ಬಾಗಲಕೋಟೆಗೆ ತಡರಾತ್ರಿ ಬಂದು ಬೆಳ್ಳಂಬೆಳಗ್ಗೆ ನಿರ್ಗಮಿಸಿದ ಸಚಿವೆ ಶಶಿಕಲಾ ಜೊಲ್ಲೆ;ಯಾಕೆ ಗೊತ್ತಾ?

ಬಿಜೆಪಿ ಹೈಕಮಾಂಡ್ ಆಗ ಶಶಿಕಲಾ ಜೊಲ್ಲೆ ಸಚಿವ ಸ್ಥಾನಕ್ಕೆ ಕೊಕ್ ಕೊಡುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಸಚಿವೆ ಶಶಿಕಲಾ ಜೊಲ್ಲೆ ಖಾತೆಗೆ ಕೊಕ್ ಕೊಡ್ತಾರೆ ಎನ್ನುವುದನ್ನು ಅರಿತು ಇಲಾಖೆ ಕಾರ್ಯಗಳ ಬಗ್ಗೆ ಅಷ್ಟೊಂದು ಮನಸ್ಸು ತೋರುತ್ತಿಲ್ಲ‌ ಎನ್ನುವ  ಮಾತುಗಳು ಕೇಳಿಬರುತ್ತಿವೆ. ಖಾತೆ ಹೋಗುತ್ತಿರುವುದು ಶಶಿಕಲಾ ಜೊಲ್ಲೆಗೆ ಒಳಗೆ ಅಸಮಾಧಾನವೂ ಇದೆಯಂತೆ.

ಸಚಿವೆ ಶಶಿಕಲಾ ಜೊಲ್ಲೆ

ಸಚಿವೆ ಶಶಿಕಲಾ ಜೊಲ್ಲೆ

 • Share this:
  ಬಾಗಲಕೋಟೆ (ಡಿ.25): ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಬಾಗಲಕೋಟೆಗೆ ಬಂದಿದ್ದು ನಿನ್ನೆ ತಡರಾತ್ರಿ 2ಕ್ಕೆ, ಬಾಗಲಕೋಟೆಯಿಂದ ನಿರ್ಗಮಿಸಿದ್ದು ಬೆಳ್ಳಂಬೆಳಗ್ಗೆ. ಹೌದು, ಶಶಿಕಲಾ ಜೊಲ್ಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆಯಾದ ಬಳಿಕ ಬಾಗಲಕೋಟೆ ಜಿಲ್ಲೆಗೆ ಮೊದಲ ಬಾರಿಗೆ ಭೇಟಿ ನೀಡಿದ್ದರು. ಅತೀ ಹೆಚ್ಚು ನೆರೆ ಪೀಡಿತ ಜಿಲ್ಲೆ ಬೆಳಗಾವಿ ಬಿಟ್ಟರೆ ಬಾಗಲಕೋಟೆ.  ನೆರೆ ಸಂದರ್ಭದಲ್ಲೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆಯ ಸ್ವಜಿಲ್ಲೆಯ ಪಕ್ಕದ ಜಿಲ್ಲೆ ಬಾಗಲಕೋಟೆಗೂ ಬಂದಿರಲಿಲ್ಲ.

  ಬಾಗಲಕೋಟೆ ಜಿಲ್ಲೆಯಲ್ಲಿ ನೆರೆಯಿಂದ ನೂರಾರು ಅಂಗನವಾಡಿ ಕೇಂದ್ರದ ಕಟ್ಟಡಗಳು ಶಿಥಿಲವಾಗಿವೆ. ಅಂಗನವಾಡಿ ಕೇಂದ್ರದ ಮಕ್ಕಳು ನೆರೆಯಿಂದ ತತ್ತರಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಬಾಗಲಕೋಟೆ ಜಿಲ್ಲೆಗೆ ಭೇಟಿ ನೀಡಿ, ಅಂಗನವಾಡಿ ಕೇಂದ್ರಗಳ ಸ್ಥಿತಿಗತಿ ಅವಲೋಕಿಸಬೇಕಿತ್ತು. ಜೊತೆಗೆ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಪರಿಹಾರ ನೀಡಬೇಕಿತ್ತು.ಆದರೆ ನೆರೆ ಬಂದು ನಾಲ್ಕು ತಿಂಗಳಾದರೂ ಜಿಲ್ಲೆಯಲ್ಲಿ ನೆರೆಗೆ ಶಿಥಿಲವಾಗಿರುವ ಬಿರುಕು ಬಿಟ್ಟಿರುವ ಕಟ್ಟಡದ ದುರಸ್ಥಿಯಾಗಿಲ್ಲ. ಬಿರುಕು ಬಿಟ್ಟ ಹಾಗೂ ತಾತ್ಕಾಲಿಕ ಶೆಡ್ ಗಳಲ್ಲಿ ಅಂಗನವಾಡಿ ಕೇಂದ್ರಗಳು ನಡೆಯುತ್ತಿವೆ. ನೆರೆಯಿಂದ ಇಷ್ಟೆಲ್ಲಾ ಹಾನಿಯಾಗಿದ್ದರೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರು ಬಾಗಲಕೋಟೆ ಜಿಲ್ಲೆಯ ಕಡೆಗೆ ಕಣ್ಣೆತ್ತಿಯೂ ನೋಡಿಲ್ಲ.

  ಗೋಲಿಬಾರ್​​​ನಲ್ಲಿ ಮೃತಪಟ್ಟವರಿಗೆ ಪರಿಹಾರ ನೀಡಲೇಬೇಕು; ಬಿಎಸ್​​ವೈಗೆ ಬಿಸಿತುಪ್ಪವಾದ ಶ್ರೀರಾಮುಲು

  ಬಾಗಲಕೋಟೆಗೆ ತಡರಾತ್ರಿ 2ಕ್ಕೆ ಬಂದ ಸಚಿವೆ, ಬೆಳ್ಳಂಬೆಳಗ್ಗೆ ನಿರ್ಗಮನ

  ಸಚಿವೆ ಶಶಿಕಲಾ ಜೋಲ್ಲೆ ಯಾದಗಿರಿ ಜಿಲ್ಲೆಯ ಪ್ರವಾಸ ಮುಗಿಸಿಕೊಂಡು ಬಾಗಲಕೋಟೆಗೆ ನಿನ್ನೆ ತಡರಾತ್ರಿ 2ಕ್ಕೆ ಬಂದು ಅತಿಥಿಗೃಹದಲ್ಲಿ ವಾಸ್ತವ್ಯ ಹೂಡಿದ್ದಾರೆ. ಇವತ್ತು ಬೆಳ್ಳಂಬೆಳಿಗ್ಗೆ 8:20ನಿಮಿಷಕ್ಕೆ ಬಾಗಲಕೋಟೆಯಿಂದ ಜಮಖಂಡಿ ತಾಲೂಕಿನ ಖಾಸಗಿ ಕಾರ್ಯಕ್ರಮಕ್ಕೆ ತೆರಳಿದ್ದಾರೆ. ಬಾಗಲಕೋಟೆಗೆ ಸಚಿವೆ ತಡವಾಗಿ ಭೇಟಿ ನೀಡಿದ್ದರೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಾಗಲಿ, ನೆರೆಯಿಂದಾದ ಅಂಗನವಾಡಿ ಸ್ಥಿತಿಗತಿ ಪರಿಶೀಲನೆ ಮಾಡುವ ಯಾವುದೇ ಪ್ರವಾಸ ಕೈಗೊಂಡಿಲ್ಲ‌‌. ಬದಲಾಗಿ ಖಾಸಗಿ ಕಾರ್ಯಕ್ರಮದ ಪ್ರವಾಸ ಕೈಗೊಂಡಿದ್ದಾರೆ. ಇನ್ನು ‌ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಿಗೆ ತಮ್ಮ ಇಲಾಖೆಯ ಅಭಿವೃದ್ಧಿ ಕಾರ್ಯಗಳು,ಲೋಪದೋಷ, ಕುಂದುಕೊರತೆಗಳ ಬಗ್ಗೆ ಚರ್ಚಿಸುವ ಮನಸು ತೋರುತ್ತಿಲ್ಲ‌.  ಸಂಪುಟ ವಿಸ್ತರಣೆ ವೇಳೆ ಶಶಿಕಲಾ ಜೊಲ್ಲೆ ಸಚಿವ ಸ್ಥಾನ ಕೊಕ್?

  ಸಚಿವ ಸಂಪುಟ ವಿಸ್ತರಣೆ ವೇಳೆ ಶಶಿಕಲಾ ಜೋಲ್ಲೆ ಸಚಿವ ಸ್ಥಾನಕ್ಕೆ ಕುತ್ತು ಬರಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆಯಾದ ಬಳಿಕ ಶಶಿಕಲಾ ಜೊಲ್ಲೆ ಕೇವಲ ಬೆಳಗಾವಿ ಜಿಲ್ಲೆಗೆ ಸಿಮೀತರಾಗಿದ್ದಾರೆ. ರಾಜ್ಯದ ಬೇರೆ ಜಿಲ್ಲೆಗಳಿಗೆ ಸಚಿವೆ ಶಶಿಕಲಾ ಜೊಲ್ಲೆ ಭೇಟಿ ನೀಡಿ ಇಲಾಖೆಗೆ ಕಾಯಕಲ್ಪ ನೀಡಿದ್ದು ಕಡಿಮೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣವಾಗಿದ್ದ 17 ಶಾಸಕರ ಪೈಕಿ ಈಗ ಸಂಕ್ರಾಂತಿ ಹಬ್ಬಕ್ಕೆ ಸಂಪುಟ ವಿಸ್ತರಣೆ ವೇಳೆ 15 ಶಾಸಕರು ಸಚಿವರಾಗುತ್ತಾರೆ. ಬಿಜೆಪಿ ಹೈಕಮಾಂಡ್ ಆಗ ಶಶಿಕಲಾ ಜೊಲ್ಲೆ ಸಚಿವ ಸ್ಥಾನಕ್ಕೆ ಕೊಕ್ ಕೊಡುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಸಚಿವೆ ಶಶಿಕಲಾ ಜೊಲ್ಲೆ ಖಾತೆಗೆ ಕೊಕ್ ಕೊಡ್ತಾರೆ ಎನ್ನುವುದನ್ನು ಅರಿತು ಇಲಾಖೆ ಕಾರ್ಯಗಳ ಬಗ್ಗೆ ಅಷ್ಟೊಂದು ಮನಸ್ಸು ತೋರುತ್ತಿಲ್ಲ‌ ಎನ್ನುವ  ಮಾತುಗಳು ಕೇಳಿಬರುತ್ತಿವೆ. ಖಾತೆ ಹೋಗುತ್ತಿರುವುದು ಶಶಿಕಲಾ ಜೊಲ್ಲೆಗೆ ಒಳಗೆ ಅಸಮಾಧಾನವೂ ಇದೆಯಂತೆ.

  ಅಟಲ್ ಭೂಜಲ ಯೋಜನೆಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ; ಕರ್ನಾಟಕ ಸೇರಿದಂತೆ 6 ರಾಜ್ಯಗಳಿಗೆ ಉಪಯೋಗ

  (ವರದಿ: ರಾಚಪ್ಪ ಬನ್ನಿದಿನ್ನಿ)

   
  Published by:Latha CG
  First published: