• Home
  • »
  • News
  • »
  • state
  • »
  • Satish Jarkiholi: ಸತೀಶ್ ಜಾರಕಿಹೊಳಿ ವಿರುದ್ಧ ಕೇಸರಿ ಪಡೆ ವಾಗ್ದಾಳಿ; ಯಾರು, ಏನ್ ಹೇಳಿದ್ರು?

Satish Jarkiholi: ಸತೀಶ್ ಜಾರಕಿಹೊಳಿ ವಿರುದ್ಧ ಕೇಸರಿ ಪಡೆ ವಾಗ್ದಾಳಿ; ಯಾರು, ಏನ್ ಹೇಳಿದ್ರು?

ಸತೀಶ್ ಜಾರಕಿಹೊಳಿ

ಸತೀಶ್ ಜಾರಕಿಹೊಳಿ

ಸಿಎಂ ಬಸವರಾಜ್ ಬೊಮ್ಮಾಯಿ, ಸಂಪುಟದ ಸಚಿವರು ಮತ್ತು ಶಾಸಕರು ಹಾಗೂ ಹಿಂದೂ ಸಂಘಟನೆಗಳು ಜಾರಕಿಹೊಳಿ ಅವರ ಹೇಳಿಕೆಯನ್ನು ಖಂಡಿಸಿವೆ.

  • Share this:

ಹಿಂದೂ ಪದದ (Hindu Word) ಬಗೆಗಿನ ಮಾಜಿ ಸಚಿವ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Former Minister Satish Jarkiholi) ಅವರ ಹೇಳಿಕೆಯ ಕುರಿತು ಚರ್ಚೆಗಳು ನಡೆಯುತ್ತಿವೆ. ಮಾಧ್ಯಮಗಳಲ್ಲಿ ಈ ಬಗ್ಗೆ ಸುದ್ದಿಗಳು ಬಿತ್ತರವಾಗುತ್ತಿದ್ದಂತೆ ತಮ್ಮ ಹೇಳಿಕೆಯ ಕುರಿತು ಸತೀಶ್ ಜಾರಕಿಹೊಳಿ ಸ್ಪಷ್ಟನೆ ಸಹ ನೀಡಿದ್ದರು. ಈ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Shivakumar), ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣ್​​ದೀಪ್ ಸುರ್ಜೇವಾಲಾ (Randeep Surjewala) ಸಹ ಪ್ರತಿಕ್ರಿಯಿಸಿದ್ದರು. ಇತ್ತ ಬಿಜೆಪಿ ನಾಯಕರು ಕಾಂಗ್ರೆಸ್ ಮತ್ತು ಸತೀಶ್ ಜಾರಕಿಹೊಳಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ, ಸಂಪುಟದ ಸಚಿವರು ಮತ್ತು ಶಾಸಕರು ಹಾಗೂ ಹಿಂದೂ ಸಂಘಟನೆಗಳು ಜಾರಕಿಹೊಳಿ ಅವರ ಹೇಳಿಕೆಯನ್ನು ಖಂಡಿಸಿವೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (Former CM BS Yediyurappa) ಅವರು ಸಹ ಸತೀಶ್ ಜಾರಕಿಹೊಳಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿ, ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ.


ಜಾರಕಿಹೊಳಿಯನ್ನ ಪಕ್ಷದಿಂದ ಅಮಾನತುಗೊಳಿಸಲಿ


ಶಿವಮೊಗ್ಗದಲ್ಲಿ ಮಾತನಾಡಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಹಿಂದೂ ಎನ್ನುವ ಪದಕ್ಕೆ, ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಮಾತು ಆಡಿದರೇ ತಿಂದ ಅನ್ನ ಕರಗುವುದಿಲ್ಲ. ಹಿಂದೂ ಅಶ್ಲೀಲ ಪದ ಅಂತಾ ಜಾರಕಿಹೊಳಿ ಹೇಳಿದ್ದಾರೆ. ಕಾಂಗ್ರೆಸ್ಸಿಗರಿಗೆ ಶಕ್ತಿ ಇದ್ದರೆ ಕ್ರಮ ಕೈಗೊಳ್ಳಲಿ. ಪಕ್ಷದಿಂದ ಅಮಾನತುಗೊಳಿಸಲಿ ಎಂದು ಆಗ್ರಹಿಸಿದರು.


ಸೋನಿಯಾ ಗಾಂಧಿ ಹಾಗು ಮುಸಲ್ಮಾನರನ್ನು ಮೆಚ್ಚಿಸಲು ಈ ರೀತಿ ಮಾತನಾಡುತ್ತಿದ್ದಾರೆ. ವಾಲ್ಮೀಕಿ ರಕ್ತ ಹಂಚಿಕೊಂಡು ಜಾರಕಿಹೊಳಿ ಹುಟ್ಟಿದ್ದಾರೆ. ಮೊದಲು ಹಿಂದೂಗಳ ಬಳಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.


ಸುನಿಲ್ ಕುಮಾರ್, ಸಚಿವರು


ಜಾರಕಿಹೊಳಿ ಹೇಳಿಕೆಗೆ ಕಾಂಗ್ರೆಸ್ ಕ್ಷಮೆ ಯಾಚಿಸಲೇಬೇಕು. ಕಾಂಗ್ರೆಸ್‌ ಕಾರ್ಯಾಧ್ಯಕ್ಷನಾಗಿ ಜಾರಕಿಹೋಳಿ ಹೇಳಿಕೆ ಕೊಟ್ಟಿದಾರೆ. ಹಿಂದೂ ಪದ ಅಶ್ಲೀಲ ಎಂದು ಸತೀಶ್ ಜಾರಕಿಹೊಳಿ ಹೇಳಿರೋದು ನಾಚಿಕೆಗೇಡು ಸಂಗತಿ. ಈ ಅಪಮಾನ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಕಾಂಗ್ರೆಸ್ ಹುಟ್ಟಿನಿಂದ ಇವತ್ತಿನವರೆಗೆ ಹಿಂದೂ ಭಾರತೀಯತೆ ಮೇಲೆ ಹಲವು ಬಾರಿ ಅವಮಾನ ಮಾಡಿದೆ ಎಂದು ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ವಾಗ್ದಾಳಿ ನಡೆಸಿದರು.


ಇದನ್ನೂ ಓದಿ:  Satish Jarkiholi: ಸತೀಶ್ ಜಾರಕಿಹೊಳಿ ಹಿಂದೂ ವಿರೋಧಿ ಹೇಳಿಕೆಗೆ ಕಾಂಗ್ರೆಸ್‌ನಲ್ಲೇ ವಿರೋಧ! ರಣದೀಪ್ ಸುರ್ಜೇವಾಲ ಖಂಡನೆ


ನೆಹರು ನನ್ನನ್ನು ಹಿಂದೂ ಎಂದು ಕರೆಯಬೇಡಿ ಎಂದು ಹೇಳಿದ್ದರು. ನೆಹರು ಹಾಕಿಕೊಟ್ಟ ಪರಂಪರೆ ಇವತ್ತಿಗೂ ಮುಂದುವರಿಯುತ್ತಾ ಬಂದಿದೆ. ಅವಕಾಶ ಸಿಕ್ಕಾಗಲೆಲ್ಲ ಹಿಂದುತ್ವ ಮತ್ತು ಭಾರತೀಯ ಬಗ್ಗೆ ಕಾಂಗ್ರೆಸ್ ಅಪಮಾನ ಮಾಡುತ್ತಾ ಬಂದಿದೆ ಎಂದು ಸುನಿಲ್ ಕುಮಾರ್ ಆಕ್ರೋಶ ಹೊರ ಹಾಕಿದರು.


ಜಾರಕಿಹೊಳಿ ಅಧ್ಯಯನ ಮಾಡಲಿ


ಸತೀಶ್ ಜಾರಕಿಹೊಳಿ ತಮ್ಮ ಅಭಿರುಚಿ ಅವರ ಇತಿಹಾಸದ ಬಗ್ಗೆ ಇರುವ ಕಪ್ಪು ಕಲ್ಪನೆ ಪ್ರದರ್ಶನ ಮಾಡಿದ್ದಾರೆ. ಹಿಂದೂ ಪದದ ಹಿಂದೂತ್ವದ ಬಗ್ಗೆ ಈ ದೇಶದ ಇತಿಹಾಸದ ಬಗ್ಗೆ ಅವರು ಪರಿಚಯ ಮಾಡಿಕೊಳ್ಳಬೇಕು. ಅವರನ್ನು ಅವರೇ ಅರಿವು ಮೂಡಿಸಿಕೊಳ್ಳಲು ಅಧ್ಯಯನ ಮಾಡಿಕೊಳ್ಳಬೇಕು ಎಂದು ಸಚಿವ ಸುಧಾಕರ್ ಸಲಹೆ ನೀಡಿದರು.


ಇದನ್ನೂ ಓದಿ:  Satish Jarkiholi: ನನ್ನ ಭಾಷಣ ಇನ್ನೂ 10 ಸಲ ನೋಡಿ, ತಪ್ಪಿದ್ರೆ ಚರ್ಚೆ ಮುಂದುವರಿಸಿ; ಜಾರಕಿಹೊಳಿ ಸ್ಪಷ್ಟನೆ


ಇಡೀ ವಿಶ್ವದಲ್ಲೇ ಹಿಂದೂ ಧರ್ಮದ ಬಗ್ಗೆ ವಿಶೇಷವಾದ ಗೌರವ ಇದೆ.  ನಾವು ಯಾವ ರೀತಿಯ ಜೀವ ನಡೆಸಬೇಕು ಎಂಬ ವಿಚಾರ ಇದ್ದರೆ ಅದಕ್ಕೆ ಕಾರಣ ಹಿಂದೂ ಧರ್ಮ.  ಕಾಂಗ್ರೆಸ್ ಒಲೈಸುವ ರಾಜಕಾರಣ ಮಾಡುತ್ತಿದೆ. ಪ್ರಾರಂಭದಿಂದ ಒಲೈಕೆ ರಾಜಕಾರಣ ಮಾಡಿ ರೂಢಿ ಇದೆ. ಡಿಗ್ನಿಪೈ ರಾಜಕಾರಣ ಮಾಡಿ ಗೊತ್ತಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ.

Published by:Mahmadrafik K
First published: