ಬೆಂಗಳೂರು(ಡಿ.22): ಕಳೆದ ಕೆಲವು ದಿನಗಳಿಂದ ಕಾಂಗ್ರೆಸ್ ಸೇರಿ ಕೆಲ ಪಕ್ಷಗಳಿಂದ ಗಲಭೆ ಎಬ್ಬಿಸುವ ಕೆಲಸ ಆಗುತ್ತಿದೆ. ಪೌರತ್ವ ತಿದ್ದುಪಡಿ ಕಾಯ್ದೆಗೆ ರಾಷ್ಟ್ರಪತಿ ಅಂಕಿತ ಹಾಕಿ ಆಯ್ತು. ರಾಷ್ಟ್ರಪತಿ ಅಂಕಿತ ಬೀಳುವವರೆಗೂ ಕಾಂಗ್ರೆಸ್ ಏನು ಮಾಡುತ್ತಿತ್ತು? ಕಾಂಗ್ರೆಸ್ನವರ ವಾದವನ್ನು ಅರ್ಥ ಮಾಡಿಕೊಳ್ಳಲು ಆಗುತ್ತಿಲ್ಲ. ಅಲ್ಪಸಂಖ್ಯಾತರನ್ನು ತಪ್ಪು ದಾರಿಗೆಳೆಯುವ ಪ್ರಯತ್ನ ಮಾಡುತ್ತಿದೆ. ಕೇವಲ ದೊಂಬಿ ಎಬ್ಬಿಸುವುದೇ ಕಾಂಗ್ರೆಸ್ನವರ ಉದ್ದೇಶ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಆಫ್ಘಾನಿಸ್ತಾನದಲ್ಲಿ ಕೇವಲ 500 ಸಿಖ್, ಹಿಂದುಗಳಿದ್ದಾರೆ. ಪಾಕ್ ನಲ್ಲಿ 1947ರಲ್ಲಿ ಶೇ.13ರಷ್ಟು ಹಿಂದುಗಳಿದ್ದರು. 2015ರಲ್ಲಿ ಪಾಕ್ನಲ್ಲಿ ಶೇ.96 ಮುಸ್ಲಿಮರು, ಹಿಂದುಗಳೀಗ ಶೇ. 1.06 ಗಳಿದ್ದಾರೆ. ಶೇ.22 ರಷ್ಟು ಹಿಂದೂಗಳು ಬಾಂಗ್ಲಾದೇಶದಲ್ಲಿದ್ದಾರೆ ಎಂದು ಹೇಳಿದರು.
ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡಿದವರಿಗೆ ಗುಂಡಿಕ್ಕಿ; ಹೇಳಿಕೆ ಸಮರ್ಥಿಸಿಕೊಂಡ ಸಚಿವ ಸುರೇಶ್ ಅಂಗಡಿ
ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ತಪ್ಪು ದಾರಿಗೆಳೆಯುವ ಪ್ರಯತ್ನ ಮಾಡುತ್ತಿದೆ. ಒಂದೆರಡು ರಾಜ್ಯಗಳನ್ನ ಹೊರತುಪಡಿಸಿದರೆ ಕಾಂಗ್ರೆಸ್ಗೆ ದೇಶದಲ್ಲಿ ವಿಳಾಸ ಇಲ್ಲ. ಪೌರತ್ವ ತಿದ್ದುಪಡಿ ಕಾಯ್ದೆ ಪಾಸ್ ಆಗುವ ಮುನ್ನ ಗುಲಾಂ ನಬಿ ಆಜಾದ್ ಅವರಿಗೆ ಕೇಳಿದ್ದೆ. ಈ ಕಾಯ್ದೆಯಿಂದ ದೇಶದ ಅಲ್ಪಸಂಖ್ಯಾತರಿಗೆ ತೊಂದರೆ ಆದ ಒಂದೇ ಒಂದು ಉದಾಹರಣೆ ನೀಡಿ ಎಂದು ಕೇಳಿದ್ದೆ. ಪಾರ್ಲಿಮೆಂಟ್ ನಲ್ಲಿ ಇಲ್ಲಿಯವರೆಗೆ ಒಂದು ಉದಾಹರಣೆಯನ್ನು ನೀಡಲು ಸಾಧ್ಯವಾಗಿಲ್ಲ ಎಂದರು.
ದೇಶದಲ್ಲಿನ ವಾತಾವರಣದಿಂದಾಗಿ ಈ ರಾಷ್ಟ್ರ ಜಾತ್ಯಾತೀತ ಆಗಿದೆ. ಜವಾಹರಲಾಲ್ ನೆಹರೂ, ಇಂದಿರಾಗಾಂಧಿಯಿಂದ ಈ ದೇಶ ಜಾತ್ಯಾತೀತ ಆಗಿಲ್ಲ. ಸೆಕ್ಯೂಲರ್ ಎನ್ನುವುದು ದೇಶದ ಪ್ರತಿ ವ್ಯಕ್ತಿಯ ರಕ್ತದಲ್ಲಿದೆ. ಮುಟ್ಟಾಳ ಕಾಂಗ್ರೆಸ್ನ ಹಾಗೂ ಮಮತಾ ಬ್ಯಾನರ್ಜಿಯ ಪ್ರಚೋದನೆಗೆ ಒಳಗಾಗಬೇಡಿ. ಅಲ್ಪಸಂಖ್ಯಾತರಿಗೆ ಸೇರಿ ಇತರೆ ಸಮುದಾಯದವರಿಗೆ ಇಲ್ಲಿ ರಕ್ಷಣೆ ಇದೆ. ಮಮತಾ ಬ್ಯಾನರ್ಜಿ ಮಾಡುತ್ತಿರುವುದು ದೇಶದ್ರೋಹ ಎಂದು ಕಿಡಿಕಾರಿದರು.
ಕರ್ತವ್ಯದ ಜೊತೆ ಪರಿಸರ ಪ್ರೇಮ; ಎಲ್ಲರಿಗೂ ಮಾದರಿ ರಾಯಚೂರಿನ ಈ ಪೊಲೀಸ್ ಅಧಿಕಾರಿ
ಮೋದಿ ಸರ್ಕಾರದಡಿಯಲ್ಲಿ ಎಲ್ಲರೂ ಸುರಕ್ಷಿತವಾಗಿರುತ್ತೀರಿ. ಬೇರೆ ದೇಶದಿಂದ ಬಂದ ಮುಸ್ಲಿಂರಿಗೆ ಪೌರತ್ವ ಕೊಟ್ಟಿದ್ದೇವೆ.
ಆದರೆ ವಿಶ್ವದಲ್ಲಿ 40 ದೇಶಗಳಿವೆ, ಅಲ್ಲಿಂದ ಎಲ್ಲರೂ ಬರುತ್ತಾರೆ. ಪೌರತ್ವ ಕೊಡಲು ಸಾಧ್ಯವೇ, ದೇಶವೇನು ಧರ್ಮಶಾಲೆಯೇ? ಫೆಬ್ರವರಿ 1 ರಂದು ಬಜೆಟ್ ಮಂಡನೆಯಾಗಲಿದೆ. ಆಗ ಇದರ ಬಗ್ಗೆ ಎಲ್ಲರೂ ಚರ್ಚೆಗೆ ಬರಲಿ ಆಹ್ವಾನ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ