ರಾಜ್ಯದ ಹಿತಾಸಕ್ತಿ ಕಾಪಾಡಲು ಸರ್ಕಾರ ಬದ್ಧವಾಗಿದೆ; ಗಡಿ ಕ್ಯಾತೆಗೆ ತಕ್ಕ ಉತ್ತರ ಕೊಟ್ಟ ಕೆ.ಎಸ್​.ಈಶ್ವರಪ್ಪ

ರಾಜ್ಯದಲ್ಲಿ  ಡಿಸಿಎಂ  ಹುದ್ದೆ ವಿವಾದ ವಿಚಾರವಾಗಿ, ಡಿಸಿಎಂ  ಹುದ್ದೆಯ ಕುರಿತು ರೇಣುಕಾಚಾರ್ಯ  ಸಹಿ ಸಂಗ್ರಹಿಸಿಲ್ಲ. ಪಕ್ಷದ  ವರಿಷ್ಠರು  ಡಿಸಿಎಂ  ಹುದ್ದೆಯ ವಿವಾದಕ್ಕೆ ತೆರೆ ಎಳೆಯಲಿದ್ದಾರೆ. ಡಿಸಿಎಂ ಹುದ್ದೆ ಕುರಿತು ವೈಯಕ್ತಿಕ ಯಾವುದೇ  ಅಭಿಪ್ರಾಯವಿಲ್ಲ.  ಪಕ್ಷದ ವರಿಷ್ಠರ ತೀರ್ಮಾನಕ್ಕೆ  ಬದ್ಧ ಎಂದು ಹೇಳಿದರು.

Latha CG | news18-kannada
Updated:January 2, 2020, 12:26 PM IST
ರಾಜ್ಯದ ಹಿತಾಸಕ್ತಿ ಕಾಪಾಡಲು ಸರ್ಕಾರ ಬದ್ಧವಾಗಿದೆ; ಗಡಿ ಕ್ಯಾತೆಗೆ ತಕ್ಕ ಉತ್ತರ ಕೊಟ್ಟ ಕೆ.ಎಸ್​.ಈಶ್ವರಪ್ಪ
ಸಚಿವ ಕೆ.ಎಸ್​. ಈಶ್ವರಪ್ಪ
  • Share this:
ಶಿವಮೊಗ್ಗ(ಜ.02): "ಬಿಜೆಪಿ ಸೇರಿ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿರುವ ಶಾಸಕರು ಈಗಾಗಲೇ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಗೆದ್ದಿರುವ ಎಲ್ಲರಿಗೂ ಮಂತ್ರಿ ಸ್ಥಾನ ಕೊಡುವ ಬಗ್ಗೆ ಆಶ್ವಾಸನೆ ನೀಡಿದ್ದೇವೆ. ಮುಖ್ಯಮಂತ್ರಿ ಸಹ ಎಲ್ಲರಿಗೂ ಮಂತ್ರಿ ಸ್ಥಾನ ಕೊಡುತ್ತೇವೆ ಎಂದಿದ್ದಾರೆ," ಎಂದು ಸಚಿವ ಕೆ.ಎಸ್​. ಈಶ್ವರಪ್ಪ ಹೇಳಿದರು.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, "ಸೋತ ಇಬ್ಬರಿಗೆ ಮಂತ್ರಿ ಸ್ಥಾನ ನೀಡುವ ಬಗ್ಗೆ ಏನು ಮಾಡಬೇಕು? ನಮ್ಮ ಕಾರ್ಯಕರ್ತರಿಗೆ ಏನು ಮಾಡಬೇಕು ಎಂಬುದರ ಬಗ್ಗೆ ಕೇಂದ್ರದ ನಾಯಕರ ಜೊತೆ ಕುಳಿತು ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ," ಎಂದರು.

ಶಾಸಕ ರಮೇಶ್​​ ಜಾರಕಿಹೊಳಿ ಮರಾಠಿಗರ ಕುರಿತಾಗಿ ನೀಡಿದ ಹೇಳಿಕೆ ವಿಚಾರವಾಗಿ, ರಮೇಶ್  ಜಾರಕಿಹೊಳಿ  ಯಾವ ಉದ್ದೇಶದಿಂದ ಆ ರೀತಿಯ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ ಎಂದರು. ಜಾರಕಿಹೊಳಿ ಕೆಲವು ದಿನಗಳ ಹಿಂದೆ ಮರಾಠ ಮುಖಂಡರು ಕಾಂಗ್ರೆಸ್​ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ವಿರುದ್ಧ ಚುನಾವಣೆಗೆ ನಿಲ್ಲಿ. ಚುನಾವಣಾ ಖರ್ಚಿಗಾಗಿ 5 ಕೋಟಿ ರೂ. ಹಣ ನೀಡುತ್ತೇನೆ ಎಂದು ಹೇಳಿದ್ದರು.

ಸೈರಸ್​ ಮಿಸ್ತ್ರಿ ಮರು ನೇಮಕ ಪ್ರಶ್ನಿಸಿ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ ರತನ್​ ಟಾಟಾ ಮಕ್ಕಳು

ಮಹಾರಾಷ್ಟ್ರ ಗಡಿ ಕ್ಯಾತೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ರಾಜ್ಯದ  ಒಂದಿಂಚು  ಭೂಮಿಯನ್ನು  ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ರಾಜ್ಯದ  ಹಿತಾಸಕ್ತಿ ಕಾಪಾಡಲು ಸರಕಾರ ಬದ್ಧವಾಗಿದೆ ಎಂದು ಹೇಳುವ ಮೂಲಕ ಗಡಿ ಕ್ಯಾತೆ ತೆಗೆದ ಮಹಾರಾಷ್ಟ್ರಕ್ಕೆ ತಕ್ಕ ಉತ್ತರ ನೀಡಿದರು.

ರಾಜ್ಯದಲ್ಲಿ  ಡಿಸಿಎಂ  ಹುದ್ದೆ ವಿವಾದ ವಿಚಾರವಾಗಿ, ಡಿಸಿಎಂ  ಹುದ್ದೆಯ ಕುರಿತು ರೇಣುಕಾಚಾರ್ಯ  ಸಹಿ ಸಂಗ್ರಹಿಸಿಲ್ಲ. ಪಕ್ಷದ  ವರಿಷ್ಠರು  ಡಿಸಿಎಂ  ಹುದ್ದೆಯ ವಿವಾದಕ್ಕೆ ತೆರೆ ಎಳೆಯಲಿದ್ದಾರೆ. ಡಿಸಿಎಂ ಹುದ್ದೆ ಕುರಿತು ವೈಯಕ್ತಿಕ ಯಾವುದೇ  ಅಭಿಪ್ರಾಯವಿಲ್ಲ.  ಪಕ್ಷದ ವರಿಷ್ಠರ ತೀರ್ಮಾನಕ್ಕೆ  ಬದ್ಧ ಎಂದು ಹೇಳಿದರು.

ಕನ್ನಡಿಗರನ್ನು ಕೆಣಕಿದರೆ ಸುಮ್ಮನಿರೊಲ್ಲ; ಶಿವಸೇನೆಗೆ ಕರವೇ ಅಧ್ಯಕ್ಷ ನಾರಾಯಣಗೌಡ ಎಚ್ಚರಿಕೆಪ್ರಧಾನಿ ಮೋದಿ ತುಮಕೂರು  ಭೇಟಿ ನೀಡುತ್ತಿದ್ದು, ರಾಜ್ಯಕ್ಕೆ  ಅವರು ಹೆಚ್ಚಿನ ಅನುದಾನ  ಘೋಷಣೆ  ಮಾಡಬಹುದು. ಪ್ರಧಾನಿ  ಮಂತ್ರಿ ಏನು ಬೇಕಾದರೂ ಘೋಷಣೆ  ಮಾಡಬಹುದು ಎಂದರು.

ಸಂಕ್ರಾಂತ್ರಿ ಹಬ್ಬದ ಬಳಿಕ ಸಚಿವ ಸಂಪುಟ ವಿಸ್ತರಣೆ ಆಗಬಹುದು ಅಥವಾ ಸಚಿವ  ಸಂಪುಟ ಪುನಾರಚನೆ ಆದರೂ ಆಗಬಹುದು. ಈ ಬಗ್ಗೆ  ಪಕ್ಷದ ವರಿಷ್ಠರು ತೀರ್ಮಾನ  ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರು.

 
First published:January 2, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ