• Home
  • »
  • News
  • »
  • state
  • »
  • Silent Sunil: ಸೈಲೆಂಟ್ ಸುನೀಲ್ ರಾಜಕೀಯ ಪ್ರವೇಶಕ್ಕೆ ಶುಭ ಕೋರಿದ ಬಿಜೆಪಿ ನಾಯಕರು

Silent Sunil: ಸೈಲೆಂಟ್ ಸುನೀಲ್ ರಾಜಕೀಯ ಪ್ರವೇಶಕ್ಕೆ ಶುಭ ಕೋರಿದ ಬಿಜೆಪಿ ನಾಯಕರು

ಸೈಲೆಂಟ್ ಸುನೀಲ್

ಸೈಲೆಂಟ್ ಸುನೀಲ್

ಇಂದು ಬಿಜೆಪಿ ನಾಯಕರು ಶಿಬಿರದಲ್ಲಿ ಭಾಗಿಯಾಗುವ ಮೂಲಕ ಸೈಲೆಂಟ್ ಸುನೀಲ್ ಚಾಮರಾಜಪೇಟೆಯ ಕಮಲ ಅಭ್ಯರ್ಥಿ ಎಂಬ ಸಂದೇಶ ನೀಡಿದ್ದಂತೆ ಮೇಲ್ನೋಟಕ್ಕೆ ಕಾಣಿಸುತ್ತಿತ್ತು.

  • News18 Kannada
  • Last Updated :
  • Bangalore, India
  • Share this:

ಬೆಂಗಳೂರು ಭೂಗತ ಲೋಕದ ಮಾಜಿ ರೌಡಿ ಸೈಲೆಂಟ್ ಸುನೀಲ್ (Silent Sunil) ರಾಜಕೀಯ ಪ್ರವೇಶಕ್ಕೆ (Politics Enters) ಬಿಜೆಪಿ ನಾಯಕರು (BJP Leaders) ಶುಭಕೋರಿದರು. ಸಂಸದರಾದ ಪಿಸಿ ಮೋಹನ್ (PC Mohan), ತೇಜಸ್ವಿ ಸೂರ್ಯ (Tejaswi Surya), ಶಾಸಕರಾದ ಉದಯ್ ಗರುಡ ಚಾರ್ (MLA Uday Garudachar) ಹಾಗೂ ಎನ್ ಆರ್ ರಮೇಶ್ (NR Ramesh) ಶುಭ ಹಾರೈಸಿದರು. ಇಂದು ಚಾಮರಾಜಪೇಟೆಯಲ್ಲಿ (Chamarajapete) ಬೃಹತ್ ರಕ್ತ ದಾನ ಶಿಬಿರ ಆಯೋಜನೆ ಮಾಡುವ ಮೂಲಕ ಸೈಲೆಂಟ್ ಸುನೀಲ್ ರಾಜಕೀಯ ಪ್ರವೇಶ ಮಾಡಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಜಮೀರ್ ಅಹ್ಮದ್ ಖಾನ್ (MLA Zameer Ahmed Khan) ವಿರುದ್ಧ ಕಣಕ್ಕಿಳಿಯೋದು ಬಹುತೇಕ ಖಚಿತವಾಗಿದೆ. ಬಿಜೆಪಿ ನಾಯಕರು ಸೈಲೆಂಟ್ ಸುನೀಲ್ ರಾಜಕೀಯ ಪ್ರವೇಶವನ್ನು ಖಚಿತಪಡಿಸಿದರು.


ಇಂದು ಬಿಜೆಪಿ ನಾಯಕರು ಶಿಬಿರದಲ್ಲಿ ಭಾಗಿಯಾಗುವ ಮೂಲಕ ಸೈಲೆಂಟ್ ಸುನೀಲ್ ಚಾಮರಾಜಪೇಟೆಯ ಕಮಲ ಅಭ್ಯರ್ಥಿ ಎಂಬ ಸಂದೇಶ ನೀಡಿದ್ದಂತೆ ಮೇಲ್ನೋಟಕ್ಕೆ ಕಾಣಿಸುತ್ತಿತ್ತು.


ಜಮೀರ್ ವಿರುದ್ಧ ಎನ್.ಆರ್.ರಮೇಶ್ ವಾಗ್ದಾಳಿ


ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ನಾಯಕ ಎನ್.ಆರ್. ರಮೇಶ್, ಸಾರ್ವಜನಿಕ ಜೀವನದಲ್ಲಿ ಪ್ರಾರಂಭ ಮಾಡ್ತಿರುವ ಸುನೀಲ್ ಕುಮಾರ್ ಅವರಿಗೆ ಶುಭಾಶಯಗಳು. ಈ ಒಂದು ಕ್ಷೇತ್ರದಲ್ಲಿ ನಡೆದಿರುವ ನೂರಾರು ಕೋಟಿ ಹಗರಣ ಬಗ್ಗೆ ದಾಖಲೆ ಇಡುತ್ತೇನೆ. ಕೊರೊನಾ ವೇಳೆ ಚಾಮರಾಜಪೇಟೆ ಕ್ಷೇತ್ರದಲ್ಲಿ ಬೆಂಗಳೂರಿಗೆ ಕಪ್ಪು ಚುಕ್ಕೆ ತಂದಿದ್ದಾರೆ. ಈ ಒಂದು ಕ್ಷೇತ್ರದಲ್ಲಿ ಭಯ ವಾತಾವರಣ ಇದೆ.


BJP leaders welcomes silent sunil politics mrq
ರಾಜಕೀಯಕ್ಕೆ ಸೈಲೆಂಟ್ ಸುನೀಲ್


ಈ ಕ್ಷೇತ್ರದ ಬಿಜೆಪಿ ಕಾರ್ಪೋರೇಟರ್​ಗಳನ್ನು ನಾವು ಕಳಿದುಕೊಂಡಿದ್ದೇವೆ. ಅವರನ್ನು ಕೊಂದ ಆರೋಪಿಗಳನ್ನು ಜೈಲಿನಿಂದ ಬಿಡಿಸಿ ಮರೆಸಿದವರು ಈ ಕ್ಷೇತ್ರದ ಶಾಸಕರು ಎಂದು ಪರೋಕ್ಷವಾಗಿ ಜಮೀರ್ ಅಹ್ಮದ್ ಖಾನ್ ವಿರುದ್ಧ ವಾಗ್ದಾಳಿ ನಡೆಸಿದರು.


ನಿಮ್ಮ ಹಾರೈಕೆ ನನ್ನ ಮೇಲಿರಲಿ


ಈ ವೇಳೆ ಮಾತನಾಡಿದ ಸೈಲೆಂಟ್ ಸುನೀಲ್ ಕುಮಾರ್, ನಾನು ನಿಮ್ಮ ಮಧ್ಯದಲ್ಲೇ ಇರ್ತೇನೆ. ನಾನು ಇದೇ ರೀತಿ ಮುಂದೆಯೂ ನನ್ನ ಕೈಲಾದಷ್ಟು ಸಹಾಯ ಮಾಡ್ಕೊಂಡು ಹೋಗ್ತೀನಿ. ನಿಮ್ಮ ಸಹಾಯ ನನ್ನ ಮೇಲೆ ಹೀಗೆ ಇರಲಿ ಎಂದ ಮನವಿ ಮಾಡಿಕೊಂಡರು.


ಇದನ್ನೂ ಓದಿ:  Mangaluru: ಹಿಂದೂ ಯುವತಿಯ ಮತಾಂತರ; ವೈದ್ಯೆ, ಮುಸ್ಲಿಂ ಯುವಕರ ವಿರುದ್ಧ ಪ್ರಕರಣ ದಾಖಲು


ನಾನು ಜನರಿಗೆ ಸಹಾಯವಾಗಲು ಸಮಾಜ ಸೇವೆಯ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿದ್ದೇನೆ. ಮುಂದೆಯೂ ಬೆಂಗಳೂರಿನಾದ್ಯಂತ ಹೀಗೆ ಕಾರ್ಯಕ್ರಮಗಳನ್ನು ಮಾಡುತ್ತೇನೆ. ಮುಂದೆ ರಾಜಕೀಯ ಪ್ರವೇಶಿಸುವ ಇಚ್ಛೆಯೂ ಇದೆ. ಈ ಬಗ್ಗೆ ಈ ಸಮಯದಲ್ಲಿ ಹೆಚ್ಚು ಮಾತನಾಡಲ್ಲ ಎಂದು ಮಾತು ಮುಗಿಸಿದರು.


BJP leaders welcomes silent sunil politics mrq
ರಾಜಕೀಯಕ್ಕೆ ಸೈಲೆಂಟ್ ಸುನೀಲ್


ಯಾವ ರಾಜಕಾರಣಿಗೆ ಶುರುವಾಗಿದೆ ಟೆನ್ಷನ್?


ಸೈಲೆಂಟ್ ಸುನೀಲ್ ರಾಜಕೀಯಕ್ಕೆ ಬರುವ ಸುಳಿವನ್ನ ಆತನ ಅತ್ಯಾಪ್ತ ಬಳಗ ಖಚಿತಪಡಿಸುತ್ತಿದೆ. 2023ರ ವಿಧಾನಸಭಾ ಚುನಾವಣೆಗೆ ಸೈಲೆಂಟ್ ಸುನೀಲ್ ಆಯ್ಕೆ ಮಾಡಿಕೊಂಡಿರೋದು ಚಾಮರಾಜಪೇಟೆ ಕ್ಷೇತ್ರ ಎನ್ನಲಾಗುತ್ತಿದೆ.


ಹಾಲಿ ಶಾಸಕ, ಮಾಜಿ ಸಿಎಂ ಸಿದ್ದರಾಮಯ್ಯ ಅಪ್ತ ಜಮೀರ್ ಅಹ್ಮದ್ ಖಾನ್ (MLA Zameer Ahmed Khan) ವಿರುದ್ಧ ಸ್ಪರ್ಧೆ ಮಾಡಲು ಸೈಲೆಂಟ್ ಸುನೀಲ್ ಪ್ಲಾನ್ ಮಾಡಿಕೊಂಡಿರುವ ಮಾಹಿತಿ ತಿಳಿದು ಬಂದಿದೆ.


ಇದನ್ನೂ ಓದಿ:  Silent  Sunil: ರಾಜಕೀಯಕ್ಕೆ ಮಾಜಿ ರೌಡಿ ಸೈಲೆಂಟ್ ಸುನೀಲ್? ಸುದ್ದಿ ಕೇಳಿ ಪವರ್‌ಫುಲ್ ಲೀಡರ್‌ಗೆ ಟೆನ್ಷನ್, ಬದಲಾಗುತ್ತಾ ‘ಪೇಟೆ’ ಲೆಕ್ಕಾಚಾರ


ಜಮೀರ್ ಅಹ್ಮದ್ ವಿರುದ್ಧ ಕಮಲ ಕೆಂಡ


ಇನ್ನು ಚಾಮರಾಜಪೇಟೆ ಈದ್ಗಾ ಮೈದಾನ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತ್ತು. ಈ ವೇಳೆ ಬಿಜೆಪಿ ಮತ್ತು ಜಮೀರ್ ಅಹ್ಮದ್ ನಡುವೆ ಶೀತಲ ಸಮರವೇ ಏರ್ಪಟ್ಟಿತ್ತು. ಇದೇ ಈದ್ಗಾ ಮೈದಾನದ ವಿವಾದದ ವಿಷಯವನ್ನು ಮುಂದಿಟ್ಟುಕೊಂಡು ಚಾಮರಾಜಪೇಟೆಯಲ್ಲಿ ಬಿಜೆಪಿ ಚುನಾವಣಾ ರಣಕಹಳೆ ಮೊಳಗಿಸೋದು ಬಹುತೇಕ ಖಚಿತವಾಗಿದೆ.

Published by:Mahmadrafik K
First published: