ಮೊದಲು ದೇಶದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದು ಯಾರು ? ರಾಜ್ಯದಲ್ಲಿ ಹೇಡಿ, ಪುಕ್ಕಲು ಸರ್ಕಾರ ಇಲ್ಲ; ಸಿದ್ದರಾಮಯ್ಯಗೆ ಸಚಿವ ಸಿ.ಟಿ. ರವಿ ತಿರುಗೇಟು

ಭಾರತ ಶಾಂತಿಯ ದೇಶ. ಇಲ್ಲಿರುವ ಮುಸ್ಲಿಮರನ್ನು ಹುಯಿಲೆಬ್ಬಿಸುವ ಅಗತ್ಯ ಇಲ್ಲ. ಇಲ್ಲಿನ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಿತ್ತುಕೊಳ್ತಿಲ್ಲ. ಇಲ್ಲಿನ ಅಲ್ಪಸಂಖ್ಯಾತರು ಹಿಂದೂಗಳಿಗಿಂತ ಹೆಚ್ಚು ಸೌಲಭ್ಯ ಪಡೆದುಕೊಂಡಿದ್ದಾರೆ. 

ಸಿಟಿ ರವಿ- ಸಿದ್ದರಾಮಯ್ಯ

ಸಿಟಿ ರವಿ- ಸಿದ್ದರಾಮಯ್ಯ

  • Share this:
ಬೆಂಗಳೂರು(ಡಿ.19): ರಾಷ್ಟ್ರೀಯ ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ ಮಾಡುವವರಿಗೆ ಸರ್ವಧರ್ಮ ದೃಷ್ಟಿಕೋನ ಇಲ್ಲ. ಸಹಬಾಳ್ವೆ ಸಂದೇಶ ಕೊಟ್ಟ ದೇಶ ಭಾರತ. ಭಯ ಹುಟ್ಟಿಸುವ ಮಾನಸಿಕತೆ ಈಗ ಪ್ರತಿಭಟನಾಕಾರರ ಧರ್ಮದಲ್ಲಿದೆ ಎಂದು ಸಚಿವ ಸಿ.ಟಿ.ರವಿ ಕಿಡಿಕಾರಿದ್ದಾರೆ.

ಗೃಹಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು,  ಭಾರತ ಶಾಂತಿಯ ದೇಶ. ಇಲ್ಲಿರುವ ಮುಸ್ಲಿಮರನ್ನು ಹುಯಿಲೆಬ್ಬಿಸುವ ಅಗತ್ಯ ಇಲ್ಲ. ಇಲ್ಲಿನ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಿತ್ತುಕೊಳ್ತಿಲ್ಲ. ಇಲ್ಲಿನ ಅಲ್ಪಸಂಖ್ಯಾತರು ಹಿಂದೂಗಳಿಗಿಂತ ಹೆಚ್ಚು ಸೌಲಭ್ಯ ಪಡೆದುಕೊಂಡಿದ್ದಾರೆ. ಬೇರೆ ದೇಶಗಳ ಅಲ್ಪಸಂಖ್ಯಾತರಿಗೆ ಪೌರತ್ವ ಕೊಡಲಾಗುತ್ತಿದೆ. ಬೆಂಕಿ ಹಚ್ಚುವ ಮಾತುಗಳನ್ನು ಕೆಲವರು ಮಾತನಾಡುವುದು  ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೌರತ್ವ ಕಾಯ್ದೆ: ‘ಜನರ ಪ್ರತಿಭಟನೆ ಹಕ್ಕು ಕಿತ್ತುಕೊಂಡ ಬಿಜೆಪಿ ಸರ್ಕಾರ‘; ಮಾಜಿ ಸಿಎಂ ಕುಮಾರಸ್ವಾಮಿ ಆಕ್ರೋಶ

ರಾಜ್ಯದಲ್ಲಿ ನಿಷೇಧಾಜ್ಞೆ ಹೇರಿದ ಪುಕ್ಕಲು ಸರ್ಕಾರ ಎಂಬ ಸಿದ್ದರಾಮಯ್ಯನವರ ಮಾತಿಗೆ ಸಿ.ಟಿ.ರವಿ ತಿರುಗೇಟು ನೀಡಿದರು. "ನಿಷೇಧಾಜ್ಞೆ ಜಾರಿ ಮಾಡೋದು ಹೊಸದೇನಲ್ಲ.  ಮೊದಲು ದೇಶದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದು ಯಾರು ? ಎಷ್ಟು ಸಂದರ್ಭಗಳಲ್ಲಿ ಹಿಂದೆ ಕರ್ಫ್ಯೂ, ನಿಷೇಧಾಜ್ಞೆ ಹೇರಿಲ್ಲ ? ವಕೀಲರಾಗಿದ್ದ ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ವಾ ? ಹಿಂಸಾಚಾರ ಆಗದಂತೆ ತಡೆಯಲು ನಿಷೇಧಾಜ್ಞೆ ಹೇರಲಾಗಿದೆ.  ಪೊಲೀಸರು ಹಿಂಸಾಚಾರ ತಡೆಯಲು ನಿಷೇಧಾಜ್ಞೆ ಹೇರಿದ್ದಾರೆ. ರಾಜ್ಯದಲ್ಲಿ ಹೇಡಿ, ಪುಕ್ಕಲು ಸರ್ಕಾರ ಇಲ್ಲ. ಇಲ್ಲಿನ ಯಾವ ಮುಸ್ಲಿಮರ ಹಕ್ಕುಗಳನ್ನು ಕಿತ್ತುಕೊಂಡಿಲ್ಲ. ಯಾರಿಗೆ ಪೌರತ್ವ ಕೊಡಬೇಕು ಅಂತ ಹೇಳಲು ಕಾಂಗ್ರೆಸ್ ನವರು ಯಾರು..? ಎಂದು ಪ್ರಶ್ನಿಸಿ ಕಿಡಿಕಾರಿದರು.

ಇದೇ ವೇಳೆ, ಶಾಸಕ‌ ಯು ಟಿ‌ ಖಾದರ್ ವಿರುದ್ಧ ಸಿ.ಟಿ.ರವಿ ವಾಗ್ದಾಳಿ ನಡೆಸಿದರು.  ಹಿಂದೂಗಳು ಹೇಡಿಗಳಲ್ಲ. ಧಮ್ಕಿ ಹಾಕುವ ಕೆಲಸ ನಿಲ್ಲಿಸಿ. ಬೆಂಕಿ ಹಾಕುವ ಮಾತಾಡಬೇಡಿ. ನಮ್ಮ ದೇಶದಲ್ಲಿ ಶೇ. 20 ಹಿಂದೂಗಳು ಶೇ.80 ಮುಸ್ಲಿಮರು ಇರುತ್ತಿದ್ದರೆ, ಆಗ ನಾನು ಬೆಂಕಿ‌ ಹಾಕುವ ಮಾತು ಆಡಲು ಆಗುತ್ತಿರಲಿಲ್ಲ.  ಆಗ ಸಿ ಟಿ ರವಿ ಬೆಂಕಿ ಹಾಕುವ ಮಾತನಾಡಿದ್ದರೆ ಸಿ ಟಿ ರವಿಗೇ ಬೆಂಕಿ ಹಾಕಿಬಿಡುತ್ತಿದ್ದರು. ಆದರೆ ಈಗ ಖಾದರ್​​​ಗೆ ಹಾಗೆ ಮಾಡಿಲ್ಲ. ಹಿಂದೂಗಳು ಆ ಕೆಲಸ ಮಾಡಲ್ಲ ಎಂದರು.

ದೆಹಲಿಯಲ್ಲಿ ಇನ್ನೂ ಆರದ ಪೌರತ್ವ ಕಾಯ್ದೆಯ ಕಿಚ್ಚು; 16 ಮೆಟ್ರೋ ನಿಲ್ದಾಣ ಹಾಗೂ ಅಂತರ್ಜಾಲ ವ್ಯವಸ್ಥೆ ಸ್ಥಗಿತ

 
Published by:Latha CG
First published: