ಡಿಕೆಶಿಗಾಗಿ ದೇಶದ ಕಾನೂನು ಬದಲಿಸಲು ಸಾಧ್ಯವಿಲ್ಲ; ಆರ್​.ಅಶೋಕ್​​ ವಾಗ್ದಾಳಿ

ನ್ಯಾಯ, ರಸ್ತೆ, ಪರಿಸರಕ್ಕಾಗಿ ಹೋರಾಟ ಮಾಡುವುದನ್ನು ನೋಡಿದ್ದೇನೆ. ಆದರೆ ಒಬ್ಬ ವ್ಯಕ್ತಿಗೆ ಹೋರಾಟ ಮಾಡೋದು ಸರಿಯಲ್ಲ. ಜಾತಿ ವಿಚಾರಕ್ಕೂ ಕೇಂದ್ರ ಸರ್ಕಾರಕ್ಕೂ ಸಂಬಂಧ ಇಲ್ಲ. ಈ ತರ ಪ್ರತಿಭಟನೆ ನಡೆಸುವುದು ಸರಿಯಲ್ಲ. ಹೀಗೆ ಜಾತಿ ರಾಜಕಾರಣ ಮಾಡುವುದನ್ನು ಜನ ಒಪ್ಪಲ್ಲ-ಆರ್​. ಅಶೋಕ್​

Latha CG | news18-kannada
Updated:September 11, 2019, 5:44 PM IST
ಡಿಕೆಶಿಗಾಗಿ ದೇಶದ ಕಾನೂನು ಬದಲಿಸಲು ಸಾಧ್ಯವಿಲ್ಲ; ಆರ್​.ಅಶೋಕ್​​ ವಾಗ್ದಾಳಿ
ಸಚಿವ ಆರ್​.ಅಶೋಕ್​
  • Share this:
ಬೆಂಗಳೂರು(ಸೆ.11): ಡಿಕೆಶಿಗಾಗಿ ದೇಶದ ಕಾನೂನು ಬದಲಿಸಲು ಸಾಧ್ಯವಿಲ್ಲ. ಸಿಎಂ ಬಿಎಸ್​ ಯಡಿಯೂರಪ್ಪನವರನ್ನು ಈ ಹಿಂದೆ ಕಾಂಗ್ರೆಸ್ ಸರ್ಕಾರ ಬಂಧಿಸಿತ್ತು. ಡಿಕೆಶಿ ಆತ್ಮೀಯ ಜನಾರ್ದನ ರೆಡ್ಡಿಯನ್ನೂ ಬಂಧಿಸಿದ್ದರು. ಆಗ ಕಾಂಗ್ರೆಸ್ ಸರ್ಕಾರ ಕಾನೂನು ಬದಲಿಸಿರಲಿಲ್ಲ.  ನ್ಯಾಯಾಲಯದಲ್ಲಿ ಅದಕ್ಕೆ ವ್ಯವಸ್ಥೆ ಇದೆ. ತಪ್ಪಿತಸ್ಥ ಅಲ್ಲ ಎಂದರೆ ಆರಾಮಾಗಿ ಓಡಾಡಬಹುದು. ದೆಹಲಿಯಲ್ಲಿ ಸಿಕ್ಕ ಹಣ ಯಾರದ್ದೆಂದು  ಹೇಳಲಿ ಎಂದು ಕಂದಾಯ ಸಚಿವ ಆರ್​.ಅಶೋಕ್​​ ವಾಗ್ದಾಳಿ ನಡೆಸಿದರು.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ ನಾಯಕರ ವಿರುದ್ಧ ಕಿಡಿಕಾರಿದರು. ಎಲ್ಲರಿಗೂ ಒಂದೊಂದು ಕಾನೂನು ಬದಲಿಸಲು ಆಗುತ್ತಾ? ಎಂದು ಅಶೋಕ್​ ಪ್ರಶ್ನಿಸಿದರು. ಒಕ್ಕಲಿಗರ ದಮನ ಮಾಡುವ ಪ್ರಯತ್ನ ಮಾಡುತ್ತಿಲ್ಲ. ಕಾಂಗ್ರೆಸ್​ನವರು ಜಾತಿ ಹೆಸರಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಇದು ಅಕ್ಷಮ್ಯ ಅಪರಾಧ. ನಾಳೆ ಬೇರೆ ಜಾತಿಯವರನ್ನು ಬಂಧಿಸಿದರೆ ಅವರೂ ಪ್ರತಿಭಟಿಸುತ್ತಾರೆ. ನ್ಯಾಯ, ರಸ್ತೆ, ಪರಿಸರಕ್ಕಾಗಿ ಹೋರಾಟ ಮಾಡುವುದನ್ನು ನೋಡಿದ್ದೇನೆ. ಆದರೆ ಒಬ್ಬ ವ್ಯಕ್ತಿಗೆ ಹೋರಾಟ ಮಾಡೋದು ಸರಿಯಲ್ಲ. ಜಾತಿ ವಿಚಾರಕ್ಕೂ ಕೇಂದ್ರ ಸರ್ಕಾರಕ್ಕೂ ಸಂಬಂಧ ಇಲ್ಲ. ಈ ತರ ಪ್ರತಿಭಟನೆ ನಡೆಸುವುದು ಸರಿಯಲ್ಲ. ಹೀಗೆ ಜಾತಿ ರಾಜಕಾರಣ ಮಾಡುವುದನ್ನು ಜನ ಒಪ್ಪಲ್ಲ ಎಂದರು.

ಬಿಜೆಪಿ ಒಕ್ಕಲಿಗರಿಗೆ ಅನ್ಯಾಯ ಮಾಡುತ್ತಿದೆ, ಸಮುದಾಯಕ್ಕೆ ಸಮಸ್ಯೆ ಎದುರಾದರೆ ಹೋರಾಟ ತೀವ್ರವಾಗಲಿದೆ; ನಂಜಾವಧೂತ ಸ್ವಾಮೀಜಿ ಎಚ್ಚರಿಕೆ

ಇದೇ ವೇಳೆ, ಅಶೋಕ್​ ನೆರೆ ಹಾನಿ ಬಗ್ಗೆ ಮಾಹಿತಿ ನೀಡಿದರು. ರಾಜ್ಯದಲ್ಲಿ ಜನ ಸಂಕಷ್ಟದಲ್ಲಿ ಇದ್ದಾರೆ. ಅಂದಾಜು 38461 ಕೋಟಿ ನಷ್ಟ ಆಗಿದೆ. ಖಾಸಗಿ   ಶಾಲೆ ಆಸ್ತಿ ಹಾನಿ ಬಗ್ಗೆ ಕೇಂದ್ರಕ್ಕೆ ಮನವರಿಕೆ ಮಾಡಲಾಗಿದೆ. 2,47,628 ಮನೆಗಳು ಹಾನಿಯಾಗಿವೆ.  8.88 ಲಕ್ಷ‌ ಹೆಕ್ಟೇರ್​ ಕೃಷಿ ಪ್ರದೇಶ ಹಾನಿಯಾಗಿದೆ. 1550 ಸಣ್ಣ ನೀರಾವರಿ ಟ್ಯಾಂಕ್​ಗಳು, 10,990 ಅಂಗನವಾಡಿ ಹಾಳಾಗಿವೆ. 26 ಕಾಳಜಿ ಕೇಂದ್ರದಲ್ಲಿ 5397 ಜನರಿದ್ದಾರೆ. 2 ಲಕ್ಷ 258 ಕುಟುಂಬಗಳಿಗೆ 10 ಸಾವಿರ ರೂ. ನೀಡಲಾಗಿದೆ. 1929 ಕುಟುಂಬಗಳು ಮಾತ್ರ ಬಾಕಿ ಇದೆ ಎಂದು ಹೇಳಿದರು.

ಎಲ್ಲಾ ಜಿಲ್ಲೆಗಳ ಪಿಡಿ ಖಾತೆಯಲ್ಲಿ ಎಲ್ಲಾ ಖಾತೆಯಲ್ಲಿ 380.44 ಕೋಟಿ ರೂ. ಇದೆ. ಒಟ್ಟು 414 ಕೋಟಿ‌ ರೂ.‌ ಒಟ್ಟು ಬಿಡುಗಡೆಯಾಗಿದೆ. ಬಿದ್ದ ಮನೆಗಳಿಗೆ 25,000 ರೂ. ಬಿಡುಗಡೆಗೆ ಸೂಚನೆ ನೀಡಲಾಗಿದೆ. ಹಂತ ಹಂತವಾಗಿ 5 ಲಕ್ಷ ರೂ. ನೀಡಲಾಗುವುದು. ಮೂರು ಹಂತಗಳಲ್ಲಿ  ಮನೆ ನಷ್ಟವಾದವರನ್ನು ಗುರುತಿಸಲಾಗಿದೆ. ಆರ್​ಟಿಜಿಎಸ್​ ಮೂಲಕ ನೇರವಾಗಿ ಅವರ ಅಕೌಂಟ್ ಗೆ ಹಣ ನೀಡಲಾಗಿದೆ. ಸರಳವಾಗಿ ನೋಂದಣಿ ಮಾಡಿಸಲು ಆನ್ ಲೈನ್ ಮೂಲಕ ನೋಂದಣಿ ಮಾಡಿಸಲು ಕ್ರಮ ಕೈಗೊಳ್ಳಲಾಗಿದೆ. ಇಸಿ ಆನ್​​ ಲೈನ್​​ನಲ್ಲಿ ತೆಗೆದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ ಎಂದರು.

ಅಂತರ್ಜಾತಿ ಹಾಗೂ ಅಂತರ್​ ಧರ್ಮೀಯ ವಿವಾಹಗಳು ಸಮಾಜವಾದಕ್ಕೆ ಪೂರಕ; ಸುಪ್ರೀಂ ಕೋರ್ಟ್​ ಅಭಿಮತ

94 ಸಿಸಿ ಬೆಂಗಳೂರು ಸರ್ಕಾರ ಜಾಗದಲ್ಲಿ ಮನೆ ಕಟ್ಟಿಕೊಂಡಿರುವವರಿಗೆ 10 ಸಾವಿರ ಜನರಿಗೆ ಹಕ್ಕುಪತ್ರ ಮತ್ತು ರಿಜಿಸ್ಟ್ರೇಷನ್ ಪತ್ರ ನೀಡಲು ತೀರ್ಮಾನ ಮಾಡಲಾಗಿದೆ. 52813 ಅರ್ಜಿಗಳು ಬಂದಿವೆ. 15,296 ಅರ್ಜಿ ಬಾಕಿ ಇವೆ. ಕೆಲವು ಕಡೆ ಬೋಗಸ್ ಸರ್ಟಿಫಿಕೇಟ್ ಮಾಡಲಾಗುತ್ತಿದೆ. ಅದರಲ್ಲಿ ಡಿಜಿಟಲೈಸ್ ವ್ಯವಸ್ಥೆ ಮಾಡಲಾಗುತ್ತಿದೆ. ಹಕ್ಕುಪತ್ರಕ್ಕೆ ಡಿಜಿಟಲ್ ಕಾರ್ಡ್ ಅಳವಡಿಸಲು ಚಿಂತನೆ ನಡೆಸಲಾಗಿದೆ. ಬಡವರಿಗೆ ಸ್ವಂತ ಮನೆಯಾಗಬೇಕು, ಅದಕ್ಕಾಗಿ ಕ್ರಮ ಎಂದು ಆರ್​.ಅಶೋಕ್​ ಹೇಳಿದರು.
First published:September 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ