ರಾಹುಲ್​ ಗಾಂಧಿ ಸಂವಾದ ವೇಳೆ ಲಾಠಿ ಚಾರ್ಜ್​; ದೂರು ದಾಖಲಿಸಿದ ಆರ್​ ಅಶೋಕ್​

ಪ್ರಧಾನಿಗೆ ಜೈ ಅಂದಿದ್ದಕ್ಕೆ ಅವರನ್ನ ಹಿಡಿದು ರಾತ್ರಿ 10 ರವರೆಗೂ ಕೂರಿಸಿದ್ದಾರೆ. ಚುನಾವಣೆಗೂ ಮುನ್ನ ಈ ರೀತಿಯಾದರೆ ಚುನಾವಣೆ ವೇಳೆ ಅಧಿಕಾರ ದುರ್ಬಳಕೆ ಮಾಡುವುದಿಲ್ಲವಾ ಎಂದು ಪ್ರಶ್ನಿಸಿದರು.

Seema.R | news18
Updated:March 19, 2019, 5:32 PM IST
ರಾಹುಲ್​ ಗಾಂಧಿ ಸಂವಾದ ವೇಳೆ ಲಾಠಿ ಚಾರ್ಜ್​; ದೂರು ದಾಖಲಿಸಿದ ಆರ್​ ಅಶೋಕ್​
ದೂರು ದಾಖಲಿಸುತ್ತಿರುವ ಬಿಜೆಪಿ ಮುಖಂಡರು
Seema.R | news18
Updated: March 19, 2019, 5:32 PM IST
ಬೆಂಗಳೂರು (ಮಾ.19):  ರಾಹುಲ್ ಗಾಂಧಿ ಸಂವಾದ ವೇಳೆ ಮೋದಿ ಪರ ಘೋಷಣೆ ಕೂಗಿದ  ಐಟಿ ಉದ್ಯೋಗಿಗಳ ಮೇಲೆ ಪೊಲೀಸರು ನಡೆಸಿದ  ಲಾಠಿ ಚಾರ್ಜ್ ನಡೆಸಿದ ಘಟನೆ ಕುರಿತು  ಬಿಜೆಪಿ ನಿಯೋಗದಿಂದ ನಗರ ಪೊಲೀಸ್ ಆಯುಕ್ತರಿಗೆ ದೂರು ದಾಖಲಿಸಿದ್ದಾರೆ.

ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಭೇಟಿ ಮಾಡಿದ ಆರ್​. ಅಶೋಕ್​ ನೇತೃತ್ವದ ನಿಯೋಗ ಈ ಕುರಿತು ಪ್ರಕರಣ ದಾಖಲಿಸಿದ್ದಾರೆ. ಬಳಿಕ ಮಾತನಾಡಿದ ಅವರು, ಕಾಂಗ್ರೆಸ್ ಕಾರ್ಯಕರ್ತರು ನೆನ್ನೆ ಗೂಂಡಗಳಂತೆ ದಾಳಿ ಮಾಡಿದ್ದಾರೆ. ಟೆಕ್ಕಿಗಳು ಅವರ ಅನಿಸಿಕೆಯಂತೆ ಮತ್ತೊಮ್ಮೆ ಮೋದಿ ಎಂದಿದ್ದಾರೆ. ಅದು ಅವರ ವಾಕ್ ಸ್ವಾತಂತ್ರ್ಯ. ಪ್ರಧಾನಿಗೆ ಜೈ ಅಂದಿದ್ದಕ್ಕೆ ಅವರನ್ನ ಹಿಡಿದು ರಾತ್ರಿ 10 ರವರೆಗೂ ಕೂರಿಸಿದ್ದಾರೆ. ಚುನಾವಣೆಗೂ ಮುನ್ನ ಈ ರೀತಿಯಾದರೆ ಚುನಾವಣೆ ವೇಳೆ ಅಧಿಕಾರ ದುರ್ಬಳಕೆ ಮಾಡುವುದಿಲ್ಲವಾ ಎಂದು ಪ್ರಶ್ನಿಸಿದರು.

ಈ ದೃಷ್ಟಿಯಿಂದ ಚುನಾವಣೆ ಸಂದರ್ಭದಲ್ಲಿ ನ್ಯಾಯಯುತ ವಾಗಿ ನಡೆಯಬೇಕು ಎಂದು ಪೊಲೀಸ್ ಆಯುಕ್ತರಲ್ಲಿ ಮನವಿ ಮಾಡಿದ್ದೇವೆ. ಘಟನೆಗೆ ಸಂಬಂಧಿಸಿದಂತೆ ಬಂಧಿಸಿದವರನ್ನು ಯಾವ ಕಾನೂನಿನ ಅಡಿಯಲ್ಲಿ ಬಂಧಿಸಿದ್ದಾರೆ ಎಂದು ಪ್ರಶ್ನೆ ಮಾಡಿದ್ದೇವೆ.  ರಾಹುಲ್​ ಸಂವಾದದಲ್ಲಿ ಘೋಷಣೆ ಕೂಗಿದವರು ಯಾರು ಬಿಜೆಪಿಯವರಲ್ಲ, ಅವರೆಲ್ಲ ಸಾಫ್ಟ್ ವೇರ್ ಎಂಜಿನಿಯರ್​ಗಳು . ಸಾಫ್ಟ್‌ವೇರ್ ಎಂಜಿನಿಯರ್ ಗಳ ಪರವಾಗಿ ನಾವಿದ್ದೇವೆ ಅವರಿಗೆ ಯಾರೇ ತೊಂದರೆ ಕೊಟ್ಟರು ಅವರ ಪರ ನಾವಿದ್ದೇವೆ ಎಂದರು.

 ನಿನ್ನೆಯ ಘಟನೆಯನ್ನು ಖಂಡಿಸಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಬಿಜೆಪಿ ಕೂಡ ಟ್ವೀಟ್​ ಮಾಡಿತ್ತು. ಕಾಂಗ್ರೆಸ್​-ಜೆಡಿಎಸ್​ ಸರ್ಕಾರ ವಾಕ್​ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಯತ್ನಕ್ಕೆ ಮುಂದಾಗಿದೆ ಎಂದಿದ್ದರು.

ಇದೇ ವೇಳೆ  ಮೋದಿಯವರನ್ನ ಹತ್ಯೆ ಮಾಡಿ ಎಂದಿದ್ದ ಬೇಲೂರು ಗೋಪಾಲಕೃಷ್ಣ ಅವರ ಹೇಳಿಕೆಯನ್ನು ಪ್ರಸ್ತಾಪಿಸಿದ್ದೇವೆ.  ಅವರ ವಿರುದ್ದ ಏನು ಕ್ರಮ ಕೈಗೊಳ್ಳಲಿಲ್ಲವಾ ಎಂದು  ಪ್ರಶ್ನಿಸಿದ್ದೇವೆ ಎಂದರು.

First published:March 19, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...