ಸಿದ್ದರಾಮಯ್ಯ ಜ್ಯೋತಿಷ್ಯಾಲಯ ಬಂದ್ ಆಗಿದೆ, ರೇವಣ್ಣನವರ ನಿಂಬೆ ಹಣ್ಣು ಕೂಡ ಪತ್ತೆ ಇಲ್ಲ; ಆರ್​.ಅಶೋಕ್​ ವ್ಯಂಗ್ಯ

ಕಾಂಗ್ರೆಸ್​​​ನಲ್ಲಿ ಹೊಂದಾಣಿಕೆ ಇರಲಿಲ್ಲ. ಕಾಂಗ್ರೆಸ್ ಕಾರ್ಯಕರ್ತರಲ್ಲೂ ಕೂಡ ಉತ್ಸಾಹ ಇರಲಿಲ್ಲ. ಆದರೆ ನಮ್ಮ ಕಾರ್ಯಕರ್ತರಿಗೆ ಜಾಸ್ತಿ ಉತ್ಸಾಹ ಇತ್ತು. ಬಿಎಸ್​ವೈ ಎಲ್ಲೇ ಹೋದರೂ ನಮ್ಮ ಪಕ್ಷದವರು ಅವರ ಜೊತೆ ಇದ್ದರು. ಆದರೆ ಸಿದ್ದರಾಮಯ್ಯ ಜೊತೆ ಯಾರು ಹೋಗ್ತಿರಲಿಲ್ಲ. 

Latha CG | news18-kannada
Updated:December 9, 2019, 9:09 PM IST
ಸಿದ್ದರಾಮಯ್ಯ ಜ್ಯೋತಿಷ್ಯಾಲಯ ಬಂದ್ ಆಗಿದೆ, ರೇವಣ್ಣನವರ ನಿಂಬೆ ಹಣ್ಣು ಕೂಡ ಪತ್ತೆ ಇಲ್ಲ; ಆರ್​.ಅಶೋಕ್​ ವ್ಯಂಗ್ಯ
ಆರ್​ ಅಶೋಕ್​​
  • Share this:
ಬೆಂಗಳೂರು(ಡಿ.09): ಕಾಂಗ್ರೆಸ್​​​ನಲ್ಲಿ ರಾಜೀನಾಮೆ ಪರ್ವ ಆರಂಭವಾಗಿದೆ.  ಸಿದ್ದರಾಮಯ್ಯ ಜ್ಯೋತಿಷ್ಯಾಲಯ ಬಂದ್ ಆಗಿದೆ. ದಿನೇಶ್ ಗುಂಡೂರಾವ್ ಅವರದ್ದೂ ಕೂಡ ಅದೇ ಹಾದಿ. ಎಚ್​​.ಡಿ.ರೇವಣ್ಣನವರ ನಿಂಬೆಹಣ್ಣು ಪತ್ತೆ ಇಲ್ಲ. ಫಲಿತಾಂಶದಿಂದ ಎಲ್ಲಾ ನಾಪತ್ತೆಯಾಗಿದ್ದಾರೆ ಎಂದು ಸಚಿವ ಆರ್​.ಅಶೋಕ್​ ವ್ಯಂಗ್ಯ ಮಾಡಿದ್ಧಾರೆ.

ಬಿಜೆಪಿ ಕಚೇರಿಯಲ್ಲಿ ಸಿಎಂ ಬಿ.ಎಸ್​.ಯಡಿಯೂರಪ್ಪನವರ ನೇತೃತ್ವದಲ್ಲಿ ಕಾರ್ಯಕರ್ತರ ಸಭೆ ನಡೆಯಿತು. ಈ ವೇಳೆ ಮಾತನಾಡಿದ ಸಚಿವ ಆರ್​.ಅಶೋಕ್​, "ಕೋರ್ಟ್ ಬೆಳವಣಿಗೆಯಿಂದ ಅನರ್ಹ ಪಟ್ಟ ಬಂತು . ಈಗ ಅವೆಲ್ಲದಕ್ಕೂ ಮುಕ್ತಿ ಸಿಕ್ಕಿದೆ. ಬಿಜೆಪಿ ಸರ್ಕಾರಕ್ಕೆ ಸೇತುವೆ ಕಟ್ಟಿದವರು ಜನರು ಎಂದು ಧನ್ಯವಾದ ತಿಳಿಸಿದರು.

ಸೋತಾಗ ರಾಜೀನಾಮೆ ನೀಡೋದು ಮಾಮುಲು; ಸಿದ್ದರಾಮಯ್ಯ-ಗುಂಡೂರಾವ್ ನಿರ್ಧಾರಕ್ಕೆ​ ಶಾಮನೂರು ವ್ಯಂಗ್ಯ

ಕಾಂಗ್ರೆಸ್​​​ನಲ್ಲಿ ಹೊಂದಾಣಿಕೆ ಇರಲಿಲ್ಲ. ಕಾಂಗ್ರೆಸ್ ಕಾರ್ಯಕರ್ತರಲ್ಲೂ ಕೂಡ ಉತ್ಸಾಹ ಇರಲಿಲ್ಲ. ಆದರೆ ನಮ್ಮ ಕಾರ್ಯಕರ್ತರಿಗೆ ಜಾಸ್ತಿ ಉತ್ಸಾಹ ಇತ್ತು. ಬಿಎಸ್​ವೈ ಎಲ್ಲೇ ಹೋದರೂ ನಮ್ಮ ಪಕ್ಷದವರು ಅವರ ಜೊತೆ ಇದ್ದರು. ಆದರೆ ಸಿದ್ದರಾಮಯ್ಯ ಜೊತೆ ಯಾರು ಹೋಗ್ತಿರಲಿಲ್ಲ. ಕೊನೆಗೆ ಇವತ್ತು  ಉತ್ತಮ ಫಲಿತಾಂಶ ಬಂದಿದೆ.  ಹೊಸಕೋಟೆಯಲ್ಲಿ ನಮ್ಮವರೇ ಸ್ಪರ್ಧಿಸಿದ್ದರು. ಹಾಗಾಗಿ ಬಿಜೆಪಿಗೆ ಸೋಲಾಯಿತು. ಅವರ ವಿರುದ್ಧ ವರಿಷ್ಠರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದರು.

ಇದೇ ವೇಳೆ, ಆರ್​.ಅಶೋಕ್​  ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ಬಗ್ಗೆ ವ್ಯಂಗ್ಯ ಮಾಡಿದರು. "ಕಾಂಗ್ರೆಸ್​​ಗೆ ದಾರಿ ಕಾಣದಾಗಿದೆ. ಸಿದ್ದರಾಮಯ್ಯ ಒಬ್ಬಂಟಿ ಆಗಿದ್ದಾರೆ. ಇವಾಗ ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿ ಬಲಿಷ್ಠ ಆಗಿದೆ," ಎಂದರು.

ಕಣ್ಣೀರು, ಕೇಕೆ ಹಾಕಿದರೆ ಗೆಲುವು ಸಿಗಲ್ಲ; ಕಾಂಗ್ರೆಸ್​​-ಜೆಡಿಎಸ್ ಬಗ್ಗೆ ಶ್ರೀನಿವಾಸ ಪೂಜಾರಿ ವ್ಯಂಗ್ಯ
First published:December 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ