‘ಚುನಾವಣೆಯಲ್ಲಿ ಅಪ್ಪ-ಮಗನನ್ನೇ ಗೆಲ್ಲಿಸಲಾಗಲಿಲ್ಲ‘: ಮಾಜಿ ಸಿಎಂ ಕುಮಾರಸ್ವಾಮಿಗೆ ಈಶ್ವರಪ್ಪ ಲೇವಡಿ​​

ಪೌರತ್ವ ಕಾಯ್ದೆಯಿಂದ ದೇಶದ ಮುಸ್ಲಿಮರಿಗೆ ತೊಂದರೆಯಿಲ್ಲ ಎಂದು ಹೇಳಿದರು. ಮನಮೋಹನ್​ ಸಿಂಗ್​ ಈ ಕಾಯ್ದೆಯ ರೂವಾರಿ. ಕಾಂಗ್ರೆಸ್​ನಿಂದ ಮುಸ್ಲಿಮರನ್ನು ಎತ್ತಿಕಟ್ಟುವ ತಂತ್ರ ನಡೆಯುತ್ತಿದೆ. ಇದು ಹೀಗೆ ಮುಂದುವರೆದರೆ ಎಷ್ಟರಮಟ್ಟಿಗೆ ಹೊಡೆತ ತಿಂತಾರೆ ನೋಡಿ ಎಂದು ಎಚ್ಚರಿಕೆ ನೀಡಿದರು.

ಈಶ್ವರಪ್ಪ- ಕುಮಾರಸ್ವಾಮಿ

ಈಶ್ವರಪ್ಪ- ಕುಮಾರಸ್ವಾಮಿ

  • Share this:
ಬೆಂಗಳೂರು(ಡಿ.24): ಬಿಜೆಪಿಗೆ ಜನರು ಅಡ್ರೆಸ್​ ತೋರಿಸುತ್ತಾರೆ ಎಂಬ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಸಚಿವ ಕೆ.ಎಸ್​.ಈಶ್ವರಪ್ಪ ತಿರುಗೇಟು ನೀಡಿದ್ದಾರೆ. ಕುಮಾರಸ್ವಾಮಿಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ತನ್ನ ಅಪ್ಪ ಮತ್ತು ಮಗನನ್ನೇ ಗೆಲ್ಲಿಸಿಕೊಳ್ಳೋಕೆ ಆಗಲಿಲ್ಲ. ಹಾಗಿದ್ದರೂ ಇನ್ನೂ ಸಹ ಇವರಿಗೆ ಬುದ್ಧಿ ಬಂದಿಲ್ಲ ಎಂದು ಲೇವಡಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಎಚ್​ಡಿಕೆ ವಿರುದ್ಧ ಕಿಡಿಕಾರಿದರು. ಚುನಾವಣೆಯಲ್ಲಿ ಸೋತರೂ ಇನ್ನೂ ಸಹ ಬುದ್ದಿ ಬಂದಿಲ್ಲ. ಚುನಾವಣೆಗೆ ನಿಂತಿದ್ದ ತಮ್ಮ ಅಪ್ಪ-ಮಗನನ್ನೇ ಗೆಲ್ಲಿಸಿಕೊಳ್ಳಲು ಆಗಿಲ್ಲ ಅವರಿಗೆ. ಇಷ್ಟಾದರೂ ಇನ್ನೂ ಬುದ್ದಿ ಬರದಿದ್ದರೆ ನಾನೇನು ಮಾಡಲಿ. ಈಗ ನಾವು ಅವರ ಅಡ್ರೆಸ್​ ಎಲ್ಲಿದೆ ಅಂತ ಹುಡುಕಬೇಕಾಗುತ್ತದೆ. ಹುಡುಕೋಣ ಎಂದು ವ್ಯಂಗ್ಯ ಮಾಡಿದ್ದಾರೆ.

ಪೌರತ್ವ ಕಾಯ್ದೆಯಿಂದ ಮುಸ್ಲಿಂ ಧರ್ಮ ಮಾತ್ರ ಏಕೆ ಕೈಬಿಟ್ಟಿರಿ?: ಕೇಂದ್ರ ಸರ್ಕಾರಕ್ಕೆ ಬಿಜೆಪಿ ನಾಯಕ ಬೋಸ್​​ ಪ್ರಶ್ನೆ

ಮುಂದುವರೆದು ಮಾತನಾಡಿದ ಅವರು, ಪೌರತ್ವ ಕಾಯ್ದೆಯಿಂದ ದೇಶದ ಮುಸ್ಲಿಮರಿಗೆ ತೊಂದರೆಯಿಲ್ಲ ಎಂದು ಹೇಳಿದರು. ಮನಮೋಹನ್​ ಸಿಂಗ್​ ಈ ಕಾಯ್ದೆಯ ರೂವಾರಿ. ಕಾಂಗ್ರೆಸ್​ನಿಂದ ಮುಸ್ಲಿಮರನ್ನು ಎತ್ತಿಕಟ್ಟುವ ತಂತ್ರ ನಡೆಯುತ್ತಿದೆ. ಇದು ಹೀಗೆ ಮುಂದುವರೆದರೆ ಎಷ್ಟರಮಟ್ಟಿಗೆ ಹೊಡೆತ ತಿಂತಾರೆ ನೋಡಿ ಎಂದು ಎಚ್ಚರಿಕೆ ನೀಡಿದರು.

ಬ್ರಿಟಿಷರು ಹಿಂದೂಸ್ಥಾನ ಮತ್ತು ಪಾಕಿಸ್ತಾನ ಅಂತ ಮಾಡಿದ್ದರು. ಕಾಂಗ್ರೆಸ್​ನವರು ಕೋಮು ಸಂಘರ್ಷ ಮಾಡಲು ಯತ್ನಿಸುತ್ತಿದ್ದಾರೆ. ಮುಸ್ಲಿಮರನ್ನು ದಾರಿ ತಪ್ಪಿಸಿ ಬೀದಿಗಿಳಿಸುತ್ತಿದೆ. ರಾಜ್ಯದಲ್ಲಿ ಗಲಭೆ ಸೃಷ್ಟಿಗೆ ಕಾಂಗ್ರೆಸ್ ಕಾರಣ ಎಂದು ಆರೋಪಿಸಿದರು.

ತಿರುವನಂತಪುರಂನಲ್ಲಿ ಸಿಎಂ ಬಿಎಸ್​ವೈ ವಿರುದ್ಧ ಕೆಎಸ್​​ಯು ಪ್ರತಿಭಟನೆ; ಕೇರಳ ಪತ್ರಕರ್ತರ ಬಂಧಿಸಿದ್ದರ ವಿರುದ್ಧ ಆಕ್ರೋಶ

ಇದೇ ವೇಳೆ, ಇತ್ತೀಚಿನ ಚುನಾವಣೆಗಳಲ್ಲಿ ಕಾಂಗ್ರೆಸ್​ ಸೋತರೂ ಕೂಡ ಇನ್ನೂ ಕೂಡ ಬುದ್ಧಿ ಬಂದಿಲ್ಲ ಎಂದು ಟೀಕಿಸಿದರು.

 
Published by:Latha CG
First published: