ಮಹಾರಾಷ್ಟ್ರದ್ದು ಹುಚ್ಚರ ಸರ್ಕಾರ, ಅವರ ಗೊಡ್ಡು ಬೆದರಿಕೆಗೆ ಹೆದರಲ್ಲ; ಸಚಿವ ಆರ್​​.ಅಶೋಕ್​

ಪ್ರತಿಮೆ ನಿರ್ಮಾಣವನ್ನು ಟ್ರಸ್ಟ್​ನವರೇ ಸ್ಥಗಿತಗೊಳಿಸಿರಬಹುದು. ಪ್ರತಿಮೆ ನಿರ್ಮಿಸಲು ಗೋಮಾಳ ಭೂಮಿ ಕೊಡಲಾಗಿದೆ. ಪ್ರತಿಮೆ ನಿರ್ಮಾಣಕ್ಕೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ನೀಡಿದ್ದು, ಬೋರ್​​ವೆಲ್ ತೋಡಿಸಲಾಗಿದೆ. 2 ಕಿ.ಮೀ ರಸ್ತೆ ನಿರ್ಮಿಸಲಾಗಿದೆ. ಇವೆಲ್ಲವೂ ಅನಧಿಕೃತ ಎಂದು ಹೇಳಿದರು.

Latha CG | news18-kannada
Updated:January 1, 2020, 2:52 PM IST
ಮಹಾರಾಷ್ಟ್ರದ್ದು ಹುಚ್ಚರ ಸರ್ಕಾರ, ಅವರ ಗೊಡ್ಡು ಬೆದರಿಕೆಗೆ ಹೆದರಲ್ಲ; ಸಚಿವ ಆರ್​​.ಅಶೋಕ್​
ಸಚಿವ ಆರ್​.ಅಶೋಕ್​
  • Share this:
ಬೆಂಗಳೂರು(ಜ.01): ಮಹಾರಾಷ್ಟ್ರದ್ದು ಹುಚ್ಚರ ಸರ್ಕಾರ‌. ಗಡಿ ವಿಚಾರ 30-40 ವರ್ಷಗಳ ಹಿಂದೆಯೇ ತೀರ್ಮಾನ ಆಗಿದೆ. ಉದ್ಧವ್ ಠಾಕ್ರೆ ಹೇಳಿಕೆ ಅವರಿಗೆ ಶೋಭೆ ತರಲ್ಲ. ಅವರು ಗೌರವವಾಗಿ ಆಡಳಿತ ನಡೆಸಲಿ. ಮಹಾರಾಷ್ಟ್ರದ ಗೊಡ್ಡು ಬೆದರಿಕೆಗೆ ನಾವು ಹೆದರಲ್ಲ ಎಂದು ಕಂದಾಯ ಸಚಿವ ಆರ್​.ಅಶೋಕ್​ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೊಂದಲ ಎಬ್ಬಿಸಲು‌ ಮಹಾರಾಷ್ಟ್ರ ಸರ್ಕಾರ ಹೊರಟಿದೆ. ಒಂದಿಂಚೂ ಜಾಗವನ್ನು ಮಹಾರಾಷ್ಟ್ರಕ್ಕೆ ಬಿಟ್ಟು ಕೊಡಲ್ಲ. ಮಹಾರಾಷ್ಟ್ರಕ್ಕೆ ಯಾವ ರೀತಿ ಉತ್ತರ ಕೊಡಬೇಕೋ ಕೊಡುತ್ತೇವೆ ಎಂದರು.

ರಾಮನಗರದ ಕನಕಪುರ ಬಳಿಯ ಕಪಾಲ ಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಾಣ ಸ್ಥಗಿತಗೊಂಡಿದೆ. ಈ ವಿಚಾರವಾಗಿ ಕಂದಾಯ ಸಚಿವ ಆರ್​.ಅಶೋಕ್​​ ಪ್ರತಿಕ್ರಿಯೆ ನೀಡಿದ್ದಾರೆ. ಪ್ರತಿಮೆ ನಿರ್ಮಾಣವನ್ನು ಟ್ರಸ್ಟ್​ನವರೇ ಸ್ಥಗಿತಗೊಳಿಸಿರಬಹುದು. ಪ್ರತಿಮೆ ನಿರ್ಮಿಸಲು ಗೋಮಾಳ ಭೂಮಿ ಕೊಡಲಾಗಿದೆ. ಪ್ರತಿಮೆ ನಿರ್ಮಾಣಕ್ಕೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ನೀಡಿದ್ದು, ಬೋರ್​​ವೆಲ್ ತೋಡಿಸಲಾಗಿದೆ. 2 ಕಿ.ಮೀ ರಸ್ತೆ ನಿರ್ಮಿಸಲಾಗಿದೆ. ಇವೆಲ್ಲವೂ ಅನಧಿಕೃತ ಎಂದು ಹೇಳಿದರು.

ಈ ವರ್ಷವೇ ಚಂದ್ರಯಾನ-3 ಮತ್ತು ಗಗನಯಾನ ಯೋಜನೆಗಳ ಉಡಾವಣೆ; ಇಸ್ರೋ ಅಧ್ಯಕ್ಷ ಕೆ.ಶಿವನ್​ ಘೋಷಣೆ

ಈ ಬಗ್ಗೆ ರಾಮನಗರ ಡಿಸಿ, ಕನಕಪುರ ತಹಸೀಲ್ದಾರ್​ರಿಂದ ವರದಿ ಕೇಳಿದ್ದೇನೆ. ನಿನ್ನೆಯೂ ಅಧಿಕಾರಿಗಳು ಭೇಟಿ ಮಾಡಿ ಮೌಖಿಕ ವಿವರ ಕೊಟ್ಟರು. ವರದಿ ರೂಪದಲ್ಲಿ ವಿವರ ಕೊಡಲು ಅಧಿಕಾರಿಗಳಿಗೆ ತಿಳಿಸಿದ್ದೇನೆ. ವರದಿ ಬಂದ ಬಳಿಕ‌ ಸರ್ಕಾರ ಯಾವ ಕ್ರಮ ಅಂತ‌ ನಿರ್ಧರಿಸಲಿದೆ ಎಂದರು.

ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಅಸಭ್ಯ ವರ್ತನೆ ತೋರಿದ ಪುಂಡರ ವಿರುದ್ಧ ಆರ್​.ಅಶೋಕ್​ ಕಿಡಿಕಾರಿದರು.  ನಿನ್ನೆ ಕೆಲವು ಯುವಕರಿಂದ ಕಿರುಕುಳ ಆಗಿದೆ. ಕಿಡಿಗೇಡಿಗಳ‌ ಬಂಧನಕ್ಕೆ ಕ್ರಮ ಕೈಗೊಳ್ಳುತ್ತೇವೆ. ನಗರ ಪೊಲೀಸ್ ಆಯುಕ್ತರ ಜೊತೆ ಚರ್ಚಿಸುತ್ತೇವೆ. ಇದನ್ನು ಮುಂದಕ್ಕೆ ಹೀಗೆ ಬಿಟ್ಟರೆ ಸಮಸ್ಯೆಯಾಗುತ್ತದೆ.  ಹೊಸ ವರ್ಷಾಚರಣೆಗೆ ಪರ್ಯಾಯ ಸ್ಥಳ ನಿಗದಿ ಮಾಡುವ ಬಗ್ಗೆ ಚಿಂತನೆ ನಡೆಸಲಾಗುತ್ತದೆ. ಮುಂದಿನ ವರ್ಷ ಪ್ಯಾಲೇಸ್​ ಗ್ರೌಂಡ್​ನಲ್ಲಿ ಹೊಸ ವರ್ಷಾಚರಣೆ ಅವಕಾಶ ಕಲ್ಪಿಸಲು ಚರ್ಚಿಸುತ್ತೇವೆ ಎಂದರು.

ರಾಜಕೀಯದಿಂದ ದೂರ ಇರುತ್ತೇವೆ, ಸರ್ಕಾರದ ಆದೇಶವನ್ನು ಮಾತ್ರ ಪಾಲಿಸುತ್ತೇವೆ- ಬಿಪಿನ್ ರಾವತ್ 

 

 
First published:January 1, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ