ನಾಳೆಯಿಂದ ವಿಧಾನಮಂಡಲ ಅಧಿವೇಶನ; ಆದರೆ, ಬಹುಮತ ಸಾಬೀತಿಗೆ ಮೈತ್ರಿ ವಿರುದ್ಧ ಬಿಜೆಪಿ ಒತ್ತಡ ಹೇರಲ್ಲ; ಯಾಕೆ ಗೊತ್ತಾ?

MAshok Kumar | news18
Updated:July 11, 2019, 12:18 PM IST
ನಾಳೆಯಿಂದ ವಿಧಾನಮಂಡಲ ಅಧಿವೇಶನ; ಆದರೆ, ಬಹುಮತ ಸಾಬೀತಿಗೆ ಮೈತ್ರಿ ವಿರುದ್ಧ ಬಿಜೆಪಿ ಒತ್ತಡ ಹೇರಲ್ಲ; ಯಾಕೆ ಗೊತ್ತಾ?
ವಿಧಾನ ಸೌಧ
  • News18
  • Last Updated: July 11, 2019, 12:18 PM IST
  • Share this:
ಬೆಂಗಳೂರು (ಜುಲೈ.11); ನಾಳೆಯಿಂದ ರಾಜ್ಯ ವಿಧಾನಮಂಡಲ ಅಧಿವೇಶನ ಆರಂಭವಾಗಲಿದೆ. 16ಕ್ಕೂ ಹೆಚ್ಚು ಶಾಸಕರು ರಾಜೀನಾಮೆ ಸಲ್ಲಿಸಿರುವ ಪರಿಣಾಮ ಮೈತ್ರಿ ಸರ್ಕಾರ ತಾಂತ್ರಿಕವಾಗಿ ತನ್ನ ಬಹುಮತವನ್ನು ಕಳೆದುಕೊಂಡಿದೆ. ಹೀಗಾಗಿ ಅಧಿವೇಶನಲ್ಲಿ ವಿರೋಧ ಪಕ್ಷವಾಗಿ ಬಿಜೆಪಿ ಆಡಳಿತ ಪಕ್ಷವನ್ನು ಬಹುಮತ ಸಾಭೀತಿಗೆ ಒತ್ತಾಯಿಸಿದರೆ, ಸರ್ಕಾರ ಉರುಳುವುದು ಬಹುತೇಕ ಖಚಿತ ಎಂದೇ ಹೇಳಲಾಗುತ್ತಿದೆ. ಆದರೆ, ಈ ಒಂದು ಕಾರಣಕ್ಕೆ ಸದನದಲ್ಲಿ ಬಿಜೆಪಿ ಬಹುಮತ ಸಾಭೀತಿಗೆ ಮೈತ್ರಿಯನ್ನು ಒತ್ತಾಯಿಸಲು ಹಿಂದೇಟು ಹಾಕಲಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಕಾನೂನು ತಜ್ಞರ ಪ್ರಕಾರ ಸದನಸಲ್ಲಿ ಬಿಜೆಪಿ ಬಹುಮತ ಸಾಭೀತಿಗೆ ಒತ್ತಾಯ ಮಾಡಿದ್ರೆ ಬಿಜೆಪಿಗೆ ಸಂಕಷ್ಚ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಏಕೆಂದರೆ ಕಾಂಗ್ರೆಸ್-ಜೆಡಿಎಸ್ ಶಾಸಕರು ನೀಡಿರುವ ಯಾವ ರಾಜೀನಾಮೆಯನ್ನು ಸ್ಪೀಕರ್ ಈವರೆಗೆ ಅಂಗೀಕಾರ ಮಾಡಿಲ್ಲ. ಹೀಗಾಗಿ ಅಧಿವೇಶನದಲ್ಲಿ ವಿಪ್ ಜಾರಿಯಾದರೆ, ಎಲ್ಲಾ ಅತೃಪ್ತ ಶಾಸಕರು ಸದನಕ್ಕೆ ಆಗಮಿಸಲೇಬೇಕು. ಅಲ್ಲದೆ ಅನಿವಾರ್ಯವಾಗಿ ತಾವು ಗೆದ್ದು ಬಂದ ಪಕ್ಷದ ಪರವಾಗಿಯೇ ಮತ ಚಲಾಯಿಸಬೇಕು. ಹೀಗಾಗಿ ಕಾಂಗ್ರೆಸ್​-ಜೆಡಿಎಸ್ ಮೈತ್ರಿಗೆ ಬಹುಮತ ಸಾಭೀತುಪಡಿಸುವುದು ಕಷ್ಟವಲ್ಲ.

ಹೀಗಾಗಿ ಆಡಳಿತರೂಢ ಪಕ್ಷದ ‘ವಿಪ್’ ಅಧಿಕಾರ ವಿರೋಧ ಪಕ್ಷಕ್ಕೆ ಕಂಟಕವಾಗಿ ಪರಿಣಮಿಸುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಬಿಜೆಪಿ ಸದನದಲ್ಲಿ ಬಹುಮತ ಸಾಭೀತಿಗೆ ಒತ್ತಾಯಿಸುವ ಬದಲು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ರಾಜೀನಾಮೆಗೆ ಒತ್ತಾಯಿಸುತ್ತಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : ಸರ್ಕಾರ ಉಳಿಯದಿದ್ದರೂ ಪರವಾಗಿಲ್ಲ, ಅತೃಪ್ತರಿಗೆ ಪಾಠ ಕಲಿಸಬೇಕು; ದೋಸ್ತಿ ನಾಯಕರಿಂದ ಹೊಸ ರಣತಂತ್ರ!

First published: July 11, 2019, 11:54 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading