ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ಬಿಜೆಪಿಗೆ ಅಸ್ತಿತ್ವವೇ ಇರಲ್ಲ; ಸಚಿವ ಎಚ್.ನಾಗೇಶ್

ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು, ಇಂತಹ ಯೋಚನೆಗಳನ್ನು ಬಿಡಬೇಕು,  ಸಿಎಂ ಯಡಿಯೂರಪ್ಪ ನಿರಾತಂಕವಾಗಿ ಪೂರ್ಣಾವಧಿ ಪೂರೈಸುವರು ಸಚಿವ ಎಚ್. ನಾಗೇಶ್ ಹೇಳಿದ್ದಾರೆ.

news18-kannada
Updated:October 22, 2020, 9:29 AM IST
ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ಬಿಜೆಪಿಗೆ ಅಸ್ತಿತ್ವವೇ ಇರಲ್ಲ; ಸಚಿವ ಎಚ್.ನಾಗೇಶ್
ಅಬಕಾರಿ ಸಚಿವ ಹೆಚ್ ನಾಗೇಶ್.
  • Share this:
ಕೋಲಾರ(ಅ.22): ಈಗಾಗಲೇ ರಾಜ್ಯದಲ್ಲಿ ಬಿಜೆಪಿ ಪಕ್ಷ  ಯಡಿಯೂರಪ್ಪನವರನ್ನು  ಒಮ್ಮೆ ಕಳೆದುಕೊಂಡು ಸಾಕಷ್ಟು  ಅನುಭವಿಸಿದೆ.  ಯಡಿಯೂರಪ್ಪ ಇಲ್ಲವಾದರೆ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದಿಂದ ಯಾರೋ ಒಬ್ಬರು ಮತ್ತೊಮ್ಮೆ ಸುಲಭವಾಗಿ ಸಿಎಂ ಆಗ್ತಾರೆ, ನಂತರ ರಾಜ್ಯದಲ್ಲಿ ಆಮೇಲೆ ಬಿಜೆಪಿ ಅಸ್ತಿತ್ವದಲ್ಲೆ ಇರಲ್ಲ, ನಾನು ಇದ್ದ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿಗೆ ಬೆಂಬಲ ನೀಡಿದ್ದೇನೆ. ಅವರ ಮೇಲೆ ನಂಬಿಕೆ ಇಟ್ಟು ಬಾಂಬೆ ವಿಮಾನ ಹತ್ತಿದ್ದು ಮೊದಲು ನಾನೇ, ಸಿಎಂ ಸ್ಥಾನದಲ್ಲಿ ಯಡಿಯೂರಪ್ಪ ಅವರೇ ಇರಬೇಕು, ಇದು ನನ್ನ ವೈಯಕ್ತಿಕ ಅಭಿಪ್ರಾಯ. ಬೇರೆ ಯಾರೇ ಸಿಎಂ ಆದರು ಸಮಸ್ಯೆಗಳು ಸೃಷ್ಟಿಯಾಗುತ್ತೆ, ಒಂಟಿಸಲಗದ ಹಾಗೆ ನೆರೆ ಪರಿಸ್ಥಿತಿಯಲ್ಲಿ ಒಬ್ಬರೇ ಒಡಾಡಿದ್ದರು. ಕಷ್ಟಕಾಲದಲ್ಲಿ ಹೀಗೆ ಸಿಎಂ ಬದಲಾವಣೆ ಬಗ್ಗೆ ಚರ್ಚೆ ಯಾಕೆ ಮುನ್ನಲೆಗೆ ಬಂತೋ ಗೊತ್ತಿಲ್ಲ ಎಂದು ಅಬಕಾರಿ ಸಚಿವ ಎಚ್. ನಾಗೇಶ್ ಹೇಳಿದ್ದಾರೆ.

ಮುಂದುವರೆದ ಅವರು, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು, ಇಂತಹ ಯೋಚನೆಗಳನ್ನು ಬಿಡಬೇಕು,  ಸಿಎಂ ಯಡಿಯೂರಪ್ಪ ನಿರಾತಂಕವಾಗಿ ಪೂರ್ಣಾವಧಿ ಪೂರೈಸುವರು. ಇನ್ನು ಈಗಾಗಲೇ ಯತ್ನಾಳ್ ಅವರ ವಿರುದ್ದ ಶಿಸ್ತು ಕ್ರಮ ಜರುಗಿಸಲು ಕೆಲ ಬಿಜೆಪಿ ನಾಯಕರು ಆಗ್ರಹಿಸಿದ ಬೆನ್ನಲ್ಲೇ, ಪ್ರತಿಕ್ರಿಯೆ ನೀಡಿದ ಸಚಿವರು, ಬಿಜೆಪಿ  ಹೈ ಕಮಾಂಡ್ ತುಂಬಾ ಬಲಿಷ್ಟವಾಗಿದೆ, ಯಾರ ಮಾತನ್ನು ಅವರು ಕೇಳಲ್ಲ, ಅಶಿಸ್ತು ಮಾತ್ರ ಪಕ್ಷ ಸಹಿಸಲ್ಲ  ಎಂದು ಸಚಿವ ನಾಗೇಶ್ ಅವರು ತಿರುಗೇಟು ಕೊಟ್ಟಿದ್ದಾರೆ.

ಅ. 27ರಂದು ಭಾರತ ಮತ್ತು ಅಮೆರಿಕ ಮಧ್ಯೆ ಮೂರನೇ ಸುತ್ತಿನ ಮಾತುಕತೆ

ಇದೇ ವೇಳೆ, ಪರಿಷತ್ ಚುನಾವಣೆಯ ನಾಲ್ಕು ಸ್ಥಾನ ಗೆಲ್ಲುತ್ತೇವೆ, ಆಗ್ನೇಯ ಪದವೀಧರರ ಕ್ಷೇತ್ರ ಗೆದ್ದಾಗಿದೆ. ಗೆಲುವಿನ ಅಂತರ ಹೆಚ್ಚಿಸುವ ಕಸರತ್ತು ಆರಂಭಿಸಿದ್ದೇವೆ ಎಂದರು. ಕೋಲಾರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ ಬಗ್ಗೆ ಮಾತನಾಡಿದ ಸಚಿವ ನಾಗೇಶ್ ರವರು, ಬಿಜೆಪಿ ಅಭ್ಯರ್ಥಿ ಚಿದಾನಂದ್ ಎಂ ಗೌಡ , ಸದುದ್ದೇಶ ಹೊಂದಿರುವ ವ್ಯಕ್ತಿಯಾಗಿದ್ದಾರೆ. ತನಗೆ ದಾರಿ ತೋರಿಸಿಕೊಟ್ಟವರ ಹೆಸರಿನಲ್ಲೆ, ಶಿಕ್ಷಣ ಸಂಸ್ಥೆ ಸ್ಥಾಪಿಸಿ ಸಾರ್ಥಕತೆ ಮೆರೆದಿದ್ದಾರೆ. ನಾನು ಯಾರನ್ನು ಜಾಸ್ತಿ ಹೊಗಳುವುದಿಲ್ಲ. ಆದರೆ ಅಭ್ಯರ್ಥಿ ಚಿದಾನಂದ ಎಂ‌ ಗೌಡ ಅವರನ್ನ ನೋಡಿದರೆ ಅರ್ಥವಾಗುತ್ತದೆ. ಅವರೊಬ್ಬ ಉತ್ತಮ ಅಭ್ಯರ್ಥಿಯೆಂದು. ಈಗಾಗಲೇ ನಾವು ಆಗ್ನೇಯ ಪದವೀಧರರ ಕ್ಷೇತ್ರವನ್ನ ಗೆದ್ದಿದ್ದೇವೆ, ಗೆಲುವಿನ ಅಂತರವನ್ನ ಹೆಚ್ಚಿಸಿಕೊಳ್ಳಲು ಹೋರಾಟ ಮಾಡ್ತದ್ದೀವಿ ಎಂದರು.

ಪರಿಷತ್ ಚುನಾವಣೆಯ ನಾಲ್ಕೂ ಸ್ಥಾನಗಳನ್ನ ಗೆಲ್ಲುವುದರ ಮೂಲಕ, ವಿಧಾನ ಪರಿಷತ್ ನಲ್ಲಿ ನಮ್ಮ  ಶಾಸಕರ ಸಂಖ್ಯೆ ಹೆಚ್ಚಿಸಿಕೊಂಡು ಅಭಿವೃದ್ಧಿ ಕಾರ್ಯಗಳಿಗೆ ಅಡಚಣೆ ಆಗದಂತೆ ನೋಡಿಕೊಳ್ಳುವುದು ನಮ್ಮ ಉದ್ದೇಶ ಎಂದು ತಿಳಿಸಿದರು.
Published by: Latha CG
First published: October 22, 2020, 7:53 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading