15 ಕ್ಷೇತ್ರಗಳಲ್ಲಿ ಬಿಜೆಪಿ 9 ಸ್ಥಾನ ಗೆಲ್ಲುವ ಸಾಧ್ಯತೆ ಇದೆ ಎಂದು ಹೇಳಿದೆ ಪಕ್ಷದ ವರದಿ

ಇನ್ನು ಹೊಸಕೋಟೆಯಲ್ಲಿ ಹಿಂದಿನ ವರದಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ವರ್ಸಸ್​ ಬಿಜೆಪಿ ಬಂಡಾಯ ಅಭ್ಯರ್ಥಿ ಶರತ್ ಬಚ್ಚೇಗೌಡ ಎಂದು ಹೇಳಲಾಗಿತ್ತು. ಆದರೀಗ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ವರ್ಸಸ್ ಶರತ್ ಬಚ್ಚೇಗೌಡ ಎಂದಿದೆ. 

HR Ramesh | news18-kannada
Updated:November 29, 2019, 7:31 AM IST
15 ಕ್ಷೇತ್ರಗಳಲ್ಲಿ ಬಿಜೆಪಿ 9 ಸ್ಥಾನ ಗೆಲ್ಲುವ ಸಾಧ್ಯತೆ ಇದೆ ಎಂದು ಹೇಳಿದೆ ಪಕ್ಷದ ವರದಿ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು: 15 ವಿಧಾನಸಭೆಗೆ ನಡೆಯುತ್ತಿರುವ ಉಪಚುನಾವಣೆ ಬಿಜೆಪಿ ಸರ್ಕಾರದ ಅಳಿವು-ಉಳಿವಿನ ಪ್ರಶ್ನೆಯಾಗಿದೆ. ಹೀಗಾಗಿ ಈ ಚುನಾವಣೆಯಲ್ಲಿ ಬಹುತೇಕ ಸ್ಥಾನಗಳಲ್ಲಿ ಗೆಲ್ಲಲು ಬಿಜೆಪಿ ಶತಾಯ ಗತಾಯ ಪ್ರಯತ್ನ ನಡೆಸುತ್ತಿದೆ. 15 ಕ್ಷೇತ್ರಗಳಲ್ಲಿ ಬಿಜೆಪಿ  ಒಂಭತ್ತು ಸ್ಥಾನ ಗೆಲ್ಲಬಹುದು ಎಂದು ಎರಡು ವರದಿಗಳು ಹೇಳಿವೆ.

ಬೆಂಗಳೂರಿನಲ್ಲಿ ಮಹಾಲಕ್ಷ್ಮಿ ಲೇಔಟ್, ಕೆ.ಆರ್ ಪುರಂ, ಶಿವಾಜಿನಗರ, ಚಿಕ್ಕಬಳ್ಳಾಪುರ,  ಗೋಕಾಕ್, ಅಥಣಿ, ಹಿರೇಕೆರೂರು, ವಿಜಯನಗರ, ಯಲ್ಲಾಪುರ ಗೆಲ್ಲುವ ಅವಕಾಶ ಹೆಚ್ಚಿವೆ ಎಂದು ವರದಿ ಹೇಳಿದೆ.

ಮಹಾಲಕ್ಷ್ಮಿ ಲೇಔಟ್​ನಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಸಾಕಷ್ಟು ಕಾರಣಗಳು ಪೂರಕವಾಗಿವೆ. ಅವುಗಳಲ್ಲಿ ಮುಖ್ಯವಾದದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ಪ್ರಭಾವಿಯಾಗಿಲ್ಲದಿರುವುದು, ಬಿಜೆಪಿ ಬಂಡಾಯಗಾರರು ಸಮಾಧಾನಗೊಂಡಿರುವುದು ಹಾಗೂ ಅಭ್ಯರ್ಥಿ ಗೋಪಾಲಯ್ಯ ಅವರಿಗೆ ವೈಯಕ್ತಿಕ ವರ್ಚಸ್ಸು ಇರುವುದರಿಂದ ಈ ಕ್ಷೇತ್ರ ಬಿಜೆಪಿ ಗೆಲುವಿಗೆ ಪೂರಕವಾಗಿದೆ ಎನ್ನಲಾಗಿದೆ.

ಹಾಗೆಯೇ ಕೆ.ಆರ್ ಪುರಂನಲ್ಲಿ ಭೈರತಿ ಬಸವರಾಜ್ ಅವರಿಗೆ ಹಲವು ಅಂಶಗಳು ಪೂರಕವಾಗಿದೆ. ಸ್ಥಳೀಯ ಪ್ರಭಾವಿ ನಾಯಕ ನಂದೀಶ್ ರೆಡ್ಡಿ ಒಂದಾಗಿರುವುದು,  ಬಸವರಾಜ್ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿರೋದು, ಯುವಕರೊಂದಿಗೆ ಉತ್ತಮ ಒಡನಾಟ ಮತ್ತು ಕಾಂಗ್ರೆಸ್ ಅಭ್ಯರ್ಥಿ ನಾರಾಯಣಸ್ವಾಮಿ ಹಾಗೂ ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಅಷ್ಟೆನೂ ಪ್ರಬಲವಾಗಿಲ್ಲದೇ ಇರುವುದು ಭೈರತಿ ಬಸವರಾಜು ಅವರಿಗೆ ಪ್ಲಸ್​ ಆಗಿದೆ.

ಶಿವಾಜಿನಗರ ಕ್ಷೇತ್ರ ಕೂಡ ಬಿಜೆಪಿ ಪರವಾಗಿಯೇ ಇದೆ ಎಂದು ವರದಿ ಹೇಳಿದೆ. ಕಳೆದ ಬಾರಿ ವರದಿಯಲ್ಲಿ 50:50 ಎಂದು ಹೇಳಲಾಗಿತ್ತು. ಆದರೆ ಈ ಬಾರಿ ಕಾಂಗ್ರೆಸ್​ನ ನಾಲ್ವರು ಕಾರ್ಪೋರೇಟರ್ ಸೇರಿದಂತೆ ರೋಷನ್ ಬೇಗ್ ಬೆಂಬಲ ಸಿಕ್ಕಿರುವುದು ಬಿಜೆಪಿ ಅಭ್ಯರ್ಥಿ ಸರವಣಗೆ ವರವಾಗಿ ಪರಿಣಮಿಸಿದೆ. ಜೆಡಿಎಸ್ ಅಭ್ಯರ್ಥಿ ಸೇರಿ ಎಂಟು ಮುಸ್ಲಿಂ ಪಕ್ಷೇತರ ಅಭ್ಯರ್ಥಿಗಳು ಸ್ಪರ್ದೆ ಮಾಡಿರೋದು ಮುಸ್ಲಿಂ ಮತ ವಿಭಜನೆಯಾಗಲಿವೆ. ಇದು ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್​ಗೆ ಹಿನ್ನಡೆ ಉಂಟು ಮಾಡುವ ಸಾಧ್ಯತೆ ಇದೆ. ಸಾಲದ್ದಕ್ಕೆ ಮೂವರು ಕ್ರಿಶ್ಚಿಯನ್ ಅಭ್ಯರ್ಥಿಗಳು ಪಕ್ಷೇತರರಾಗಿ ಕಣಕ್ಕಿಳಿದಿರುವುದರಿಂದ ಕಾಂಗ್ರೆಸ್​ನ ಕ್ರಿಶ್ಚಿಯನ್ ಮತಗಳನ್ನು ವಿಭಜನೆಯಾಗಲಿವೆ. ಬಿಜೆಪಿ ಅಭ್ಯರ್ಥಿ ಸರವಣಗೆ ತಮಿಳು ಮತದಾರರು ಕೈ ಹಿಡಿಯುವುದು ಹಾಗೂ ಹಿಂದೂಪರ ಮತದಾರರು ಜೊತೆಗಿರುವುದು ಅವರಿಗೆ ವರವಾಗಿದೆ.

ಕಳೆದ ಬಾರಿ 50:50 ಇದ್ದ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಗೆಲ್ಲುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ. ಬಿಜೆಪಿ ಅಭ್ಯರ್ಥಿ ಕೆ.ಸುಧಾಕರ್ ಎದುರು ಪ್ರತಿಸ್ಪರ್ಧಿಗಳು ಪ್ರಬಲವಾಗಿಲ್ಲದೇ ಇರುವುದು ಮತ್ತು ಸಂಘ ಪರಿವಾರ ಪರವಾಗಿ ನಿಂತಿರುವುದು ಹಾಗೂ ಮೆಡಿಕಲ್ ಕಾಲೇಜ್ ಘೋಷಣೆ, ಮಂಚೇನಹಳ್ಳಿ ತಾಲೂಕು ಘೋಷಣೆ,  ವಸತಿಹೀನರಿಗೆ ಪುನರ್ವಸತಿ ಘೋಷಣೆ ಗೆಲುವಿಗೆ ಸಹಕಾರಿ ಆಗಲಿದೆ ಎಂದು ವರದಿ ಹೇಳಿದೆ.

ಇನ್ನುಳಿದ ಆರು ಕ್ಷೇತ್ರಗಳಲ್ಲಿ ಗೆಲುವು ಕಷ್ಟವಾಗಲಿದೆ. ಆದರೆ ಪ್ರಯತ್ನಪಟ್ಟರೆ ಮೂರಾದರೂ ಗೆಲ್ಲಬಹುದು ಎಂದು ವರದಿ ಹೇಳಿದೆ. ಪ್ರಮುಖವಾಗಿಕಳೆದ ವರದಿಯಲ್ಲಿ ಯಶವಂತಪುರ ಜೆಡಿಎಸ್ ತೆಕ್ಕೆಗೆ ಎಂದು ಹೇಳಲಾಗಿತ್ತಾದರೂ ಈಗ 50:50 ಎಂದು ವರದಿ ಕೊಟ್ಟಿದೆ. ಯಶವಂತಪುರ ಕ್ಷೇತ್ರದಲ್ಲಿ 50 ಸಾವಿರ ಲಿಂಗಾಯತ ಮತಗಳಿದ್ದು. ಅವುಗಳು ಎಲ್ಲೂ ವಿಭಜನೆಯಾಗದೆ ಸಂಪೂರ್ಣವಾಗಿ ಬಿಜೆಪಿ ಕೈ ಹಿಡಿದರೆ ಗೆಲುವು ಕಷ್ಟ ಅಲ್ಲ ಎನ್ನಲಾಗಿದೆ. ಇದೇ ಕಾರಣಕ್ಕೆ ಸಿಎಂ ಬಿಎಸ್​ವೈ ಮಗ ವಿಜಯೇಂದ್ರಗೆ ಯಶವಂತಪುರ ತಂತ್ರಗಾರಿಕೆ ಮತ್ತು ಪ್ರಚಾರದ ಹೊಣೆ ವಹಿಸಲಾಗಿದೆ.

ಇದನ್ನು ಓದಿ: ಮಾನ ಇದ್ದವರು ಮಾತ್ರ ಮಾನನಷ್ಟ ಮೊಕದ್ದಮೆ ಹಾಕಬೇಕು; ಬಿಎಸ್​ವೈ ಹೇಳಿಕೆಗೆ ಎಚ್​ಡಿಕೆ ತಿರುಗೇಟು

ಇನ್ನು ಹೊಸಕೋಟೆಯಲ್ಲಿ ಹಿಂದಿನ ವರದಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ವರ್ಸಸ್​ ಬಿಜೆಪಿ ಬಂಡಾಯ ಅಭ್ಯರ್ಥಿ ಶರತ್ ಬಚ್ಚೇಗೌಡ ಎಂದು ಹೇಳಲಾಗಿತ್ತು. ಆದರೀಗ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ವರ್ಸಸ್ ಶರತ್ ಬಚ್ಚೇಗೌಡ ಎಂದಿದೆ.

ಹಾಗೆಯೇ, ಕಾಗವಾಡ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆಗೆ ಮುನ್ನಡೆ ಎಂದು ವರದಿ ಹೇಳಿದೆ. ರಾಣೇಬೆನ್ನೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಕೋಳಿವಾಡ ಅವರಿಗೆ ಗೆಲ್ಲುವ ಅವಕಾಶ ಇದೆ, ಕೆ.ಆರ್. ಪೇಟೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದ್ದರೆ, ಹುಣಸೂರಿನಲ್ಲಿ ಸಮಬಲ ಹೋರಾಟ ಇದೆ ಎಂದು ವರದಿಯಲ್ಲಿ ಹೇಳಲಾಗಿದೆ.

  • ವಿಶೇಷ ವರದಿ: ಚಿದಾನಂದ ಪಟೇಲ್


 
First published: November 29, 2019, 7:31 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading