ಈಗ ಸಿಎಂ ಕುರ್ಚಿ ಖಾಲಿ ಇಲ್ಲ, ಯೋಗ ಬಂದರೆ ಯಾರು ಬೇಕಾದ್ರೂ  ಸಿಎಂ ಆಗಬಹುದು; ಉಮೇಶ್​ ಕತ್ತಿಗೆ ಸಿ.ಟಿ.ರವಿ ತಿರುಗೇಟು

ಬಿಜೆಪಿ ಸರ್ಕಾರ ಬೀಳಲು ಬಿಡಲ್ಲ, ಮಧ್ಯಂತರ ಚುನಾವಣೆ ಇಲ್ಲ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿ.ಟಿ.ರವಿ, ಅವರಿಗೆ ರಾಜಕೀಯ ಪಿತ್ರಾರ್ಜಿತ.  ನಮಗೆ ಸ್ವಯಾರ್ಜಿತ, ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ ಎಂದರು.

Latha CG | news18-kannada
Updated:October 27, 2019, 3:33 PM IST
ಈಗ ಸಿಎಂ ಕುರ್ಚಿ ಖಾಲಿ ಇಲ್ಲ, ಯೋಗ ಬಂದರೆ ಯಾರು ಬೇಕಾದ್ರೂ  ಸಿಎಂ ಆಗಬಹುದು; ಉಮೇಶ್​ ಕತ್ತಿಗೆ ಸಿ.ಟಿ.ರವಿ ತಿರುಗೇಟು
ಸಿ.ಟಿ.ರವಿ-ಉಮೇಶ್​ ಕತ್ತಿ
  • Share this:
ಹಾಸನ(ಅ.27): ಸಿಎಂ ಆಗುವ ಅರ್ಹತೆ ಇರುವವರು ಬಹಳ ಜನ ಇದ್ದಾರೆ. ಈಗ ಸಿಎಂ ಕುರ್ಚಿ ಖಾಲಿ ಇಲ್ಲ, ಯೋಗ ಬಂದರೆ ಯಾರು ಬೇಕಾದರೂ  ಸಿಎಂ ಆಗಬಹುದು ಎಂದು ಉಮೇಶ್​ ಕತ್ತಿಗೆ ಸಚಿವ ಸಿ.ಟಿ.ರವಿ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.

ಯಡಿಯೂರಪ್ಪನವರ ನಂತರ ನಾನೇ ಸಿಎಂ ಎಂದು ನಿನ್ನೆ ಉಮೇಶ್​ ಕತ್ತಿ ಹೇಳಿದ್ದರು. ಅವರ ಹೇಳಿಕೆಗೆ ಇಂದು ಹಾಸನದಲ್ಲಿ ತಿರುಗೇಟು ನೀಡಿದ ಸಿ.ಟಿ.ರವಿ, ಯೋಗ ಬಂದರೆ ಯಾರು ಬೇಕಾದರೂ ಸಿಎಂ ಆಗಬಹುದು ಎಂದು ಹೇಳಿದ್ದಾರೆ.

ಉಪಚುನಾವಣೆಯಲ್ಲಿ ಬೈಎಲೆಕ್ಷನ್​ನಲ್ಲಿ ಅನರ್ಹರಿಗೆ ಟಿಕೆಟ್ ಕೊಡುವ ವಿಚಾರವಾಗಿ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದರು. ಅನರ್ಹ ಶಾಸಕರ ಪ್ರಕರಣ ಈಗ ಸುಪ್ರೀಂಕೋರ್ಟ್​ನಲ್ಲಿದೆ. ತೀರ್ಪು ಬರುವವರೆಗೂ ಏನೂ ಹೇಳಲಾಗದು. ಆದರೆ ಅನರ್ಹರಿಂದಲೇ ಬಿಜೆಪಿ ಸರ್ಕಾರ ರಚನೆಯಾಗಿದೆ. ಅದನ್ನು ಕೃತಜ್ಞತೆಯಿಂದ ನೆನೆಯುತ್ತೇವೆ ಎಂದರು.

ಬಿಜೆಪಿ-ಜೆಜೆಪಿ ಮೈತ್ರಿ ಸರ್ಕಾರ: 2ನೇ ಬಾರಿಗೆ ಮನೋಹರ್​​ ಲಾಲ್​​ ಖಟ್ಟರ್ ಹರಿಯಾಣ​​ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ

ಉಪಚುನಾವಣೆ ಫಲಿತಾಂಶ ಸರ್ಕಾರದ ಮೇಲೆ ಪರಿಣಾಮ ಬೀರಲಿದೆಯಾ? ಎಂಬ ಪ್ರಶ್ನೆಗೆ, ರಾಜ್ಯದ ಜನರಿಗೆ ಸ್ಥಿರ ಸರ್ಕಾರ  ಬೇಕಿದೆ. ಸ್ಥಿರ ಸರ್ಕಾರ ಬೇಕು ಎಂದರೆ ಜನ ನಮ್ಮನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಬಿಜೆಪಿ ಸರ್ಕಾರ ಬೀಳಲು ಬಿಡಲ್ಲ, ಮಧ್ಯಂತರ ಚುನಾವಣೆ ಇಲ್ಲ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿ.ಟಿ.ರವಿ, ಅವರಿಗೆ ರಾಜಕೀಯ ಪಿತ್ರಾರ್ಜಿತ.  ನಮಗೆ ಸ್ವಯಾರ್ಜಿತ, ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ ಎಂದರು.

ಸುಳ್ಳು ಹೇಳಿಕೊಂಡು ಬಹಳ‌ ದಿನ ರಾಜ್ಯಭಾರ ಮಾಡೋಕೆ ಆಗಲ್ಲ; ಬಿಜೆಪಿಗೆ ತಿರುಗೇಟು ನೀಡಿದ ರಾಮಲಿಂಗಾರೆಡ್ಡಿ
First published:October 27, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading