ಸಿಎಂ ವಿರುದ್ಧ ಹೈಕಮಾಂಡ್​ಗೆ ಮತ್ತೊಂದು ದೂರು; ಬಿಎಸ್​ವೈಗೆ ಬಿಸಿ ಮುಟ್ಟಿಸಿದ ಮೂಲ ಬಿಜೆಪಿಗರು

ಈ ಹಿಂದೆ ರಮೇಶ್​ ಜಾರಕಿಹೊಳಿ ಅವರಿಗೆ ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಖಾತೆ ಜೊತೆಗೆ ಬೃಹತ್ ನೀರಾವರಿ ಖಾತೆಯೂ ನೀಡಲಿದ್ದಾರೆ ಎಂಬ ವಿಚಾರ ದೊಡ್ಡ ಸುದ್ದಿಯಾಗಿತ್ತು. ಈ ಸಂದರ್ಭದಲ್ಲೂ ಸಹ ಮೂಲ ಬಿಜೆಪಿ ನಾಯಕರು ಹೈಕಮಾಂಡ್​ಗೆ ಸಿಎಂ ಯಡಿಯೂರಪ್ಪ ವಿರುದ್ಧವಾಗಿ ಪತ್ರ ಬರೆದು ತಮ್ಮ ತಕರಾರನ್ನು ದಾಖಲಿಸಿದ್ದರು.

ಸಿಎಂ ಬಿ.ಎಸ್.ಯಡಿಯೂರಪ್ಪ.

ಸಿಎಂ ಬಿ.ಎಸ್.ಯಡಿಯೂರಪ್ಪ.

  • Share this:
ಬೆಂಗಳೂರು (ಫೆಬ್ರವರಿ 05); ಸಿಎಂ ಬಿ.ಎಸ್. ಯಡಿಯೂರಪ್ಪ ಪಕ್ಷದ ಅರ್ಹ ಶಾಸಕರನ್ನು ಕಡೆಗಣಿಸಿ ಚುನಾವಣೆಯಲ್ಲಿ ಸೋಲನುಭವಿಸಿದವರನ್ನು ಸಚಿವರನ್ನಾಗಿ ಆಯ್ಕೆ ಮಾಡುತ್ತಿದ್ದಾರೆ. ಈ ಬೆಳವಣಿಗೆ ಸಂಪುಟ ವಿಸ್ತರಣೆ ನಂತರ ಭಿನ್ನಮತ ಸ್ಫೋಟಕ್ಕೆ ಕಾರಣವಾಗಲಿದೆ. ಅಲ್ಲದೆ, ಪಕ್ಷದ ವರ್ಚಸ್ಸಿಗೂ ದಕ್ಕೆಯಾಗಲಿದೆ ಎಂದು ಬಿಎಸ್ವೈ ವಿರುದ್ಧ ಮೂಲ ಬಿಜೆಪಿ ನಾಯಕರು ಹೈಕಮಾಂಡ್​ಗೆ ದೂರು ನೀಡಿದ್ದಾರೆ.

ಬಹು ನಿರೀಕ್ಷಿತ ಸಂಪುಟ ವಿಸ್ತರಣೆ ನಾಳೆ ನಡೆಯಲಿದ್ದು, ಸಿ.ಪಿ. ಯೋಗೇಶ್ವರ್ ಸಂಪುಟ ಸೇರ್ಪಡೆಯಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಆದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲನುಭವಿಸಿದ ಯೋಗೇಶ್ವರ್​ಗೆ ಸಚಿವ ಸ್ಥಾನ ಏಕೆ? ಪಕ್ಷದಲ್ಲಿ ಸಾಕಷ್ಟು ಜನ ಅರ್ಹ ಶಾಸಕರು ಇದ್ದಾಗ್ಯೂ ಸೋಲನುಭವಿಸಿದವರಿಗೆ ಮಣೆ ಹಾಕುವುದು ಏಕೆ? ಎಂಬುದು ಬಿಜೆಪಿ ನಾಯಕರ ಪ್ರಶ್ನೆ.

ಈ ಕುರಿತು ಹೈಕಮಾಂಡ್​ಗೆ ಲಿಖಿತ ದೂರು ನೀಡಿರುವ ಬಿಜೆಪಿ ನಾಯಕರು, “ಅರ್ಹರ ಕಡೆಗಣನೆ, ಸೋತವರಿಗೆ ಮಣೆ ಎಂಬ ನೀತಿ ಸರಿಯಲ್ಲ. ಇದು ಭಿನ್ನಮತಕ್ಕೆ ಕಾರಣವಾಗಲಿದೆ. ಸಂಪುಟ ವಿಸ್ತರಣೆ ನಂತರ ಭಿನ್ನಮತ ಸ್ಪೋಟಗೊಂಡರೆ ಪಕ್ಷದ ವರ್ಚಸ್ಸಿಗೆ ದಕ್ಕೆಯಾಗಲಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆದ ಗತಿಯೇ ಈಗಲೂ ಆಗಲಿದೆ. ಹೀಗಾಗಿ ಸಿಎಂ ಬಿಎಸ್​ವೈ ಅವರಿಗೆ ಅಳೆದು-ತೂಗಿ ಸಂಪುಟ ವಿಸ್ತರಿಸಲು ಸೂಚಿಸಿ” ಎಂದು ಪರೋಕ್ಷವಾಗಿ ಸಿ.ಪಿ. ಯೋಗೇಶ್ವರ್ ವಿರುದ್ಧ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

ಈ ಪತ್ರವನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಹೈಕಮಾಂಡ್ ನಾಯಕ ಅಮಿತ್ ಶಾ ಕೂಡಲೇ ಬಿಎಸ್ ಯಡಿಯೂರಪ್ಪ ಅವರಿಗೆ ದೂರವಾಣಿ ಕರೆ ಮಾಡಿ, “ಭಿನ್ನಮತಕ್ಕೆ ಎಡೆಮಾಡಿಕೊಡದಂತೆ ಸಂಪುಟ ವಿಸ್ತರಣೆ ಮಾಡಿ, ಮುಂದಿನ ಬೆಳವಣಿಗೆಗಳಿಗೆ ನೀವೇ ಜವಾಬ್ದಾರರು” ಎಂದು ಎಚ್ಚರಿಕೆ ನೀಡಿದ್ದಾರೆ ಎನ್ನುತ್ತಿವೆ ಬಿಜೆಪಿ ಮೂಲಗಳು.

ಈ ಹಿಂದೆ ರಮೇಶ್​ ಜಾರಕಿಹೊಳಿ ಅವರಿಗೆ ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಖಾತೆ ಜೊತೆಗೆ ಬೃಹತ್ ನೀರಾವರಿ ಖಾತೆಯೂ ನೀಡಲಿದ್ದಾರೆ ಎಂಬ ವಿಚಾರ ದೊಡ್ಡ ಸುದ್ದಿಯಾಗಿತ್ತು. ಈ ಸಂದರ್ಭದಲ್ಲೂ ಸಹ ಮೂಲ ಬಿಜೆಪಿ ನಾಯಕರು ಹೈಕಮಾಂಡ್​ಗೆ ಸಿಎಂ ಯಡಿಯೂರಪ್ಪ ವಿರುದ್ಧವಾಗಿ ಪತ್ರ ಬರೆದು ತಮ್ಮ ತಕರಾರನ್ನು ದಾಖಲಿಸಿದ್ದರು.

ಇದನ್ನೂ ಓದಿ : ನಾಳೆ ಸಂಪುಟ ವಿಸ್ತರಣೆ ಹಿನ್ನೆಲೆ; ಸಿಎಂ ಬಿಎಸ್​ವೈ ಮನೆಗೆ ಧಾವಿಸುತ್ತಿರುವ ಸಚಿವ ಸ್ಥಾನ ಆಕಾಂಕ್ಷಿಗಳು
First published: