ಬೆಂಗಳೂರಿನಲ್ಲಿ ಬೆಂಕಿ ಹಚ್ಚಿದವರು ಭಯೋತ್ಪಾದಕರು, ದೇಶದ್ರೋಹಿಗಳು; ಸಚಿವ ಬಿ.ಸಿ. ಪಾಟೀಲ್

 ಡಿಜೆ,ಕೆಜಿ ಹಳ್ಳಿ ಗಲಭೆ ಪ್ರಕರಣ ರಾಜಕೀಯ ತಿರುವು ಪಡೆದಿದೆ. ಅದು ಉದ್ದೇಶಪೂರ್ವಕ, ಪೂರ್ವನಿಯೋಜಿತ ಕೃತ್ಯ. ರಾಜ್ಯ,ಕೇಂದ್ರ ಸರಕಾರಕ್ಕೆ ಕೆಟ್ಟ ಹೆಸರು ತರಬೇಕೆಂದು ಮಾಡಿದ್ದಾರೆ. ಮೋದಿ ಅವರು ಅಯೋಧ್ಯೆಯಲ್ಲಿ ಶ್ರೀರಾಮನ ದೇವಸ್ಥಾನದ ಅಡಿಗಲ್ಲು ಹಾಕಿದರು. ಇದನ್ನು ಸಹಿಲಾರದ ದುಷ್ಟ ಶಕ್ತಿಗಳು ಕರ್ನಾಕಟಕ್ಕೆ ಕೆಟ್ಟ ಹೆಸರು ತರಬೇಕು ಎಂದು ಉದ್ದೇಶ ಪೂರ್ವಕವಾಗಿ ಮಾಡಿದ್ದಾರೆ ಎಂದು ಆರೋಪಿಸಿದರು. 

ಬಿ.ಸಿ. ಪಾಟೀಲ್.

ಬಿ.ಸಿ. ಪಾಟೀಲ್.

  • Share this:
ಹಾವೇರಿ(ಆ.17): ಬೆಂಗಳೂರಿನಲ್ಲಿ ಬೆಂಕಿ ಹಚ್ಚಿದವರು ದುಷ್ಕರ್ಮಿಗಳು, ಭಯೋತ್ಪಾಕದರು, ದೇಶದ್ರೋಹಿಗಳು. ಅದಕ್ಕೆ ರಾಜಕೀಯ ಪಕ್ಷದ ಹಿನ್ನೆಲೆ ಖಂಡಿತಾ ಇದೆ ಎಂದು ಹಾವೇರಿಯಲ್ಲಿ ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿದ್ದಾರೆ.

ಹಾವೇರಿ ಜಿಲ್ಲೆ ಹಿರೇಕೆರೂರಿನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಡಿಜೆ,ಕೆಜಿ ಹಳ್ಳಿ ಗಲಭೆ ಪ್ರಕರಣ ರಾಜಕೀಯ ತಿರುವು ಪಡೆದಿದೆ. ಅದು ಉದ್ದೇಶಪೂರ್ವಕ, ಪೂರ್ವನಿಯೋಜಿತ ಕೃತ್ಯ. ರಾಜ್ಯ,ಕೇಂದ್ರ ಸರಕಾರಕ್ಕೆ ಕೆಟ್ಟ ಹೆಸರು ತರಬೇಕೆಂದು ಮಾಡಿದ್ದಾರೆ. ಮೋದಿ ಅವರು ಅಯೋಧ್ಯೆಯಲ್ಲಿ ಶ್ರೀರಾಮನ ದೇವಸ್ಥಾನದ ಅಡಿಗಲ್ಲು ಹಾಕಿದರು. ಇದನ್ನು ಸಹಿಲಾರದ ದುಷ್ಟ ಶಕ್ತಿಗಳು ಕರ್ನಾಕಟಕ್ಕೆ ಕೆಟ್ಟ ಹೆಸರು ತರಬೇಕು ಎಂದು ಉದ್ದೇಶ ಪೂರ್ವಕವಾಗಿ ಮಾಡಿದ್ದಾರೆ ಎಂದು ಆರೋಪಿಸಿದರು. 

ಯಾರನ್ನು ಇವರು ಅಮಾಯಕರು ಎಂದರೋ ಅವರೆ ಬೆಂಕಿ ಹಚ್ಚಿದ್ದಾರೆ‌. ಕಾಂಗ್ರೆಸ್ ಶಾಸಕನ ಮನೆಗೆ ಬೆಂಕಿ ಹಚ್ಚಿದರು ಅವರನ್ನು ಸಮರ್ಥನೆ ಮಾಡಿಕೊಳ್ಳಲು ಆಗ್ತಿಲ್ಲ. ಒಬ್ಬ ದಲಿತ ಶಾಸಕನಿಗೆ ಕಾಂಗ್ರೆಸ್ ನಲ್ಲಿ ರಕ್ಷಣೆ ಕೊಟ್ಟಿಲ್ಲ. ಅವರ ಶಾಸಕರ ಮನೆಗೆ ಬೆಂಕಿ ಹಚ್ಚಿದವರನ್ನು  ಅಮಾಯಕರು ಎನ್ನುತ್ತಾರೆ. ಹಿಂದಿನ ಗೃಹ ಸಚಿವ ಕೆಜೆ ಜಾರ್ಜ್ ಅಲ್ಲಿ ಪಾದಯಾತ್ರೆ ಮಾಡ್ತಾರೆ. ಬೆಂಕಿ ಹಚ್ಚಿದವರ ಮನೆಗೆ ಭೇಟಿ ನೀಡ್ತಾರೆ. ಗಾಯಗೊಂಡು ಆಸ್ಪತ್ರೆಯಲ್ಲಿರೋ ಪೊಲೀಸ್ ರನ್ನು ಭೇಟಿ ಮಾಡುವುದಿಲ್ಲ. ಅವರನ್ನು ಯಾವುದೇ ಕಾರಣಕ್ಕೂ ಬಿಡಲು ಸಾಧ್ಯವಿಲ್ಲ. ಅವರಿಗೆ ಸರಿಯಾ ತಕ್ಕ ಶಾಸ್ತಿ ಕರ್ನಾಟಕ ಸರಕಾರ ಮಾಡುತ್ತದೆ ಎಂದು ಗುಡುಗಿದರು.

ಮ್ಯಾಟ್ರಿಮೋನಿ ಮೂಲಕ ಲಕ್ಷಾಂತರ ಹಣ ಪೀಕಿ ವ್ಯಕ್ತಿಗೆ ಮೋಸ ಮಾಡಿದ ಮಹಿಳೆ

ಇನ್ನೂ ಹಿರೇಕೆರೂರು ಪಟ್ಟಣದಲ್ಲಿ ಕೃಷಿ ಸಚಿವ ಬಿ ಸಿ ಪಾಟೀಲ್​ ಕ್ಷೇತ್ರದ ಜನರಿಗೆ ಮಾಸ್ಕ್ ವಿತರಿಸಿದರು. ಈ ವೇಳೆ ಮಾತನಾಡಿದ ಅವರು ನನಗೂ ನನ್ನ ಪತ್ನಿ ಹಾಗೂ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಆಗಿತ್ತು. ಸದ್ಯ ಸೋಂಕಿನಿಂದ ಗುಣಮುಖರಾಗಿದ್ದೇವೆ.ಸೋಂಕು ತಗುಲಿದಾಗ ನಮ್ಮ ಆರೋಗ್ಯಕ್ಕಾಗಿ ಕ್ಷೇತ್ರದ ಜನತೆ ಪಾರ್ಥಿಸಿದ್ದಾರೆ. ಜನತೆಯ ಋಣವನ್ನು  ತೀರಿಸಬೇಕಿದೆ ಎಂದು ಹೇಳಿದರು.ಜನರ ಆರೋಗ್ಯಕ್ಕಾಗಿ ಎರಡೂವರೆ ಲಕ್ಷ ಮಾಸ್ಕ್ ಗಳನ್ನು ಸಿದ್ಧಪಡಿಸಲಾಗಿದೆ. ಮಾಸ್ಕ್ ವೆಚ್ಚ ಸುಮಾರು 40 ಲಕ್ಷ ರೂಪಾಯಿ ತಗುಲಿದ್ದು, ಪ್ರತಿ ಮನೆಯ ಪ್ರತಿಯೊಬ್ಬರಿಗೂ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ನನ್ನ ವೈಯಕ್ತಿಕವಾಗಿ ಮಾಸ್ಕ್ ವಿತರಣೆ ಮಾಡುತ್ತಿದ್ದೇನೆ ಎಂದರು.
Published by:Latha CG
First published: