ವಿಶ್ವಾಸಮತ ಮಂಡನೆ ಬದಲು ಮೈತ್ರಿ ಸರ್ಕಾರದಿಂದ ಕಾಲಹರಣ; ರಾಜ್ಯಪಾಲರಿಗೆ ದೂರುನೀಡಿದ ಬಿಜೆಪಿ ನಿಯೋಗ

ಸರ್ಕಾರ ಅಲ್ಪ ಮತಕ್ಕೆ ಕುಸಿದಿದ್ದರೂ ಅದನ್ನು ಉಳಿಸುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಈ ವಿಷಯದ ಕುರಿತು ರಾಜ್ಯಪಾಲರು ಮಧ್ಯಪ್ರವೇಶಿಸಿ, ಸ್ಪೀಕರ್​​ ಅವರಿಗೆ ನಿರ್ದೇಶನ ಮಾಡಬೇಕು ಎಂದು ಮನವಿ ಮಾಡಿದರು.

Seema.R | news18
Updated:July 18, 2019, 5:15 PM IST
ವಿಶ್ವಾಸಮತ ಮಂಡನೆ ಬದಲು ಮೈತ್ರಿ ಸರ್ಕಾರದಿಂದ ಕಾಲಹರಣ; ರಾಜ್ಯಪಾಲರಿಗೆ ದೂರುನೀಡಿದ ಬಿಜೆಪಿ ನಿಯೋಗ
ರಾಜ್ಯಪಾಲರಿಗೆ ದೂರು ನೀಡಿದ ಬಿಜೆಪಿ ನಿಯೋಗ
  • News18
  • Last Updated: July 18, 2019, 5:15 PM IST
  • Share this:
ಬೆಂಗಳೂರು (ಜು.18):  ಸದನದಲ್ಲಿ ಇಂದು ವಿಶ್ವಾಸಮತ ಗೊತ್ತುವಳಿ ಮಂಡನೆಗೆ ದಿನ ನಿಗದಿಯಾಗಿದೆ. ಆದರೆ, ಆಡಳಿತ ಸರ್ಕಾರ ವಿಶ್ವಾಸಮತ ಯಾಚನೆ ಮಾಡುವ ಬದಲು ಬೇರೆ ವಿಷಯಗಳನ್ನು ವಿನಾಕಾರಣ ಚರ್ಚೆ ಮಾಡುವ ಮೂಲಕ ಕಾಲಹರಣ ಮಾಡುತ್ತಿದ್ದಾರೆ. ಈ ಕುರಿತು ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕು ಎಂದು  ಬಿಜೆಪಿ ನಿಯೋಗ ಗುರುವಾರ ಮಧ್ಯಾಹ್ನ ರಾಜ್ಯಪಾಲರಿಗೆ ಮನವಿ ಮಾಡಿದೆ.

ಸದನ ಕಲಾಪದ ಊಟದ ವಿರಾಮದ ವೇಳೆ ಮಧ್ಯಾಹ್ನ ರಾಜಭವನಕ್ಕೆ ಭೇಟಿ ಮಾಡಿದ ಜಗದೀಶ್​ ಶೆಟ್ಟರ್​, ಬಸವರಾಜ್​ ಬೊಮ್ಮಯಿ ಅರವಿಂದ್​ ಲಿಂಬಾವಳಿ ನೇತೃತ್ವದ ನಿಯೋಗ, ಸದನದಲ್ಲಿ ಅವಿಶ್ವಾಸ ನಿರ್ಣಯ ಮಂಡನೆಗೆ ಅವಕಾಶ ನೀಡುವಂತೆ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.

ಕಲಾಪದಲ್ಲಿ ವಿಶ್ವಾಸ ಗೊತ್ತುವಳಿ ಮಂಡನೆ ಮಾಡುವ ಬದಲು ಸಿದ್ದರಾಮಯ್ಯ, ಕ್ರಿಯಾಲೋಪ ಪ್ರಸ್ತಾಪ ಮಾಡಿ, ಸದನದಲ್ಲಿ ಕಾಲಹರಣ ಮಾಡಿದ್ದಾರೆ. ಸದನಕ್ಕೆ ಹಾಜರಾಗುವುದು ಶಾಸಕರಿಗೆ ಬಿಟ್ಟ ವಿಚಾರ ಎಂಬ ಬಗ್ಗೆ ಸುಪ್ರೀಂಕೋರ್ಟ್ ಈಗಾಗಲೇ ತೀರ್ಪು ನೀಡಿದರೂ ಸಿದ್ದರಾಮಯ್ಯ, ಕೃಷ್ಣ ಬೈರೇಗೌಡ, ಎಚ್ ಕೆ ಪಾಟೀಲ್ ಬೇರೆ ಬೇರೆ ವಿಷಯಗಳ ಮೇಲೆ ಚರ್ಚೆ ಆರಂಭಿಸಿ ಕಾಲಹರಣ ಮಾಡುತ್ತಿದ್ದಾರೆ.

ಇದನ್ನು ಓದಿ: ವಿಪ್ ಚರ್ಚೆ ಕುರಿತು ನಮಗೆ ನೋಟಿಸ್​ ನೀಡಿರಲಿಲ್ಲ: ಸದನದಲ್ಲಿ ಬಿಜೆಪಿಯ ಮಾಧುಸ್ವಾಮಿ ಆಕ್ಷೇಪ

ಸದನದ ಇಂದಿನ ವಿಷಯದ ಕುರಿತು ಚರ್ಚಿಸದೆ ವಿಪ್​ ಕುರಿತು ಮಾತನಾಡುತ್ತಾ ಸದನದ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಸರ್ಕಾರ ಅಲ್ಪ ಮತಕ್ಕೆ ಕುಸಿದಿದ್ದರೂ ಅದನ್ನು ಉಳಿಸಿಕೊಳ್ಳುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಈ ವಿಷಯದ ಕುರಿತು ರಾಜ್ಯಪಾಲರು ಮಧ್ಯಪ್ರವೇಶಿಸಿ ಸ್ಪೀಕರ್​​ ಅವರಿಗೆ ನಿರ್ದೇಶನ ನೀಡಬೇಕು ಎಂದು ಬಿಜೆಪಿ ನಿಯೋಗ ಮನವಿ ಮಾಡಿಕೊಂಡಿದೆ.

ಭೇಟಿ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಶೆಟ್ಟರ್​, ನಿಗದಿಯದಂತೆ ಇಂದೇ ವಿಶ್ವಾಸ ಮತಯಾಚನೆ ಆಗಬೇಕು ಎಂದು ರಾಜ್ಯಪಾಲರ ಬಳಿ ಮನವಿ ಮಾಡಿದ್ದೇವೆ. ಈ ಬಗ್ಗೆ ಕಾನೂನು ತಜ್ಞರ ಜೊತೆ ಮಾತನಾಡಿ ಕಾನೂನಾತ್ಮಕ ಕ್ರಮ ಕೈಗೊಳ್ಳುತ್ತೇವೆ ಎಂದು ರಾಜ್ಯಪಾಲರು  ಭರವಸೆ ನೀಡಿದ್ದಾರೆ ಎಂದರು.

ಈ ನಡುವೆ ಸದನದ ಕಲಾಪದ ಸಂಪೂರ್ಣ ಮಾಹಿತಿ ಪಡೆಯಲು ರಾಜ್ಯಪಾಲ ವಜುಭಾಯ್ ವಾಲಾ ತನ್ನ ಕಾರ್ಯದರ್ಶಿಯನ್ನು ಸ್ಪೀಕರ್ ಭೇಟಿಗೆ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ. ರಾಜ್ಯಪಾಲರ ಈ ನಡೆ ಇದೀಗ ಕುತೂಹಲಕ್ಕೆ ಕಾರಣವಾಗಿದ್ದು, ಅಲ್ಪ ಮತಕ್ಕೆ ಕುಸಿದಿರುವ ಸರ್ಕಾರವನ್ನು ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಬಹುದೇ? ಎಂದು ಸಂಶಯ ಮೂಡಿದೆ.ಸಿಎಂ ಮಹತ್ವದ ಸಭೆ:

ಬಿಜೆಪಿ ನಾಯಕರು ರಾಜ್ಯಪಾಲರ ಭೇಟಿ ನೀಡಿದ ಬಳಿಕ ಸಚಿವ ಸಂಪುಟದ ಎಲ್ಲಾ ಸಚಿವರುಗಳ ಜೊತೆ ಸಭೆ ನಡೆಸಿರುವ ಸಿಎಂ ಮೈತ್ರಿ ಸರ್ಕಾರದ ಮುಂದಿನ ನಡೆಯ ಕುರಿತು ಮಹತ್ವದ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

First published:July 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading