ಕಾಂಗ್ರೆಸ್​​-ಜೆಡಿಎಸ್​ ತಿರುಕನ ಕನಸು ಕಾಣ್ತಿವೆ: ಡಿ.9ಕ್ಕೆ ಖೇಲ್​ ಖತಂ, ನಾಟಕ ಬಂದ್​; ಸಿ.ಟಿ.ರವಿ

ಹಣದಿಂದ ಬಿಜೆಪಿ ಚುನಾವಣೆ ಮಾಡ್ತಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸಿ.ಟಿ.‌ ರವಿ ತಿರುಗೇಟು ನೀಡಿದರು. ಸಿದ್ದರಾಮಯ್ಯನ ಹುಂಡಿ ಎಲ್ಲೆಲ್ಲಿ ಇವೆ ಅಂತಾ ನಮಗೆ ಗೊತ್ತಿದೆ. ಒಂದೂವರೆ ವರ್ಷದಲ್ಲಿ ಲೂಟಿ ಮಾಡಿದ ಹಣ ಎಷ್ಟು ಎಂಬುದು ಗೊತ್ತಿದೆ. ಆ ಹಣದಲ್ಲೇ ಅವರು ಈಗ ಚುನಾವಣೆ ಮಾಡ್ತಿದ್ದಾರೆ. ಕಾರ್​​ ಟೈರ್ ಗಳ ಒಳಗೆ ಹಣ ಸಾಗಿಸಿದ ಖ್ಯಾತಿ  ಆ ಪಕ್ಷಕ್ಕೆ ಇದೆ ಎಂದು ವಾಗ್ದಾಳಿ ನಡೆಸಿದರು.

ಸಚಿವ ಸಿ.ಟಿ. ರವಿ

ಸಚಿವ ಸಿ.ಟಿ. ರವಿ

  • Share this:
ಮೈಸೂರು(ಡಿ.03): ಡಿ.9ರಂದು ಖೇಲ್​ ಖತಂ, ನಾಟಕ ಬಂದ್​ ಆಗಲಿದೆ. ಕಾಂಗ್ರೆಸ್​​​​-ಜೆಡಿಎಸ್​ ತಿರುಕನ ಕನಸು ಕಾಣ್ತಿವೆ. ಅರಮನೆಯಲ್ಲಿ ಇದ್ದಂತೆ, ಮಹಾರಾಣಿ ಜೊತೆ ಇದ್ದಂತೆ, ದರ್ಬಾರ್ ಮಾಡಿದಂತೆ ಜೆಡಿಎಸ್-ಕಾಂಗ್ರೆಸ್ ಕನಸು ಕಾಣ್ತಿವೆ ಎಂದು ಸಚಿವ ಸಿ.ಟಿ.ರವಿ ಲೇವಡಿ ಮಾಡಿದ್ದಾರೆ.

ಹುಣಸೂರಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಕಾಂಗ್ರೆಸ್​​-ಜೆಡಿಎಸ್​ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಜೆಡಿಎಸ್ - ಕಾಂಗ್ರೆಸ್ ಹೊಂದಾಗುವುದೆಂದರೆ ಅದು ರಾಜಕೀಯ ವ್ಯಭಿಚಾರ. ಇಂತಹ ರಾಜಕೀಯ ವ್ಯಭಿಚಾರಕ್ಕೆ ಜನ ಅವಕಾಶ ಕೊಡಲ್ಲ.  ಕಾಂಗ್ರೆಸ್ ಬಂದ್ರೆ ಕೋಮು ಗಲಭೆ, ನಿಷೇಧಾಜ್ಞೆ ಬರುತ್ತೆ ಅವರು ಬರಬೇಕಾ?  ಕೋಣ - ಎತ್ತು ಕಟ್ಟಿ ಬೇಸಾಯ ಮಾಡೋಕೆ ಆಗುತ್ತಾ? ಹಾಗೇ ಹುಣಸೂರಿನಲ್ಲಿ ಬಿಜೆಪಿ ಸಂಸದನ ಜೊತೆ ಕಾಂಗ್ರೆಸ್ ಶಾಸಕ ಇದ್ದರೆ ಅಭಿವೃದ್ಧಿ ಆಗಲ್ಲ. ಪ್ರತಾಪ್ ಸಿಂಹ- ಎಚ್. ವಿಶ್ವನಾಥ್ ಜೋಡೆತ್ತು. ಇವರಿಬ್ಬರೂ ಜೊತೆಯಾಗಬೇಕು ಎಂದು ಸಿ.ಟಿ.ರವಿ ಹೇಳಿದರು.

ಮಹಿಳೆಯರ ರಕ್ಷಣೆಗಾಗಿ ಅಸ್ಥಿತ್ವಕ್ಕೆ ಬಂದ ನಿರ್ಭಯಾ ಹೆಲ್ಪ್ ಲೈನ್ ಅಸ್ಥಿತ್ವದಲ್ಲೇ ಇಲ್ಲ, ಇನ್ನೂ ಸುರಕ್ಷಾ ಆ್ಯಪ್​ ಎಷ್ಟು ದಿನ?

ಹಣದಿಂದ ಬಿಜೆಪಿ ಚುನಾವಣೆ ಮಾಡ್ತಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸಿ.ಟಿ.‌ ರವಿ ತಿರುಗೇಟು ನೀಡಿದರು. ಸಿದ್ದರಾಮಯ್ಯನ ಹುಂಡಿ ಎಲ್ಲೆಲ್ಲಿ ಇವೆ ಅಂತಾ ನಮಗೆ ಗೊತ್ತಿದೆ. ಒಂದೂವರೆ ವರ್ಷದಲ್ಲಿ ಲೂಟಿ ಮಾಡಿದ ಹಣ ಎಷ್ಟು ಎಂಬುದು ಗೊತ್ತಿದೆ. ಆ ಹಣದಲ್ಲೇ ಅವರು ಈಗ ಚುನಾವಣೆ ಮಾಡ್ತಿದ್ದಾರೆ. ಕಾರ್​​ ಟೈರ್ ಗಳ ಒಳಗೆ ಹಣ ಸಾಗಿಸಿದ ಖ್ಯಾತಿ  ಆ ಪಕ್ಷಕ್ಕೆ ಇದೆ ಎಂದು ವಾಗ್ದಾಳಿ ನಡೆಸಿದರು.

ಪ್ರಜಾಪ್ರಭುತ್ವದಲ್ಲಿ ನಮ್ಮ ಮಾಲೀಕರು ಜನರು, ಸಿದ್ದರಾಮಯ್ಯ, ದೇವೇಗೌಡರು, ಡಿಕೆಶಿ, ಎಚ್​ಡಿಕೆ ಅಲ್ಲ ಅಂತ ಸಿ.ಟಿ.ರವಿ ತಿರುಗೇಟು ನೀಡಿದರು. ಅಭಿವೃದ್ಧಿ ಕಡೆಗಣಿಸಿದ ಸರ್ಕಾರ ಬೇಕಾ? ಮನೆ ಅಳಿಯನಿಗೆ ಈಗ ನೆನಪಾಗಿದೆ. ರಾಮನಗರ ಚಿಕ್ಕಬಳ್ಳಾಪುರ ಎರಡು ಕಣ್ಣುಗಳು ಇದ್ದಂತೆ  ಎಂದು ಕುಮಾರಸ್ವಾಮಿ ಹೇಳುತ್ತಾರೆ. ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಇಡ್ತಾರೆ. ಮನೆ‌ ಅಳಿಯ ಡಿಕೆಶಿಗೆ ಕಾಲೇಜು ಕೊಟ್ಟು ಮಾಡೋ ಕೆಲಸ ಇದೇನಾ? ಎಂದು ಪ್ರಶ್ನಿಸಿದರು.

ರಾಜ್ಯ ರಾಜಕೀಯದಲ್ಲಿ ಬದಲಾವಣೆ ಆಗುವುದು ಪಕ್ಕಾ; ಮರುಮೈತ್ರಿ ಸುಳಿವು ನೀಡಿದ ಡಿಕೆಶಿ

ಕಾಂಗ್ರೆಸ್ ಜೆಡಿಎಸ್ ನವರು ಬೊಗಳೆ ದಾಸರಾಗಿದ್ದಾರೆ. ನಾವು ಬರಿ ಮಾತಲ್ಲಿ ಹೇಳದೆ  ಕೆಲಸ ಮಾಡಿದ್ದೇವೆ. ಕಾಂಗ್ರೆಸ್ ಜೆಡಿಎಸ್ ನವರು ಹೊಟ್ಟೆಗೆ ಎಣ್ಣೆ ಬಿಟ್ಕೊಳ್ಳಲಿ.. ನಾವು ಕಣ್ಣಿಗೆ ಎಣ್ಣೆ ಹಾಕ್ಕೊಂಡು ನಾಳೆ ನಾಡಿದ್ದು ಕೆಲಸ ಮಾಡಬೇಕು. ಒಂದು ಮತ ಮೂರು ಲಾಭ, ಚಿಕ್ಕಬಳ್ಳಾಪುರ ಕ್ಷೇತ್ರದ ಅಭಿವೃದ್ಧಿಗಾಗಿ ನೀವು ಮತ ಹಾಕಿ ಎಂದು ಕರೆ ನೀಡಿದರು. ಬಿಜೆಪಿ ಮರೆತರೆ ಹನುಮ ನಿಮ್ಮನ್ನು ಕ್ಷಮಿಸುತ್ತಾನಾ? ಹನುಮ ಜಯಂತಿಗೆ ಹೋರಾಟ ಮಾಡಿದ ಬಿಜೆಪಿ ಮರೆತರೆ ಹನುಮ‌ ನಿಮ್ಮನ್ನು ಕ್ಷಮಿಸಲ್ಲ ಎಂದರು.
First published: