ಬಿಜೆಪಿಯಲ್ಲಿ ಹಲವು ಆಕಾಂಕ್ಷಿಗಳಿದ್ದಾರೆ, ಆದ್ರೆ ಮತ್ತೆ ಡಿಸಿಎಂ ಹುದ್ದೆ ಯಾರಿಗೂ ಇಲ್ಲ; ಸಚಿವ ಆರ್​.ಅಶೋಕ್​

ಸಿದ್ದರಾಮಯ್ಯ ವಿಪಕ್ಷ ನಾಯಕರಾಗಿ ಮುಂದುವರಿಯುವುದು ಒಳ್ಳೆಯದು. ಅವರಿದ್ದರೆ ಕಾಂಗ್ರೆಸ್ ಪಕ್ಷ ಮೂರು ಭಾಗಗಳಾಗಿ ಒಡೆಯುತ್ತೆ. ಅವರಿದ್ದ ಪಕ್ಷಗಳಲ್ಲೆಲ್ಲ ಭಾಗ ಮಾಡಿಯೇ ಹೋಗಿದ್ದಾರೆ.

 ಸಚಿವ ಆರ್​ ಅಶೋಕ್​​

ಸಚಿವ ಆರ್​ ಅಶೋಕ್​​

  • Share this:
ಹುಬ್ಬಳ್ಳಿ,(ಡಿ.10): ಉಪಚುನಾವಣೆಯಲ್ಲಿ ಜಯಭೇರಿ ಬಾರಿಸಿರುವ ಬಿಜೆಪಿಯಲ್ಲಿ ಈಗ ಯಾರಿಗೆಲ್ಲಾ ಮಂತ್ರಿಗಿರಿ ಸಿಗಲಿದೆ ಎಂಬ ಕುತೂಹಲ ಇದೆ. ಸಿಎಂ ಬಿ.ಎಸ್​.ಯಡಿಯೂರಪ್ಪ ಅನರ್ಹ ಶಾಸಕರಿಗೆ ಸಚಿವ ಸ್ಥಾನ ನೀಡುವುದಾಗಿ ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಆರ್​.ಅಶೋಕ್, "ಬಿಜೆಪಿಯಲ್ಲಿ ಹಲವು ಆಕಾಂಕ್ಷಿಗಳಿದ್ದಾರೆ. ಆದರೆ ಮತ್ತೆ ಡಿಸಿಎಂ ಹುದ್ದೆ ಯಾರಿಗೂ ಇಲ್ಲ. ಸಚಿವ ಸ್ಥಾನದ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತದೆ," ಎಂದು ಹೇಳಿದ್ದಾರೆ. 

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು,  "ರಾಜ್ಯದ ಜನ ಸುಭದ್ರ ಸರ್ಕಾರ ಇರಬೇಕೆಂದು ಮತ ಹಾಕಿದ್ದಾರೆ. ಯಡಿಯೂರಪ್ಪನವರ ನಾಯಕತ್ವ ಇದೆ. ಬಿಜೆಪಿಗೆ ದೊಡ್ಡ ಶಕ್ತಿ ಬಂದಿದೆ. ಗೆದ್ದವರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ. ಸೋತವರಿಗೆ ಏನು ಸ್ಥಾನಮಾನ ಕೊಡಬೇಕೆಂದು ಸಿಎಂ ಮತ್ತು ಪಕ್ಷದ ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ನಮ್ಮ ಸರ್ಕಾರ ಯಾರಿಂದ ಬಂತೆಂದು ನಮ್ಮೆಲ್ಲ ಶಾಸಕರಿಗೆ ಗೊತ್ತಿದೆ. ಹೀಗಾಗಿ ಸಚಿವ ಸ್ಥಾನಕ್ಕೆ ಒತ್ತಡವಿಲ್ಲ. ಬಿಜೆಪಿ ಸರ್ಕಾರ ಮೂರುವರೆ ವರ್ಷ ಕಲ್ಲುಬಂಡೆಯಂತೆ ಗಟ್ಟಿಯಾಗಿರುತ್ತದೆ,"ಎಂದು ವಿಶ್ವಾಸ ವ್ಯಕ್ತಪಡಿಸಿದರು.

12 ಮಂದಿಗೆ ಮಂತ್ರಿಗಿರಿ ನಿಶ್ಚಿತ; ಇಲ್ಲಿದೆ ಸಂಭಾವ್ಯ ಸಚಿವರ ಪಟ್ಟಿ; ಗುರುವಾರ ಸಂಪುಟ ಸಭೆಯಲ್ಲಿ ಅಂತಿಮ ನಿರ್ಧಾರ

"ಶರತ್ ಬಚ್ಚೇಗೌಡರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲ್ಲ. ಪಕ್ಷ ವಿರೋಧಿ ಕೆಲಸ ಮಾಡಿದರೆ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ," ಎಂದರು.

ಇದೇ ವೇಳೆ, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಆರ್​.ಅಶೋಕ್​ ತೀವ್ರ ವಾಗ್ದಾಳಿ ನಡೆಸಿದರು. "ಸಿದ್ದರಾಮಯ್ಯ, ಮತ್ತವರ ಜ್ಯೋತಿಷ್ಯಾಲಯ ಬಾಯಿ ಮುಚ್ಚಿಕೊಂಡು ಹೊರಟುಹೋಗಿದೆ. ಕಾಂಗ್ರೆಸ್‌ನ ಒಂದು ಗುಂಪು ಸಿದ್ದರಾಮಯ್ಯರನ್ನು ತೆಗೆದುಹಾಕಲು ಮೀಟಿಂಗ್ ಮೇಲೆ ಮೀಟಿಂಗ್ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ವಿಪಕ್ಷ ನಾಯಕರಾಗಿ ಮುಂದುವರಿಯುವುದು ಒಳ್ಳೆಯದು. ಅವರಿದ್ದರೆ ಕಾಂಗ್ರೆಸ್ ಪಕ್ಷ ಮೂರು ಭಾಗಗಳಾಗಿ ಒಡೆಯುತ್ತೆ. ಅವರಿದ್ದ ಪಕ್ಷಗಳಲ್ಲೆಲ್ಲ ಭಾಗ ಮಾಡಿಯೇ ಹೋಗಿದ್ದಾರೆ. ಅವರು ನುಡಿದ ಭವಿಷ್ಯಗಳೆಲ್ಲ ಸುಳ್ಳಾಗುತ್ತೆ. ಅವರು ಬುರುಡೆ ಸಿದ್ದರಾಮಯ್ಯ ಎನ್ನುವುದು ಜಗಜ್ಜಾಹಿರಾಯಿತು," ಎಂದು ಲೇವಡಿ ಮಾಡಿದರು.

ಆಡಿದ ಮಾತನ್ನು ಮಾಡಿ ತೋರಿಸಿದ ಡಿಸಿಎಂ ಲಕ್ಷ್ಮಣ ಸವದಿ
First published: