ಲ. ಬಿಜೆಪಿ ಸರ್ಕಾರ ಬೀಳಬೇಕಾದರೆ ಎಲ್ಲರೂ ಸೋಲಬೇಕು‌‌‌. ಆದರೆ ಸೋಲುವ ಪ್ರಶ್ನೆಯೇ ಇಲ್ಲ. ಉಳಿದ ಅವಧಿಯಲ್ಲೂ ಯಡಿಯೂರಪ್ಪನವೇ ಸಿಎಂ ಆಗಿರುತ್ತಾರೆ ಎಂದರು.
First published: