ಐದು ಕೋಟಿ ಡೀಲ್​ ಪ್ರಸ್ತಾಪಿಸಿದ ಶ್ರೀನಿವಾಸಗೌಡ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಬಿಜೆಪಿ ನಿರ್ಧಾರ

ತಮ್ಮ ವಿರುದ್ಧ ಆರೋಪ ಮಾಡಿದ ಹಿನ್ನೆಲೆ ಎಸ್.ಆರ್. ವಿಶ್ವನಾಥ್​ ಅವರು ಇವತ್ತೇ ಸ್ಪೀಕರ್ ಬಳಿ ಶ್ರೀನಿವಾಸಗೌಡರ ವಿರುದ್ಧ ಹಕ್ಕುಚ್ಯುತಿ ಮಂಡಿಸುವ ಸಾಧ್ಯತೆ ಇದೆ. ಕೋರ್ಟ್​ನಲ್ಲಿಯೂ ಮಾನನಷ್ಟ ಪ್ರಕರಣ ದಾಖಲಿಸಲಿದ್ದಾರೆ.

Seema.R | news18
Updated:July 19, 2019, 4:52 PM IST
ಐದು ಕೋಟಿ ಡೀಲ್​ ಪ್ರಸ್ತಾಪಿಸಿದ ಶ್ರೀನಿವಾಸಗೌಡ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಬಿಜೆಪಿ ನಿರ್ಧಾರ
ಬಿ ಎಸ್ ಯಡಿಯೂರಪ್ಪ
  • News18
  • Last Updated: July 19, 2019, 4:52 PM IST
  • Share this:
ಬೆಂಗಳೂರು (ಜು.19): ವಿಶ್ವಾಸಮತ ಗೊತ್ತುವಳಿ ಚರ್ಚೆ ವೇಳೆ ಬಿಜೆಪಿ ಶಾಸಕರು ತಮ್ಮ ಖರೀದಿಗೆ ಮುಂದಾಗಿದ್ದರು. ಇದಕ್ಕಾಗಿ ಐದು ಕೋಟಿ ಹಣದ ಆಮಿಷ ಒಡ್ಡಿದ್ದರು ಎಂದು ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಅವರು ಬಿಜೆಪಿ ವಿರುದ್ಧ ಗಂಭೀರ ಆರೋಪ  ಹೊರಿಸಿದ್ದರು. ಈ ಹಿನ್ನೆಲೆಯಲ್ಲಿ ಕೋಲಾರ​ ಶಾಸಕರ ವಿರುದ್ಧ ಹಕ್ಕುಚ್ಯುತಿ ಮಂಡನೆ ಮಾಡಲು ಮುಂದಾಗಿರುವುದಾಗಿ ಬಿಎಸ್​ ಯಡಿಯೂರಪ್ಪ ತಿಳಿಸಿದ್ದಾರೆ. 

ಸದನದಲ್ಲಿ ಗದ್ದಲ ಎಬ್ಬಿಸಿದ ಶಾಸಕರ ಖರೀದಿ ವಿಚಾರ ಕುರಿತು ಮಾಧ್ಯಮಗೋಷ್ಠಿ ನಡೆಸಿದ ಯಡಿಯೂರಪ್ಪ, ಅಶ್ವತ್ಥ ನಾರಾಯಣ, ಸಿ.ಪಿ. ಯೋಗೇಶ್ವರ್, ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ವಿರುದ್ಧ ದುರುದ್ಧೇಶಪೂರ್ವಕವಾಗಿ ಆರೋಪ ಮಾಡಿದ್ದಾರೆ.  ಸದನದಲ್ಲಿ ವಿಶ್ವಾಸ ಗೊತ್ತುವಳಿ ಚರ್ಚೆ ನಡೆಯುತ್ತಿರುವ ವೇಳೆ ಈ ವಿಚಾರ ಪ್ರಸ್ತಾಪ ಮಾಡಿರುವುದು ತಪ್ಪು. ಈ ಬಗ್ಗೆ ಸದನದಲ್ಲಿ ಹಕ್ಕುಚ್ಯುತಿ ಮಂಡಿಸಲಾಗುವುದು ಎಂದರು.

ಎಸ್.ಆರ್. ವಿಶ್ವನಾಥ್​ ಅವರು ಇವತ್ತೇ ಸ್ಪೀಕರ್ ಬಳಿ ಶ್ರೀನಿವಾಸಗೌಡರ ವಿರುದ್ಧ ಹಕ್ಕುಚ್ಯುತಿ ಮಂಡಿಸುವ ಸಾಧ್ಯತೆ ಇದೆ. ಕೋರ್ಟ್​ನಲ್ಲಿಯೂ ಮಾನನಷ್ಟ ಪ್ರಕರಣ ದಾಖಲಿಸಲಿದ್ದಾರೆ.

ಇದನ್ನು ಓದಿ: ಐದು ಕೋಟಿ ಡೀಲ್ ಬಗ್ಗೆ ಶ್ರೀನಿವಾಸಗೌಡ ಪ್ರಸ್ತಾಪ; ಸದನದಲ್ಲಿ ಗದ್ದಲ

ರಾಜೀನಾಮೆ ನೀಡಿರುವ ಜೆಡಿಎಸ್ ಶಾಸಕ ಎಚ್.​ ವಿಶ್ವನಾಥ್​ ತಮ್ಮ ಸಾಲ ತೀರಿಸಲು 23 ಕೋಟಿ ಪಡೆದಿದ್ದಾರೆ ಎಂದು ಸಚಿವ ಸಾ.ರಾ. ಮಹೇಶ್​  ಆರೋಪ ಮಾಡಿದ್ದಾರೆ. ವಿಶ್ವನಾಥ್ ಇಲ್ಲದ ವೇಳೆ ಯಾವುದೇ ನೋಟೀಸ್ ಇಲ್ಲದೆಯೇ ಅವರಂತಹ ಹಿರಿಯ ರಾಜಕಾರಣಿ ವಿರುದ್ಧ ಇಂತಹ ಆರೋಪ ಸರಿಯಲ್ಲ. ಈ ಬಗ್ಗೆ ಸಾ.ರಾ. ಮಹೇಶ್​ ಕ್ಷಮಾಪಣೆ ಕೇಳಬೇಕು ಎಂದು ಇದೇ ವೇಳೆ ಯಡಿಯೂರಪ್ಪ ಆಗ್ರಹಿಸಿದರು.

ಹಕ್ಕುಚ್ಯುತಿ ಮಂಡನೆ ಅಂದರೇನು?

ಹಕ್ಕು ಚ್ಯುತಿ (Privilege Motion) ಎಂದರೆ ಶಾಸಕ, ಸಂಸದರಂತಹ ಜನಪ್ರತಿನಿಧಿಗಳಿಗಿರುವ ಕರ್ತವ್ಯ ಮತ್ತು ಕಾರ್ಯನಿರ್ವಹಣೆಗೆ ಚ್ಯುತಿ ಬರುವ ರೀತಿಯಲ್ಲಿ, ಅಥವಾ ಅವರ ಘನತೆಗೆ ಕುಂದು ತರುವಂತೆ ಇನ್ನೊಬ್ಬ ಶಾಸಕರು ನಡೆದುಕೊಂಡಲ್ಲಿ ಅದನ್ನು ಹಕ್ಕು ಚ್ಯುತಿ ಎಂದು ಪರಿಗಣಿಸಲಾಗುತ್ತದೆ.ಇದರ ವಿರುದ್ಧ ಆ ಶಾಸಕರು ಸ್ಪೀಕರ್ ಬಳಿ ಹಕ್ಕು ಚ್ಯುತಿ ನಿರ್ಣಯ ಮಂಡಿಸಬಹುದು. ಇದಕ್ಕೆ ಸದನ ಶುರುವಾಗುವ ಮುನ್ನ ಅಂದರೆ ಬೆಳಗ್ಗೆ 10ಕ್ಕೆ ಮುನ್ನ ಸ್ಪೀಕರ್ ಅವರಿಗೆ ನೋಟೀಸ್ ನೀಡಬೇಕಾಗುತ್ತದೆ. ಹಕ್ಕು ಚ್ಯುತಿ ಬಗ್ಗೆ ಸ್ಪೀಕರ್ ಅವರು ಮೊದಲು ಪರಾಮರ್ಶೆ ನಡೆಸುತ್ತಾರೆ. ಆರೋಪ ಎದುರಿಸುತ್ತಿರುವ ವ್ಯಕ್ತಿಯಿಂದ ಹೇಳಿಕೆ ಪಡೆಯಬಹುದು. ಅಗತ್ಯಬಿದ್ದರೆ, ಅವರು ಸಮಿತಿ ರಚಿಸಿ ವಿಚಾರಣೆ ನಡೆಸಬಹುದು. ಹಕ್ಕುಚ್ಯುತಿ ನಡೆದಿರುವುದು ರುಜುವಾತಾದಲ್ಲಿ ಆ ವ್ಯಕ್ತಿಗೆ ವಿಧಾನಮಂಡಲ ನಿಯಮಗಳ ಪ್ರಕಾರ ಶಿಕ್ಷೆ ವಿಧಿಸಬಹುದಾಗಿದೆ

 

First published:July 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ