ಸಚಿವರಾದ ಬಳಿಕ ಮೊದಲ ಬಾರಿಗೆ ಬೆಳಗಾವಿಗೆ ಭೇಟಿ ನೀಡಿದ ಶ್ರೀಮಂತ ಪಾಟೀಲ್​

ಅಥಣಿ ಶಾಸಕ ಮಹೇಶ್​ ಕುಮಟಳ್ಳಿ ನಮ್ಮ ದೋಸ್ತ್. ಅವರಿಗೂ ಯೋಗ್ಯ ಸ್ಥಾನಮಾನ ನೀಡುವುದಾಗಿ ಹೈ ಕಮಾಂಡ್​ ಹೇಳಿದೆ. ಕುಮಟಳ್ಳಿಯವರಿಗೆ ಮೋಸ ಆಗಲ್ಲ.  ಅವರಿಗೆ ಸಚಿವ ಸ್ಥಾನ ನೀಡಲು ಮನವಿ ಮಾಡಿದ್ದೇವೆ. ಉಮೇಶ್​ ಕತ್ತಿಯವರಿಗೂ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದರು.

news18-kannada
Updated:February 13, 2020, 10:20 AM IST
ಸಚಿವರಾದ ಬಳಿಕ ಮೊದಲ ಬಾರಿಗೆ ಬೆಳಗಾವಿಗೆ ಭೇಟಿ ನೀಡಿದ ಶ್ರೀಮಂತ ಪಾಟೀಲ್​
ಸಚಿವ ಶ್ರೀಮಂತ ಪಾಟೀಲ್
  • Share this:
ಬೆಳಗಾವಿ(ಫೆ.13): ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಶ್ರೀಮಂತ ಪಾಟೀಲ್​ ಬೆಳಗಾವಿಗೆ ಭೇಟಿ ನೀಡಿದ್ದಾರೆ.  ಕಾಗವಾಡ ಕ್ಷೇತ್ರದದಿಂದ ಸ್ಪರ್ಧಿಸಿ ಗೆದ್ದ ಶ್ರೀಮಂತ ಪಾಟೀಲ್​ ಅವರಿಗೆ ಸಿಎಂ ಬಿಎಸ್​ ಯಡಿಯೂರಪ್ಪ ಅಲ್ಪಸಂಖ್ಯಾತ ಕಲ್ಯಾಣ ಖಾತೆ ಮತ್ತು ಜವಳಿ ಖಾತೆ ನೀಡಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಕ್ಕರೆ ಖಾತೆ ಬೇಡ ಎಂದಿದ್ದೆ. ಹಾಗಾಗಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಮತ್ತು ಜವಳಿ ಖಾತೆ ಜವಾಬ್ದಾರಿ ಕೊಟ್ಟಿದ್ದಾರೆ. ಯಾವ ಖಾತೆಯೂ ಕೆಟ್ಟ ಖಾತೆ ಇರಲ್ಲ. ಜನರ ಸೇವೆ ಮಾಡುವ ಖಾತೆಗಳೇ ಇರುತ್ತೆ ಎಂದು ಹೇಳಿದರು.

ಸಾಮಾಜಿಕ ಹೋರಾಟಗಾರ ರವಿಕೃಷ್ಣಾ ರೆಡ್ಡಿ ಬಲವಂತದ ಬಂಧನ; ಪೊಲೀಸರ ದುರ್ವರ್ತನೆ; ನೆಟ್ಟಿಗರಿಂದ ವ್ಯಾಪಕ ಆಕ್ರೋಶ

ಅಥಣಿ ಶಾಸಕ ಮಹೇಶ್​ ಕುಮಟಳ್ಳಿ ನಮ್ಮ ದೋಸ್ತ್. ಅವರಿಗೂ ಯೋಗ್ಯ ಸ್ಥಾನಮಾನ ನೀಡುವುದಾಗಿ ಹೈ ಕಮಾಂಡ್​ ಹೇಳಿದೆ. ಕುಮಟಳ್ಳಿಯವರಿಗೆ ಮೋಸ ಆಗಲ್ಲ.  ಅವರಿಗೆ ಸಚಿವ ಸ್ಥಾನ ನೀಡಲು ಮನವಿ ಮಾಡಿದ್ದೇವೆ. ಉಮೇಶ್​ ಕತ್ತಿಯವರಿಗೂ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದರು.

ಫೆ.17ರಂದು ಅಧಿವೇಶನ ಆರಂಭವಾಗಲಿದೆ. ಈ ಬಗ್ಗೆ ನಿನ್ನೆ ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ನಾಳೆ ಮತ್ತೆ ಬೆಂಗಳೂರಿಗೆ ತೆರಳಿ ಚರ್ಚೆ ನಡೆಸುತ್ತೇನೆ ಎಂದು ಹೇಳಿದರು. ಇದೇ ವೇಳೆ ಉಸ್ತುವಾರಿ ಬದಲಾವಣೆ ಬಗ್ಗೆ ಸಿಎಂ ಬಿ.ಎಸ್​.ಯಡಿಯೂರಪ್ಪ ನಿರ್ಧಾರ ಮಾಡಲಿದ್ದಾರೆ ಎಂದರು.

Corona Virus: ಕೊರೊನಾ ವೈರಸ್​ಗೆ ಹುಬೈ​ನಲ್ಲಿ ಒಂದೇ ದಿನ 242 ಸಾವು; ಚೀನಾದಲ್ಲಿ ಮೃತರ ಸಂಖ್ಯೆ 1,355ಕ್ಕೆ ಏರಿಕೆ
 
First published: February 13, 2020, 10:20 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading