R Ashok: ವಿಪಕ್ಷಗಳು ಸದಾ ಟೀಕೆ ಮಾಡುವ ಪ್ರವೃತ್ತಿಗೆ ಬಂದುಬಿಟ್ಟಿವೆ; ಸಚಿವ ಆರ್​.ಅಶೋಕ್​ ವಾಗ್ದಾಳಿ

ರಾಜ್ಯದಲ್ಲಿ ತೆಗೆದುಕೊಂಡ ಕಠಿಣ ನಿರ್ಧಾರಗಳಿಂದ ಕೊರೋನಾ ನಿಯಂತ್ರಣಕ್ಕೆ ಬಂದಿದೆ. ಇನ್ನಷ್ಟು ಕಠಿಣ ನಿರ್ಧಾರಗಳನ್ನು ನಾವು ತೆಗೆದುಕೊಳ್ತೇವೆ. ಮಾರ್ಚ್ ತಿಂಗಳಲ್ಲಿ 1970 ಆಕ್ಸಿಜನೇಟೆಡ್ ಬೆಡ್ ಮಾತ್ರ ಇದ್ದಿದ್ದು, ಈಗ  24 ಸಾವಿರ ಆಕ್ಸಿಜನೇಟೆಡ್ ಬೆಡ್ ಗಳು ಲಭ್ಯವಿದೆ. ಇಷ್ಟು ದೊಡ್ಡ ಏರಿಕೆ ಮಾಡಿರುವುದು ನಮ್ಮ ಸರ್ಕಾರ, ಉಸ್ತುವಾರಿ ಸಚಿವರು ಎಂದರು.

ಸಚಿವ ಆರ್​.ಅಶೋಕ್

ಸಚಿವ ಆರ್​.ಅಶೋಕ್

 • Share this:
  ಬೆಂಗಳೂರು(ಮೇ 20): ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಪ್ರತಿನಿಧಿಗಳು ಇಂದು ಪತ್ರಿಕಾಗೋಷ್ಠಿ ನಡೆಸಿದರು. ಸಂಸದ ತೇಜಸ್ವಿ ಸೂರ್ಯ(Bengaluru South MP Tejasvai Surya), ಸಚಿವ ಆರ್ ಅಶೋಕ್(Revenue Minister R Ashoka), ಶಾಸಕ ರವಿ ಸುಬ್ರಹ್ಮಣ್ಯ, ಶಾಸಕ ಉದಯ ಗರುಡಾಚಾರ್, ಬಿಜೆಪಿ ದಕ್ಷಿಣ ಜಿಲ್ಲಾ ಅಧ್ಯಕ್ಷ ಎನ್ ಆರ್ ರಮೇಶ್ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಕಂದಾಯ ಸಚಿವ ಆರ್​. ಅಶೋಕ್ ವಿಪಕ್ಷಗಳ ವಿರುದ್ಧ ಹರಿಹಾಯ್ದರು.  ನಮ್ಮ ಕೇಂದ್ರ ರಾಜ್ಯ ಸರ್ಕಾರ ನಿರಂತರವಾಗಿ ಕೊರೋನಾ ವಿರುದ್ದದ ಹೋರಾಟದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡ್ತಿವೆ.  ವಿರೋಧ ಪಕ್ಷಗಳು ಸದಾ ಟೀಕೆ ಮಾಡುವ‌ ಪ್ರವೃತ್ತಿಗೆ ಬಂದುಬಿಟ್ಟಿವೆ ಎಂದು ತೀವ್ರ ವಾಗ್ದಾಳಿ ನಡೆಸಿದರು.

  ಇಂಥ ಯುದ್ಧದ ಸಂದರ್ಭದಲ್ಲಿ ಒಟ್ಟಾಗಿ ನಿಲ್ಲಬೇಕು. ಆದರೆ ವಿಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡ್ತಿವೆ, ಇದನ್ನೇ ಬಂಡವಾಳ ಮಾಡಿಕೊಂಡಿವೆ ಎಂದು ಕಿಡಿಕಾರಿದರು. ಇಂಥ ಕಷ್ಟದ ಸಂದರ್ಭದಲ್ಲೂ ನಮ್ಮ ನಾಯಕರು ಜನರ ಜೊತೆಗೆ ಬೆರೆತು ಕೆಲಸ ಮಾಡ್ತಿದ್ದಾರೆ ಎಂದು ಹೇಳಿದರು.

  ಮುಂದುವರೆದ ಅವರು, ದೇಶದಲ್ಲಿ 20 ಸಾವಿರ ವೆಂಟಿಲೇಟರ್(Ventilators) ಇತ್ತು. ಅದನ್ನು 80 ಸಾವಿರಕ್ಕೆ ನಾಲ್ಕು ಪಟ್ಟು ಹೆಚ್ಚಳ ಮಾಡಿದ್ರು. ಪ್ರಧಾನಿ ತುರ್ತಾಗಿ ಕ್ರಮವಹಿಸಿದ್ದರಿಂದ ಎಲ್ಲಾ ರಾಜ್ಯಗಳಿಗೆ ತಾರತಮ್ಯ ಮಾಡದೇ ವ್ಯವಸ್ಥೆ ಮಾಡಿದ್ದಾರೆ. 32 ಹೊಸ ಆಕ್ಸಿಜನ್ ಘಟಕ(Oxygen Unit) ಪ್ರಾರಂಭ ಮಾಡಿದೆ. 18 ಕೋಟಿ ಜನರಿಗೆ ಲಸಿಕೆ ನೀಡುವ ಮೂಲಕ ಬೇರೆ ದೇಶಗಳಿಗೂ ಲಸಿಕೆ ನೀಡಿದ ಹೆಗ್ಗಳಿಕೆ ನಮ್ಮದು. ಇಸ್ರೇಲ್ ಕೂಡ ಯುದ್ಧದ ಸಂದರ್ಭದಲ್ಲೂ ನಮಗೆ ಸಹಾಯ ಮಾಡ್ತಿದೆ. ಪ್ರಧಾನಿ ಕೈಗೊಂಡ ಕ್ರಮಗಳ ಮೂಲಕ ನಿಯಂತ್ರಣಕ್ಕೆ ಬಂದಿದೆ ಎಂದರು.

  Tejasvi Surya: 25 ಸಂಸದರು ಏನ್ಮಾಡ್ತಿದ್ದಾರೆ ಎನ್ನುವವರಿಗೆ ನಾನು ಉತ್ತರ ಕೊಡ್ತೇನೆ; ಸಂಸದ ತೇಜಸ್ವಿ ಸೂರ್ಯ

  ರಾಜ್ಯದಲ್ಲಿ ತೆಗೆದುಕೊಂಡ ಕಠಿಣ ನಿರ್ಧಾರಗಳಿಂದ ಕೊರೋನಾ ನಿಯಂತ್ರಣಕ್ಕೆ ಬಂದಿದೆ. ಇನ್ನಷ್ಟು ಕಠಿಣ ನಿರ್ಧಾರಗಳನ್ನು ನಾವು ತೆಗೆದುಕೊಳ್ತೇವೆ. ಮಾರ್ಚ್ ತಿಂಗಳಲ್ಲಿ 1970 ಆಕ್ಸಿಜನೇಟೆಡ್ ಬೆಡ್ ಮಾತ್ರ ಇದ್ದಿದ್ದು, ಈಗ  24 ಸಾವಿರ ಆಕ್ಸಿಜನೇಟೆಡ್ ಬೆಡ್ ಗಳು(Oxygenated Beds) ಲಭ್ಯವಿದೆ. ಇಷ್ಟು ದೊಡ್ಡ ಏರಿಕೆ ಮಾಡಿರುವುದು ನಮ್ಮ ಸರ್ಕಾರ, ಉಸ್ತುವಾರಿ ಸಚಿವರು.  444 ಐಸಿಯು ಮಾತ್ರ ಇದ್ದಿದ್ದು ಈಗ 1445 ಐಸಿಯು ಬೆಡ್​ಗಳಿವೆ.  610 ಮಾತ್ರ ವೆಂಟಿಲೇಟರ್ ಬೆಡ್ ಇದ್ದವು, 1248 ವೆಂಟಿಲೇಟರ್ ಬೆಡ್ ಗಳು ನಮ್ಮ ಬಳಿ ಇವೆ.  10-15 ಪಟ್ಟು ಬೆಡ್ ಗಳನ್ನು ಜಾಸ್ತಿ ಮಾಡಿರುವುದು ಸರ್ಕಾರ ಜನರ ಪರವಾಗಿದೆ ಎನ್ನೋದಕ್ಕೆ ಉದಾಹರಣೆ ಎಂದು ಹೇಳಿದರು.

  ಆಮ್ಲಜನಕ ಪ್ರಮಾಣವನ್ನು 945 ಮೆಟ್ರಿಕ್​​ ಟನ್ ಇಂದ 1200 ಮೆಟ್ರಿಕ್​​ ಟನ್ ಗೆ ಕೇಂದ್ರ ಸರ್ಕಾರವೂ ಕೂಡ ಹೆಚ್ಚಿಸಿದೆ. ಜಮ್​ಶೆಡ್​​ಪುರದಿಂದ 120 ಟನ್ ಆಮ್ಲಜನಕ ಪೂರೈಕೆ ಆಗ್ತಿದೆ. 127 ಕಡೆಗಳಲ್ಲಿ ನಾವು ಆಕ್ಸಿಜನ್ ಘಟಕ ಸ್ಥಾಪನೆ ಮಾಡ್ತೇವೆ. 62 ಆಕ್ಸಿಜನ್ ಘಟಕಕ್ಕೆ ಕೇಂದ್ರ ಸರ್ಕಾರದಿಂದ ಹಂಚಿಕೆ ಆಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(NHAI), ವಿವಿಧ ಸಿಎಸ್ಆರ್ ಫಂಡ್(CSR Fund) ನಿಂದಲೂ ಆಕ್ಸಿಜನ್ ಘಟಕ ಸ್ಥಾಪನೆ ಮಾಡ್ತಿದ್ದೇವೆ.  ಜಿಲ್ಲೆಗಳಲ್ಲಿ ಆಕ್ಸಿಜನ್ ನಿವಾರಣೆಗೆ 10 ಸಾವಿರ ಸಿಲಿಂಡರ್ ಪೂರೈಕೆ ಮಾಡ್ತಿದ್ದೇವೆ.  ಯಾವ ಯಾವ ಜಿಲ್ಲೆಗಳಲ್ಲಿ ಕೋವಿಡ್ ಹೆಚ್ಚಾಗ್ತಿದೆ ಅಲ್ಲಿಗೆ ವ್ಯವಸ್ಥೆ ಮಾಡ್ತಿದ್ದೇವೆ ಎಂದರು.

  ರೆಮ್ಡಿಸಿವಿರ್(Remdesivir) ಕೊರತೆ ಇದ್ದ ಕಾರಣ 3.01 ಲಕ್ಷ ಹಂಚಿಕೆ ಮಾಡಲಾಗಿದೆ. ಮೂರನೇ ಅಲೆ ಎದುರಿಸುವುದಕ್ಕೆ ನಾವೂ ಕೂಡ ಸಿದ್ದರಾಗಿದ್ದೇವೆ. ಮಕ್ಕಳಿಗೆ ಕೋವಿಡ್(COVID-19) ಎದುರಿಸಲು ಪ್ರತಿ ತಾಲೂಕಲ್ಲೂ ಮಕ್ಕಳ ಆರೈಕೆ ಕೇಂದ್ರ ಸ್ಥಾಪನೆಗೆ ಜಿಲ್ಲಾಡಳಿತಗಳಿಗೆ ಸೂಚನೆ‌ ನೀಡಲಾಗಿದೆ. ಬೇಕಾದಂತ ಹಣ ಬಿಡುಗಡೆ ಕೂಡ ಜಿಲ್ಲಾಧಿಕಾರಿಗಳ ಅಕೌಂಟ್ ಗೆ ಹಾಕಲಾಗಿದೆ. ನಮ್ಮ‌ ಪಕ್ಷ ಕೂಡ ಕೊರೋನಾ ತಡೆಗಟ್ಟಲು ಹಿಂದೆ ಬಿದ್ದಿಲ್ಲ ಎಂದು ಸಮರ್ಥಿಸಿಕೊಂಡರು.
  Published by:Latha CG
  First published: