Karnataka Politics: ಇದು ಸಿದ್ದರಾಮೋತ್ಸವ ಅಲ್ಲ, ಸಿದ್ದರಾಮ ಉರುಸ್​; ಯತ್ನಾಳ್ ವ್ಯಂಗ್ಯ

ನಿನ್ನೆ ಅಲ್ಲಿ ನಮಾಜ್ ಮಾಡಿದ್ದೀರಿ, ಇಲ್ಲಿ ಬಂದು ಡೊಳ್ಳು ಮುಂದೆ ಕುಣಿರಿ, ಬಂಡಾರ ಹಚ್ಚಿಕೊಳ್ಳಿ ಅಂದ್ರೆ ನೀವು ಜಾತ್ಯಾತೀತ, ಹಿಂದೂ ಸಂಸ್ಕೃತಿಗೆ ಅಪಮಾನ ಮಾಡಿ ಮುಸ್ಲಿಂ ಟೋಪಿ ಹಾಕಿಕೊಂಡು ಅಡ್ಡಾಡೋದು ಜಾತ್ಯಾತೀತ ಲಕ್ಷಣ ಅಲ್ಲ, ಕುಂಕುಮ ಹಚ್ಚೋಕೆ ಬಂದ್ರೆ, ಪೇಟಾ ಹಾಕೋಕೆ ಬಂದ್ರೆ ತಳ್ತೀರಿ. ಹೀಗಾಗಿ ಇದು ಸಿದ್ದರಾಮ ಉತ್ಸವ ಆಗಲ್ಲ, ಉರುಸ್ ಆಗುತ್ತೆ ಎಂದು ಯತ್ನಾಳ್ ಹೇಳಿದ್ದಾರೆ.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

  • Share this:
ವಿಜಯಪುರ (ಜು.11):  ಸಿದ್ದರಾಮೋತ್ಸವ (Siddaramaiah) ವಿಚಾರಕ್ಕೆ ಬಿಜೆಪಿ ನಾಯಕರು ವ್ಯಂಗ್ಯ ಮಾಡುತ್ತಲೇ ಇದ್ದಾರೆ. ದಿನ ಒಬ್ಬ ಒಬ್ಬ ನಾಯಕರು ಸಿದ್ದರಾಮೋತ್ಸವದ ಬಗ್ಗೆ ಕಿಡಿಕಾರುತ್ತಿದ್ದಾರೆ. ಕಾಂಗ್ರೆಸ್​ನವರು (Congress) ಮಾಡುತ್ತಿರುವುದು ಸಿದ್ದರಾಮೋತ್ಸವ ಅಲ್ಲ, ಸಿದ್ದರಾಮ ಉರುಸು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basanagowda Patil Yatnal)​ ವ್ಯಂಗ್ಯ ಮಾಡಿದ್ದಾರೆ. ವಿಜಯಪುರದಲ್ಲಿ ಮಾತಾಡಿದ ಬಸನಗೌಡ ಪಾಟೀಲ ಯತ್ನಾಳ್, ಸಿದ್ದರಾಮಯ್ಯ ಕುಂಕುಮ ಹಚ್ಚಿಕೊಳ್ಳಲಿ, ಪೇಟ ಧರಿಸಲಿ ಹಿಂದೂ ಧರ್ಮದಲ್ಲಿ ಹುಟ್ಟಿದ್ದಾರೆ ಅನ್ನೋ ಕಬರ್ (ಎಚ್ಚರಿಕೆ) ಇರ್ಲಿ ಎಂದ ಯತ್ನಾಳ್ ಹೇಳಿದ್ದಾರೆ. ನಿನ್ನೆ ಅಲ್ಲಿ ನಮಾಜ್ ಮಾಡಿದ್ದೀರಿ, ಇಲ್ಲಿ ಬಂದು ಡೊಳ್ಳು ಮುಂದೆ ಕುಣಿರಿ, ಬಂಡಾರ ಹಚ್ಚಿಕೊಳ್ಳಿ ಅಂದ್ರೆ ನೀವು ಜಾತ್ಯಾತೀತ, ಹಿಂದೂ ಸಂಸ್ಕೃತಿಗೆ ಅಪಮಾನ ಮಾಡಿ ಮುಸ್ಲಿಂ ಟೋಪಿ ಹಾಕಿಕೊಂಡು ಅಡ್ಡಾಡೋದು ಜಾತ್ಯಾತೀತ ಲಕ್ಷಣ ಅಲ್ಲ, ಕುಂಕುಮ ಹಚ್ಚೋಕೆ ಬಂದ್ರೆ, ಪೇಟಾ ಹಾಕೋಕೆ ಬಂದ್ರೆ ತಳ್ತೀರಿ. ಹೀಗಾಗಿ ಇದು ಸಿದ್ದರಾಮ ಉತ್ಸವ ಆಗಲ್ಲ, ಉರುಸ್ ಆಗುತ್ತೆ ಎಂದು ಯತ್ನಾಳ್ ಹೇಳಿದ್ದಾರೆ.

ಬಿಜೆಪಿಯಲ್ಲಿ 75 ವರ್ಷಕ್ಕೆ ರಿಟೈರ್ಮೆಂಟ್,

75 ವರ್ಷ ವಯಸ್ಸಾದ ಮೇಲೆ ಜನರ ಮರೆಯಬಾರದು ಅಂತಾ ಉತ್ಸವ ಮಾಡಿಕೊಳ್ತಾರೆ. ಹಿಂದಿನ ಎಲ್ಲ ರಾಜಕಾರಣಿಗಳು ಮಾಡಿಕೊಂಡಿದ್ದಾರೆ. ಹಾಗೇ ಇವರು ಮಾಡಿಕೊಳ್ತಿದ್ದಾರೆ. ಬಿಜೆಪಿಯಲ್ಲಿ 75 ವರ್ಷಕ್ಕೆ ರಿಟೈರ್ಮೆಂಟ್, ನಮ್ಮವರು ಉತ್ಸವ ಮಾಡಿಕೊಳ್ತಾರೆ ಅವರು ಮಾಡಿಕೊಳ್ತಿದ್ದಾರೆ.

ವಲಸಿಗ ಸಿದ್ದರಾಮಯ್ಯ ಆರಾಧನೆ

ಕಾಂಗ್ರೆಸ್ಸಿನಲ್ಲೀಗ ವಲಸಿಗ ಸಿದ್ದರಾಮಯ್ಯ ಆರಾಧನೆ ನಡೆಯುತ್ತಿದೆ ಎಂದು ಬಿಜೆಪಿ ಟೀಕಿಸಿದೆ. ಸಿದ್ದರಾಮೋತ್ಸವದ ವಿಚಾರವಾಗಿ ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ, ‘ಮುಖ್ಯಮಂತ್ರಿ ಸ್ಥಾನದ ಕನಸು‌ ಕಾಣುತ್ತಿರುವ ಮಲ್ಲಿಕಾರ್ಜುನ ಖರ್ಗೆ ಅವರು ಮತ್ತೋರ್ವ ಸಿಎಂ ಕುರ್ಚಿಯ ಕನಸುಗಾರ ಸಿದ್ದರಾಮಯ್ಯ ಅವರ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಸಾಧನೆ ಎಂಬ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಮೂಲ ಕಾಂಗ್ರೆಸ್ಸಿಗರಿಗೆ ಈಗ ಸಿದ್ದರಾಮಯ್ಯ ಅವರ ಚಾಕರಿ ಮಾಡುವ ಸುಯೋಗ’ ಎಂದು ವ್ಯಂಗ್ಯವಾಡಿದೆ.

ಇದನ್ನೂ ಓದಿ: Mekedatu Project: ಮೇಕೆದಾಟು ಯೋಜನೆ ವಿರೋಧಿಸಿ ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ತಮಿಳುನಾಡು

ಮೂಲ ಕಾಂಗ್ರೆಸ್ಸಿಗರು ಮೂಕಪ್ರೇಕ್ಷಕರು

ಸಿದ್ದರಾಮೋತ್ಸವದ ಬಗ್ಗೆ ಕಾಂಗ್ರೆಸ್ಸಿನಲ್ಲಿ ಅಸಹನೆ, ಅಸಹಿಷ್ಣುತೆಯ ಅಲೆ ಜೋರಾಗಿಯೇ ಬೀಸುತ್ತಿದೆ. ಕಾಂಗ್ರೆಸ್ಸಿನಲ್ಲೀಗ ವಲಸಿಗ ಸಿದ್ದರಾಮಯ್ಯ ಆರಾಧನೆ ನಡೆಯುತ್ತಿದೆ. ಮೂಲ ಕಾಂಗ್ರೆಸ್ಸಿಗರು ಮೂಕಪ್ರೇಕ್ಷಕರಾಗಿದ್ದಾರೆ’ ಎಂದು ಬಿಜೆಪಿ ಟೀಕಿಸಿದೆ. ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ರೇಸ್‌ನಲ್ಲಿರುವ ನಾಯಕರು ಯಾರು ಎಂಬುದನ್ನು ಖುದ್ದು ಬಿ.ಕೆ.ಹರಿಪ್ರಸಾದ್ ಬಯಲು‌ ಮಾಡಿದ್ದಾರೆ‌. ಇದು ಸಿದ್ದರಾಮಯ್ಯ ಅವರಿಗೆ ನೀಡಲಾದ ಎಚ್ಚರಿಕೆ ಗಂಟೆಯೋ ಅಥವಾ ಸಿದ್ದರಾಮಯ್ಯಗೆ ಪ್ರತಿಸ್ಪರ್ಧಿಗಳ ಸೃಷ್ಠಿಯೋ?’ ಎಂದು ಪ್ರಶ್ನಿಸಿದೆ.

ಆಗಸ್ಟ್‌ 3ರಂದು ಅಮೃತ ಮಹೋತ್ಸವ

ಆಗಸ್ಟ್‌ 3ರಂದು ಅಮೃತ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ. ಕಾಂಗ್ರೆಸ್ನಾಯಕ ರಾಹುಲ್ಗಾಂಧಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ರಾಜ್ಯಸಭೆ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿಧಾನ ಪರಿಷತ್ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ಸುರ್ಜಿವಾಲ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ಸಹಿತ ಅನೇಕ ನಾಯಕರು ಭಾಗವಹಿಸಲಿದ್ದಾರೆ.


ಇದನ್ನೂ ಓದಿ: AIADMK Tussle: ಎಐಎಡಿಎಂಕೆ ಪಕ್ಷದ ನಾಯಕತ್ವ ಸ್ಥಾನಕ್ಕೆ ಭಾರೀ ಕಿತ್ತಾಟ; ತಮಿಳುನಾಡಲ್ಲಿ ಏನಾಗುತ್ತಿದೆ?

ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದವು. ಸಿದ್ದರಾಮಯ್ಯ ಅವರಿಗೂ 75 ವರ್ಷಗಳಾದವು. ನೆಪವನ್ನು ಇಟ್ಟುಕೊಂಡು ಭಾರತದ, ಕರ್ನಾಟಕದ 75 ವರ್ಷಗಳ ಚರಿತ್ರೆಯನ್ನು ನೆನಪು ಮಾಡಿಕೊಳ್ಳಲಾಗುವುದು. ದೇಶದ ಪ್ರಗತಿಯಲ್ಲಿ ಕಾಂಗ್ರೆಸ್ ಕೊಡುಗೆ ಏನು? ಈಗ ಪ್ರಜಾಪ್ರಭುತ್ವದ ಮುಂದೆ, ಸಂವಿಧಾನದ ಮುಂದೆ ಇರುವ ಸವಾಲುಗಳೇನು? ಬಹತ್ವಕ್ಕೆ, ಒಕ್ಕೂಟ ವ್ಯವಸ್ಥೆಗೆ ಬಂದಿರುವ ಆತಂಕಗಳೇನು ಎಂಬ ವಿಚಾರಗಳೂ ಇಲ್ಲಿ ಚರ್ಚೆಯಾಗಲಿವೆ ಎಂದು ಸಮಿತಿಯ ವಿಧಾನ ಪರಿಷತ್ಮಾಜಿ ಅಧ್ಯಕ್ಷ ಬಿ.ಎಲ್‌. ಶಂಕರ್ಹೇಳಿದರು.


Published by:Pavana HS
First published: