ಗದಗ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ (Assembly Elections 2023) ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರು (Political Leaders) ಟಿಕೆಟ್ ಲಾಬಿ ಜೋರು ನಡೆಸುತ್ತಿದ್ದಾರೆ. ಕೆಲ ನಾಯಕರು ದೆಹಲಿ ಅಂಗಳ ತಲುಪಿ ದೊಡ್ಡಮಟ್ಟದಲ್ಲಿಯೇ ಲಾಬಿಗೆ ಮುಂದಾಗಿದ್ದಾರೆ. ಆದ್ರೆ ಕೆಲವು ನಾಯಕರು ದೇವರ ಮೊರೆ ಹೋಗಿ ಹರಕೆ ಕಟ್ಟುತ್ತಿದ್ದಾರೆ. ಈ ಹಿಂದೇ ರಾಜ್ಯದ ಘಟಾನುಘಟಿ ನಾಯಕರು ಇಟಗಿ ಭೀಮಾಂಬಿಕೆ (Bheemanbike Temple) ದರ್ಶನ ಪಡೆದು ಹರಕೆ ಕಟ್ಟಿದ್ದರು. ಈಗ ಅದೇ ರೀತಿ ಟಿಕೆಟ್ಗಾಗಿ ಆಕಾಂಕ್ಷಿಗಳು ಇಟಗಿ ಭೀಮಾಂಬಿಕೆ ದೇವಿಯ ಮೊರೆ ಹೋಗಿ ಹರಕೆ ಕಟ್ಟುತ್ತಿದ್ದಾರೆ.
ಗದಗ ಜಿಲ್ಲೆ ರೋಣ ತಾಲೂಕಿನ ಇಟಗಿ ಗ್ರಾಮದಲ್ಲಿ ಭೀಮಾಂಬಿಕೆ ದೇವಸ್ಥಾನವಿದೆ. ಇಟಗಿ ಭೀಮಾಂಬಿಕೆ ದೇವಿ ಅಂದ ತಕ್ಷಣೆವೇ ನೆನಪಾಗೋದು ಧರ್ಮ ದೇವತೆ ಚಲನಚಿತ್ರ. ಇಟಗಿ ಭೀಮಾಂಬಿಕೆ ದೇವಿ ಭಕ್ತರ ಪಾಲಿನ ಕರುಣಾಮಯಿ. ಭಕ್ತರ ಕೋರಿಗಳನ್ನು ಈಡೇರಿಸುತ್ತಾ ಬಂದಿದ್ದಾಳೆ ಎಂದು ತಾಯಿಯ ಭಕ್ತರು ಹೇಳುತ್ತಾರೆ.
ದೇವಿಯ ದರ್ಶನ ಪಡೆದು ಹರಕೆ ಕಟ್ಟಿಕೊಳ್ಳೋದು
ಹೀಗಾಗಿ ರಾಜಕೀಯ ನಾಯಕರು ತಮ್ಮ ಆಸೆಗಳನ್ನು ಈಡೇರಿಸಿಕೊಳ್ಳಲು ಇಟಗಿಗೆ ಬಂದು ಭೀಮಾಂಬಿಕೆ ದೇವಿಯ ದರ್ಶನ ಪಡೆದು ಹರಕೆ ಕಟ್ಟಿ ಹೋಗತ್ತಾರೆ.
ಅದೇ ರೀತಿ ರಾಜ್ಯದ ಘಟಾನುಘಟಿ ನಾಯಕರಾದ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಹಾಗೂ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಕೂಡಾ ಹರಕೆ ಕಟ್ಟಿದ್ದಾರೆ.
ಬಿಜೆಪಿ ಟಿಕೆಟ್ ಆಕಾಂಕ್ಷಿಯಿಂದ ಹರಕೆ
ಹಿರಿಯ ನಾಯಕರಂತೆ ರೋಣ ಮತಕ್ಷೇತ್ರದ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿರುವ ರವಿ ದಂಡಿನ ಸಹ ಕುಟುಂಬದ ಸದಸ್ಯರೊಂದಿಗೆ ಇಟಗಿಗೆ ತೆರಳಿ ಭೀಮಾಂಬಿಕೆ ದೇವಿಗೆ ಪೂಜೆ ಸಲ್ಲಿಸಿ ಹರಕೆ ಕಾಯಿ ಕಟ್ಟಿದ್ದಾರೆ.
ತೆಂಗಿನಕಾಯಿ ಕಟ್ಟಿದ್ದೇನೆ
ಪೂಜೆ ಸಲ್ಲಿಸಿದ ಬಳಿಕ ನ್ಯೂಸ್ 18 ಜೊತೆ ಮಾತನಾಡಿದ ರವಿ ದಂಡಿನ್, ನಾವು ಹಿಂದಿನಿಂದಲೂ ಇಟಗಿ ಭೀಮಾಂಬಿಕೆ ಭಕ್ತರು. ನಮ್ಮ ಕುಟುಂಬ ತಾಯಿಯನ್ನು ಆರಾಧಿಸುತ್ತಾ ಬಂದಿದೆ. ದೇವಸ್ಥಾನಕ್ಕೂ ಬರುತ್ತಿರುತ್ತೇವೆ. ಯಾವುದೇ ಕೆಲಸ ಆರಂಭಕ್ಕೂ ಮುನ್ನ ನಾನು ಇಲ್ಲಿಗೆ ಬರುತ್ತೇನೆ. ಇಟಗಿ ಭೀಮಾಂಬಿಕೆ ಚಿತ್ರ ಸಹ ತೆಗೆದಿದ್ದೇನೆ ಎಂದರು,
ನಾನು ರೋಣ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಆದ್ದರಿಂದ ಟಿಕೆಟ್ ನನಗೆ ಸಿಗಲಿ ಎಂದು ತಾಯಿಯಲ್ಲಿ ಕೇಳಿಕೊಂಡಿದ್ದೇನೆ. ಜನರ ಆಶೀರ್ವಾದ ನನ್ನ ಮೇಲಿರಲಿ ಎಂದು ಕೇಳಿ ತೆಂಗಿನಕಾಯಿ ಕಟ್ಟಿದ್ದೇನೆ ಎಂದು ರವಿ ದಂಡಿನ್ ಹೇಳಿದ್ದಾರೆ.
ರೋಣ ಕ್ಷೇತ್ರದ ಬಿಜೆಪಿ ಟಿಕೆಟ್ಗಾಗಿ ಫೈಟ್
ಸದ್ಯ ರೋಣ ಮತಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ಗಾಗಿ ದೊಡ್ಡಮಟ್ಟದಲ್ಲಿ ಪೈಪೋಟಿ ನಡೆದಿದೆ. ಟಿಕೆಟ್ ಪಡೆಯಲು ಸಾಕಷ್ಟು ಲಾಬಿ ನಡೆಯುತ್ತಿದೆ. ಹಾಲಿ ಶಾಸಕ ಕಳಕಪ್ಪ ಬಂಡಿ, ಕಳಕಪ್ಪ ಬಂಡಿ ಸಹೋದರ ಸಿದ್ದಪ್ಪ ಬಂಡಿ, ಬಿಜೆಪಿ ಓಬಿಸಿ ಕಾರ್ಯದರ್ಶಿ ರವಿ ದಂಡಿನ ಹಾಗೂ ಹೇಮಗಿರೀಶ್ ಹಾವಿನಾಳ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ರವಿ ದಂಡಿನ ಟಿಕೆಟ್ ಪಡೆಯಲು ದೇವರ ಮೊರೆ ಹೋಗಿದ್ದಾರೆ. ರಾಜಕೀಯ ನಾಯಕರ ಅಲ್ಲದೇ ಸಿನಿಮಾ ಸ್ವಾರ್ಗಳು ಸಹ ಧರ್ಮದೇವತೆ ದರ್ಶನ ಪಡೆದು ಹರಕೆ ಕಟ್ಟಿ ಇಷ್ಟಾರ್ಥ ಈಡೇರಿಸಿಕೊಂಡಿದ್ದಾರೆ.
ಇದನ್ನೂ ಓದಿ: Traffic Fines Discount: ಟ್ರಾಫಿಕ್ ಫೈನ್ ಕ್ಲೀಯರ್ ಮಾಡುವ ನೆಪದಲ್ಲಿ ಪಂಗನಾಮ; ತಮ್ಮ ಕೈಯಿಂದಲೇ ಹಣ ತುಂಬಿದ ಪೊಲೀಸರು!
ವಿಧಾನ ಸಭೆ ಚುನಾವಣಾ ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರು ದೇವರ ಮೊರೆ ಹೋಗುತ್ತಿದ್ದಾರೆ. ಇಟಗಿ ಭೀಮಾಂಬಿಕೆ ದೇವಿಯ ದರ್ಶನ ಪಡೆದು ಹರಕೆ ಕಟ್ಟಿದ್ದಾರೆ. ದೇವಿ ಪವಾಡದಿಂದ ಈ ಬಾರಿ ಟಿಕೆಟ್ ಆಕಾಂಕ್ಷಿಗಳಿಗೆ ಟಿಕೆಟ್ ಸಿಗುತ್ತಾ ಕಾದುನೋಡಬೇಕಿದೆ.
ವರದಿ: ಸಂತೋಷ್ ಕೊಣ್ಣೂರ , ಗದಗ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ