ಜೆಡಿಎಸ್ ಭದ್ರಕೋಟೆ ಹಾಸನದಲ್ಲಿ ಆಪರೇಷನ್ ಕಮಲ; ಬಿಜೆಪಿಯ ಮೀಸಲಾತಿ ದಾಳಕ್ಕೆ ಉರುಳುತ್ತಾ ನಗರಸಭೆ ಅಧ್ಯಕ್ಷ ಗಾದಿ?

ನಗರಸಭೆ ಚುನಾವಣೆಯಲ್ಲಿ ಬಿಜೆಪಿ 13 ಸ್ಥಾನಗಳಲ್ಲಿ ಗೆದ್ದಿದೆ. ಒಬ್ಬ ಶಾಸಕರ ಮತ ಸೇರಿ ಬಿಜೆಪಿ 14 ಸ್ಥಾನ ಹೊಂದಿದೆ. ನಗರಸಭೆ ಆಧಿಕಾರಕ್ಕೆ ಬರಲು 18 ಸದಸ್ಯರ ಬಹುಮತ ಬೇಕಿದೆ. ಗಣಿತ ಲೆಕ್ಕಾಚಾರ ಗೊತ್ತಿರುವವರು ಬಿಜೆಪಿ ಆಪರೇಷನ್ ಬಗ್ಗೆ ಮಾತನಾಡುವುದಿಲ್ಲ. ನಗರಸಭೆ ಅಧಿಕಾರ ಬಿಜೆಪಿಯದ್ದೇ ಕಾದು ನೋಡಿ ಎಂದು ಬಿಜೆಪಿ ಶಾಸಕ ಪ್ರೀತಂ ಜೆ. ಗೌಡ ಹೇಳುತ್ತಾರೆ.

news18
Updated:December 26, 2019, 7:19 AM IST
ಜೆಡಿಎಸ್ ಭದ್ರಕೋಟೆ ಹಾಸನದಲ್ಲಿ ಆಪರೇಷನ್ ಕಮಲ; ಬಿಜೆಪಿಯ ಮೀಸಲಾತಿ ದಾಳಕ್ಕೆ ಉರುಳುತ್ತಾ ನಗರಸಭೆ ಅಧ್ಯಕ್ಷ ಗಾದಿ?
ಹಾಸನ ನಗರಸಭೆ ಕಾರ್ಯಾಲಯ
  • News18
  • Last Updated: December 26, 2019, 7:19 AM IST
  • Share this:
ಹಾಸನ(ಡಿ. 25): ನಗರಸಭೆ ಅಧ್ಯಕ್ಷ ಗಾದಿ ಮೇಲೆ ಕಣ್ಣಿಟ್ಟಿದ್ದ ಜೆಡಿಎಸ್‍ಗೆ ಈಗ ಬಿಜೆಪಿ ಸೆಡ್ಡು ಹೊಡೆಯಲು ತೆರೆಮೆರೆಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದೆ. 35 ಜನ ಸದಸ್ಯರಿರುವ ಹಾಸನ ನಗರಸಭೆಯಲ್ಲಿ ಜೆಡಿಎಸ್ 17 ಸದಸ್ಯರನ್ನು, ಬಿಜೆಪಿ 13 ಸದಸ್ಯರನ್ನು ಹೊಂದಿದೆ. ಇಬ್ಬರು ಕಾಂಗ್ರೆಸ್ ಸದಸ್ಯರು ಮತ್ತು ಮೂವರು ಪಕ್ಷೇತರ ಸದಸ್ಯರಿದ್ದು, ನಗರಸಭೆ ಅಧಿಕಾರಕ್ಕೆ ಬರಲು 18 ಸದಸ್ಯರ ಬಲ ಅಗತ್ಯವಾಗಿದೆ.

ಈಗಾಗಲೇ ಇಬ್ಬರು ಪಕ್ಷೇತರರು ಜೆಡಿಎಸ್ ಜೊತೆ ಗುರುತಿಸಿಕೊಂಡಿದ್ದು ಜೆಡಿಎಸ್ ಬಲ 17 ರಿಂದ 19ಕ್ಕೇರಿದೆ. ಹಾಗೆಯೇ ಜೆಡಿಎಸ್ ಪಕ್ಷಕ್ಕೆ ಸಂಸದರ ಮತ ಚಲಾವಣೆಗೆ ಅವಕಾಶ ಸಿಕ್ಕರೆ ಜೆಡಿಎಸ್ ಬಲ 20ಕ್ಕೇರಲಿದ್ದು ಜೆಡಿಎಸ್‍ಗೆ ಅಧಿಕಾರ ನಿಚ್ಚಳ ಎಂಬ ವಿಶ್ವಾಸ ಜೆಡಿಎಸ್ ವಲಯದಲ್ಲಿದೆ.

ಆದರೆ ಈ ಮಧ್ಯೆ ನಗರಸಭೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ತೆರೆಮೆರೆಯಲ್ಲಿ ಮುಂದಾಗಿದ್ದು 13 ಜನ ಸದಸ್ಯರನ್ನು ಹೊಂದಿರುವ ಬಿಜೆಪಿ ತನ್ನ ಶಾಸಕರ ಮತದೊಂದಿಗೆ 14 ಸಂಖ್ಯಾ ಬಲ ಹೊಂದಲಿದೆ. ಮೂವರು ಪಕ್ಷೇತರರು ಹಾಗೂ ಕಾಂಗ್ರೆಸ್‍ನ ಇಬ್ಬರು ಸದಸ್ಯರು ಬಿಜೆಪಿಗೆ ಬೆಂಬಲ ಸೂಚಿಸಿಬಹುದು. ಹಿಂದೆ, ಜೆಡಿಎಸ್ ಬಹುಮತ ಹೊಂದಿದ್ದರೂ ಸಹ ಅಧ್ಯಕ್ಷ ಸ್ಥಾನದ ಮೀಸಲಾತಿ ಬದಲಾವಣೆಯಿಂದಾಗಿ ಕಾಂಗ್ರೆಸ್ ಆ ಅಧ್ಯಕ್ಷ ಸ್ಥಾನವನ್ನು ತನ್ನದಾಗಿಸಿಕೊಂಡು ಜಿಲ್ಲಾ ಪಂಚಾಯಿತಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿತ್ತು. ಈಗ ನಗರಸಭೆಯಲ್ಲಿಯೂ ಅದೇ ಪ್ರಯೋಗ ಮಾಡಲು ಬಿಜೆಪಿ ಮುಂದಾಗಿದೆ.

ಇದನ್ನೂ ಓದಿ: ಬಿಎಸ್​ವೈ ನಿಜವಾದ ಹೋರಾಟಗಾರರಾಗಿದ್ದರೆ ಪರಿಹಾರ ನೀಡಲಿ, ಇಲ್ಲವೇ ತಮ್ಮದು ಕೊಲೆಗಡುಕ ಸರ್ಕಾರ ಎಂದು ಒಪ್ಪಲಿ; ಎಚ್​ಡಿಕೆ

ನಗರಸಭೆ ಅಧ್ಯಕ್ಷ ಸ್ಥಾನದ ಮೀಸಲಾತಿ ಬದಲಾವಣೆ?

ನಗರಸಭೆ ಚುನಾವಣೆಗೂ ಪೂರ್ವದಲ್ಲಿ ನಗರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗದ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯಕ್ಕೆ ಮೀಸಲಾಗಿಗಿತ್ತು. ರಾಜ್ಯದ ಹಲವಾರು ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ -ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ನಿಗದಿ ಬಗ್ಗೆ ಆಕ್ಷೇಪಣೆಗಳು ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ನ್ಯಾಯಾಲಯವು ಹೊಸದಾಗಿ ಮೀಸಲಾತಿ ತಯಾರಿಸಲು ಸರ್ಕಾರಕ್ಕೆ ಸೂಚಿಸಿದೆ. ಇದನ್ನೇ ಅಸ್ತ್ರವಾಗಿ ಬಳಸಲು ಮುಂದಾಗಿರುವ ಬಿಜೆಪಿ ನಗರಸಭೆ ಅಧ್ಯಕ್ಷ ಸ್ಥಾನದ ಮೀಸಲಾತಿಯನ್ನು ಬದಲಾಯಿಸಲು ಮುಂದಾಗಿದೆ ಎನ್ನಲಾಗುತ್ತಿದೆ. ನಗರಸಭೆಯ ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಪಂಗಡಕ್ಕೆ ಮೀಸಲು ಮಾಡಲು ಚಿಂತನೆ ನಡೆಸಲಾಗಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್‍ನಲ್ಲಿ ಪರಿಶಿಷ್ಠ ಪಂಗಡದ ಸದಸ್ಯರಿಲ್ಲದಿರುವ ಲಾಭ ಪಡೆಯಲು ಬಿಜೆಪಿ ರಣತಂತ್ರ ಹೆಣೆದಿದೆ.

ನಗರಸಭೆ ಚುನಾವಣೆಯಲ್ಲಿ ಬಿಜೆಪಿ 13 ಸ್ಥಾನಗಳಲ್ಲಿ ಗೆದ್ದಿದೆ. ಒಬ್ಬ ಶಾಸಕರ ಮತ ಸೇರಿ ಬಿಜೆಪಿ 14 ಸ್ಥಾನ ಹೊಂದಿದೆ. ನಗರಸಭೆ ಆಧಿಕಾರಕ್ಕೆ ಬರಲು 18 ಸದಸ್ಯರ ಬಹುಮತ ಬೇಕಿದೆ. ಗಣಿತ ಲೆಕ್ಕಾಚಾರ ಗೊತ್ತಿರುವವರು ಬಿಜೆಪಿ ಆಪರೇಷನ್ ಬಗ್ಗೆ ಮಾತನಾಡುವುದಿಲ್ಲ. ನಗರಸಭೆ ಅಧಿಕಾರ ಬಿಜೆಪಿಯದ್ದೇ ಕಾದು ನೋಡಿ ಎಂದು ಬಿಜೆಪಿ ಶಾಸಕ ಪ್ರೀತಂ ಜೆ. ಗೌಡ ಹೇಳುತ್ತಾರೆ.ಇದನ್ನೂ ಓದಿ: ಮಂಗಳೂರು ಹಿಂಸಾಚಾರ ವಿಡಿಯೋ ಬಗ್ಗೆ ಡಿಕೆಶಿ ಅನುಮಾನ; ಡಿಸಿಎಂ ಗೋವಿಂದ ಕಾರಜೋಳ ಪ್ರತಿಕ್ರಿಯೆ ಏನು ಗೊತ್ತಾ?

ಜೆಡಿಎಸ್ ಪಾಳಯದಲ್ಲಿ ಗುರುತಿಸಿಕೊಂಡಿರುವ ಇಬ್ಬರು ಬಿಜೆಪಿಗರು ..!

ಒಂದೆಡೆ ಬಿಜೆಪಿ ನಗರಸಭೆಯಲ್ಲಿ ಅಧಿಕಾರಕ್ಕೇರಲು ರಣತಂತ್ರ ಹೆಣೆಯುತ್ತಾ ಪಕ್ಷೇತರ ಹಾಗೂ ಕಾಂಗ್ರೆಸ್ ಸದಸ್ಯರನ್ನು ಸೆಳೆಯಲು ಮುಂದಾಗುತ್ತಿದೆ. ಮತ್ತೊಂದೆಡೆ ಕಳೆದ ಲೋಕಸಭಾ ಚುನಾವಣೆಯಲ್ಲಿಯೇ ಬಿಜೆಪಿಯ ಇಬ್ಬರು ಸದಸ್ಯರು ಜೆಡಿಎಸ್ ಸೇರಿದ್ದು ಜೆಡಿಎಸ್‍ಗೆ ಮತ್ತಷ್ಟು ಅನುಕೂಲವಾಗಲಿದೆ. ನಗರಸಭೆಯ 12ನೇ ವಾರ್ಡ್‍ನ ಸದಸ್ಯ ಮಂಜುನಾಥ್ (ಕುಳ್ಳ ಮಂಜಣ್ಣ) ಹಾಗೂ 35ನೇ ವಾರ್ಡ್‍ನ ಸದಸ್ಯೆ ಈಗಾಗಲೇ ಜೆಡಿಎಸ್‍ನಲ್ಲಿ ಗುರುತಿಸಿಕೊಂಡಿದ್ದರೂ ಚುನಾವಣೆ ವೇಳೆ ಅವರು ಬಿಜೆಪಿ ಬೆಂಬಲಿಸುತ್ತಾರೋ ಅಥವಾ ಜೆಡಿಎಸ್ ಬೆಂಬಲಿಸುತ್ತಾರೋ ಕಾದು ನೋಡಬೇಕಿದೆ.

ನ್ಯಾಯಾಲಯದ ಮೊರೆಹೋಗಲು ಜೆಡಿಎಸ್ ಸಿದ್ಧತೆ :

ಬಿಜೆಪಿ ಅಧಿಕಾರಕ್ಕೆ ಮುಂದಾಗುವುದರೊಳಗೆ ಜೆಡಿಎಸ್ ನ್ಯಾಯಾಲಯದ ಮೆಟ್ಟಿಲೇರಲು ಸಿದ್ಧತೆ ನಡೆಸಿದ್ದು ಈ ಹಿಂದಿನ ಮೀಸಲಾತಿ ನಿಗದಿಯನ್ನು ಬದಲಾಯಿಸದಂತೆ ತಡೆಯಾಜ್ಞೆ ತರಲು ಮುಂದಾಗುತ್ತಿದೆ ಎನ್ನಲಾಗಿದೆ.

ನಗರಸಭೆ ಅಧ್ಯಕ್ಷ ಸ್ಥಾನ ಈವರೆಗೆ ಎಲ್ಲಾ ರೀತಿಯ ಮೀಸಲಾತಿ ಹಂಚಿಕೆಯಾಗಿದ್ದರೂ ಪರಿಶಿಷ್ಟ ಪಂಗಡಕ್ಕೆ ಈವರೆಗೆ ನಗರಸಭೆ ಅಧ್ಯಕ್ಷ ಸ್ಥಾನ ದೊರೆಯದಿರುವುದು ಬಿಜೆಪಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಿದೆ ಎನ್ನಲಾಗುತ್ತಿದೆ. ಈ ವಾದವನ್ನೇ ಮುಂದಿಟ್ಟುಕೊಂಡು ಮೀಸಲಾತಿ ಬದಲಾವಣೆಯ ಕ್ರಮವನ್ನು ಬಿಜೆಪಿ ಸಮರ್ಥಿಸಿಕೊಳ್ಳಬಹುದು. ಬಿಜೆಪಿಯ ಈ ದಲಿತ ಅಸ್ತ್ರವು ಜೆಡಿಎಸ್ ಪಕ್ಷವನ್ನು ಅಸಹಾಯಕತೆಗೆ ತಳ್ಳುವ ಸಾಧ್ಯತೆ ಇಲ್ಲದಿಲ್ಲ. ಮುಂದಿನ ವಾರದಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಘೋಷಣೆಯಾಗುವ ಸಾಧ್ಯತೆ ಇದೆ. ಆ ಬಳಿಕ ಹಾಸನದಲ್ಲಿ ಹೊಸ ರಾಜಕೀಯ ಆಟಕ್ಕೆ ತಿರುವು ಸಿಗಲಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:December 26, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading