ಕಾಗಿನೆಲೆ ಸ್ವಾಮೀಜಿ ಜೊತೆಗಿನ ಸಂಧಾನ ಸಭೆ ಯಶಸ್ವಿ; ಸಚಿವ ಮಾಧುಸ್ವಾಮಿ ವಿವಾದಕ್ಕೆ ತೆರೆ

ನನ್ನ ನಿಲುವು ಸ್ಪಷ್ಟ. ಕಾನೂನಾತ್ಮಕವಾಗಿ ಸಮಸ್ಯೆ ಇತ್ತು. ಕನಕ ವೃತ್ತಕ್ಕೆ ಹೆಸರಿಡಲು ಸಮ್ಮತಿ ನೀಡಲಾಗಿದೆ. ಸ್ವಾಮೀಜಿಗಳಿಗೆ ನಾನು ಯಾವುದೇ ಅವಮಾನ ಮಾಡಿಲ್ಲ- ಮಾಧುಸ್ವಾಮಿ

Latha CG | news18-kannada
Updated:November 21, 2019, 4:00 PM IST
ಕಾಗಿನೆಲೆ ಸ್ವಾಮೀಜಿ ಜೊತೆಗಿನ ಸಂಧಾನ ಸಭೆ ಯಶಸ್ವಿ; ಸಚಿವ ಮಾಧುಸ್ವಾಮಿ ವಿವಾದಕ್ಕೆ ತೆರೆ
ಮಾಧುಸ್ವಾಮಿ
  • Share this:
ಕಾಗಿನೆಲೆ ಶಾಖಾಮಠದ ಶ್ರೀಗಳ ವಿರುದ್ಧ ಅವಹೇಳಕಾರಿ ಹೇಳಿಕೆ ನೀಡಿ ಕುರುಬ ಸಮಾಜದ ಆಕ್ರೋಶಕ್ಕೆ ಗುರಿಯಾಗಿದ್ದ ಸಚಿವ ಮಾಧುಸ್ವಾಮಿ, ಇಂದು ಕಾಗಿನೆಲೆ ಸ್ವಾಮೀಜಿಯೊಂದಿಗೆ ನಡೆಸಿದ ಸಭೆ ಯಶಸ್ವಿಯಾಗಿದೆ. ಸಿಎಂ ವಿಚಾರಕ್ಕೆ ಗೌರವ ಕೊಟ್ಟು ಪ್ರತಿಭಟನೆ ಹಿಂಪಡೆದಿದ್ದೇವೆ. ವಿವಾದವನ್ನು ಮುಂದುವರಿಸದೇ ಇಲ್ಲಿಗೇ ಅಂತ್ಯಗೊಳಿಸಲು ಎಂದು ಕಾಗಿನೆಲೆ ಮಠದ ಈಶ್ವರಾನಂದ ಸ್ವಾಮಿ ಹೇಳಿದ್ದಾರೆ. ಇದರೊಂದಿಗೆ ಚುನಾವಣಾ ಸಮಯದಲ್ಲಿ ಬಿಜೆಪಿಗೆ ಅಂಟಿಕೊಂಡಿದ್ದ ಅನಗತ್ಯ ವಿವಾದ ಶಮನಗೊಂಡಂತಾಗಿದೆ. 

ದಾವಣಗೆರೆಯ ಬೆಳ್ಳೂಡಿ ಗ್ರಾಮದಲ್ಲಿರುವ ಕಾಗಿನೇಲೆ‌ ಪೀಠದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕನಕದಾಸರ ವೃತ್ತ ನಿರ್ಮಾಣ ಮಾಡಲು ಸಚಿವಧ್ವಯರು ತೀರ್ಮಾನ ಮಾಡಿದ್ದಾರೆ. ಮಾಹಿತಿ ಕೊರತೆಯಿಂದ ಗೊಂದಲ ಏರ್ಪಟ್ಟಿತ್ತು ಎಂದು ಹೇಳಿದ್ದಾರೆ.

ಹರಿಹರ ತಾಲೂಕಿನ ಬೆಳ್ಳೂಡಿಯಲ್ಲಿರುವ ಶಾಖಾಮಠದಲ್ಲಿ ಕಾಗಿನೆಲೆ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಹಾಗೂ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಸಂಧಾನ ಸಭೆ ನಡೆಯಿತು. ಸಚಿವ ಮಾಧುಸ್ವಾಮಿ ಸೇರಿ, ಗೃಹ ಸಚಿವ ಬಸವರಾಜ್​ ಬೊಮ್ಮಾಯಿ ಕೂಡ ಈ ಸಭೆಯಲ್ಲಿ ಭಾಗಿಯಾಗಿದ್ದರು.

ಕುರುಬ ಸಮುದಾಯದ ಆಕ್ರೋಶ: ಕಾಗಿನೆಲೆ ಸ್ವಾಮೀಜಿ ಜೊತೆ ಸಂಧಾನಕ್ಕೆ ಮುಂದಾದ ಸಚಿವ ಮಾಧುಸ್ವಾಮಿ

ಸಂಧಾನ ಸಭೆ ಬಳಿಕ ಮಾತನಾಡಿದ ಕಾಗಿನೆಲೆ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ, "ಗೃಹಮಂತ್ರಿಗಳು ಈ ವಿಚಾರಕ್ಕೆ ನಮ್ಮಲ್ಲಿ ಮನವಿ ಮಾಡಿಕೊಂಡಿದ್ದರು.  ಸಭೆಯಲ್ಲಿ ನಮಗೆ ಮಾಧುಸ್ವಾಮಿ ಬಗ್ಗೆ ಕೋಪ ಬಂತು. ಅವರ ಕಣ್ಣುಗಳಲ್ಲಿ ನನಗೆ ಸತ್ಯಾಂಶ ಗೊತ್ತಾಯ್ತು. ಕನಕದಾಸರ ವೃತ್ತದಲ್ಲಿ ಬೋರ್ಡ್ ಹಾಕಲು ನಮ್ಮ ಸಮ್ಮುಖದಲ್ಲಿ ಹೇಳಿದರು. ನಮಗೂ ಯಾರ ಮನಸ್ಸು ನೋಯಿಸುವ ಉದ್ದೇಶ ಇರಲಿಲ್ಲ. ಹುಳಿಯಾರು ಸಮಸ್ಯೆ ನಮ್ಮ ಪೀಠದಲ್ಲಿ ಬಗೆಹರಿದಿದೆ. ಸಚಿವರ ನೇತೃತ್ವದಲ್ಲಿ  ಕನಕದಾಸರ ವೃತ್ತದಲ್ಲಿ ನಾಮಫಲಕ ಅಳವಡಿಕೆ ಮಾಡಲಾಗುತ್ತದೆ.  ಇವತ್ತಿಗೆ ಇದನ್ನು ಅಂತ್ಯ ಮಾಡಲಾಗಿದೆ ಮುಂದೆ ಈ ವಿಚಾರಕ್ಕೆ ಯಾರೂ ಮಾತನಾಡಬಾರದು," ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, "ಹುಳಿಯಾರ ವೃತ್ತದ ವಿಚಾರವನ್ನು ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಗುರುಗಳು ನಮಗೆ ಮಾರ್ಗದರ್ಶನ ಮಾಡಿದ್ದಾರೆ. ಹೊಸದುರ್ಗದ ಸ್ವಾಮೀಜಿಗಳು ಬಗ್ಗೆ ಗೊಂದಲ ಹೇಳಿಕೆ ವಿಚಾರವಾಗಿ ಮಾಹಿತಿ ಕೊರತೆಯಾಗಿತ್ತು. ಸದ್ಯಕ್ಕೆ ಕನಕ ವೃತ್ತ ಮಾಡಲು ತಾತ್ಕಾಲಿಕವಾಗಿ ಬೋರ್ಡ್ ಹಾಕಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ವತಿಯಿಂದ ಕಾನೂನು ರೀತಿಯಲ್ಲಿ ವೃತ್ತಕ್ಕೆ ನಾಮಫಲಕ ಅಳವಡಿಸಲಾಗುವುದು," ಎಂದು ಹೇಳಿದ್ಧಾರೆ.

ರಸ್ತೆ ಅಪಘಾತದಲ್ಲಿ ಪತ್ರಕರ್ತ ಮಂಜುನಾಥ್ ನಿಧನ; ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂಈ ವೇಳೆ ಮಾತನಾಡಿದ ಸಚಿವ ಮಾಧುಸ್ವಾಮಿ, "ನನ್ನ ನಿಲುವು ಸ್ಪಷ್ಟ. ಕಾನೂನಾತ್ಮಕವಾಗಿ ಸಮಸ್ಯೆ ಇತ್ತು. ಕನಕ ವೃತ್ತಕ್ಕೆ ಹೆಸರಿಡಲು ಸಮ್ಮತಿ ನೀಡಲಾಗಿದೆ. ಸ್ವಾಮೀಜಿಗಳಿಗೆ ನಾನು ಯಾವುದೇ ಅವಮಾನ ಮಾಡಿಲ್ಲ. ಕೆಲವರು ನಾನು ಏಕ ವಚನದಲ್ಲಿ ಮಾತಾಡಿದ್ದೇನೆ ಎಂದು ಹಲವರು ಹೇಳಿದ್ದಾರೆ. ಸ್ವಾಮೀಜಿಗಳ ನೇತೃತ್ವದಲ್ಲಿ ಮಾತನಾಡಿದ್ದಕ್ಕೆ ನನ್ನ ಮನಸ್ಸಿಗೆ ಸಮಾಧಾನ ತಂದಿದೆ. ಕುರುಬ ಸಮಾಜಕ್ಕೆ ನಾನು ಆಭಾರಿಯಾಗಿದ್ದೇನೆ. ಮಠಕ್ಕೆ ಬರುವಾಗ ತುಮಕೂರು ಎಸ್ ಪಿ ಗೆ ಹೇಳಿ ಬಂದಿದ್ದೆ. ಸಂಪರ್ಕ ಕೊರತೆಯಿಂದ ಇಷ್ಟೆಲ್ಲಾ ನಡೆದಿದೆ. ಇದು ನಡೆಯಭಾರದಿತ್ತು ನಡೆದು ಹೋಗಿದೆ," ಎಂದರು.

First published:November 21, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ