HOME » NEWS » State » BJP LEADERS LOBBYING FOR LEGISLATIVE COUNCIL SEAT HK

ಪರಿಷತ್ ಸ್ಥಾನಕ್ಕಾಗಿ ಬಿಜೆಪಿಯ ಮೂಲ, ವಲಸಿಗರ ನಡುವೆ ಭಾರೀ ಪೈಪೋಟಿ

ವಿಧಾನಸಭೆಯಿಂದ ವಿಧಾನ ಪರಿಷತ್ ಗೆ ನಡೆಯುವ ಏಳು ಸ್ಥಾನಗಳಲ್ಲಿ ಆಡಳಿತ ಪಕ್ಷ ಬಿಜೆಪಿಗೆ ನಾಲ್ಕು ಸ್ಥಾನಗಳು ದೊರೆಯಲಿದ್ದು, ಈ ನಾಲ್ಕು ಸ್ಥಾನಗಳಿಗಾಗಿ ವಲಸಿಗರು ಹಾಗೂ ಮೂಲ ಪಕ್ಷದವರ ನಡುವೆ ಸ್ಪರ್ಧೆ ಏರ್ಪಟ್ಟಿದೆ.

news18-kannada
Updated:June 3, 2020, 12:59 PM IST
ಪರಿಷತ್ ಸ್ಥಾನಕ್ಕಾಗಿ ಬಿಜೆಪಿಯ ಮೂಲ, ವಲಸಿಗರ ನಡುವೆ ಭಾರೀ ಪೈಪೋಟಿ
ಬಿಜೆಪಿ
  • Share this:
ಬೆಂಗಳೂರು (ಜೂ.03): ಕೊರೋನಾ ಹೋರಾಟದ ನಡುವೆ ರಾಜ್ಯ ಬಿಜೆಪಿಯಲ್ಲಿ ವಿಧಾನ ಪರಿಷತ್ ಸ್ಥಾನಕ್ಕಾಗಿ ಭಾರೀ ಪೈಪೋಟಿ ಶುರುವಾಗಿದೆ. ಬಿಜೆಪಿ ಶಾಸಕರ ಬಂಡಾಯ ನಡುವೆ ವಿಧಾನ ಪರಿಷತ್ ಹಾಗೂ ರಾಜ್ಯಸಭೆ ಚುನಾವಣೆಗೆ ಸಿಎಂ‌ ಬಿಎಸ್​ವೈ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಾಗಿದೆ. ವಿಧಾನ ಪರಿಷತ್ ಸ್ಥಾನಕ್ಕಾಗಿ ವಲಸಿಗರು ಹಾಗೂ ಮೂಲ ಬಿಜೆಪಿಗರು ಕಣ್ಣಿಟ್ಟಿದ್ದು, ತಮ್ಮದೇಯಾದ ರೀತಿಯಲ್ಲಿ ಲಾಬಿ ಆರಂಭಿಸಿದ್ದಾರೆ.

ವಿಧಾನ ಪರಿಷತ್ತಿನಲ್ಲಿ ಜೂನ್ ತಿಂಗಳಲ್ಲಿ ಖಾಲಿಯಾಗುವ 16 ಸ್ಥಾನಗಳಲ್ಲಿ ಐದು ಸ್ಥಾನಗಳಿಗೆ ರಾಜ್ಯಪಾಲರಿಂದ ನಾಮ ನಿರ್ದೇಶನ, ಶಿಕ್ಷಕ ಹಾಗೂ ಪದವಿಧರ ತಲಾ ಎರಡು  ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ವಿಧಾನಸಭೆಯಿಂದ ವಿಧಾನ ಪರಿಷತ್ ಗೆ ನಡೆಯುವ ಏಳು ಸ್ಥಾನಗಳಲ್ಲಿ ಆಡಳಿತ ಪಕ್ಷ ಬಿಜೆಪಿಗೆ ನಾಲ್ಕು ಸ್ಥಾನಗಳು ದೊರೆಯಲಿದ್ದು, ಈ ನಾಲ್ಕು ಸ್ಥಾನಗಳಿಗಾಗಿ ವಲಸಿಗರು ಹಾಗೂ ಮೂಲ ಪಕ್ಷದವರ ನಡುವೆ ಸ್ಪರ್ಧೆ ಏರ್ಪಟ್ಟಿದೆ.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿ ಬಿಜೆಪಿ ಸರ್ಕಾರ ಬರುವಲ್ಲಿ ಮಹತ್ವದ ಪಾತ್ರವಹಿಸಿದವರು ವಲಸಿಗರು. ಹೆಚ್. ವಿಶ್ವನಾಥ್, ಎಂಟಿಬಿ ನಾಗರಾಜ್ ಹಾಗೂ ಆರ್. ಶಂಕರ್ ಅವರಿಗೆ ಪರಿಷತ್ ಟಿಕೆಟ್ ನೀಡಬೇಕು ಎನ್ನುವುದು ವಲಸಿಗರ ಬೇಡಿಕೆಯಾಗಿದೆ. ಅಲ್ಲದೇ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಈ ಹಿಂದೆ ಇವರಿಗೆ ಅವಕಾಶ ಕೊಡುವ ಭರವಸೆ  ನೀಡಿದ್ದರು ಎಂಬ ಮಾತುಗಳಿವೆ. ಸರ್ಕಾರ ರಚನೆಯಾಗುವಲ್ಲಿ‌ ಸಿ ಪಿ ಯೋಗೇಶ್ವರ್ ಪಾತ್ರ ಕೂಡ ಮಹತ್ವದ್ದಾಗಿದ್ದು, ಅವರಿಗೂ ಸ್ಥಾನ ನೀಡಿ‌ ಎನ್ನುವ ಮಾತು ಜೋರಾಗಿದೆ.

ಇನ್ನು ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರೊಂದಿಗೆ ಮುನಿಸಿಕೊಂಡು ಬಿಜೆಪಿಗೆ ವಲಸೆ ಬಂದಿದ್ದ ಮಾಜಿ ಸಚಿವರಾದ ಮಾಲಿಕಯ್ಯ ಗುತ್ತೆದಾರ್ ಹಾಗೂ ಬಾಬುರಾವ್ ಚಿಂಚನಸೂರ್ ಮಲ್ಲಿಕಾರ್ಜುನ ಖರ್ಗೆಯನ್ನು ಸೋಲಿಸಲು ನಮ್ಮ ಶ್ರಮ ಹೆಚ್ಚಿದೆ. ಆದ್ದರಿಂದ ನಮಗೆ ಪರಿಷತ್ ಟಿಕೆಟ್ ನೀಡಬೇಕು ಎಂದು ಬಿ ಎಸ್ ವೈ ಮುಂದೆ ಪಟ್ಟು ಹಿಡಿದಿದ್ದಾರೆ. ಎಂಟು ವರ್ಷದ ನಂತರ ರಾಜ್ಯದಲ್ಲಿ ಮತ್ತೆ ಪಕ್ಷ ಅಧಿಕಾರಕ್ಕೆ ಬಂದಿದೆ. ಹಾಗಾಗಿ‌ ಪಕ್ಷದ‌ ಮೂಲ ನಾಯಕರಿಗೆ ಮಣೆ ಹಾಕಿ ಎನ್ನುವ ಒತ್ತಡವೂ ಜೋರಾಗಿದೆ.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಮೋಹನ್ ಲಿಂಬಿಕಾಯಿ, ಶಂಕರ ಪಾಟೀಲ್, ಯೋಜನಾ ಮಂಡಳಿ ಉಪಾಧ್ಯಕ್ಷ ಬಿ.ಜೆ ಪುಟ್ಟಸ್ವಾಮಿ, ವಿಧಾನ ಪರಿಷತ್ ಮಾಜಿ ಸದಸ್ಯ ಶಿವರಾಜ್ ಸಜ್ಜನ್ ಮುಖ್ಯಮಂತ್ರಿಗೆ ತಮ್ಮನ್ನು ಪರಿಗಣಿಸುವಂತೆ ಕಸರತ್ತು ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಕೆಲ ಸಂಘದ‌ ನಂಟಿರೋ ನಾಯಕರು ಸಂಘದ ಹಾಗೂ ಪಕ್ಷದ ನಾಯಕರ ಮೂಲಕ ಮೇಲ್ಮನೆ ಪ್ರವೇಶದ ಕನಸು ಕಾಣುತ್ತಿದ್ದಾರೆ. ಮಾಜಿ ಶಾಸಕರಾದ ನಿರ್ಮಲಕುಮಾರ್ ಸುರಾನಾ, ಕಟ್ಟಾ ಸುಬ್ರಮಣ್ಯ ನಾಯ್ಡು, ಎ. ಹೆಚ್ ಆನಂದ, ಸುನಿಲ್ ವಲ್ಯಾಪುರೆ, ಭಾನುಪ್ರಕಾಶ್,  ಭಾರತಿ ಶೆಟ್ಟಿ ಸೇರಿದಂತೆ ಅನೇಕರು ತೆರೆ ಮರೆಯಲ್ಲಿ ಕಸರತ್ತು ನಡೆಸಿದ್ದಾರೆ.

ಇದನ್ನೂ ಓದಿ : ಕೊರೋನಾ ಆರ್ಭಟದಲ್ಲಿ ನಡೆಯದ ಅಂಗಾಂಗ ಕಸಿ ; ಶಸ್ತ್ರ ಚಿಕಿತ್ಸೆಗಾಗಿ ಕಾಯುತ್ತಿರುವ ಸಾವಿರಾರು ರೋಗಿಗಳು

ನಾಮ ನಿರ್ದೇಶನದ ಮೇಲೆ ಹಲವರ ಕಣ್ಣಿಟ್ಟಿದ್ದು, ಲಾಬಿ ಶುರು ಮಾಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್, ಇನ್ನು ಸಿನೆಮಾ ನಟ ಜಗ್ಗೇಶ್, ನಟಿಯರಾದ ಶೃತಿ, ಮಾಳವಿಕ ಅವಿನಾಶ್ ಮೇಲ್ಮನೆ ಪ್ರವೇಶದ ನಿರೀಕ್ಷೆಯಲ್ಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
Published by: G Hareeshkumar
First published: June 3, 2020, 12:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading