• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಹುಬ್ಬಳ್ಳಿಯಲ್ಲಿ ಕಾರ್ಮಿಕ ಭವನ ಕಾಮಗಾರಿ ವೀಕ್ಷಣೆ ಮಾಡಿದ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್

ಹುಬ್ಬಳ್ಳಿಯಲ್ಲಿ ಕಾರ್ಮಿಕ ಭವನ ಕಾಮಗಾರಿ ವೀಕ್ಷಣೆ ಮಾಡಿದ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್

ಕಾರ್ಮಿಕ ಸಚಿವ ಶಿವರಾಮ್​ ಹೆಬ್ಬಾರ್​

ಕಾರ್ಮಿಕ ಸಚಿವ ಶಿವರಾಮ್​ ಹೆಬ್ಬಾರ್​

ಹೆಚ್ಚುವರಿಯಾಗಿ ಒಂದು ಅಂತಸ್ತು ನಿರ್ಮಿಸಿ, ಜನವರಿ ಒಂದರ ಒಳಗಾಗಿ ಕಟ್ಟಡ ಉದ್ಘಾಟನೆಗೆ ಸಿದ್ದವಾಗಬೇಕು. ನೆಲ ಮಹಡಿಯಲ್ಲಿ ಕಾರ್ಮಿಕ ಸಹಾಯವಾಣಿ ಸ್ಥಾಪಿಸಿ ಅಗತ್ಯ ಮಾಹಿತಿಗಳನ್ನು ಕಾರ್ಮಿಕರಿಗೆ ನೀಡಲು ವ್ಯವಸ್ಥೆ ಕಲ್ಪಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

  • Share this:

ಹುಬ್ಬಳ್ಳಿ(ಆ.29): ಕಾರ್ಮಿಕ ಹಾಗೂ ಸಕ್ಕರೆ ಸಚಿವ ಶಿವರಾಮ್​​ ಹೆಬ್ಬಾರ್ ಹುಬ್ಬಳ್ಳಿಯ ಚೈತನ್ಯ ನಗರದಲ್ಲಿ ನಿರ್ಮಿಸಲಾಗುತ್ತಿರುವ ಕಾರ್ಮಿಕರ ಭವನ‌ದ ಕಾಮಗಾರಿ ವೀಕ್ಷಣೆ ಮಾಡಿದ್ದಾರೆ. ಭವನ ನಿರ್ಮಾಣಕ್ಕೆ 10 ಕೋಟಿ ರೂಪಾಯಿಗಳ ಅನುದಾನ ಒದಗಿಸಲಾಗಿದೆ. 6.5 ಕೋಟಿ ವೆಚ್ಚದಲ್ಲಿ G 2 ಕಟ್ಟಡ ನಿರ್ಮಿಸಲಾಗಿದೆ. 1.5 ಕೋಟಿ ವೆಚ್ಚದ ಅಗ್ನಿಶಾಮಕ ಸುರಕ್ಷತೆಯ ಅಳವಡಿಕೆ ಕಾರ್ಯಬಾಕಿ ಇದೆ. 2 ತಿಂಗಳ ಒಳಗಾಗಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.


ಇಲಾಖೆಯಡಿ ಬರುವ ಕಾರ್ಮಿಕರು, ಕಾರ್ಖಾನೆ, ಬಾಯ್ಲರ್‌ಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯಕ್ಕೆ‌ ಸಂಬಂಧಿಸಿದಂತೆ ಕಚೇರಿಗಳು ಒಂದೇ ಕಟ್ಟಡದಲ್ಲಿ ಇರುವಂತೆ ಮಾದರಿಯಾಗಿ ಕಾರ್ಮಿಕ ಭವನ ನಿರ್ಮಾಣವಾಗಬೇಕು. ಹೆಚ್ಚುವರಿಯಾಗಿ ಒಂದು ಅಂತಸ್ತು ನಿರ್ಮಿಸಿ, ಜನವರಿ ಒಂದರ ಒಳಗಾಗಿ ಕಟ್ಟಡ ಉದ್ಘಾಟನೆಗೆ ಸಿದ್ದವಾಗಬೇಕು. ನೆಲ ಮಹಡಿಯಲ್ಲಿ ಕಾರ್ಮಿಕ ಸಹಾಯವಾಣಿ ಸ್ಥಾಪಿಸಿ ಅಗತ್ಯ ಮಾಹಿತಿಗಳನ್ನು ಕಾರ್ಮಿಕರಿಗೆ ನೀಡಲು ವ್ಯವಸ್ಥೆ ಕಲ್ಪಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.


ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆ ಆಯುಕ್ತ ಅಕ್ರಂ ಪಾಷಾ, ಬೆಳಗಾವಿ ಪ್ರಾದೇಶಿಕ ಕಾರ್ಮಿಕ ಆಯುಕ್ತ ವೆಂಕಟೇಶ್ ಸಿಂಧಿ ಹಟ್ಟಿ, ಕಾರ್ಮಿಕ ಇಲಾಖೆಯ ಇತರೆ ಅಧಿಕಾರಿಗಳು, ಕಟ್ಟಡ ನಿರ್ಮಾಣ ‌ಗುತ್ತಿಗೆದಾರರು ಉಪಸ್ಥಿತರಿದ್ದರು.


ಮೊಮ್ಮಗನಿಗೆ ಮನಬಂದಂತೆ ಥಳಿಸಿದ ಅಜ್ಜಿ; ಬೆಂಗಳೂರಿನಲ್ಲಿ ಹೀನ ಕೃತ್ಯ


ನಾಗಶೆಟ್ಟಿಕೊಪ್ಪ ಖರೀದಿ ಪತ್ರ ನೀಡುವ ಹಾಗೂ ಐಟಿ ಪಾರ್ಕ್‌ ಜಮೀನು ಹಂಚಿಕೆ ಕಾರ್ಯ ಚುರುಕುಗೊಳಿಸಿ: ಸಚಿವ ಜಗದೀಶ್‌ ಶೆಟ್ಟರ್‌


ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಸಂಬಂಧಪಟ್ಟಂತೆ ಜೂನ್‌ 11 ರಂದು ನಗರಾಭಿವೃದ್ದಿ ಸಚಿವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ನಿರ್ಣಯಗಳನ್ನು ಕೈಗೊಳ್ಳಲಾಯಿತು.  ಆಗಿರುವ ಕಾರ್ಯಗಳ ಅಭಿವೃದ್ದಿಗೆ ಸಂಬಂಧಿಸಂತೆ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್​ ಶೆಟ್ಟರ್‌ ಮಾಹಿತಿಯನ್ನು ಪಡೆದುಕೊಂಡರು.


ಬೆಂಗಳೂರಿನ ಕರ್ನಾಟಕ ಉದ್ಯೋಗ ಮಿತ್ರ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನಗರಾಭಿವೃದ್ದಿ ಇಲಾಖೆ ಕಾರ್ಯದರ್ಶಿ ರವಿಶಂಕರ್‌, ಡೈರೆಕ್ಟರ್‌ ಆಫ್‌ ಮುನಿಸಿಪಾಲಿಟಿ ಬಿ.ಬಿ. ಕಾವೇರಿ, ನಗರಾಭಿವೃದ್ದಿ ಇಲಾಖೆ ಜಂಟಿ ಕಾರ್ಯದರ್ಶಿ ಗೋಪಾಲಯ್ಯ ಹಾಗೂ ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯ ಆಯುಕ್ತರಾದ ಸುರೇಶ್‌ ಇಟ್ನಾಳ್‌ ಅವರು ಪಾಲ್ಗೊಂಡಿದ್ದರು.


ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ವಲಯ ನಿಯಮಾವಳಿ ಪರಿಷ್ಕರಣೆ, ಪಿಂಚಣಿ ಅನುದಾನ, ಐಟಿ ಪಾರ್ಕ್‌ ನ ಜಮೀನ ಹಂಚಿಕೆ, ನೀರಿನ ಶುಲ್ಕದ ಬಡ್ಡಿ ಮನ್ನ ವಿಷಯ, ಕೈಗಾರಿಕೆಗಳಿಗೆ ಸಂಬಂಧಪಟ್ಟಂತಹ ಆಸ್ತಿ ತೆರಿಗೆ ವಸೂಲಿ, ನಾಗಶೇಟ್ಟಿ ಕೊಪ್ಪ ಮತ್ತು ಹೆಗ್ಗೇರಿಯಲ್ಲಿ ಖರೀದಿ ಪತ್ರ ನೀಡುವುದು ಹಾಗೂ ಪೌರ ಕಾರ್ಮಿಕರ ನೇರ ನೇಮಕಾತಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಜೂನ್‌ 11 ರಂದು ನಡೆದ ಸಭೆಯಲ್ಲಿ ಚರ್ಚೆ ನಡೆಸಲಾಗಿತ್ತು. ಆ ಸಭೆಯ ನಂತರ ನಡೆದಿರುವ ಬೆಳವಣಿಗೆಗಳ ಬಗ್ಗೆ ಆಧಿಕಾರಿಗಳಿಂದ ಸಚಿವರು ಮಾಹಿತಿ ಪಡೆದುಕೊಂಡರು.


ನಂತರ ಮಾತನಾಡಿದ ಅವರು, ನಾಗಶೆಟ್ಟಿ ಕೊಪ್ಪ ಮತ್ತು ಹೆಗ್ಗೇರಿ, ಐಟಿ ಪಾರ್ಕ ಜಮೀನು ಹಂಚಿಕೆ ಯಂತಹ ಪ್ರಮುಖ ವಿಷಯಗಳ ಬಗ್ಗೆ ಬೇಗ ತೀರ್ಮಾನ ತಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

top videos
    First published: