ಕಾಂಗ್ರೆಸ್-ಜೆಡಿಎಸ್​ನವರ ವ್ಯಂಗ್ಯ ನಾಳೆ ಫಲಿತಾಂಶ ಬಂದ ಮೇಲೆ ಗೊತ್ತಾಗುತ್ತೆ; ಕೆ.ಎಸ್​.ಈಶ್ವರಪ್ಪ

ನಾನು‌ ಕುರುಬ ನಾಯಕನಲ್ಲ, ಸಾಮಾನ್ಯ ಕಾರ್ಯಕರ್ತ. ಜನರ ಜೊತೆ‌ ಇರೋನು, ಯಾವುದೇ ಜಾತಿ ನಾಯಕ ಅಂತ‌ ಹೇಳಿಕೊಂಡಿಲ್ಲ. ಮುಂದೆ ಹೇಳಿಕೊಳ್ಳುವುದಿಲ್ಲ.  ಸ್ವಾಮಿಗಳ ಆಶೀರ್ವಾದದಿಂದ‌ ಈ ಬಾರಿ ಬಿಜೆಪಿ‌ ಪೂರ್ಣ ಬಹುಮತದ ಆಡಳಿತ ನಡೆಸುತ್ತೆ. ಈ ಹಿಂದೆ ಬಹುಮತ ಬಂದಿರಲಿಲ್ಲ ಆಗ ಪಕ್ಷೇತರರು ಬೆಂಬಲಿಸಿದ್ದರು ಎಂದರು. 

 ಸಚಿವ ಕೆ.ಎಸ್​. ಈಶ್ವರಪ್ಪ

ಸಚಿವ ಕೆ.ಎಸ್​. ಈಶ್ವರಪ್ಪ

  • Share this:
ಗದಗ(ಡಿ.08): ಜನ ಕಾಂಗ್ರೆಸ್ ಪಕ್ಷವನ್ನು ಹೊಡೆದು ಹೊರಹಾಕಿದ್ದಾರೆ.  ಹೊಡೆಯೋದು ಅಂದರೆ ಕೈಯಿಂದಲೇ ಆಗಬೇಕಿಲ್ಲ, ಅಧಿಕಾರದಿಂದ ಹೊಡೆದು ಹೊರಹಾಕಿದ್ದಾರೆ. ಜನ ಕಾಂಗ್ರೆಸ್​​​ನವರನ್ನು ಮತದಾನದಲ್ಲೇ ಹೊಡೆದು ಹೊರಹಾಕಿದ್ದಾರೆ. ಅಷ್ಟೇ ಸಾಕು. 15 ಸೀಟು ಬಂದಾಗ ಬಿಜೆಪಿಗೆ ಅಧಿಕಾರ ಕೊಟ್ಟು ಮತ್ತೆ ಕಾಂಗ್ರೆಸ್ ಜೆಡಿಎಸ್​​​ನ್ನು ಹೊರಹಾಕುತ್ತಾರೆ.  ಇನ್ನು ಮೂರು ವರ್ಷ ಬಿಜೆಪಿ ಅಧಿಕಾರದಲ್ಲಿರುತ್ತೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ. 

ಸಿದ್ಧರಾಮಯ್ಯಗೆ ಹುಲಿಯಾ ಎನ್ನುವ ಶಬ್ದ ಬಳಕೆ ವಿಚಾರವಾಗಿ, ಪ್ರತಿಕ್ರಿಯಿಸಿದ ಈಶ್ವರಪ್ಪ, ದೀಪ ಆರಿ ಹೋಗುವ ಸಂದರ್ಭದಲ್ಲಿ ಪ್ರಕಾಶಮಾನವಾಗಿ ಉರಿಯುತ್ತೆ. ಯಾರೋ ಒಬ್ಬ ಕುಡಿದಿದ್ದ, ಕುಡಿದ ಸಂದರ್ಭದಲ್ಲಿ ಆ ಪದ ಬಳಸಿದ. ಕುಡಿಯೋನು ಬಿಟ್ಟರೆ ಬೇರೆ ಯಾರು ಆ ಪದ ಬಳಸ್ತಾರೆ ಅಂತ ಪ್ರಶ್ನಿಸಿದರು. ಕುಡುಕ ಏನೋ ಅಂದ ಅಂತ ಆನಂದ ಪಟ್ಟರೆ ಪಡಲಿ ಬಿಡಿ. ಅವರು ಆನಂದವಾಗಿ ಎಷ್ಟು‌ ದಿನ ಇರ್ತಾರೆ ಇರಲಿ ಎಂದು ಹೇಳಿದರು.

ಚುನಾವಣೆಯಲ್ಲಿ ಸೋತವರಿಗೆ ಸಚಿವ ಸ್ಥಾನ ಇಲ್ಲಎಂಬ ಈಶ್ವರಪ್ಪ ಹೇಳಿಕೆಗೆ ಟಾಂಗ್ ನೀಡಿದ ಎಸ್.ಟಿ. ಸೋಮಶೇಖರ್

ನಾನು‌ ಕುರುಬ ನಾಯಕನಲ್ಲ, ಸಾಮಾನ್ಯ ಕಾರ್ಯಕರ್ತ. ಜನರ ಜೊತೆ‌ ಇರೋನು, ಯಾವುದೇ ಜಾತಿ ನಾಯಕ ಅಂತ‌ ಹೇಳಿಕೊಂಡಿಲ್ಲ. ಮುಂದೆ ಹೇಳಿಕೊಳ್ಳುವುದಿಲ್ಲ.  ಸ್ವಾಮಿಗಳ ಆಶೀರ್ವಾದದಿಂದ‌ ಈ ಬಾರಿ ಬಿಜೆಪಿ‌ ಪೂರ್ಣ ಬಹುಮತದ ಆಡಳಿತ ನಡೆಸುತ್ತೆ. ಈ ಹಿಂದೆ ಬಹುಮತ ಬಂದಿರಲಿಲ್ಲ ಆಗ ಪಕ್ಷೇತರರು ಬೆಂಬಲಿಸಿದ್ದರು ಎಂದರು.

ದೇವೇಗೌಡರು, ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಪಾರ್ಲಿಮೆಂಟ್ ಚುನಾವಣೆಗೂ ಮುನ್ನ ಬಿಜೆಪಿ ಎರಡು ಸೀಟೂ ಗೆಲ್ಲಲ್ಲ ಅಂದಿದ್ದರು. ಕಾಂಗ್ರೆಸ್ ಆಗಲಿ ಜೆಡಿಎಸ್ ಆಗಲಿ ಎರಡೆರಡು ಸೀಟು ಗೆದ್ದರಾ? ಗೆದ್ದಿದ್ದು ಒಂದೊಂದೇ ಸೀಟು. ಈಗ ಮತ್ತೆ ಅವರು ಹಾಗೆ ಹೇಳ್ತಾನೇ ಇರಲಿ, ಜನ ನಮ್ಮನ್ನು ಗೆಲ್ಲಿಸ್ತಾನೆ ಇರ್ತಾರೆ. 22 ಅಂತ ಹೇಳಿಕೊಳ್ಳೋಕೆ ನಾವೇ ಸಂಕೋಚಪಡುತ್ತಿದ್ದೆವು. ಆದರೆ ಜನ 25 ಸೀಟು ಕೊಟ್ಟರು. ಕಾಂಗ್ರೆಸ್ ಜೆಡಿಎಸ್ ನವರ ವ್ಯಂಗ್ಯ ನಾಳೆ ಫಲಿತಾಂಶ ಬಂದ‌ ಮೇಲೆ‌ ಗೊತ್ತಾಗುತ್ತೆ ಎಂದು ತಿರುಗೇಟು ನೀಡಿದರು.

ವಿಶ್ವನಾಥ್ ಸೋತರೆ ಪ್ರಪಂಚ ಮುಳುಗೋಗುತ್ತಾ?; ಸಂಸದ ಶ್ರೀನಿವಾಸ್​ ಪ್ರಸಾದ್​​

First published: