ಈಶ್ವರಪ್ಪ ಸಿಎಂ ಆಗೋಕೆ ಸ್ಕೆಚ್ ಹಾಕಿದ್ರಾ? ಸಾ.ರಾ. ಮಹೇಶ್ ವಿವರಣೆ ಕೇಳಿ ಸಿದ್ದರಾಮಯ್ಯ ಗರಂ

ಬಿಜೆಪಿ ಮತ್ತು ಮೈತ್ರಿಪಾಳಯದ ಮಧ್ಯೆ ನಡೆಯುತ್ತಿರುವಂತೆಯೇ, ಮಿತ್ರ ಪಕ್ಷಗಳ ಮಧ್ಯೆಯೂ ಹಾವು ಏಣಿ ಆಟ ನಡೆಯುತ್ತಿದೆ.

news18
Updated:July 12, 2019, 10:17 PM IST
ಈಶ್ವರಪ್ಪ ಸಿಎಂ ಆಗೋಕೆ ಸ್ಕೆಚ್ ಹಾಕಿದ್ರಾ? ಸಾ.ರಾ. ಮಹೇಶ್ ವಿವರಣೆ ಕೇಳಿ ಸಿದ್ದರಾಮಯ್ಯ ಗರಂ
ಸಿಎಂ ಕುಮಾರಸ್ವಾಮಿ- ಸಿದ್ದರಾಮಯ್ಯ- ದೇವೇಗೌಡ
  • News18
  • Last Updated: July 12, 2019, 10:17 PM IST
  • Share this:
ಬೆಂಗಳೂರು(ಜುಲೈ 12): ನಿನ್ನೆ ಕುಮಾರಕೃಪಾ ಗೆಸ್ಟ್ ಹೌಸ್​ನಲ್ಲಿ ಬಿಜೆಪಿ ಮುಖಂಡರೊಂದಿಗೆ ಸಾ.ರಾ. ಮಹೇಶ್ ಅರ್ಧಗಂಟೆ ಮಾತನಾಡಿದ ಸಂಗತಿ ಈಗ ರಾಜ್ಯ ರಾಜಕಾರಣಕ್ಕೆ ಹೊಸ ಟ್ವಿಸ್ಟ್ ಕೊಟ್ಟಿದೆ. ಮೈತ್ರಿಪಾಳಯದೊಳಗೆ ಕಂಪನಗಳಾಗುತ್ತಿವೆ. ಹೊಸ ಹೊಸ ವ್ಯಾಖ್ಯಾನಗಳಾಗುತ್ತಿವೆ. ಕಾಂಗ್ರೆಸ್ ಅತೃಪ್ತರನ್ನು ಬಗ್ಗಿಸಲು ನಡೆದ ಪ್ಲಾನ್ ಇದು ಎಂದು ಕೆಲವರು ನಂಬಿದ್ದಾರೆ. ಬಿಜೆಪಿಯ ಆಪರೇಷನ್ ಕಮಲವನ್ನು ವಿಫಲಗೊಳಿಸುವ ಯೋಜನೆಯೂ ಇದು ಎಂದು ಕೆಲವರು ಬಣ್ಣಿಸಿದ್ದಾರೆ. ಆದರೆ, ಮುರಳೀಧರ್ ರಾವ್ ಮತ್ತು ಈಶ್ವರಪ್ಪ ಅವರನ್ನು ಸಾ.ರಾ. ಮಹೇಶ್ ಭೇಟಿ ಮಾಡಿದ ಘಟನೆಯನ್ನು ಸಿದ್ದರಾಮಯ್ಯ ಬಹಳ ಗಂಭೀರವಾಗಿ ಪರಿಗಣಿಸಿದ್ದಾರೆನ್ನಲಾಗಿದೆ.

ಇವತ್ತು ಸಾ.ರಾ. ಮಹೇಶ್ ಅವರನ್ನು ಕರೆಸಿಕೊಂಡಿದ್ದ ಸಿದ್ದರಾಮಯ್ಯ ಅವರು ಆ ಭೇಟಿಯ ಬಗ್ಗೆ ಕೂಲಂಕಷವಾಗಿ ಮಾಹಿತಿ ಪಡೆದಿದ್ದಾರೆ. ಈ ವೇಳೆ, ಸಾ.ರಾ. ಮಹೇಶ್ ನೀಡಿದ ವಿವರಣೆ ನಿನ್ನೆಯದಕ್ಕಿಂತ ವಿಭಿನ್ನವಾಗಿತ್ತು. ಈಶ್ವರಪ್ಪ ಅವರು ಸಿಎಂ ಆಗುವ ಲೆಕ್ಕಾಚಾರ ಇಟ್ಟುಕೊಂಡು ತನ್ನೊಂದಿಗೆ ಮಾತುಕತೆ ನಡೆಸಿದರು ಎಂಬ ವಿಚಾರವನ್ನು ಸಿದ್ದರಾಮಯ್ಯ ಅವರ ಬಳಿ ಜೆಡಿಎಸ್ ಮುಖಂಡ ಹೊರಗೆಡವಿದ್ದಾರೆ. ನಿನ್ನೆ ನ್ಯೂಸ್18 ಕನ್ನಡದ ಜೊತೆ ಮಾತನಾಡುವಾಗ ಸಾ.ರಾ. ಮಹೇಶ್ ನೀಡಿದ ವಿವರಣೆಯೇ ಬೇರೆಯಾಗಿತ್ತು. ತಾನು ಗೆಸ್ಟ್ ಹೌಸ್​ಗೆ ಹೋಗಿ ಬರುತ್ತಿದ್ದಾಗ ಬಿಜೆಪಿ ಮುಖಂಡರು ಆಕಸ್ಮಿಕವಾಗಿ ಸಿಕ್ಕಿದ್ದರು. ಅವರ ಕ್ಷೇತ್ರದ ಕೆಲಸದ ಸಂಬಂಧ ತನ್ನನ್ನು ಭೇಟಿಯಾಗಿ ಮಾತನಾಡಿದರು ಅಷ್ಟೇ ಎಂದು ಮಹೇಶ್ ತಿಳಿಸಿದ್ದರು.

ಇದನ್ನೂ ಓದಿ: ಬಿಜೆಪಿಯಲ್ಲೂ ಅತೃಪ್ತರು ಇದಾರೆ; ಹಾಗಾಗಿಯೇ ಬಿಎಸ್​ವೈಗೆ ರಿವರ್ಸ್​ ಆಪರೇಷನ್​​ ಭಯ; ಸಿದ್ದರಾಮಯ್ಯ

ಆದರೆ, ಸಿದ್ದರಾಮಯ್ಯ ಬಳಿ ಅವರು ತಿಳಿಸಿದ್ದು ಬೇರೆಯದೇ ಆಗಿದೆ. ಈಶ್ವರಪ್ಪ ಅವರೇ ಪದೇಪದೇ ಫೋನ್ ಕರೆ ಮಾಡಿ ತುರ್ತಾಗಿ ಮಾತನಾಡಬೇಕಿದೆ ಎಂದು ಕರೆಯುತ್ತಿದ್ದರು. ಕರ್ನಾಟಕ ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್ ಅವರೂ ಕಾಯುತ್ತಿದ್ದಾರೆ ಬನ್ನಿ ಎಂದು ಕರೆದರು. ಹಾಗಾಗಿ ತಾನು ಅಲ್ಲಿಗೆ  ಹೋದೆ ಎಂದು ಸಾ.ರಾ. ಮಹೇಶ್ ಅವರು ಸಿದ್ದರಾಮಯ್ಯಗೆ ತಿಳಿಸಿದ್ದಾರೆನ್ನಲಾಗಿದೆ.

ಸಿಎಂ ಆಗ್ತೀನಿ ಅಂದ್ರಾ ಈಶ್ವರಪ್ಪ?

ಯಡಿಯೂರಪ್ಪಗೆ ಸರ್ಕಾರ ಮಾಡಲು ಬರೋದಿಲ್ಲ ಸುಮ್ಮನೆ ತಲೆನೋವ್ಯಾಕೆ..! ನಾನೇ ಮುಖ್ಯಮಂತ್ರಿ ಆಗ್ತೀನಿ. ಉಪಮುಖ್ಯಮಂತ್ರಿ ನಿಮ್ಮವರೇ ಯಾರಾದರೂ ಆಗಿ. ಮುರಳೀಧರ್ ರಾವ್ ತುಂಬಾ ಪವರ್​ಫುಲ್. ಹೈಕಮಾಂಡ್ ಮಟ್ಟದಲ್ಲಿ ಪ್ರಭಾವಶಾಲಿಯಾಗಿದ್ದಾರೆ. ನೀವು 38 ಶಾಸಕರು ನಮಗೆ ಬೆಂಬಲ ನೀಡಿ. ನಾವು ಒಟ್ಟು ಸೇರಿ ಸರ್ಕಾರ ರಚಿಸೋಣ ಎಂದು ಈಶ್ವರಪ್ಪ ಅವರು ಪ್ರಸ್ತಾವನೆ ಮುಂದಿಟ್ಟರು ಎಂದು ಸಾ.ರಾ. ಮಹೇಶ್ ಹೇಳಿದ್ದಾರೆ.

ಇದನ್ನೂ ಓದಿ: ಸರ್ಕಾರ ಸೇಫ್​​?; ಕಾಂಗ್ರೆಸ್​​ ಜತೆ ಚರ್ಚೆ ಬಳಿಕ ಖುಷಿಯಲ್ಲಿ ಹೊರಟ ಸಿಎಂ; ಏನಿದರ ಮರ್ಮ?ಆದರೆ, ಜೆಡಿಎಸ್ ಮಂತ್ರಿ ಮಾತನ್ನು ಸಿದ್ದರಾಮಯ್ಯ ನಂಬುವ ಮಟ್ಟಕ್ಕೆ ಹೋಗಿಲ್ಲವೆನ್ನಲಾಗಿದೆ. ಸಾ.ರಾ. ಮಹೇಶ್ ಅವರು ಬಿಜೆಪಿ ಮುಖಂಡರನ್ನು ಭೇಟಿಯಾಗುವುದರ ಹಿಂದೆ ಸೀನಿಯರ್ ದಳಪತಿಗಳದ್ದೇ ಚಿತಾವಣಿ ಇದೆ ಎಂದು ಸಿದ್ದರಾಮಯ್ಯ ಉರಿದುಬಿದ್ದಿದ್ದಾರೆ. ನಿಮ್ಮ ಲೀಡರ್ಸ್ ಗಮನಕ್ಕೆ ತರದೇ ನೀನು ಅಲ್ಲಿಗೆ ಹೋದೆಯಾ? ಐ ನೋ ಎವರಿ ಥಿಂಗ್ ಎಂದು ಸಾ.ರಾ. ಮಹೇಶ್ ಅವರಿಗೆ ಸಿದ್ದರಾಮಯ್ಯ ನೇರವಾಗಿ ಝಾಡಿಸಿದರೆನ್ನಲಾಗಿದೆ.

ಬಿಜೆಪಿ ಮತ್ತು ಮೈತ್ರಿಪಾಳಯದ ಮಧ್ಯೆ ನಡೆಯುತ್ತಿರುವಂತೆಯೇ, ಮಿತ್ರ ಪಕ್ಷಗಳ ಮಧ್ಯೆಯೂ ಹಾವು ಏಣಿ ಆಟ ನಡೆಯುತ್ತಿದೆ. ಕುಮಾರಸ್ವಾಮಿ ಅವರನ್ನು ಕೆಳಗಿಳಿಸಲು ಸಿದ್ದರಾಮಯ್ಯ ಅವರೇ ತಮ್ಮ ಆಪ್ತರಿಗೆ ಪ್ರಚೋದನೆ ಕೊಟ್ಟು ಪ್ಲಾನ್ ಮಾಡುತ್ತಿದ್ದಾರೆ ಎಂಬುದು ಜೆಡಿಎಸ್ ಪಾಳಯದ ಶಂಕೆಯಾಗಿದೆ. ಈಗ ಬಿಜೆಪಿ ಜೊತೆಗೆ ಜೆಡಿಎಸ್ ಹೋಗಲು ಸಿದ್ಧವಾಗಿದೆ ಎಂಬುದು ಕೈಪಾಳಯದ ಆತಂಕವಾಗಿದೆ.

ಈ ಮಧ್ಯೆ, ಇವತ್ತು ಕುಮಾರಸ್ವಾಮಿ ಅವರು ತುಸು ನಿರಾಳರಾಗಿದ್ದಂತೆ ಕಂಡಿದ್ದು ಮಾತ್ರ ಕುತೂಹಲ ಮೂಡಿಸಿದೆ.

(ವರದಿ: ಚಿದಾನಂದ ಪಟೇಲ್)

ನಿಮ್ಮ ನ್ಯೂಸ್ 18 ಕನ್ನಡವನ್ನು ಹಲೋ-ಆ್ಯಪ್​​ನಲ್ಲೂ ಹಿಂಬಾಲಿಸಿ
First published:July 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ