ಗೋಕಾಕ್ ನಗರಸಭೆ ಮಾಜಿ ಅಧ್ಯಕ್ಷ ನಿಧನ: ಸ್ನೇಹಿತನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ರಮೇಶ್​​ ಜಾರಕಿಹೊಳಿ

ಕೊರೋನಾ ಸೋಂಕಿತ ವ್ಯಕ್ತಿಯ ನಿಯಮದ ಅನುಸಾರ ಆರೋಗ್ಯ ಇಲಾಖೆಯ ಸಿಬ್ಬಂದಿ ಕೊತ್ವವಾಲ್ ಅಂತ್ಯಕ್ರಿಯೆ ನೇರವೇರಿಸಿದ್ರು. ಅಂತ್ಯಕ್ರಿಯೆ ಮುಗಿಯುವವರೆಗೆ ಸಚಿವ ರಮೇಶ ಜಾರಕಿಹೊಳಿ ಸ್ಥಳದಲ್ಲಿಯೇ ಹಾಜರಿದ್ದು ಗೆಳೆಯನು ಅಂತಿಮ ವಿಧಾಯ ಸಲ್ಲಿಸಿದ್ರು.

news18-kannada
Updated:August 9, 2020, 10:36 PM IST
ಗೋಕಾಕ್ ನಗರಸಭೆ ಮಾಜಿ ಅಧ್ಯಕ್ಷ ನಿಧನ: ಸ್ನೇಹಿತನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ರಮೇಶ್​​ ಜಾರಕಿಹೊಳಿ
ರಮೇಶ್​​ ಜಾರಕಿಹೊಳಿ
  • Share this:
ಬೆಳಗಾವಿ(ಆ.09): ಗೋಕಾಕ್ ನಗರಸಭೆ ಮಾಜಿ ಅಧ್ಯಕ್ಷ ಶೇಖ ಫತೇವುಲ್ಲಾ ಕೊತ್ವವಾಲ್(63) ಇಂದು ನಿಧನರಾಗಿದ್ದಾರೆ. ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಕಳೆದ ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೇ ಇಂದು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದು, ಗೆಳೆಯ ಪಾರ್ಥಿವ ಶರೀರ ಹೊತ್ತುತಂದ ಆ್ಯಂಬುಲೆನ್ಸ್ ಮುಂದೆ ಸಚಿವ ರಮೇಶ ಜಾರಕಿಹೊಳಿ ಬಿಕ್ಕಿಬಿಕ್ಕಿ ಕಣ್ಣಿರು ಹಾಕಿದರು.

ಗೋಕಾಕ್ ನಗರಸಭೆಗೆ ಶೇಖ ಫತೇವುಲ್ಲಾ ಕೊತ್ವಾವಾಲ್ ಸತತ ಆರು ಸಲ ಸದಸ್ಯರಾಗಿ ಆಯ್ಕೆಯಾಗಿದ್ದು, ಮೂರು ಅವಧಿಗೆ ಅಧ್ಯಕ್ಷರಾಗಿ ಸಹ ಸೇವೆ ಸಲ್ಲಿಸಿದ್ದಾರೆ. ಗೋಕಾಕ್​​ನಲ್ಲಿ ಸಚಿರ ರಮೇಶ ಜಾರಕಿಹೊಳಿ ಆಪ್ತ ವಲಯದಲ್ಲಿ ಕೋತ್ವಾವಾಲ್ ಗುರುತಿಸಿಕೊಂಡಿದ್ದರು. ಇಂದು ಬೆಳಗ್ಗೆ ಗೆಳೆಯನ ನಿಧನ ಸುದ್ದಿ ಕೇಳಿದ ಸಚಿವ ರಮೇಶ ಜಾರಕಿಹೊಳಿ ತಮ್ಮ ಎಲ್ಲಾ ಅಧಿಕೃತ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದರು.

ಬೆಳಗಾವಿಯ ಖಾಸಗಿ ಆಸ್ಪತ್ರೆಯಿಂದ ಕೊತ್ವವಾಲ್ ಪಾರ್ಥಿವ ಶರೀರ ಗೋಕಾಕ್ ನಗರದ ಬಸವೇಶ್ವರ ವೃತ್ತವನ್ನು ಮೊದಲು ತಲುಪಿತ್ತು. ವೃತ್ತದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಪುಷ್ಪ ನಮನ ಅರ್ಪಿಸುವ ಮೂಲಕ ಗೌರವ ಸಲ್ಲಿಸಿದ್ರು. ನಂತರ ಕುಂಬಾರ ಓಣಿಗೆ ಆ್ಯಂಬುಲೆನ್ಸ್ ಬರುತ್ತಿದ್ದಂತೆ ಸಚಿವ ರಮೇಶ ಜಾರಕಿಹೊಳಿ ಕಣ್ಣಿರು ಹಾಕಿ ಹೂಮಾಲೆ ಅರ್ಪಿಸಿದ್ರು. ಜೆಡಿಎಸ್ ಮುಖಂಡ ಅಶೋಕ್ ಪೂಜಾರಿ ಸಹ ಈ ಸಂದರ್ಭದಲ್ಲಿ ಹಾಜರಿದ್ದು, ಸಚಿವರನ್ನು ಸಮಾಧಾನ ಪಡಿಸಲು ಯತ್ನಿಸಿದ್ರು.

ಕೊರೋನಾ ಸೋಂಕಿತ ವ್ಯಕ್ತಿಯ ನಿಯಮದ ಅನುಸಾರ ಆರೋಗ್ಯ ಇಲಾಖೆಯ ಸಿಬ್ಬಂದಿ ಕೊತ್ವವಾಲ್ ಅಂತ್ಯಕ್ರಿಯೆ ನೇರವೇರಿಸಿದ್ರು. ಅಂತ್ಯಕ್ರಿಯೆ ಮುಗಿಯುವವರೆಗೆ ಸಚಿವ ರಮೇಶ ಜಾರಕಿಹೊಳಿ ಸ್ಥಳದಲ್ಲಿಯೇ ಹಾಜರಿದ್ದು ಗೆಳೆಯನು ಅಂತಿಮ ವಿಧಾಯ ಸಲ್ಲಿಸಿದ್ರು.

ಬೆಳಗಾವಿಯ ಖ್ಯಾತ ವಕೀಲ ಅನಿಲ್ ಮುಳವಾಡಮಠ ಇಂದು ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಬೆಳಗಾವಿ ಬಾರ್ ಅಸೋಸಿಯೇಶನ್ ಅಧ್ಯಕ್ಷರಾಗಿ ಮುಳವಾಡಮಠ ಕೆಲಸ ಮಾಡಿದ್ದರು. ಬೆಳಗಾವಿಯಲ್ಲಿ ಸಾಕಷ್ಟು ಖ್ಯಾತಿಯನ್ನು ಗಳಿಸಿದ್ದರು.

ಇದನ್ನೂ ಓದಿ: ’ಯುವ ಜನರಿಗೆ ಉದ್ಯೋಗ ನೀಡುವ ಶಕ್ತಿ ಮೋದಿಗಿಲ್ಲ’; ಉದ್ಯೋಗ ಒದಗಿಸಿ ಅಭಿಯಾನ ಆರಂಭಿಸಿದ ರಾಹುಲ್ ಗಾಂಧಿಬೆಳಗಾವಿಗೆ ಕರ್ನಾಟಕ ಆಡಳಿತಾತ್ಮಕ ಪೀಠ ಸ್ಥಾಪನೆ ವಿಚಾರದಲ್ಲಿ ಮುಂಚೂಣಿಯಲ್ಲಿ ಹೋರಾಟ ಮಾಡಿದ್ರು. ಅನೇಕ ದಿನಗಳ ಕಾಲ ಕೋರ್ಟ್ ಆವರಣದಲ್ಲಿ ಉಪವಾಸ ಸತ್ಯಾಗ್ರಹ ನಡೆಸುವ ಮೂಲಕ ಸರ್ಕಾರದ ಗಮನ ಸೆಳೆದಿದ್ದರು. ಸರ್ಕಾರ ಇವರ ಬೇಡಿಕೆಗೆ ಮಣಿದು ಬೆಳಗಾವಿಯಲ್ಲಿ ಕೆಎಟಿ ಪೀಠ ಸ್ಥಾಪನೆ ಮಾಡಿದೆ.
Published by: Ganesh Nachikethu
First published: August 9, 2020, 10:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading