Karnataka Politics: ಬಿಜೆಪಿಗೆ ಹೊಸ ಅಸ್ತ್ರ ನೀಡಿದ ರಮೇಶ್ ಕುಮಾರ್; ಕಾಂಗ್ರೆಸ್ ವಿರುದ್ಧ ಕಮಲ ನಾಯಕರ ವಾಗ್ದಾಳಿ

ಕಾಂಗ್ರೆಸ್ 60 ವರ್ಷದ ನಿಜ ಬಣ್ಣವನ್ನು ರಮೇಶ್ ಕುಮಾರ್ ಹೊರಹಾಕಿದ್ದಾರೆ. ಯಾವಾಗಲೂ ರಮೇಶ್ ಕುಮಾರ್ ಸತ್ಯ ಹೇಳ್ತಾರೆ.

ರಮೇಶ್​ ಕುಮಾರ್​

ರಮೇಶ್​ ಕುಮಾರ್​

  • Share this:
ಮೂರು ನಾಲ್ಕು ತಲೆಮಾರು ಆಗುವಷ್ಟು ಆಸ್ತಿ ನಾವು ಮಾಡಿದ್ದೇವೆ ಎಂಬ ಮಾಜಿ ಸ್ಪೀಕರ್, ಕಾಂಗ್ರೆಸ್ ನಾಯಕರ ರಮೇಶ್ ಕುಮಾರ್ (Former Speaker Ramesh Kumar) ಹೇಳಿಕೆ ಬಿಜೆಪಿಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ. ಇದೀಗ ಬಿಜೆಪಿ ಸಚಿವರು ಮತ್ತು ನಾಯಕರು (BJP Minister And Leaders) ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಕರ್ನಾಟಕ ಬಿಜೆಪಿ (Karnataka BJP) ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದೆ. ಸಚಿವರಾಗಿದ್ದ ಕೆಜೆ ಜಾರ್ಜ್ (KG George) ಅವರ ಸ್ಟೀಲ್ ಬ್ರಿಡ್ಜ್ (Steal Bridge)  ಎಷ್ಟೋ ತಲೆಮಾರುಗಳನ್ನು ಹಾದು ಹೋಗುತ್ತಿತ್ತೇನೋ! ಅಭಿವೃದ್ಧಿ ಹೆಸರಿನಲ್ಲಿ ತಮ್ಮ ತಲೆ ತಲೆಮಾರುಗಳನ್ನು ಜಾರ್ಜ್ ಸಾಹೇಬರು ಅಭಿವೃದ್ಧಿ ಮಾಡಿಕೊಂಡರು ಎಂದು ಬಿಜೆಪಿ ಆರೋಪಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Shivakumar) ಮಾಡಿರುವ ಆಸ್ತಿ ಮುಂದಿನ 10 ತಲೆಮಾರುಗಳು ಬಂದು ಹೋದರೂ ಕರಗದು. ಬಂಡೆಯನ್ನು ಒಮ್ಮೆ ಒಡೆದಾಗಲೇ ಕೋಟಿ ಕೋಟಿ ಅಕ್ರಮ ಬಯಲಾಗಿತ್ತು. ಇನ್ನೊಮ್ಮೆ ಬಂಡೆಕುಟ್ಟಿದರೆ ಜಲಸಂಪನ್ಮೂಲ, ಇಂಧನ ಇಲಾಖೆಗಳಲ್ಲಿ ಅಕ್ರಮ,  ಕನಕಪುರದಿಂದ ದೆಹಲಿಗೆ ಸಂದಾಯವಾದ ಅಕ್ರಮ ಹಣದ ಮಾಹಿತಿ ಸಿಗಬಹುದು ಎಂದು ಬಿಜೆಪಿ ಅನುಮಾನ ವ್ಯಕ್ತಪಡಿಸಿದೆ.

ರಮೇಶ್ ಕುಮಾರ್ ಹೇಳಿಕೆಗೆ ಕಂದಾಯ ಸಚಿವ ಆರ್.ಅಶೋಕ್ ಇಂದು ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ 60 ವರ್ಷದ ನಿಜ ಬಣ್ಣವನ್ನು ರಮೇಶ್ ಕುಮಾರ್ ಹೊರಹಾಕಿದ್ದಾರೆ. ಯಾವಾಗಲೂ ರಮೇಶ್ ಕುಮಾರ್ ಸತ್ಯ ಹೇಳ್ತಾರೆ. ರಾಹುಲ್ ಗಾಂಧಿ ಸೋನಿಯಾ ಗಾಂಧಿ ಇಡಿ ವಿಚಾರಣೆಗೆ ರಮೇಶ್ ಕುಮಾರ್ ಸಾಕ್ಷಿ ಕೊಟ್ಟಿದ್ದಾರೆ ಎಂದರು.

ತಲೆಮಾರು ಲೆಕ್ಕ ಹಾಕಿದ್ರೆ 160% ಕಮಿಷನ್

ನಮ್ಮ ಮೇಲೆ ಕಾಂಗ್ರೆಸ್ ಅವ್ರು 40% ಕಮಿಷನ್ ಆರೋಪ ಮಾಡಿದ್ರು. ಇವಾಗ ಅವರ ಪಕ್ಷದವರೇ 3-4 ತಲೆಮಾರು ಆಗುವಷ್ಟು ಆಸ್ತಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ಮೂರ್ನಾಲ್ಕು ತಲೆಮಾರು ಲೆಕ್ಕಾ ಹಾಕಿದ್ರೆ 160% ಕಮಿಷನ್ ಹೊಡೆದಿದ್ದಾರೆ. 70 ವರ್ಷ ಕಾಂಗ್ರೆಸ್ ದೇಶವನ್ನು ಲೂಟಿ ಮಾಡಿದ್ದಾರೆ.

ಇದನ್ನೂ ಓದಿ:  Karnataka Politics: ಸಿದ್ದರಾಮಯ್ಯರನ್ನ ಸೋಲಿಸಲು ಕೆಲವರು ಸುಪಾರಿ ಪಡೆದಿದ್ದಾರೆ; ಸಚಿವ ಸುಧಾಕರ್

ರಮೇಶ್ ಕುಮಾರ್ ಜೊತೆ ಡಿಕೆಶಿ ಡಿಬೇಟ್ ಮಾಡಲಿ

ರಮೇಶ್ ಕುಮಾರ್ ಹೇಳಿಕೆಗೆ ನಮ್ಮ ಜೊತೆ ಬಿಜೆಪಿ ಟಿಬೇಟ್ ಗೆ ಬನ್ನಿ ಎಂಬ ಡಿಕೆಶಿ ಹೇಳಿಕೆ ಪ್ರತಿಕ್ರಿಯಿಸಿದ ಆರ್. ಅಶೋಕ್, ನಮ್ಮ ಜೋತೆ ಚರ್ಚೆ ಮಾಡುವ ಮೊದಲು ಡಿಕೆ ಶಿವಕುಮಾರ್ ಅವರು ರಮೇಶ್ ಕುಮಾರ್ ಜೊತೆ ಕುಳಿತು ಮಾತಾಡಿಲಿ. ಯಾಕೆಂದರೆ ಮೂರ್ನಾಲ್ಕು ತಲೆ ಮಾರು ಆಸ್ತಿ ಮಾಡಿದ್ದೇವೆ ಎಂದು ಅವರೇ ಹೇಳಿದ್ದಾರೆ ಅಲ್ವಾ ಎಂದು ಟಾಂಗ್ ಕೊಟ್ಟರು.

ಮೊದಲು ಡಿಕೆ ಶಿವಕುಮಾರ್ ಮತ್ತು ರಮೇಶ್ ಕುಮಾರ್ ಅವರ ನಡುವೆ ಡಿಬೇಟ್ ಮಾಡಿಸಬೇಕು. ಆಮೇಲೆ  ಬೇಕಾದ್ರೆ ನಾವು ಅವರ ಜೊತೆ ಟಿಬೇಟ್ ಗೆ ಬರ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದರು.

ರಮೇಶ್ ಕುಮಾರ್ ಹೇಳಿಕೆಗೆ ಸುಧಾಕರ್ ಪ್ರತಿಕ್ರಿಯೆ

ಕಾಂಗ್ರೆಸ್ ನ ಒಬ್ಬೊಬ್ಬರು ನಾಲ್ಕು ತಲೆಮಾರಿಗಾಗುವಷ್ಟು ಆಸ್ತಿ ಮಾಡಿದ್ದಾರೆ. ಸೋನಿಯಾ, ರಾಹುಲ್‌ ಗಾಂಧಿ ಹೆಸರಲ್ಲಿ ಆಸ್ತಿ ಮಾಡಿದ್ದಾರೆ. ನಾನು ಹೇಳೋದು ಏನಿದೆ. ಭ್ರಷ್ಟಾಚಾರ ವ್ಯರ್ಥ ಪ್ರಯತ್ನ ಮಾಡ್ತಿದರು. ರಮೇಶ್ ಕುಮಾರ್ ಅದಕ್ಕೆ ತಿಲಾಂಜಲಿ ಹಾಕಿದ್ದಾರೆ. ಭ್ರಷ್ಟಾಚಾರದ ದೊಡ್ಡ ಹಗರಣದ ಬಗ್ಗೆ ಅವರೇ ಹೇಳಿದ್ದಾರೆ. ನಾಲ್ಕು ತಲೆಮಾರಿಗೆ ಆಗುವ ಬಗ್ಗೆ ಆಸ್ತಿ ಮಾಡಿರೋದಾಗಿ ಹೇಳಿದ್ದಾರೆ. ವಿಚಾರಣೆಗೆ ಅಡ್ಡಿಪಡಿಸಲು ನೈತಿಕತೆ ಬೇಕು. ಅದಕ್ಕೆ ನಾವು ಅಡ್ಡಿಪಡಿಸಬೇಕು ಅನ್ನೋದು ಅರ್ಥ ಅಲ್ವಾ.?  ನಾನು ಹೇಳಿದ್ದಲ್ಲ, ಅವರು ಹೇಳಿದ್ದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ:  Mahadayi Project ಕಾಮಗಾರಿ ಆರಂಭವಾಗುವರೆಗೆ ಸರಣಿ ಉಪವಾಸ ಸತ್ಯಾಗ್ರಹ; ಹೋರಾಟ ಹೈಜಾಕ್ ಮಾಡಿದ್ರಾ ಕೋನರೆಡ್ಡಿ?

ರಮೇಶ್ ಕುಮಾರ್ ಮಾಯಿಲ್ ಮರಾಠಿ

ಅವರು ಹಳೆಯ ನಾಯಕರಲ್ವಾ.? ಬಹಳ ಸತ್ಯ ಹೇಳ್ತಿದ್ದಾರೆ. ಕೋಲಾರ ಭಾಗದ ಎಲ್ಲಾ ಜನತೆಗೂ ಅವರ ಬಗ್ಗೆ ಗೊತ್ತಿದೆ.  ಸ್ಪೀಕರ್ ಆಗಿ ಅವರ ವರ್ತನೆ ಬಗ್ಗೆ ನಾನು ಸದನದಲ್ಲೂ ಹೇಳಿದ್ದೇನೆ. ಇಡೀ‌ ದೇಶದಲ್ಲಿ ಯಾವ ಸ್ಪೀಕರ್ ಮಾಡದ ಘನಂದಾರಿ ಕೆಲಸ ಅವರು ಮಾಡಿದ್ದರು. ಈ ಹಿಂದೆ ಲಂಕೇಶ್ ಪತ್ರಿಕೆ ದ್ವಾರಕನಾಥ್ ಅವರು ರಮೇಶ್ ಕುಮಾರ್‌ಗೆ ಮಾಯಿಲ್ ಮರಾಠಿ (ಕೋಲಾರ ಭಾಗದ ಮಂತ್ರವಾದಿ) ಅಂತ  ಬಿರುದು ಕೊಟ್ಟಿದ್ದಾರೆ ಎಂದು ಹೇಳುವ ಮೂಲಕ ವ್ಯಂಗ್ಯ ಮಾಡಿದರು.
Published by:Mahmadrafik K
First published: